'ಜನನ ಪ್ರಮಾಣ ಪತ್ರ' ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿಂಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕಂಡು 'ನಾನು ಹುಟ್ಟಿರುವುದು ಸತ್ಯ ಎಂದು ಇರುವಾಗ, ಎಲ್ಲೋss ಒಂದು ಕಡೆ ಜನನ ಆಗಿರಲೇಬೇಕಾಗಿಯೂ, ಸೊ ಅದನ್ನು ಪರಿಗಣಿಸಿ ದಾಖಲೆ ಒದಗಿಸಬೇಕಾಗಿಯೂ ' ಕೇಳೋಣವೆಂದು ಹೊರಟೆ. 1995ಮಾಡೆಲ್ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದಂತೆ - ' ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ. ಮಕ್ಳು-ಮರಿ ಓಡಾಡ್ತಿರ್ತವೆ ' ಕೀರಲು ಧ್ವನಿಯೊಂದು ಒಳಗಿನಿಂದ ಕೇಳಿಸಿತು. ಬ್ರೇಕ್ ನ ಮೇಲೆ ಹತ್ತಿ-ನಿಂತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ. ಅಷ್ಟೋಂದು ಕಂಡೀಶನ್ ನಲ್ಲಿರುವ ಬೈಕನ್ನು, ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ. ? ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ, ಗಾಡಿ ಓಡಿಸಬೇಕು. ಅವರು ಅಡ್ಡ-ಬರುವುದನ್ನು ಮೊದಲೇ. , ಊಹಿಸಿ ಸ್ವಲ್ಪ ದೂರದಿಂದಲೇ ಬ್ರೇಕು-ಕಾಲು ಉಪಯೋಗಿಸಿ, ಬೈಕು ನಿಲ್ಲಿಸಬೇಕು. ಹಾರನ್ನು ಇಲ್ಲದಿರುವುದರಿಂದ ಕ್ಲಚ್-ಹಿಡಿದು ಅಕ್ಸಿಲರೇಟರ್ ರೈಸ್ ಮಾಡಿ ಬರ್-ರ್-ರ್sssss ಎಂದು ಶಬ್ದ ಮಾಡುತ್ತಾ ದಾರಿ ಬಿಡಿಸಿಕೊಳ್ಳಬೇಕು. ಬೈಕ್-ಸ್ಟಾರ್ಟ್ ಮಾಡಿ ಮನೆಯಿಂದ ನೂರು-ಗಜ ಕೂಡ ಮುಂದೆ ಬಂದಿರಲಿಲ್ಲ, ಅಂಗಡಿ-ಲಕ್ಕಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆಂದು, ಹಲ್ಲು-ಬಿಡುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು. &