ಎರಡು ಲೋಟ ನೀರು ಮತ್ತು ಒಂದು ಲೋಟ ಹಾಲಿಗೆ, ಒಂದು ಸ್ಪೂನ್ ಚಹಾ ಸೊಪ್ಪು ಸೇರಿಸಿ, ಪಾತ್ರೆಯನ್ನು ಗ್ಯಾಸ್ ಸ್ಟೌವ್ ನ ಮೇಲಿಟ್ಟೆ. ಸಕ್ಕರೆಗಾಗಿ ಹುಡುಕಿ ಡಬ್ಬಿ ತೆಗೆದು ನೋಡಿದಾಗ ನಿರಾಸೆ ಕಾದಿತ್ತು. ಸಕ್ಕರೆ ಮೇಲೆ ಒಂದು ಲೇಯರ್ ಕೆಂಪು-ಇರುವೆಗಳು ತುಂಬಿಕೊಂಡಿವೆ.
ಅಡುಗೆ-ಮೆನೆಯ ಸರ್ವಕಾಲಿಕ ಕ್ರಿಮಿ ಎಂದು ಇಲಿ, ಜಿರಲೆ ಗಳೊಂದಿಗೆ ಪದವಿ ಹಂಚಿಕೊಂಡಿರುವ ಇರುವೆ ಎಂಬ ಕ್ಷುದ್ರ ಜೀವಿಯೊಂದು, ನನ್ನ ಟೀ ಮಾಡುವ ಕೆಲಸಕ್ಕೆ ಅಂಡು ತೋರಿಸುತ್ತಾ ಅಡ್ಡಲಾಗಿ ನಿಂತಿದೆ. ಟೀ ಜೊತೆ ಇರುವೆಗಳನ್ನೂ ಕುದಿಸಿದರಾಯಿತು ಎಂದುಕೂಂಡೆ. ಇವುಗಳಿಗೆ ಭಾಗಶಃ ಇರಬಹುದಾದ ಬ್ಲಾಡರ್ ನ ನೆನಪಾಗಿ ಬೇಡವೆನಿಸಿತು. ಇರುವೆಗಳನ್ನು ಸೈಡಿಗೆ ದಬ್ಬಿ ಸಕ್ಕರೆ ಹೆಕ್ಕುವ ನನ್ನ ಪ್ರಯತ್ನ ಫಲ ಕಾಣಲಿಲ್ಲ. ಅಮ್ಮ ಇರುವೆಗಳನ್ನು ಉ. ಫ್ ಎಂದು ಊದಿ ಸಕ್ಕರೆಯಿಂದ ಬೇರೆ ಮಾಡುತ್ತಿದ್ದುದನ್ನು ನೋಡಿದ್ದೆ. ಸಕ್ಕರೆಡಬ್ಬಿಯ ಹತ್ತಿರ ಹೋಗಿ ಒಂದೇ ಉಸಿರಿಗೆ ಉ. ಫ್ ಎಂದು ಊದಿದೆ. ಮರುಕ್ಷಣವೇ 'ಅಯ್ಯಯ್ಯೋ' ಎನ್ನುವಂತ ಪರಿಸ್ಥಿತಿ ನನ್ನದಾಯ್ತು. ಸಕ್ಕರೆಯಲ್ಲಿದ್ದ ಅಷ್ಟೂ ಇರುವೆಗಳು ಗಾಳಿ ಊದಿದ ರಭಸಕ್ಕೆ ಮುಖದ ಮೇಲೆ ಹಾರಿ ಬಂದು ಕೂತಿದ್ದವು.
