ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು
MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ
ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ
ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ
ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ
ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ.
ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ,
ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ
ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್
ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ
ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು
ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು
ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು.
ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ
ಹಾಕಿಸಿಕೊಂಡವರಿರಬಹುದು ಎಂದು ಊಹಿಸಬಹುದಾಗಿತ್ತು.
ಅಲ್ಲಿಂದ ಸ್ವಲ್ಪವೇ ಹತ್ತಿರದಲ್ಲಿ ಭಾರಿ-ಮೀಸೆಯ ದಪ್ಪ-ಮುಖದ ವ್ಯಕ್ತಿಯೊಬ್ಬನ ಪೋಸ್ಟರು
ಇತ್ತು. ಆ ಮುಖದ ಅಕ್ಕ-ಪಕ್ಕ ಕ್ರೂರ ಮೃಗದ ಏಳೆಂಟು ಮಲ್ಟಿಪಲ್ ಎಫೆಕ್ಟ್ ಗಳು ಇದ್ದುವು.
ಯಾವ ಇತಿಹಾಸ ಪುರುಷನಿರಬಹುದು ಈತ ಎಂದು ಲೆಕ್ಕಾಚಾರ ಮಾಡುವಾಗ ತಿಳಿದದ್ದು, ಇವರು ಲೋಕಲ್
ಪಾಲಿಟಿಕ್ಸು ಧುರೀಣ ಎಂದು.
ಜನರಿಂದ ಕಿಕ್ಕಿರಿದು ತುಂಬಿ ಸಾಗುತ್ತಿದ್ದ ಬಸ್ಸುಗಳು, ಸಾವಿಗೂ-ಬದುಕಿಗೂ ಮಧ್ಯೆ ಇದ್ದ
ಕೊನೆಯ ಫುಟ್ ಬೋರ್ಡಿನ ಮೇಲೆ ತಮ್ಮ ಒಂಟಿ ಕಾಲನ್ನಿರಿಸಿ, ಜೋತು-ಬಿದ್ದು ಸಾಗುತ್ತಿದ್ದ
ಪಯಣಿಗರು.
ಇಂದಿನ ಅಡ್ವೆಂಚರಸ್-ಜರ್ನಿ ಗೆ ಮನಸ್ಸನ್ನು ಸಿದ್ಧ ಮಾಡಿಕೊಂಡೆ. ಒಂದೆರಡು ಬಸ್ಸುಗಳು
ಬಂದು ನಿಂತರೂ ಕೂಡ ಹತ್ತುವ ಧೈರ್ಯ ಬರಲಿಲ್ಲ. ಪಯಣ ಎಂಬ ಯಮಯಾತನೆಯ ಕಲ್ಪನೆ
ತೀವ್ರವಾಗಿತ್ತು.
ಶೇರಿಂಗ್-ಆಟೊ ದವನು ತನ್ನ ಬಂಡಿಯನ್ನು ಬಸ್ಸುಗಳ ನಡುವಿನಂದಲೇ. ನುಗ್ಗಿಸುತ್ತಾ ಬಂದು
ನಿಲ್ಲಿಸಿದ. ಅಟೊದವರಿಗೆ ಮುಂದಿನ ಒಂದು ಚಕ್ರ ತೂರಿಸಲು ಜಾಗ ಸಿಕ್ಕರೂ. ಸಾಕು, ಹಿಂದಿನ
ಎರಡು ಚಕ್ರಗಳು ತಂತಾನೆ ಬಂದು ಬಿಡುತ್ತವೆ. “ ನಲ್ಲೂರ್-ನಲ್ಲೂರ್-ನಲ್ಲೂರ್
ಶೋಲಿಂಗನಲ್ಲೂರ್ ”.. ಎಂದು ಬೊಬ್ಬೆ ಹಾಕುತ್ತಾ ನನ್ನ ಕಡೆ ನೋಡಿದ. ನಾನು ತಲೆ
ಅಲ್ಲಾಡಿಸುತ್ತಾ ಬರುವುದಿಲ್ಲ ಎಂದು ಸಂಘ್ನೆ ಮಾಡಿದೆ. “ಎಂಗ ಪೋಣು ” ಎಂದ.
