ಸಿವಿಲ್-ಅಜ್ಜಿ ಮತ್ತು ಇ೦ಜಿನಿಯರು

“ ನಿನ್ನ ‘ಇಂಜಿನಿಯರು ಓದು’ ಮುಗಿದ ಮೇಲೆ ಮನೆ-ಡ್ಯಾಮು ಕಟ್ಟುವ ಕೆಲಸ
ಸಿಗುತ್ತದೇನಪ್ಪ ”.

ಎಂಬುದಾಗಿ ಅಜ್ಜಿ ಕೇಳಿದಾಗ ಏನು ಹೇಳಬೇಕೊ.. ತಿಳಿಯಲಿಲ್ಲ.

“ಅಯ್ಯೊ. ನಾನು ಮನೆ-ಕಟ್ಟುವ ಇಂಜಿನಿಯರು ಅಲ್ಲ, ’ಎಲೆಕ್ಟ್ರಾನಿಕ್ಸು ಇಂಜಿನಿಯರು’
ಓದ್ತಾ ಇರೋದು.” ಎಂದು ಸ್ವಲ್ಪ ಗತ್ತಿನಿಂದಲೇ ಹೇಳಿದೆ.

“ಹೌದಾ. ಅದೇ. ನರಸಿಂಹ ಮಾಡ್ತಾನಲ್ಲ ಎಲೆಕ್ಟ್ರಾನಿಕ್ಸು ಅದು-ಇದು ಅಂತ ಟಿವಿ-ಮಿಕ್ಸಿ
ರಿಪೇರಿ ಮಾಡೋದು. ಆ ತರಹ ಕೆಲಸನ. ? ” ಎಂದು ಮುಗ್ಧವಾಗಿ ಕೇಳಿದಳು ಅಜ್ಜಿ.

ಇಂಜಿನಿಯರು ಹುಡುಗನಿಗೆ ಟಿವಿ ರಿಪೇರಿ ಮಾಡೋನು ಅಂತ ಹೇಳುತ್ತದಲ್ಲ. ನಮ್ಮೂರಿನಲ್ಲಿ
ಇಂಜಿನಿಯರು ಅಂದ್ರೆ ಮನೆ ಕಟ್ಟುವ ಸಿವಿಲ್ ಇಂಜಿನಿಯರು ಮಾತ್ರ. , ಉಳಿದವರೆಲ್ಲಾ ಅವರ
ಪಾಲಿಗೆ ’ಇಂಜಿನಿಯರು’ ಎಂದು ಕರೆಸಿಕೊಳ್ಳುವುದಕ್ಕೆ ‘ನಾಲಾಯಕ್ಕು’.

“ಟಿವಿ ರಿಪೇರಿ-ಮಾಡೊ ಕೆಲಸ ಅಲ್ಲ. , ನಾನೂ ಕೂಡ ಇಂಜಿನಿಯರು ಅಜ್ಜಿ ” ಎಂದೆ.

“ಸರಿ ಹಾಗಾದರೆ. ನಿನ್ನ ಕೆಲಸ ಏನು ಹೇಳು. ? ” ಎಂದು ಕೇಳಿದಾಗ ಒಂದು-ಕ್ಷಣ ಮಾತೇ
ಹೊರಡಲಿಲ್ಲ.
ರಾಂಗ್ ಟೈಮ್ ನಲ್ಲಿ ಈ ಮುದುಕಿ ಎಂತೆಂತದೋ ಡೌಟು ಕೇಳಿ ನನ್ನ ಮರ್ಯಾದೆ ಹರಾಜು
ಹಾಕುತ್ತಿದೆಯಲ್ಲ. ಟಿವಿ ರಿಪೇರಿಯವರು ಎಂದು ಅನ್ವರ್ಥನಾಮ ಪಡೆದ ನಮ್ಮ
ಎಲೆಕ್ಟ್ರಾನಿಕ್ಸು-ಸಮುದಾಯದ ಮಾನ ಉಳಿಸಲು ಮುಂದಾದೆ.

“ಟಿವಿ ರಿಪೇರಿ ಮಾಡೋದು ಅಲ್ಲಾ. ಟಿವಿಯನ್ನೇ ಡಿಜೈನು ಮಾಡುವವರು ನಾವು ”. ಅಜ್ಜಿಗೆ
ಅರ್ಥವಾಗುವ ಭಾಷೆಯಲ್ಲಿ ಹೇಳಿದೆ.

“ ಅದು ಯಾವ ಸೀಮೆ ಕೆಲಸಾನೊ. ಓದಿದರೆ ರೋಡು ಮಾಡುವ ಇಂಜಿನಿಯರು ಓದ್ಬೇಕು. ಡ್ಯಾಮು-ಮನೆ
ಇಂಥವೆಲ್ಲಾ ಕಟ್ಟುವುದು ಹುಡುಗಾಟದ ಕೆಲಸವೇ. ?” ನಮ್ಮನ್ನೆಲ್ಲಾ ತೃಣವಾಗಿ
ಕಾಣುವಂತಿತ್ತು ಮತ್ತವಳ ವಾದ.

