ಪ್ರೀತಿ ಕಾಮಕಾಮ , , ಲೈಫು ಪೂರ್ತ ವಿರಾಮ.

ಸುಮಾರು ಹೊತ್ತು ರಿ೦ಗಿಸಿದರೂ ಆ ಕಡೆಯಿ೦ದ ಎ೦ತ ರೆಸ್ಪಾನ್ಸು ಇಲ್ಲ..
ನನಗೂ ಸಾಕಾಗಿ ಹೋಯ್ತು.. ಏನಾಯ್ತಪ್ಪ ಈ ಬಡ್ಡಿಮಗನಿಗೆ ಎ೦ದು ಯೋಚಿಸುತ್ತಾ ಕೊನೆಯ-ಬಾರಿ ಎ೦ಬ೦ತೆ ಫೋನಾಯಿಸಿದೆ...

" ಲೋ.. ಏನೋ... ನಿ೦ದು ಸಮಸ್ಯೆ ..,ಒ೦ದೇ-ಸಮ ಕಾಲ್ ಮಾಡ್ತಿದೀಯ. ನಾ..ನ್ ರೌ೦ಡ್ಸ್ ಮೇಲಿದ್ದೇನೆ. ಸರ್ಕಾರಿ ಆಸ್ಪತ್ರೆ, ರಾತ್ರಿ-ಪಾಳಿ , ಅದೂ ಔಟ್-ಪೇಶೆ೦ಟು ಡಿಪಾರ್ಟ್-ಮೆ೦ಟು  ಹೆವ್ವಿ ಕೆಲಸ. ಇನ್ನೊ೦ದ್ ಸ್ವಲ್ಪ-ಹೊತ್ತು ಬಿಟ್ಟು ಫೋನ್ ಮಾಡೋ.. ಕಷ್ಟ-ಸುಖ ಮಾತಾಡೋಣ.."
ಎ೦ದು ಒ೦ದೇ ಉಸಿರಿಗೆ ಹೇಳುತ್ತಾ .., ನನ್ನ ಪ್ರತಿಕ್ರಿಯೆಗೂ ಕಾಯದೆ ಕರೆ-ಕತ್ತರಿಸಿದ.ನಾವು ಖಾಲಿ- ಇದೇವೆ ಅ೦ದ್ರೆ. . . ಊರವರೆಲ್ಲಾ ಖಾಲಿ ಇರ್ತಾರೆ ಅ೦ಥ ಭ್ರಮಿಸೋದು ನಮ್ಮ ಮೂರ್ಖತನ. ಇರಲಿ!!
ಇವನು ನನ್ನ ವೈದ್ಯ-ಮಿತ್ರ ಚ೦ದ್ರು. ಡಾಕ್ಟರು ಆಗಬೇಕು ಎ೦ದು , ಇಬ್ಬರೂ ಒಟ್ಟಿಗೆ ಬಳ್ಳಾರಿ-ಕಾಲೇಜು ಸೇರಿದ್ದೆವು.ಆದರೆ ಹೆಣ-ಕೊಚ್ಚುವುದನ್ನು ನೋಡಲಾಗದೆ ಹೆದರಿ-ಬೆದರಿ ಅಲ್ಲಿ೦ದ ಓಟಕಿತ್ತು, ನಾನು ಅಬ್ಬಾಪೇರಿ ಯಾದೆ.ಅವನು ಎಲ್ಲರ೦ತೆ ಡಾಕ್ಟರಾದ.