ಸಾಲು-ಸಾಲಾಗಿ ಬರುವ ಆಟೋದವರಿಗೆಲ್ಲಾ ನಾನು “ ಎಲ್ಲಿಗೆ ಹೋಗುತ್ತಿದ್ದೇನೆ ” ಎಂಬುದನ್ನು
ಹೇಳಲೇಬೆಕು.
“ ಸುಡುಗಾಡಿಗೆ ಹೋಗ್ತಿದೇನೆ ಹೋಗಯ್ಯ ಸುಮ್ನೆ ” ಎಂದೆ. ಮುಂಜಾನೆಯ ಬಿಸಿಲಿಗೆ ತಲೆ ಕಾದು
ಪಿತ್ತ ಜಾಸ್ತಿಯಾಗಿತ್ತು. ಕುತ್ತಿಗೆಯವರೆಗು ಬಂದಿದ್ದ ಕೋಪವನ್ನು ಯಾರ ಮೇಲೆ ತೋರಿಸಲಿ.
? ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿದ ನಮ್ಮೂರಿನ ಮೇಷ್ಟ್ರುಗಳು ನೆನಪಾದರು.
ಬಡ್ಡಿಮಕ್ಕಳು!!, ಅಂದು ನನ್ನನ್ನು ಫೇಲು ಮಾಡಿದ್ದಿದ್ದರೆ ಹಾಯಾಗಿ ದನ-ಮೇಯಿಸುತ್ತಾ
ರಾಜನಂತಿರುತ್ತಿದ್ದೆ. ದೇಶ ಬಿಟ್ಟು ಬಂದು ಪರದೇಶಿಯಂತೆ ಒಂದು ಬಸ್ಸಿಗೆ ಹೆದರುತ್ತಾ
ನಿಲ್ಲುತ್ತಿರಲಿಲ್ಲ.
2
ಮುಂದಿನ ಬಸ್ಸು ಬರುತ್ತಿದ್ದಂತೆ ನನ್ನ ಇಚ್ಛಾಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು
ಬಸ್ಸಿನ ಕಡೆ ನುಗ್ಗಿದೆ. ಹೇಗೋ ಸಾಹಸ ಮಾಡಿ ಎರಡು-ಮೆಟ್ಟಿಲು ಹತ್ತುವಲ್ಲಿ ಯಶಸ್ವಿಯಾದೆ.
‘ಉಳ್ಳ ಪೋ… ಉಳ್ಳ ಪೋ… ’ ಎಂದು ಕಂಡಕ್ಟರು, ಜನರನ್ನು ಒಳ ನುಗ್ಗಲು ಪ್ರಚೋದಿಸುತ್ತಿದ್ದ.
ಆಹಾ!!! ಬಸ್ಸಿನ ಒಳಾಂಗಣವನ್ನು ಏನೆಂದು ಬಣ್ಣಿಸಲಿ.? ಒಬ್ಬರಿಗೊಬ್ಬರು ಮೈ-ಕೈ
ಒತ್ತಿಕೊಂಡು ನಿಂತಿದ್ದೆವು. ಉಸಿರಾಟಕ್ಕಾಗಿ ಕತ್ತು ಮೇಲೆತ್ತಿ ಗಾಳಿ ಎಳೆಯಬೇಕು. ನನ್ನ
ಕೆಳಗೆ ನಿಂತಿದ್ದ ಆಸಾಮಿಯ ತಲೆ-ಗೂದಲು ನನ್ನ ಮೂಗಿನ ಬಳಿ ಇತ್ತು. “ ಸಾರ್ ತಲೆ
ಅಲ್ಲಾಡಿಸಬೇಡಿ ಸೀನು ಬರುತ್ತದೆ ” ಎಂದು ಹೇಳಲೆ. ? “ ಒರು ಸಿಪ್-ಕಾಟು ” ಎಂದು
ಕಂಡಕ್ಟರಿಗೆ 10 ರೂ ಕೊಟ್ಟೆ. ನಾನೇನೊ ಅಚಾತುರ್ಯವಾದುದನ್ನು ನುಡಿದೆನೆಂಬಂತೆ ಮುಖ
ಸಿಂಡರಿಸಿಕೊಂಡವನು
“ ಚೆಕ್-ಪೋಸ್ಟಾ. ಪೋಗಾದು. ಪೋಗಾದು. ” ಎಂದು ದಬಾಯಿಸಿದ.