ತಮ್ಮ ಬದುಕಿನ ಕೊನೆ ಘಳಿಗೆಯನ್ನು ಒಂದಿಷ್ಟೂ ವ್ಯರ್ಥ ಮಾಡಲು ಒಪ್ಪದ ಈ ಮೈಕ್ರೋ ಜೀವಿಗಳು ತಮ್ಮ ಇಕ್ಕಳದಂತಹ ಮೂತಿಯಿಂದ ನನ್ನ ಕೆನ್ನೆ, ತುಟಿಯನ್ನೆಲ್ಲಾ ಕಚ್ಚಿ ಹಿಡಿದವು. ಮುಖವನ್ನು ಕೈ ಇಂದ ತಿಕ್ಕಿ-ತೀಡಿ ಎಲ್ಲವನ್ನೂ ಕೊಲ್ಲುವುದರಲ್ಲಿ ಯಶಸ್ವಿಯಾದೆನು. ಅದರೂ ತುಟಿ, ಕೆನ್ನೆಯೆಲ್ಲಾ ಊದಿಕೊಂಡು ಖಾಯಿಲೆಯವನಂತೆ ಆಗಿಬಿಟ್ಟೆ. ಅಪರೂಪಕ್ಕೆಂದು ಅಡುಗೆಮನೆಗೆ ಕಾಲಿಟ್ಟು ಎಲ್ಲಿಯೂ ಸಲ್ಲದವನು ಎನ್ನಿಸಿಕೊಂಡೆ.
---
ಹೀ...ಗೆ ಇರುವೆಗೂ-ನನಗೂ ತುಂಬಾ ಹಳೆಯ ಜಿದ್ದು. ಅನ್ನ ಬಡಿಸಿಕೊಂಡು ಊಟ ಮಾಡುವಾಗೆಲ್ಲಾ ಇರುವೆಯೊಂದು ನಾಲಗೆಗೆ ಕಚ್ಚಿದ ಮೆಲೆ ತಿಳಿಯುತ್ತಿತ್ತು. ’ಕುಕ್ಕರ್ ಅನ್ನು ಸರಿಯಾಗಿ ಮುಚ್ಚದೇ ಇರುವ ಕಾರಣಕ್ಕೆ. ಇರುವೆಗಳ ದಂಡು ಅನ್ನದ ಮೇಲಿರುವುದು.
" ಥೂ..! ತಿನ್ನುವ ನಾಲ್ಕು ಅಗುಳಿಗೆ ಪಾತ್ರೆ ತುಂಬಾ ತುಂಬಿಕೊಂಡು ಜಾತ್ರೆ ಮಾಡುತ್ತವಲ್ಲಾ"
ಕೈಗೆ ಬಂದ ತುತ್ತು ಬಾಯಿಗೆ ಬರದಿದ್ದಕ್ಕೆ ಇರುವೆಗೆ ಶಪಿಸುತ್ತಿದ್ದೆ.
ಪ್ಯಾಂಟ್ ಜೇಬಿನ ಮೂಲೆಯಲ್ಲಿ ಸೇರಿಕೊಂಡ ಇರುವೆಯೊಂದು, ಬಸ್ಸಿನಲ್ಲಿ ಹೋಗುತ್ತಿರುವಾಗಲೊ, ಇನ್ಯಾವಾಗಲೋ ಕಚ್ಚಿ ಹಿಡಿದಾಗ ತಿಳಿಯುತ್ತಿತ್ತು.
"ಇರುವೆ ಕೂಡ ಇಷ್ಟು ಆಕ್ರಮಣಕಾರಿಯಾಗಬಹುದು." ಎಂದು. ಇರುವೆಗಳಿಗೆ ಹೆದರಿ ಆನೆಗಳು ಸೊಂಡಿಲನ್ನು ತಮ್ಮ ಬಾಯೊಳಗೆ ಇಟ್ಟುಕೊಂಡು ಮಲಗುತ್ತವೆಯಂತೆ.
