ಎರಡು ಲೋಟ ನೀರು ಮತ್ತು ಒಂದು ಲೋಟ ಹಾಲಿಗೆ, ಒಂದು ಸ್ಪೂನ್ ಚಹಾ ಸೊಪ್ಪು ಸೇರಿಸಿ, ಪಾತ್ರೆಯನ್ನು ಗ್ಯಾಸ್ ಸ್ಟೌವ್ ನ ಮೇಲಿಟ್ಟೆ. ಸಕ್ಕರೆಗಾಗಿ ಹುಡುಕಿ ಡಬ್ಬಿ ತೆಗೆದು ನೋಡಿದಾಗ ನಿರಾಸೆ ಕಾದಿತ್ತು. ಸಕ್ಕರೆ ಮೇಲೆ ಒಂದು ಲೇಯರ್ ಕೆಂಪು-ಇರುವೆಗಳು ತುಂಬಿಕೊಂಡಿವೆ.
ಅಡುಗೆ-ಮೆನೆಯ ಸರ್ವಕಾಲಿಕ ಕ್ರಿಮಿ ಎಂದು ಇಲಿ, ಜಿರಲೆ ಗಳೊಂದಿಗೆ ಪದವಿ ಹಂಚಿಕೊಂಡಿರುವ ಇರುವೆ ಎಂಬ ಕ್ಷುದ್ರ ಜೀವಿಯೊಂದು, ನನ್ನ ಟೀ ಮಾಡುವ ಕೆಲಸಕ್ಕೆ ಅಂಡು ತೋರಿಸುತ್ತಾ ಅಡ್ಡಲಾಗಿ ನಿಂತಿದೆ. ಟೀ ಜೊತೆ ಇರುವೆಗಳನ್ನೂ ಕುದಿಸಿದರಾಯಿತು ಎಂದುಕೂಂಡೆ. ಇವುಗಳಿಗೆ ಭಾಗಶಃ ಇರಬಹುದಾದ ಬ್ಲಾಡರ್ ನ ನೆನಪಾಗಿ ಬೇಡವೆನಿಸಿತು. ಇರುವೆಗಳನ್ನು ಸೈಡಿಗೆ ದಬ್ಬಿ ಸಕ್ಕರೆ ಹೆಕ್ಕುವ ನನ್ನ ಪ್ರಯತ್ನ ಫಲ ಕಾಣಲಿಲ್ಲ. ಅಮ್ಮ ಇರುವೆಗಳನ್ನು ಉ. ಫ್ ಎಂದು ಊದಿ ಸಕ್ಕರೆಯಿಂದ ಬೇರೆ ಮಾಡುತ್ತಿದ್ದುದನ್ನು ನೋಡಿದ್ದೆ. ಸಕ್ಕರೆಡಬ್ಬಿಯ ಹತ್ತಿರ ಹೋಗಿ ಒಂದೇ ಉಸಿರಿಗೆ ಉ. ಫ್ ಎಂದು ಊದಿದೆ. ಮರುಕ್ಷಣವೇ 'ಅಯ್ಯಯ್ಯೋ' ಎನ್ನುವಂತ ಪರಿಸ್ಥಿತಿ ನನ್ನದಾಯ್ತು. ಸಕ್ಕರೆಯಲ್ಲಿದ್ದ ಅಷ್ಟೂ ಇರುವೆಗಳು ಗಾಳಿ ಊದಿದ ರಭಸಕ್ಕೆ ಮುಖದ ಮೇಲೆ ಹಾರಿ ಬಂದು ಕೂತಿದ್ದವು.
ತಮ್ಮ ಬದುಕಿನ ಕೊನೆ ಘಳಿಗೆಯನ್ನು ಒಂದಿಷ್ಟೂ ವ್ಯರ್ಥ ಮಾಡಲು ಒಪ್ಪದ ಈ ಮೈಕ್ರೋ ಜೀವಿಗಳು ತಮ್ಮ ಇಕ್ಕಳದಂತಹ ಮೂತಿಯಿಂದ ನನ್ನ ಕೆನ್ನೆ, ತುಟಿಯನ್ನೆಲ್ಲಾ ಕಚ್ಚಿ ಹಿಡಿದವು. ಮುಖವನ್ನು ಕೈ ಇಂದ ತಿಕ್ಕಿ-ತೀಡಿ ಎಲ್ಲವನ್ನೂ…