“ ಇಲ್ಲ ತಂದೆ ಸಿಪ್-ಕಾಟು, ಸಿಪ್-ಕಾಟು ” ಎಂದೆ.ಕಾರಪಾಕಂ, ತುರೈಪಾಕ್ಂ, ಮೇಂಡವಕ್ಕಂ,
ಮೇಟಿಕೊಪ್ಪಂ, ಚೆಮ್ಮನ್-ಚೆರಿ; ಹೀಗೆ ಟಂಗ್-ಟ್ವಿಸ್ಟರ್ ಗಳಂತಿರುವ ಈ ಊರುಗಳ ಹೆಸರನ್ನು
ಸ್ವಲ್ಪ ತಪ್ಪಾಗಿ ಸಂಬೋಧಿಸಿದರೂ; ಅದು ಮತ್ತೊಂದು ಊರಿನ ಹೆಸರಿನಂತೆ ಕೇಳಿಸಿ, ಎಲ್ಲಿಗೋ
ಹೋಗಬೇಕಾಗಿರುವವರು ಮತ್ತೆಲ್ಲಿಗೋ ಬಂದು ಸೇರುವ ಅಪಾಯವಿರುತ್ತದೆ. ಕಂಡಕ್ಟರು ೯ ರೂ
ಟಿಕೇಟು ಕೊಟ್ಟು ಸುಮ್ಮನಾದ. ೧ ರೂ ಚೇಂಜು ಎಲ್ಲಿ. ? ೧-೨ ರೂಗಳನ್ನು ದುಡ್ಡು ಎಂದು
ಪರಿಗಣಿಸುವುದಿಲ್ಲವಾದ್ದರಿಂದ ಇದು ಮಾಮೂಲಿ. ಅದೇನೊ ನನ್ನ ಮುಖ ನೋಡಿದರೆ
ಕಂಡಕ್ಟರುಗಳಿಗೆ ಚೇಂಜು ಕೊಡಬೇಕು ಎಂದು ಅನ್ನಿಸುವುದಿಲ್ಲ. ನಾನೂ ಕೂಡ ಕಂಡಕ್ಟರುಗಳಿಗೆ
ಟಿಪ್ಸು ಕೊಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದೆ. ಇಲ್ಲಿನ ಕಂಡಕ್ಟರಿಗೂ-ನನಗೂ
ಜನ್ಮ-ಜನ್ಮದ ಅನುಬಂಧ. ಮುಂದಿನ ಸ್ಟಾಪಿಗೆ ಟಿಕೇಟು ಕೇಳಿದರೆ. ಪಯಣ ಅಂತ್ಯಗೊಳ್ಳುವ
ಕೊನೆಯ ಸ್ಟಾಪಿಗೆ ಟಿಕೇಟು ಹರಿದು ಕೊಡುತ್ತಿದ್ದರು. ಅದೆಷ್ಟು ಪಯಣಿಗರು ಬಸ್ಸಿಗೆ
ಮುತ್ತಿಗೆ ಹಾಕಿದರು. ಕಂಡಕ್ಟರು ಮಾತ್ರ ತನ್ನ ಸೀಟು - ಬಿಟ್ಟು ಕದಲುತ್ತಿರಲಿಲ್ಲ.