" ತಂಗಳು ಹೋಳಿಗೆ ಚೆನ್ನ, ಮುರಕಲು ಹಪ್ಪಳ ಚೆನ್ನ " ಎಂಬ ಮಾತು ನಿತ್ಯಸತ್ಯ. ಹಬ್ಬದ ದಿನದಂದು ಮುಚ್ಚಿಟ್ಟಿದ್ದ ಹೋಳಿಗೆಯನ್ನು ಮಾರನೆಯ ದಿನ ತಿನ್ನಬೇಕೆಂದು ತೆಗೆದೆ. ಅದಾಗಲೇ ಲಕ್ಷ-ಕೋಟಿಗಟ್ಟಲೆ ಇರುವೆಗಳು ಹೋಳಿಗೆಯನ್ನು ಹರಿದು-ಮುಕ್ಕುತ್ತಿದ್ದವು. ಯಾರು-ಯಾರಿಗೋ ಬರುವ ಸಕ್ಕರೆ-ಖಾಯಿಲೆ ಇವಕ್ಕೆ ಬರಬಾರದೇ. ಸಿಹಿ-ತಿಂಡಿಯಲ್ಲಿ ಯಾವ ಸಿಗ್ನಲ್ ಉತ್ಪತ್ತಿಯಾಗುತ್ತದೊ. ಇರುವೆಗಳ ಯಾವ ಅಂಗದಲ್ಲಿ ರಿಸೀವರ್ ಇರುತ್ತದೊ. ಆ ದೇವರೆ ಬಲ್ಲ. ಹೋಳಿಗೆಯ ಆಸೆಯಲ್ಲಿದ್ದವನಿಗೆ ಆಶಾಭಂಗವಾಯಿತು. ಇನ್ನು ಇವುಗಳನ್ನು ಓಡಿಸಿ ಹೋಳಿಗೆಗೆ ಕೈ ಹಾಕುವ ವ್ಯರ್ಥ ಪ್ರಯತ್ನ ಮಾಡಲಿಲ್ಲ. ಒಂದೇ ಕಡೆ ಸೇರಿದ್ದ ಇರುವೆಗಳ ಸಂತತಿಯನ್ನು ಕಂಡು ಖುಷಿಯಾಯಿತು. ಹೋಳಿಗೆ ಹೋದರೆ ಹೋಗಲಿ ಒಂದೇ-ಒಂದು ಇರುವೆ ಕೂಡ ನನ್ನ ಕೈ ಇಂದ ಮಿಸ್ ಆಗಕೂಡದು ಎಂದು ನಿರ್ಧರಿಸಿ ಪಾತ್ರೆ ಸಮೇತ ಹೋಳಿಗೆಯನ್ನು ಗ್ಯಾಸ್ ನ ಮೇಲಿಟ್ಟು ಲೈಟರ್ ಹೊತ್ತಿಸಿದೆ. ಕೆಲವೇ. ಸೆಕೆಂಡುಗಳಲ್ಲಿ ಇರುವೆಗಳ ಮಾರಣ-ಹೋಮ ನಡೆದು ಹೋಯಿತು. ಕೆಂಪಗೆ ಸಾಸಿವೆಯಂತೆ ಚಟಾರ್-ಚಟಾರ್ ಎಂದು ಸಿಡಿದು ಸಾಯುತ್ತಿದ್ದ ರಾಶಿ-ರಾಶಿ ಇರುವೆಗಳು ಶೂನ್ಯದಲ್ಲಿ ಕರಗಿ ಹೋದವು. ಅಸಹಾಯಕ ಜೀವಿಗಳನ್ನು ಟ್ರ್ಯಾಪ್ ಮಾಡಿ ಜನರಲ್ ಡಯರ್ ನಂತೆ ಸಾಮೂಹಿಕ ಹತ್ಯೆ ನಡೆಸಿಬಿಟ್ಟೆ.
