ನೆನಪುಗಳು ಹಳೆಯದಾದಷ್ಟು (ಸಾರಿ ಎಳೆಯದಾದಷ್ಟು) ಅದರ ಮೌಲ್ಯ ಹೆಚ್ಚು. ಅದೆಷ್ಟು ಜನ ಜೀವನದ ಒಂದು ಭಾಗಕ್ಕೆ, ನೆನಪಿನ ಸ್ಥಾನ ಕೊಟ್ಟು, ಅದನ್ನ ಮೆಲಕು ಹಾಕಿ, ಕಣ್ಣು ಒದ್ದೆ ಮಾಡ್ಕೊತಾರೋ..? " ಸರ್ಕಲ್ ಗಣೇಶನ್ನ ಅಡಕೆ ಆಳಿ ಮೇಲಿಟ್ಟು ಊರು ತುಂಬ ಎಳೆದಾಡಿ ಚಿಕ್ಕೆರೆಯಲ್ಲಿ ಮುಳುಗಿಸಿದ್ದು, ಎಲ್ಲ ಸೇರಿ ನಾಯಿಗೊಂದು ಮನೆ ಕಟ್ಟಿ ಅದರ ಗೃಹ ಪ್ರವೇಶ ಮಾಡಿದ್ದು, ಐಸ್ ಕ್ರೀಮ್ ಡಬ್ಬಿಯನ್ನ ಬಾಲ್ ಮಾಡಿಕೊಂಡು ಕ್ರಿಕೆಟ್ ಆಡಿದ್ದು, ಅಮ್ಮ ದೆವ್ವ ಅಂತ ಹೆದರಿಸಿದರು, ಅದೇ ಹುಣಸೆ ಮರದ ಮೇಲೆ ಮರಕೋತಿ ಆಡಿದ್ದು, ಚಾನಲ್ ನಲ್ಲಿ ಈಜದೊಕೊಗಿ ಅಪ್ಪನ ಹತ್ರ ಏಟು ತಿಂದಿದ್ದು," ಹೀಗೆ.. ನೆನಪಾಗೋಕೆ ಯೋಗ್ಯ ಅಲ್ದೆ ಇರೋದೆಲ್ಲ ನೆನಪುಗಳಾಗಿ ಕಾಡುತ್ವೆ. ಇದರ ಬಗ್ಗೆ ಇನ್ನೊಮ್ಮೆ ಬರೆಯುವಾ..? ಈಗೊಂದು ಸಣ್ಣ ಕಥೆ. ತರಿಕೆರೆಯಲ್ಲಿದ್ದ 'ಗೌತಮ್ ಕಾನ್ವೆಂಟ್' ನನ್ನ ಸ್ಕೂಲಿನ ಆದಿ ಅನುಭವ. ಎರಡನೇ ಕ್ಲಾಸ್ ಓದುತ್ತಿದ್ದಾಗಲೇ ಅದು ಮುಚ್ಚಿ ಹೋಯ್ತು. ಅಲ್ಲಿದ್ದ ನಾವುಗಳೆಲ್ಲಾ... ಹೋಲ್-ಸೇಲ್ ಆಗಿ ವಡ್ಡರಹಟ್ಟಿಯ ಗಾಳಿಹಳ್ಳಿ ಸರಕಾರಿ ಶಾಲೆಗೆ ಸೆರಿದೆವು. ನಾವುಗಳು ಅಂದರೆ 'ನಾನು, ಸೀನ(ಅತ್ಯಂತ ಆತ್ಮೀಯನಾದವನು), ಪ್ರಸಾದ್, ವೆಂಕಿ, ಶಿವು, ಅಥಿಕುರ್'. ನಮ್ಮದು ಪುಟ್ಟ ಗ್ಯಾಂಗು. ಬಡ್ಡಿಮಕ್ಕಳು "ಇಡ್ಲಿ ವಡಾ ಸಾಂಬಾರ್. ಪುತ್ತು. " ಅಂಥ ರೇಗಿಸುತ್ತಿದ್ದರು. ಪ್ರಸಾದ್ ತನ್ನ ಅಪ್ಪನಿಗೆ ಸ್ಯಾಲರ