Skip to main content

Posts

Showing posts from August, 2010

ಪ್ರೀತಿ ಕಾಮಕಾಮ , , ಲೈಫು ಪೂರ್ತ ವಿರಾಮ.

ಸುಮಾರು ಹೊತ್ತು ರಿ೦ಗಿಸಿದರೂ ಆ ಕಡೆಯಿ೦ದ ಎ೦ತ ರೆಸ್ಪಾನ್ಸು ಇಲ್ಲ.. ನನಗೂ ಸಾಕಾಗಿ ಹೋಯ್ತು.. ಏನಾಯ್ತಪ್ಪ ಈ ಬಡ್ಡಿಮಗನಿಗೆ ಎ೦ದು ಯೋಚಿಸುತ್ತಾ ಕೊನೆಯ-ಬಾರಿ ಎ೦ಬ೦ತೆ ಫೋನಾಯಿಸಿದೆ...
" ಲೋ.. ಏನೋ... ನಿ೦ದು ಸಮಸ್ಯೆ ..,ಒ೦ದೇ-ಸಮ ಕಾಲ್ ಮಾಡ್ತಿದೀಯ. ನಾ..ನ್ ರೌ೦ಡ್ಸ್ ಮೇಲಿದ್ದೇನೆ. ಸರ್ಕಾರಿ ಆಸ್ಪತ್ರೆ, ರಾತ್ರಿ-ಪಾಳಿ , ಅದೂ ಔಟ್-ಪೇಶೆ೦ಟು ಡಿಪಾರ್ಟ್-ಮೆ೦ಟು  ಹೆವ್ವಿ ಕೆಲಸ. ಇನ್ನೊ೦ದ್ ಸ್ವಲ್ಪ-ಹೊತ್ತು ಬಿಟ್ಟು ಫೋನ್ ಮಾಡೋ.. ಕಷ್ಟ-ಸುಖ ಮಾತಾಡೋಣ.." ಎ೦ದು ಒ೦ದೇ ಉಸಿರಿಗೆ ಹೇಳುತ್ತಾ .., ನನ್ನ ಪ್ರತಿಕ್ರಿಯೆಗೂ ಕಾಯದೆ ಕರೆ-ಕತ್ತರಿಸಿದ.


ನಾವು ಖಾಲಿ- ಇದೇವೆ ಅ೦ದ್ರೆ. . . ಊರವರೆಲ್ಲಾ ಖಾಲಿ ಇರ್ತಾರೆ ಅ೦ಥ ಭ್ರಮಿಸೋದು ನಮ್ಮ ಮೂರ್ಖತನ. ಇರಲಿ!! ಇವನು ನನ್ನ ವೈದ್ಯ-ಮಿತ್ರ ಚ೦ದ್ರು. ಡಾಕ್ಟರು ಆಗಬೇಕು ಎ೦ದು , ಇಬ್ಬರೂ ಒಟ್ಟಿಗೆ ಬಳ್ಳಾರಿ-ಕಾಲೇಜು ಸೇರಿದ್ದೆವು.ಆದರೆ ಹೆಣ-ಕೊಚ್ಚುವುದನ್ನು ನೋಡಲಾಗದೆ ಹೆದರಿ-ಬೆದರಿ ಅಲ್ಲಿ೦ದ ಓಟಕಿತ್ತು, ನಾನು ಅಬ್ಬಾಪೇರಿ ಯಾದೆ.ಅವನು ಎಲ್ಲರ೦ತೆ ಡಾಕ್ಟರಾದ.
ಆಗಲೆ ರಾತ್ರಿ ಹನ್ನೊ೦ದು ಬಾರಿಸುತ್ತಿತ್ತು. ನನ್ನ ರೂಮ್-ಮೇಟು ಇನ್ನೂ ಕೆಲಸದಿ೦ದ ಬ೦ದಿರಲಿಲ್ಲ.ಪ್ರಾಜೆಕ್ಟು ಡೆಡ್-ಲೈನು ಎನ್ನುವ ಕು೦ಟು ನೆಪ-ಒಡ್ಡಿ ಕ೦ಪನಿಯವರು ಹಗಲು-ರಾತ್ರಿ ಎನ್ನದೆ ಅವನಿ೦ದ ದುಡಿಸಿಕೊಳ್ಳುತ್ತಿದ್ದರು. ವಯಸ್ಸಿಗಿ೦ತ ಹೆಚ್ಚು ಸಾಸಿರ ಸ೦ಬಳ ಬರುವುದರ ಒಳಗುಟ್ಟುಗಳಿವು. ಸ೦ಕೀರ್ಣ ಸಮಾಚಾರವೊ೦ದು ತಲೆಯಲ್ಲಿ ಕೊರೆಯ…