ಅಜ್ಜಿಯ ಪೂರ್ವಾಗ್ರಹ ಪೀಡಿತ ತಲೆಯಿಂದ ಸಿವಿಲ್ ನವರನ್ನು ಹೊರ ಹಾಕಲೇಬೇಕೆಂದು
ನಿರ್ಧರಿಸಿದೆ. ಇನ್ನೂ ವಿಧ-ವಿಧವಾದ ಇಂಜಿನಿಯರುಗಳ ಅಸ್ತಿತ್ವವನ್ನು ಅಜ್ಜಿಯ ಲೋಕಲ್
ಭಾಷೆಯಲ್ಲಿಯೇ ವಿವರಿಸಿದೆ. ’ ಎಲೆಕ್-ಟ್ರಿಕಲ್ಲು’ ಎನ್ನುವ ಲೈಟು-ಕಂಬ ಹತ್ತುವ
ಇಂಜಿನಿಯರುಗಳು, ’ಮೆಕ್ಯಾನಿಕಲ್ಲು’ ಎಂಬ ವೆಲ್ಡಿಂಗ್ ಕೆಲಸದವರು, ’ ಎನ್ವಿರಾನ್ಮೆಂಟು
ಇಂಜಿನಿಯರು’ ಎಂಬ ಕಸ-ಕಡ್ಡಿ ಆಯುವವರು, ’ಆಟೊಮೊಬೈಲು’ ಎಂಬ ಗ್ಯಾರೇಜು ಕೆಲಸದವರು,
ಬಸ್-ಟೈರು ಮಾಡುವ ’ಪಾಲಿಮರು’ ಎಂಜಿನಿಯರುಗಳು ಎಂಬುದಾಗಿ ಎಲ್ಲಾ ಜಾತಿಯವರ ಕುಲಕಸುಬುಗಳ
ವಿವರವನ್ನು ಮಂಡಿಸಿದೆ. ಕಂಪ್ಯೂಟರು ಇಂಜಿನಿಯರುಗಳು ಅದ್ಯಾವ ಕೆಲಸಕ್ಕೆ
ಉಪಯೋಗವಾಗುತ್ತಾರೆ ಎಂಬುದು ನನಗೂ ತಿಳಿಯದಿದ್ದ ಕಾರಣ, ಅವರ ಬಗ್ಗೆ ಏನೂ ಹೇಳಲಾಗಲಿಲ್ಲ.

ಇಷ್ಟೆಲ್ಲಾ ’ಹರಿ-ಕಥೆ’ ಕೇಳಿದ ಮೇಲೆ ಅಜ್ಜಿಯ ನಿಲುವು ಬದಲಾಗಿರುತ್ತದೆ ಎಂದು ತಿಳಿದೆ.
ಆದರೂ ವಯಸ್ಸಾದವರ ಮೊಂಡುತನದ ಪರಮಾವಧಿಯೇನೊ ಎಂಬಂತೆ ’ರೋಡು-ಮಾಡುವವರ’ ಮುಖಸ್ತುತಿಯನ್ನು
ಬಿಡಲಿಲ್ಲ.

Comments

 1. ultimate!!!!!!!!!!!
  Try to post it in news papers, kannada industry needs some talented writers like you!!!!!!!!!

  ReplyDelete
 2. yes maga sendittovijaya karnatka...

  ReplyDelete
 3. ಲೇ ಹಲ್ಕಟ್ ... ಮಾತ್-ಮಾತ್ಗೆ ಮರ್ಯಾದೆ ಅಂತ ಹೇಳಿ .. ಈಡಿ electronics engineers ಗಳ ಮರ್ಯಾದೆ ತೆಗಿಥಿಯಪ್ಪ....
  ಪೋಸ್ಟ್ ತುಂಬ ಚೆನ್ನಾಗಿದೆ.....

  ReplyDelete
 4. @ALL: nimma preethipoorvaka kaamentugaLige thumbaa thanxxx...., ee support heege irali

  ReplyDelete
 5. Very good , keep writing and keep sending to magazines too..

  ReplyDelete
 6. ಲೋ Computer Engineer ಯಾವ ಕೆಲಸಕ್ಕೆ ಉಪಯೋಗ ಆಗುತ್ತಾರೆ ಗೊತ್ತಿಲ್ಲ ಅಂತ ಬರೆದಿದ್ದಿಯ... ಮೊದಲು ನೀನು ಯಾರ ಕೆಲಸ ಮಾಡುತಿದ್ದಿಯ ನೋಡು..... ಒಮ್ಮೆ ನನ್ನನ್ನು meet ಮಾಡು Computer Engineer ಕೆಲಸ ಮಾಡುವ ಬಗ್ಗೆ explain ಮಾಡುತ್ತೇನೆ.

  Ok ಪೋಸ್ಟ್ ತುಂಬ ಚೆನ್ನಾಗಿದೆ..... ಆದ್ರೆ ನಮ್ಮ ಮರ್ಯಾದೆ ಯಾಕಪ್ಪ ತೆಗೆತಿಯ....

  ReplyDelete
 7. do delete some unnecessary comments...

  ReplyDelete

Post a Comment