ಏನೆಲ್ಲಾ ಮಾಡಿದರೂ ಇರುವೆಗಳ ಪಿರಿ-ಪಿರಿ ಹೆಚ್ಚುತ್ತಲೇ ಸಾಗಿತು. ನಾನು, ಅಪ್ಪನ ಜೊತೆ ಸೇರಿಕೊಂಡು ಲಕ್ಷ್ಮಣ-ರೇಖೆಯನ್ನು ಇರುವೆ ಕಂಡಲ್ಲೆಲ್ಲಾ ಗೀಚಿದೆ. ಆ ರೇಖೆಯ ಮೇಲೆಯೇ ಸಾಲುಗಟ್ಟಿ ಓಡಾಡಲು ಶುರು ಮಾಡಿದ್ದು ವಿಪರ್ಯಾಸ. ಪೇಪರ್ ನ ತುದಿಗೆ ಬೆಂಕಿ ಹಚ್ಚಿಕೊಂಡು ಇರುವೆ ಸಾಲುಗಳಿಗೆ ಹಿಡಿಯುತ್ತಾ ಹಿಂಬಾಲಿಸುತ್ತಿದ್ದೆ. ಮನೆಯೆಲ್ಲಾ ಹೊಗೆಯಿಂದ ತುಂಬಿ ಮಸಿಯಾಗಿ ಹೋದರು. ಇವುಗಳ ಸಂಖ್ಯೆ ಕಡಿಮೆಯಾಗಲಿಲ್ಲ. ಇರುವೆಗಳು ಹೋಗುವ ಸಣ್ಣ-ಸಣ್ಣ ತೂತುಗಳಿಗೆ ಸೀಮೆ ಎಣ್ಣೆ ಹಾಕಿ ಮುಚ್ಚಿದೆ. ಇನ್ನೊಂದು ತೂತದಿಂದ ಹೊರಬಂದು ನನ್ನನು ಹಂಗಿಸುತ್ತಿದ್ದವು.
ಅಯ್ಯೋ.... ಇವೇನು ಹುಟ್ಟುತ್ತವೆಯೋ, ಉತ್ಪತ್ತಿಯಾಗುತ್ತವೆಯೋ. ತಿಳಿಯದು. ಅಲ್ಪ ಅಯುಷ್ಯದ, ಅದರಲ್ಲೂ ಯಾವನ ಉಗುರು ತುದಿಗೆ ಸಿಕ್ಕರೂ. ಹೊಸಕಿ ಹಾಕಲಾಗುವ ಇವಕ್ಕೆ ಅದೆಷ್ಟು ಧಿಮಾಕು. ಶತ-ಪ್ರಯತ್ನಗಳು ನಡೆಸಿದರೂ ಇವುಗಳನ್ನು ನಿಯಂತ್ರಿಸಲು ಆಗಲೇ ಇಲ್ಲ.
---
ಊರಿನಿಂದ ಬಂದಿದ್ದ ನನ್ನ ಅಜ್ಜಿ, ಗೋಡೆಯ ಮೇಲೆ ಮೂಡಿದ್ದ ಲಕ್ಷ್ಮಣ-ರೇಖೆಯ ಚಿತ್ತಾರವನ್ನೂ, ಮನೆಯ ಅವ್ಯವಸ್ತೆಯನ್ನೂ ನೋಡಿ ಅಮ್ಮನನ್ನು ಕೇಳಿದಳು.
"ಅಪ್ಪ-ಮಕ್ಕಳು ಸೇರಿಕೊಂಡು ಇರುವೆ ಹಿಡಿಯುವ ಕೆಲಸ ಮಾಡ್ತಿದಾರೆ. ಅವಕ್ಕಿಂತ ಇವರ ಕಾಟವೆ ಹೆಚ್ಚಾಗಿದೆ. ಮನೆತುಂಬಾ ಪೇಪರ್ ಸುಡ್ತಾರೆ, ಸೀಮೆ ಎಣ್ಣೆಯನ್ನೆಲ್ಲಾ ಇರುವೆಗೆ ಕುಡಿಸ್ತಾರೆ. ಇಲಿ ಹೋದ್ರೆ ಹುಲಿ ಹೋಯ್ತು ಅನ್ನೋ ಹಂಗೆ ಆಡ್ತಾರೆ. " ಎಂದು ಅಮ್ಮ ತನ್ನ ಅಮ್ಮನ ಬಳಿ ದೂರಿತ್ತಳು.