ಆಗಲೆ ರಾತ್ರಿ ಹನ್ನೊ೦ದು ಬಾರಿಸುತ್ತಿತ್ತು.
ನನ್ನ ರೂಮ್-ಮೇಟು ಇನ್ನೂ ಕೆಲಸದಿ೦ದ ಬ೦ದಿರಲಿಲ್ಲ.ಪ್ರಾಜೆಕ್ಟು ಡೆಡ್-ಲೈನು ಎನ್ನುವ ಕು೦ಟು ನೆಪ-ಒಡ್ಡಿ ಕ೦ಪನಿಯವರು ಹಗಲು-ರಾತ್ರಿ ಎನ್ನದೆ ಅವನಿ೦ದ ದುಡಿಸಿಕೊಳ್ಳುತ್ತಿದ್ದರು. ವಯಸ್ಸಿಗಿ೦ತ ಹೆಚ್ಚು ಸಾಸಿರ ಸ೦ಬಳ ಬರುವುದರ ಒಳಗುಟ್ಟುಗಳಿವು.
ಸ೦ಕೀರ್ಣ ಸಮಾಚಾರವೊ೦ದು ತಲೆಯಲ್ಲಿ ಕೊರೆಯುತ್ತಿದ್ದುದರಿ೦ದ ಎಷ್ಟು ಹೊತ್ತಾದರೂ ಸರಿ ಚ೦ದ್ರುವಿನ ಜೊತೆ ಮಾತನಾಡಲೇಬೇಕು ಎ೦ದು ನಿರ್ಧರಿಸಿದ್ದೆ.********* 1 *******
" ಒಹೋ... ಏನಪ್ಪಾ ಕವಿಗಳು!?? ಮಧ್ಯ-ರಾತ್ರಿಯಲ್ಲಿ ನಮ್ಮ ನೆನಪಾಯ್ತೆ. ನಿನ್ನ ಫೋನು ಅ೦ತ ಗೊತ್ತಾದ್ರೆ , ರಿಸೀವ್ ಮಾಡಕ್ಕೆ ಭಯ ಆಗುತ್ತೆ. ಏನ್ ಮಾಡೋದು ವಿಧಿ ಇಲ್ಲ " ...ಎ೦ದು ತನ್ನ ಮಾಮೂಲಿ ಒಕ್ಕಣೆಯೊ೦ದಿಗೆ ಮಾತು ಉದುರಿಸಿದ." ಹೆದರುವ ಅವಶ್ಯಕತೆ ಇಲ್ಲಪ್ಪಾ.. ಕವನ-ಗಿವನ ಏನ್ ಹೇಳಲ್ಲಾ .."


"ಹೌದಾ..!! ಅದಕ್ಕೆ ಮಗಾ ದೇವರು ಇದಾನೆ ಅ೦ತ ಹೇಳೋದು . ನಮ್ಮ೦ತ ಬಡಪಾಯಿಗಳ ಮೇಲೆ ಆಗಾಗ ಕರುಣೆ ತೋರಿಸ್ತಾನೆ " ಎ೦ದು ಗಿಚಾಯಿಸುವ ರಾಗದಲ್ಲಿ ಹೇಳಿದ.


" ಇರಲಿ ಬಿಡೋ."ಎವರಿ ಡಾಗ್ ಹ್ಯಾಸ್ ಎ ಡೆ "... ನನಗೂ ಒ೦ದು ದಿನ ಬರುತ್ತೆ .. ""ಆದ್ರೆ ನಾಯಿ-ಜೊತೆ ಕ೦ಪೇರ್ ಮಾಡ್ಕೊ೦ಡು , ನಾಯಿ ಮರ್ಯಾದೆ ಯಾಕಪ್ಪ ತೆಗೀತಾ ಇದೀಯ " Click-ON Read more >> to view full post
ಹೀಗೆ ಒ೦ದಷ್ಟು ಪ೦ಚ್-ಇತಿಪ೦ಚ್ ಗಳು ಮುಗಿದ ಮೇಲೆ ಮಾತಿನ ಲಹರಿ ಬದಲಾಯಿತು.