ಲಾಗ-ಹಾಕಿಯಾದರು ಸರಿ, ಕಂಡಕ್ಟರು ಇರುವಲ್ಲಿಗೆ ಹಣ ತಲುಪಿಸಿ. , ಟಿಕೇಟು ಪಡೆಯಬೇಕು.
ಇಲ್ಲವಾದಲ್ಲಿ ಫೈನು ಗ್ಯಾರೆಂಟಿ.
ಕಾದಿರುವ ಒಲೆಯೊಳಗೆ ಎಲ್ಲರನ್ನು ಬಿಟ್ಟಂತಿತ್ತು. ಝಳ-ಝಳ ಬೆವರು ಧಾರಾಕಾರವಾಗಿ
ಹರಿಯುತ್ತಿತ್ತು. ಪಕ್ಕದಲ್ಲಿರುವವನು ಮೊಣ-ಕೈ ಯಿಂದ ತಿವಿದರು ಸುಮ್ಮನಿರಬೇಕು.
ನೂಕು-ನುಗ್ಗಲಿನಿಂದ ಆಗುತ್ತಿದ್ದ ಕಾಲ್ತುಳಿತ, ವಾಯುಮಾಲಿನ್ಯ ಒಂದು ಕಡೆಯಾದರೆ, ಜೊತೆಗೆ
ಶಬ್ಧಮಾಲಿನ್ಯವೂ ಸೇರಿ ಪರಿಸ್ಥಿತಿ ಕೈ ಮೀರಿತು. ಮುಂದೆ ಯಾರೋ “ ಅಪ್ಪಡಿ ಪೋಡೆ!!
ಪೋಡೆ!! ” ಹಾಡು ಲೌಡ್ ಸ್ಪೀಕರ್ ಹಾಕಿ ಕೇಳುತ್ತಿದ್ದರು. ಮತ್ತೊಬ್ಬ ಮಂಡೂಕನ ಮೊಬೈಲು “
ಆಡ್ರಾಡ್ರ ನಾಕು-ಮಕ ನಾಕು-ಮಕ ” ಎಂದು ಅರಚುತ್ತಿತ್ತು. ಇವೆಲ್ಲದರ ಎಲ್ಲರ ಗಜಿಬಿಜಿ
ಮಾತುಗಳು - ಬೈಗಳಗಳಂತೆ ಕೇಳುತ್ತಾ….“ ಜೀವನ - ಸಾಕಪ್ಪಾ. ಪಾಪಿ ಜನ್ಮ ” ಎನಿಸಿತು.
3
ಮುಂದಿನ ಸ್ಟಾಪು ಬರುತ್ತಿದ್ದಂತೆ ಡೋರಿನಲ್ಲಿ ನಿಂತವರಿಗೆಲ್ಲಾ. “ ಎರಂಗು-ಏರು.
ಎರಂಗು-ಏರು ” ಎಂದು ಕಂಡಕ್ಟರು ಗದರಿಸಿದ. ಬೇರೆ ದಾರಿಯಿಲ್ಲದೆ ಎಲ್ಲರೂ ಬಸ್ಸಿನಿಂದ
ಇಳಿದೆವು. ಅಗಲ-ಬಾಯಿಯ-ದೊಡ್ಡ ಪಾತ್ರೆಯನ್ನು ಹಿಡಿದ ಧಡೂತಿ ಹೆಂಗಸೊಂದು ಬಸ್ಸು ಹತ್ತಲು
ಮುಂದಾದಳು. ಕಂಡಕ್ಟರು ನಿರಾಕರಿಸಿದರೂ. ಒಬ್ಬರಿಗೊಬ್ಬರು ಬೈದಾಡುತ್ತಾ ಆ ಹೆಂಗಸು
ಪಾತ್ರೆಯನ್ನು ದೂಡುತ್ತಾ ಒಳ ನುಗ್ಗಿದಳು. ಒಂಟಿ-ಕಾಲಲ್ಲಿ ನಿಲ್ಲಲೂ.