"ಒಂದಷ್ಟು ದಿನ ಇರುವೆ ಗೂಡುಗಳು ಇರುವಲ್ಲಿಗೆ ಹೋಗಿ ಸಕ್ಕರೆ ಹಾಕಿ ಬನ್ನಿ, ತಂತಾನೆ ಕಡಿಮೆಯಾಗುತ್ತವೆ" ಎಂದು ಅಜ್ಜಿ ಪುಗಸಟ್ಟೆ ಐಡಿಯಾ ಕೊಟ್ಟಳು. ಇರುವೆಗಳ ಸಂತಾನವನ್ನೇ ನಾಶ ಮಾಡಲು ಟೊಂಕ ಕಟ್ಟಿ ನಿಂತಿದ್ದ ಕ್ರಾಂತಿಕಾರಿಗಳಿಗೆ, ಅಹಿಂಸಾತತ್ವ ಮೆಚ್ಚುಗೆಯಾಗಲಿಲ್ಲ. ಈ ಅಜ್ಜಿ ಎಲ್ಲಾ ಬಿಟ್ಟು ಒಬ್ಬ ಸೈನ್ಸ್ ಹುಡುಗನ ಹತ್ತಿರ ಬಂದು ಕತೆ ಹೇಳುತ್ತಲ್ಲಾ.
" ಎಲ್ಲೋ... ಇರುವ ಇರುವೆ ಗೂಡಿಗೂ, ನಮ್ಮ ಮನೆಯಲ್ಲಿರುವ ಸಕ್ಕರೆ ಡಬ್ಬಕ್ಕೂ. ಎಲ್ಲಿಂದ ಎಲ್ಲಿಯ ಸಂಬಂಧ. ಇದನ್ನು ನ್ಯೂಟನ್ನೂ ಒಪ್ಪುವುದಿಲ್ಲ, ಡಾರ್ವಿನ್ನೂ ಒಪ್ಪಲ್ಲ " ಎಂದು ಮೂದಲಿಸಿದೆ.
ಕಾಕತಾಳೀಯ ಎಂಬಂತೆ ಮನೆಯಲ್ಲಿ ಇರುವೆಗಳ ಇರುವಿಕೆ ಇಲ್ಲವಾಗಿತ್ತು. ಹುಡುಕಿದರೂ ಕಾಣಸಿಗದಷ್ಟು ಮಟ್ಟಿಗೆ. ಅಜ್ಜಿಯ ಸಕ್ಕರೆ ಫಾರ್ಮುಲ ಕೆಲಸ ಮಾಡಿತ್ತು. ಇರುವೆ ಗೂಡಿಗೆ ಸಕ್ಕರೆ ಹಾಕಿ ಬಂದ ಮೇಲೆ, ಏನೆಲ್ಲಾ ರಚನಾತ್ಮಕ ಕ್ರಿಯೆಗಳು ನಡೆದವು, ಎಂಬುದನ್ನು ಸಾಕ್ಷಿ-ಸಮೇತ ಹೇಳಲಾರೆ. ಮನೆಯ ಯಾವ ಕೋನದಲ್ಲೂ ಇರುವೆ ಎಂಬ ಮಾತಿಲ್ಲ. " ಇರುವೆ ಗೂಡಿಗೆ ಸಕ್ಕರೆ ಹಾಕಿ ಬಂದರೆ, ಅವು ನಮ್ಮ ಮನೆಯಿಂದ ಹೊರಡುತ್ತವೆ " ಎಂಬ ಕಲ್ಪನೆಯೇ ವಿಚಿತ್ರ. ಏನೇ ಆಗಲಿ ಅಜ್ಜಿಯ ಗಾಂಧಿಗಿರಿಗೆ ಜಿಂದಾಬಾದ್.

maga that is correct ..... aadru pant holagseerkond sariyadh time kaata kodo bagge baribekithu.....
ReplyDelete@ravi k nappa ninage iruve yaavaga hege kaata kodtu helu ... adannuuu barithene
ReplyDeletemaga story chennagide... ennu yava yava kranti madidia
ReplyDeletemaga iruvege elli bladder iruthe
ReplyDeletegoodworkdude..
ReplyDeleteawesome!!!!!
ReplyDelete