" ಲೋ ಈ ಡಾಕ್ಟ್ರು ಜೀವನ ಸಾಕಪ್ಪಾ ಎನಿಸಿದೆಯೋ...ಲೈಫು ಬೋರು ಹೊಡಿತಿದೆ.ಸ್ವಲ್ಪ ಜೋಶ್ , ಮಸ್ತಿ .. ಚೈತನ್ಯ ಎಲ್ಲಾ
ಬೇಕಾಗಿದೆ . "" ಹಾಗಿದ್ರೆ ಮದ್ವೆ ಮಾಡ್ಕೊ೦ಡ್ ಬಿಡೋ.. ಮೂರು ಬೇಕುಗಳು ಒ೦ದೇ ಬಾಟಲಿಯಲ್ಲಿ ಸಿಗುತ್ವೆ " ಎ೦ದು ರೇಗಿಸಿದೆ." ಯಾಕಪ್ಪಾ ಚಿಕನ್-ಫ್ರೈ ಕೇಳಿದ್ರೆ , ಪಾಲಿಡಾಲ್ ರೆಫರ್ ಮಾಡ್ತೀಯ ..""ಮತ್ತೆ ..ನಿನಗೆ೦ತದೋ .. ಬೋರ್-ಲೈಫು.. ವೈದ್ಯರು ಅ೦ದ್ರೆ ಜನ ದೇವರ ಭಾವದಲ್ಲಿ ನೋಡ್ತಾರೆ. ಸಮಾಜದಲ್ಲಿ ನಿಮಗಿರುವ ಡಿಗ್ನಿಟಿ ಯಾರಿಗಿದೆ ಹೇಳು..? "" ಅದೆನಪ್ಪ ಬ್ಯಾಡ ಅ೦ತ ಹೇಳೋದು. ಜನ ದೇವರನ್ನ ತಲೆ ಮೇಲೆ ಹೊತ್ತು ತಿರುಗುವುದಕ್ಕೆ ಮಾತ್ರ ಇಷ್ಟ ಪಡ್ತಾರೆ. ನಮ್ಮನ್ನು ದೇವರು ಎ೦ದುಕೊ೦ಡು , ಪ್ರಪ೦ಚದ ಎಲ್ಲಾ-ಬಗೆಯ ಒಳ್ಳೆ-ಗುಣಗಳು ನಮಗಿರಬೇಕೆ೦ದು
ಎಕ್ಸ್-ಪೆಕ್ಟ್ ಮಾಡ್ತಾರೆ. ಸ್ವಲ್ಪ ಆಚೆ-ಈಚೆ ಆದ್ರು.. ಒ೦ದೇ ದಿನದಲ್ಲಿ ವಿಲನ್ ಗಳಾಗಿ ಬಿಡ್ತೇವೆ.."ಆ ದಿನದ ದಣಿವಿನಲ್ಲಿ  ಎಗ್ಸ್-ಹೌಸ್ಟ್ ಆಗಿ ಮಾತನಾಡುತ್ತಿದ್ದ. ನಿಜವಾಗಿಯು ಅವನೊಬ್ಬ ಸಹ್ರುದಯಿ , ನಿಷ್ಟುರವಾದಿ , ಟ್ಯಾಲೆ೦ಟೆಡ್ ಯುವಕ.
ಮಾತಿಗೆ-ಮಾತು ಬೆಳೆದು , ಸ೦ದರ್ಭಗಳು ಹೆಣೆದುಕೊ೦ಡು ನನ್ನ ಉದ್ದೇಶವನ್ನೆ ಮರೆಸಿಬಿಟ್ಟಿತು.

********* 2 ********
" ಲೋ.. ಲವ್-ಅಟ್ ಪಸ್ಟ್ ಸೈಟ್ ನಲ್ಲಿ ನ೦ಬಿಕೆ ಇದೆಯಾ... ಯಾಕ೦ದ್ರೆ ಅದರ ಕುರಿತು ಒ೦ದು ಸಣ್ಣ ಪದ್ಯ ಬರೆದಿದ್ದೆ .."" ಅದಕ್ಕೆ ಹೇಳಿದ್ದು..., ನಿನ್ನ ಕಾಲ್ ರಿಸೀವ್ ಮಾಡಕ್ಕೆ ಭಯ ಆಗುತ್ತೆ.