ಜಾಗವಿಲ್ಲದಿರುವಾಗ, ಹೊಸ-ಸಮಸ್ಯೆಯೊಂದು ಹೊಳ ನುಗ್ಗಿದುದನ್ನು ಕಂಡು ಗಾಬರಿಯಾಯಿತು.
ಇಳಿದವರು ಇನ್ನು, ಯಾರೂ ಹತ್ತಿರಲಿಲ್ಲ. ಕಂಡಕ್ಟರು ವಿಷಲ್ ಊದಿಬಿಟ್ಟ. ಹೊರಡುತ್ತಿದ್ದ
ಬಸ್ಸಿನ ಹಿಂದೆ ಓಡುತ್ತಾ ಎಲ್ಲರೂ ಹತ್ತಿದರು. ನಾನೂ ಓಡುತ್ತಾ. , ಹತ್ತಲು ಸ್ವಲ್ಪವೂ. ,
ಜಾಗವಿಲ್ಲದ್ದನ್ನು ಕಂಡು ತಬ್ಬಿಬ್ಬಾದೆ. ಅಯ್ಯೋ. ಎರಂಗು-ಏರು ಎಂದು ಕೆಳಗಿಳಿಸಿ
ಹೋಗುತ್ತಿದ್ದ ಬಸ್ಸು ನೋಡಿ ಕೋಪ ಬಂತು. ಹೇಗೊ ಕಿಟಕಿಯ ಸರಳನ್ನು ಹಿಡಿದುಕೊಂಡು,
ತುದಿಗಾಲನ್ನು ಇನ್ಯಾವನದೋ. ಕಾಲ ಮೇಲಿಟ್ಟು ಜೋತು ಬಿದ್ದೆ. ಸಾಯುವುದಕ್ಕೆ
ತುದಿಗಾಲಿನಲ್ಲಿ ನಿಲ್ಲುವುದು ಎಂದರೆ ಬಹುಶಃ ಇದೇ ಇರಬೇಕು.
ಒಳಗಿನ ಕರ್ಮಕಾಂಡದಿಂದ ತಪ್ಪಿಸಿಕೊಂಡು OMR ರೋಡಿನಲ್ಲಿ ಬೀಸುತ್ತಿದ್ದ ಬದಲಾವಣೆಯ
ಗಾಳಿಗೆ ಮುಖ ಒಡ್ಡಿದೆ. OMR ರೋಡು ಎಂಬ ಸಿಂಧೂ ನದಿಯ ದಡದಲ್ಲಿ ಐಟಿ ನಾಗರೀಕತೆ
ವಿಜೃಂಭಿಸುತ್ತಿತ್ತು. ಮಾಹಿತಿ-ತಂತ್ರಜ್ನಾನ ಕ್ಷೇತ್ರ ತನ್ನ ಚಿನ್ನದ ಬಲೆಯನ್ನು
ಬೀಸಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಅದ್ಧೂರಿ ಗಗನ-ಚುಂಬಿ ಕಟ್ಟಡಗಳು. ಜನಗಳು
ಕೀ-ಕೊಟ್ಟು ಬಿಟ್ಟಂತೆ ತಮ್ಮ ಡೆಸ್ಟಿನೇಶನ್ ಕಡೆ ಓಡುತ್ತಿದ್ದರು. ಇಷ್ಟೆಲ್ಲಾ ಹೈ-ಟೆಕ್
ಇದ್ದರೂ ಸೂಪರ್-ಮ್ಯಾನ್ ಗಳ ಪೋಸ್ಟ್ರುಗಳು ದಾರಿಯುದ್ದಕ್ಕೂ ಇದ್ದವು.