ಸೀನ ಮತ್ತು ದುರ೦ತ-ಅ೦ತ್ಯ

‘ಹೆಬ್ಬಂಡಿ ತೋಟಕ್ಕೆ ಹೋಗೋಣ ಬಾರೋ. ಆ ದೆವ್ವದ ನೆರಳೆ ಮರದಲ್ಲಿ ಸಖತ್ತಾಗಿ ಹಣ್ಣು
ಬಿಟ್ಟಿದೆಯಂತೆ.’
 ಸೀನ ತನ್ನ ಲಟ್ಕಾಸಿ ಸೈಕಲ್ ಅಲ್ಲಾಡಿಸುತ್ತಾ ಕೂಗಿದ.

‘ಹೌದೇನೋ…? ಮನೇಲಿ ಕೇಳುದ್ರೆ, ಬಯ್ತಾರೆ. ನೆನ್ನೆ ಮಳೆ ಬೇರೆ ಬಂದಿದೆ. ಕೊಂಬೆಗಳ ಮೇಲೆ
ಕಾಲಿಟ್ರೆ ಜಾರುತ್ತೆ.’

ಹಣ್ಣಿನ ಆಸೆ ಇದ್ದರೂ, ಸರಿಯಾಗಿ ಮರ-ಹತ್ತಲು ಬರದ ಅರೆ-ಹಳ್ಳಿಗನಾದ್ದರಿಂದ, ಸತ್ಯವನ್ನು
ಮರಮಾಚಿ ಹೇಳಿದೆ.

‘ನಿನಗ್ಯಾವನೊ ಮನೇಲಿ ಹೇಳಿ ಬಾ ಅಂದವನು. ಈಗೇನು ಬರ್ತೀಯೊ, ಇಲ್ವೋ..? ಅಷ್ಟು ಹೇಳು.
ನಾನಂತೂ ಹೋಗ್ತಿದೀನಿ ’
 ಪೆಡಲ್ ತುಳಿಯುತ್ತಾ, ಹೊರಡಲು ಅಣಿಯಾದ. ಥೂ. ಥ್!! ಹಾಳಾದವನು, ಸುಮ್ಮನೆ ಕೂತವನಿಗೆ
ರಸಪೂರಿ ನೇರಳೆಗಳ ಕನಸು ಹುಟ್ಟಿಸಿ, ಈಗ ಕಡೆಗಣಿಸಿ ಹೋಗುತ್ತಿರುವನು. ಆಮೇಲೆ ಅವನ ಮುಂದೆ
ಹೋಗಿ ಹಣ್ಣಿಗಾಗಿ ಹಲ್ಲು-ಗಿಂಜುವ ಹಾಗಿಲ್ಲ.

‘ ಲೋ. , ಸೀನ ಬರ್ತೀನ್ ತಡಿಯೋ. “ ಓಡುತ್ತಾ ಹೋಗಿ, ನೆಗೆದು ಕ್ಯಾರಿಯರ್ ಮೇಲೆ ಕುಳಿತೆ.

ಹತ್ತು-ಇಪ್ಪತ್ತು ಅಡಿಯವರೆಗೂ ಮಳ್ಳನಂತೆ ಸೀದಾ ಉದ್ದಕ್ಕೆ ಬೆಳೆದು, ನಂತರ ಕೊಡೆಯನ್ನು
ಅಗಲಿಸಿದಂತಿತ್ತು ನೇರಳೆ ಮರದ ರೆಂಬೆಕೊಂಬೆಗಳು. ಆ ಮರವನ್ನು ಕಂಡು ತಲೆ ಕೆಟ್ಟಿತು. ಇದು
ಮರ-ಹತ್ತಲು ಬರದವರಿಗೆ ತೀರಾ ಪ್ರತೀಕೂಲ ವಾತಾವರಣ.

‘ ಫುಲ್ ಹಣ್ಣು ತರೆಯುವವರೆಗೂ, ಇಬ್ಬರೂ ತಿನ್ನಿವಂತಿಲ್ಲ. ಎಲ್ಲಾ ಮುಗಿದ ಮೇಲೆ
ಇಬ್ಬರಿಗೂ ಸಮಪಾಲು. ತರಲೆ-ಗಿರಲೆ ಮಾಡಂಗಿಲ್ಲ.’
 ಪಾರ್ಟ್-ನರ್ ಶಿಪ್ ವ್ಯವಹಾರಕ್ಕೆ ಮುಂಚೆ ತನ್ನ terms ಅಂಡ್ condition ಗಳನ್ನು
ಬಿಡಿಸಿ…