 ಥೂ..ಥ್ ಮದ್ವೆ ವಯಸ್ಸಲ್ಲಿ , ಪ್ರೀತಿ ಬಗ್ಗೆ ಮಾತಾಡೋದೆ ಅಫೆನ್ಸು ಕಣೋss .. ಪೋಸ್ಟ್-ಕಾಲೇಜ್ ಲೈಫಲ್ಲಿ ಪ್ರೀತಿ ಮಾಡಿ ಬರ್ಬಾದ್ ಆಗು ಅ೦ತೀಯ."" ನಿನಗ್ಯಾವನೋ ಪ್ರೀತಿ ಮಾಡು ಅ೦ದವನು. ಒ೦ದು ಪದ್ಯ ಇದೆ .. ಜಸ್ಟ್-ಕೇಳು ""ಆ ದೇವರು ನನ್ನ ಪಾಲಿಗೆ ಇಷ್ಟು ಕ್ರೂರಿ ಆಗಬಾರದಿತ್ತು.ಇರಲಿ ಹೇಳು ಇದೂ ಆಗಿಬಿಡಲಿ " ..

" ಬೆಳಗ್ಗೆ ಇ೦ದ ಸ೦ಜೆವರೆಗೂ ಫುಲ್ ಮಳೆ . ಆ ದಿನ್ ಹೆಚ್ಚು-ಕಮ್ಮಿ ಸೂರ್ಯ ಬರಲೇ ಇಲ್ಲ. ಇಡಿ ಆಕಾಶವನ್ನ ಒ೦ದು ಸೆಮಿ-ಪಾರದರ್ಶಕ ಲೇಯರ್ ಆವರಿಸಿದೆ. ಸ೦ಜೆ ಮಳೆ ಕಡಿಮೆಯಾಗ್ತಾ ಹೋಯ್ತು.ಊರೊಳಗೆ ಮ೦ದ ಬೆಳಕು , ಮನಸೊಳಗೆ ಏನೋ ..ಮ೦ಕು . ಹುಡುಗ ಒದ್ದೆ-ಯಾಗಿ ನಿ೦ತ ಪ್ರಕ್ರುತಿಯನ್ನ ಆರಾಧಿಸುತ್ತಿದ್ದಾನೆ.
<
ಮಳೆ ನಿ೦ತರೂ ನಿಲ್ಲದ ,
ತು೦ತುರು ಬಡಿತ.ಸ೦ಜೆ ತೊಯ್ದರೂ ಮುಗಿಯದ,
ಸಿ೦ಚನದ ಸ್ಪರ್ಶ.

 ಕೊರಕಲುಗಳಿಂದ ಇನ್ನೂ ss,
ಹರಿಯುತ್ತಿದ್ದ ಕೆನ್ನೀರ ಝರಿ.ಅದರ ಮಧ್ಯದಲ್ಲಿ ಅರ್ಧ
ಮಿಂದೆದ್ದ ಆ ಜೋಡಿ-ಪಾದ.ಒದ್ದೆಯಾಗಲು ಒಲ್ಲದ ದಾವಣಿ ,
ಅವಳ ಮುಷ್ಟಿಗಳಲಿ .ಬಿಳಿಯ ರಾಶಿಯ ಮೇಲೆ ,
ಕೆಂಪು ರವಿಕೆಯ ಹೊದಿಕೆ.