ಇಳಿಯುವವರ ಜೊತೆ ಇಳಿಯುತ್ತಾ, ಹತ್ತುವವರ ಜೊತೆ ಪುನಃ ಹತ್ತುತ್ತಾ ಪಯಣ ಸಾಗಿತು.
ಸಿಪ್-ಕಾಟಿನಲ್ಲಿ ಬಸ್ಸಿನಿಂದ ಇಳಿದಾಗ. ತಲೆಯಿಂದ ಹೊರಟ ಬೆವರು-ನೀರು ಮುಖದ ಮೇಲೆ
ಹರಿಯುತ್ತಿತ್ತು. ಇಸ್ತ್ರಿ-ಹಾಕಿದ್ದ ಅಂಗಿ ಸಂಪೂರ್ಣವಾಗಿ ಒದ್ದೆಯಾಗಿ-ಮುದ್ದೆಯಾಗಿ
ಬೆನ್ನಿಗೆ ಅಂಟಿಕೊಂಡಿತ್ತು. ಸುರಿದುಕೊಂಡಿದ್ದ ಸೆಂಟು ಬೆವರಿನ ಜೊತೆ ಸೇರಿ ಘಾಟು
ಬರುತ್ತಿತ್ತು. ಜನಗಳ ಕಾಲ್ತುಳಿತದಿಂದ ವಿಕಾರಗೊಂಡಿದ್ದ ನನ್ನ ಬಾಟಾ-ಬೂಟ್ಸುಗಳು “ ಈ
ಸಂಭ್ರಮಕ್ಕೆ ಉಜ್ಜಿ-ಉಜ್ಜಿ ಪಾಲಿಷ್ ಬೇರೆ ಮಾಡ್ತೀಯ”ಎಂದು ಹಂಗಿಸಿತು.
ಅಂತೂ… ಕೊನೆಗೊಂಡ ಸಾಹಸಯಾತ್ರೆಯನ್ನು ನೆನೆದು, ಸಾರ್ಥಕ ಭಾವದಿಂದ ಆಫೀಸಿನ ಕಡೆ ಹೊರಟೆ. \
------------------
* ಈ ಸೊ-ಕಾಲ್ದ್ ಹಾಸ್ಯ ಬರಹದಲ್ಲಿರುವ ಲೈನುಗಳು ಸಂಪೂರ್ಣವಾಗಿ ನನ್ನ ವೈಯಕ್ತಿಕ
ಶುಗರ್-ಕೋಟೆಡ್ ಹಾಗಲಕಾಯಿ. ಯಾರ ಮನಸ್ಸಿಗಾದರು ಪೇನ್ ಆದರೆ ಕ್ಷಮಿಸಿ.

ஹ ஹ ஹ.. என்னப்பா இது? உன் கதை ரொம்ப ஹாஸ்யம இருக்கு. சென்னை மானகரப்போருன்து அனுபவம் உன் ஜன்மத்திலே எப்பவும் நினைக்கப்படும்! :)
ReplyDeleteThis comment has been removed by the author.
ReplyDeleteMaga nice story...:)
ReplyDeleteyeenle kc chennai mana maryade yella thegedbittidiya... aadru nice le....
ReplyDeletele kc.. gand mettid nadal huttiro magan haanga bardidyo le tamma...mechbek ninna
ReplyDeletesakkat ide, lo...
ReplyDeletesooper maga .. chennagi shape tegdidiya.. baraha shyli chennagide..
ReplyDeleteHey very good one dude!!!!
ReplyDeleteondu vishya bus bagge helale illa ..ade lift maado windows!!!1:)..only one of tis kind in the whole world!!:)
syodakku jana thudi-galli nilthare antha keli thumba ashcharya aagthide...
ReplyDeleteanyways MTC ge jai...
@ALL thank you guys.. your response made me to feel like dancing .., I want this further...