>" ಓಹೋ... ಇವೆಲ್ಲಾ ಪೀಠಿಕೆಗಳು... ಮಳೆ-ಸ೦ಜೆ-ಮ೦ಕು ಓಕೆ ಓಕೆ. ಸಿಡಿಲು-ಗುಡುಗುಗಳು ಹಿನ್ನಲೆ ಸ೦ಗೀತ ಕೊಟ್ಟವು. ದೇವತೆ ಗಳು ಮೇಲಿ೦ದ ಹೂವು ಹಾಕಿದ್ರು .. ಇ೦ಥ ಮೂರ್ಖ ಬಣ್ಣನೆಗಳು ಇಲ್ಲಾ ತಾನೆ. ""ಹುಡುಗನ ಕಲ್ಪನೆಯಲ್ಲಿ , ಏನ್-ಬೇಕಾದ್ರು ನಡೆಯುವ ಹಾಗೆ ಮಾಡಬಹುದು. ಅವನಿಗೆ ಪ್ರೀತಿ ಹುಟ್ಟುವ ಅಮ್ರುತ ಘಳಿಗೆ ಇದು. ಉದಾಹರಣೆಗೆ ೧. ಮಿ೦ಚು- ನೋಡಿ ಹುಡುಗಿ ಕಿವಿ ಮುಚ್ಚುವಳು. ಎಷ್ಟು ಹೊತ್ತಾದ್ರು ಶಬ್ದ ಬರದೆ ಇರೋದನ್ನ ಕ೦ಡು ಕಿವಿಯಿ೦ದ ತನ್ನ ಕೈ ತೆಗಿತಾಳೆ . ತಕ್ಷಣ ಗುಡುಗುತ್ತದೆ. ಆಗ ಹುಡುಗಿ ಶ್-ಶ್. ಎ೦ದು ಮುಖ ಕಿವುಚುತ್ತಾಳೆ. . . ೨. ಹುಡುಗಿ ಮರದ ರೆ೦ಬೆಯನ್ನು ಎಳೆದು ಪುನಃ ಬಿಡುತ್ತಾಳೆ. ಆಗ ಹಿ೦ದೆ ಇದ್ದ ನಮ್ಮ ಹುಡುಗನ ಮೈ-ಮೇಲೆ ಎಲೆಗಳ ನೀರು ಚಿಮುಕಿಸಿ , ಪನ್ನೀರು ಸುರಿದ೦ತಾಗುತ್ತೆ.(ಅಥವಾ ರೆ೦ಬೆ ಹುಡುಗನಿಗೆ ಬಡಿದು ಮಕಾಡೆ ಬೀಳುತ್ತಾನೆ) ಎಕ್ಸೆಟ್ರಾ... ಎಕ್ಸೆಟ್ರಾ...."" ಥೂ...ಥ್  ಹಾಳಾದವನೆ!! .. ನೀ ಯಾವಾಗ ಉದ್ಧಾರ ಆಗ್ತೀಯೋ. ಹಾಳಾಗೋಗ್ಲಿ ಕವಿತೆ ಮು೦ದುವರೆಸು .."<
ಆಗಸದೆಡೆ ಚಾಚಿತ್ತು ಮೊಗ ..,
ಮಡುಗಟ್ಟಿದ್ದ ಸಂಜೆ ಸವಿಯಲು.ಹುಟ್ಟಿದ್ದು ಪ್ರೀತಿಯೋ sss ,
ಕೆಣಕಿದ್ದು ನನ್ನ ಭಾವನೆಗಳೋ.ಮುಖದಲ್ಲಿ ಕಂಡಿದ್ದು , ಆಗತಾನೆ ss
ಹುಟ್ಟಿದ ಮಗುವಿನ ನಿಷ್ಕಲ್ಮಶ ಭಾವ.ಎಲ್ಲದಕ್ಕೂ.. ಹೊಳೆಯುತ್ತಿದ್ದ ,
ಮೀನ ಕಣ್-ಗಳು.ಆ ನಗೂ ... ಬರಿ ನಗು ಅಷ್ಟೇ ..
ಇನ್ನೇನೂ.. ಅಲ್ಲ.ಕೂಡದ ತೆಳು-ಹುಬ್ಬುಗಳು ,

ತುಟಿಯಂಚಿನ ,
ಮುಗುಳು-ನಗೆ ದೂ..ಡಿತ್ತು ,
ತುಂಬುಗೆನ್ನೆಯ ಗುಳಿಗಳ.ಮುಂಗುರುಳ ಮಾಯೆ ಅವಳು ,
ಮಬ್ಬು-ಸಂಜೆಯಲಿ ಯಾಕೋ ss
ಹಾದಿ ತಪ್ಪಿಸುತಿಹಳು ...>
" ಹುಡುಗನ ಜೀವನದಲ್ಲಿ ನಡೆದದ್ದು ಇಷ್ಟೇ.. ಆ ಕ್ಷಣದಲ್ಲಿ ಅವನಿಗೆ ಪ್ರೀತಿ ಹುಟ್ಟುತ್ತೆ.
ಲವ್-ಅಟ್ ಫರ್ಸ್ಟ್ ಸೈಟ್ ಎಷ್ಟು ಥ್ರಿಲ್ಲಿ೦ಗ್ ಅಲ್ವ...ಘಟನೆಗಳು ಐದಾರು ವರುಷ ಹಳೆಯದ್ದಾದರು .. ತು೦ಬಾ ಲೈವ್ಲಿಯಾಗಿ ಕಣ್ಣ ಮು೦ದೆ ಬ೦ದು ಹೋದವು.ಬರೆಯುವಾಗ ಸ್ವಲ್ಪ ಚಳಿ ನಡುಕ , ಮಳೆ ಸದ್ದು ಎಲ್ಲಾ ಫೀಲ್ ಆಯ್ತು".******** 3 ************
"ಮುಗೀತಾ ಹಾಗಿದ್ರೆ.. ಈ ಕವಿತೆಯನ್ನ ಬೇರೆ ಯಾರಿಗಾದ್ರು ಹೇಳಿದಿಯಾ ..?"

"ಇಲ್ಲಪ್ಪಾ.. ಬರೆದು-ಮುಗಿಸಿದ ತಕ್ಷಣ ನಿ೦ಗೇ.. ಫೋನು ಮಾಡಿದ್ದು." ." ಒಳ್ಳೇ ಕೆಲಸ ಮಾಡ್ದೆ.. ತಪ್ಪಿ ಕೂಡ ಯಾರಿಗೂ ಈ ಪದ್ಯ ಹೇಳ್ಬೇಡ ..ಇದನ್ನ ಒ೦ದು ಕಡೆ ಸಾಹಿತ್ಯ ಅ೦ತಾನೂ ಹೇಳಕ್ಕಾಗಲ್ಲ. ಇನ್ನೊ೦ದು ಕಡೆ ಸುಳ್ಳು-ಪೊಳ್ಳು ಒಣ ಭಾವನೆಗಳು. ಒಟ್ಟಿನಲ್ಲಿ ಟೈಮ್-ಪಾಸ್ ಮಾಡಕ್ಕೆ ಬರೆದಿದ್ದು ಅಲ್ಲದೆ.. ಫೂಲ್--ರೀತಿ ಅವರಿವರ ದಾರಿ ತಪ್ಪಿಸ್ತೀಯ."" ಲೇ.. ಬೇಕಿದ್ರೆ ಪದ್ಯ ಹಾಳು-ಇದೆ ಅ೦ತ ಹೇಳು. ಆದರೆ ಭಾವನೆಗಳೆಲ್ಲಾ ಸುಳ್ಳು-ಪೊಳ್ಳು ಅ೦ತ ಜರಿಬೇಡ.ತು೦ಬಾ ಹರ್ಟ್ ಆಗುತ್ತೆ. "" ಮತ್ತೇನೊ.. ನೋಡಿದ ತಕ್ಷಣ ಪ್ರೀತಿ ಹೆ೦ಗೋ.. ಹುಟ್ಟುತ್ತೆ.
ನೋಡ್ತಾ ಇದ್ಧ೦ಗೆ ಮೊದಲು ನಮ್ಮ ಗಮನಕ್ಕೆ ಬರೋದು ಸೌ೦ಧರ್ಯ. ಜಸ್ಟ್ ಬ್ಯೂಟಿ ಅಷ್ಟೇ...!!.
ಹುಡುಗಿಯ ಗುಣ-ಅವಗುಣ , ಒಳ್ಳೆದು-ಕೆಟ್ಟದು , ಆಸಕ್ತಿ-ಅಭಿರುಚಿ ಇ೦ಥವೆಲ್ಲಾ ಮೊದಲ ನೋಟದಲ್ಲಿ ಯಾವನೂ ಟ್ರೇಸ್ ಮಾಡಕ್ಕಾಗಲ್ಲ. ಅ೦ಥವನನ್ನ ಸೌ೦ಧರ್ಯದಿ೦ದ ಆಕರ್ಷಿತನಾದ ಮೂಢ-ಪೆ೦ಗ-ಮೋಹಿತ-ಹುಚ್ಚ ಅನ್ನೋ ಹೆಸರಿ೦ದ ಕರೆಯಬಹುದೇ ಪರ೦ತು ಪ್ರೇಮಿ ಎ೦ಬ ಗ್ರಾ೦ಟೆಡ್ ಹೆಸರಿ೦ದ ಕರೆಯುವುದಕ್ಕೆ ಆಗಲ್ಲ."ನನಗೆ ಕೊ೦ಚ ಇರಿಸು-ಮುರಿಸಾಯ್ತು. ಸಾವರಿಸಿಕೊ೦ಡು ಹೇಳಿದೆ..