ReplyDelete@karthik ಧನ್ಯವಾದಗಳು ಸಾರ್... ನೀವು ನಮಗೆ ಬರದೆ ಇರುವ ಬಾಷೆಯಲ್ಲಿ ಉಗಿದಿದ್ದೀರೇನೊ ಅದ್ಕೊ೦ಡೆ ಆದ್ರೆ ಇಲ್ಲ.
@ಮ೦ಜು ,ರವಿ ,ರಾಮ್ ,ಆಗ೦ತುಕರು ,ಉಪ್ಪಿ: ನೀಮಗೂ ದೊಡ್ಡ ಥ್ಯಾ೦ಕ್ಸ್ ಪಾ ...ಓದಿ ಅಪ್ರೆಸಿಯೆಟ್ ಮಾಡೊ ಮನಸ್ಸು ಮಾಡಿದ್ದಕ್ಕೆ.... ನಿಮ್ದು ದೊಡ್ಡದು ಮನಸ್ಸು
@ಸತ್ಯ: ರಶ್ ನಲ್ಲಿ ಕಿಟಕಿ ನೋಡಕ್ಕಾಗಲಿಲ್ಲ... ನೆಕ್ಸ್ಟ್ ಟೈಮ್ ಪಕ್ಕಾ
ಬರಿತೇನೆ .. ಥ್ಯಾ೦ಕ್ಸ್
@ರೂಪಿ: ಜನ ಸಾಯ್ತಾರೆ ಅ೦ದ್ರೆ ನಿ೦ಗ್ಯಾಕಪ್ಪ ಅಷ್ಟೋ೦ದು ಸ೦ತೋಷ..
ನಿಮ್ಮ ಪ್ರತಿಕ್ರೆಯೆ ನೋಡಿ ಖುಷಿ ಪಡಬೇಕೋ... ಅಥವಾ ಒ೦ದು ಸಿಟಿ ಬಗ್ಗೆ ರಾ೦ಗ್ ಇ೦ಪ್ರೆಶನ್ ಉ೦ಟು ಮಾಡಿದ ಪಾಪಕ್ಕೆ ಪಶ್ಚಾತಾಪ ಪಡಬೇಕೊ.. ಗೊತ್ತಾಗುತ್ತಿಲ್ಲ.
ಒ೦ದು ಕಾಲದಲ್ಲಿ ಸ್ಲಮ್-ಡಾಗ್-ಮಿಲೇನಿಯರ್ ಸಿನಿಮಾ ನೋಡಿ .. ಈ ..ಬಡ್ಡಿಮಕ್ಕಳು ನಮ್ಮ ದೇಶದ ಮಾನ ತೆಗಿದಿದ್ದಾರೆ ಅ೦ತ ಬೇಜಾರು ಮಾಡ್ಕೊ೦ಡಿದ್ದೆ.
ಯಾರಾದ್ರು ನಮ್ಮೂರ ಬಗ್ಗೆ ತಪ್ಪಾಗಿ ಬರೆದರೆ ಅದು ಸತ್ಯ ಆಗಿದ್ರು ನಮಗೆ ಬೇಜಾರು ಆಗುತ್ತೆ . ಹಾಗಿದ್ದಮೇಲೆ ನಾವು ಬೇರೆಯವರ ಬಗ್ಗೆ ಬರೆಯಬಹುದಾ..?
ಪ್ಲೀಸ್ ಇದನ್ನ ಒ೦ದು " ಕ್ರೌಡೆಡ್ ಬಸ್ ನಲ್ಲಿ - ಪಾಪದ ಹುಡುಗನ ಪಯಣ " ಅ೦ತ ಓದಿ ಎ೦ಜಾಯ್ ಮಾಡಿ ಬಿಟ್ಟುಬಿಡಿ.
sooper maga... nav dina nodo ghatanegale adrooo... Tumba swarasyakaravada bannane....
ReplyDeleteThis comment has been removed by a blog administrator.
ReplyDeletesakath ede maga................[:)]
ReplyDeletetumba chennagi ide.......
ReplyDelete