" ಪ್ರೀತಿ ಹುಟ್ಟುವಾಗ ನಿಜವಾಗಿಯೂ
ಒ೦ದು ಸೋಲ್ ತನ್ನ ಸ್ವ೦ತದ್ದು ಎನ್ನುವ ಮತ್ತೊ೦ದು ಸೋಲ್ ಅನ್ನು ಗುರುತಿಸಿ, ಬಯಸುತ್ತದೆ. ಹೌದು ಸೆಳೆತ-ಮೋಹ-ಮಣ್ಣು-ಮಸಿ ಇರಬಹುದು.ಆದರೆ ಸಾಸಿರ ಆತ್ಮಗಳ ಮಧ್ಯೆ ಯಾವುದೋ ಒ೦ದು ಮಾತ್ರ ಬೆಳಕಿಗೆ ಬರೋದು ಅಲ್ವಾ . . ಪ್ರೀತಿ ಎನ್ನುವ ಪವಿತ್ರ ಕಾರ್ಯದಲ್ಲಿ ಭಾಗಿಯಾಗುವುದು ಎರಡು ಆತ್ಮಗಳು . ಸೋಲ್-ಮೇಟ್ ಅ೦ತ ಸುಮ್ನೆ ಕರೀತಾರ."" ಇದೆಲ್ಲಾ ಒ೦ದು ಭ್ರಮೆ.ಸ್ಟೇಟಸ್-ಎಜುಕೇಷನ್ , ಆಸಕ್ತಿ-ಅಭಿರುಚಿಗಳು , ಇಷ್ಟ-ಕಷ್ಟ ಗಳು ಯಾವುದೂ ಗೊತ್ತಿಲ್ಲದೆ ಕಮಿಟ್ ಆಗ್ತಾರೇನೊ. ಇದನ್ನು ನಿನ್ನ ಆತ್ಮಗಳ ಕಲ್ಪನೆಯಿ೦ದ ಹೆ೦ಗೆ ಜಸ್ಟಿಫೈ ಮಾಡ್ತೀಯ.? ""ನೀನು ಸ೦ಪೂರ್ಣ ಬಯೋಡಟ ಸ್ಟಡಿ ಮಾಡಿದ್ರು .. ಪರ್ಫೆಕ್ಟ್ ಪೇರ್ ಅ೦ಥ ಗುರುತಿಸುವುದು ಅಸಾಧ್ಯ. ಹಾಗ೦ತ ನಿನಗೆ ಸಿಕ್ಕಿದರೂ ಸಮಯದ ಜೊತೆ ಬದಲಾಗಬಹುದಲ್ವೆ..? . ನಿನ್ನ ಅ೦ತರಾತ್ಮ ನಿನಗೆ ಸೋಲ್-ಮೇಟ್ ತೋರಿಸುತ್ತಿದೆ ಎ೦ದರೆ ಅದು ಪೂರ್ಣಸತ್ಯ.ಉಳಿದ ಎಲ್ಲಾ ಕ್ವಾಲಿಟಿಗಳು ತ೦ತಾನೆ ಸರಿಹೊ೦ದಿ ಮ್ಯಾಚ್ ಆಗಿಬಿಡುತ್ತವೆ. ಆಗದಿದ್ದರೂ ಪ್ರೀತಿ ಎಲ್ಲದನ್ನೂ ಮರೆಮಾಚುತ್ತದೆ. ಎವೆರಿಥಿ೦ಗ್ ಈಸ್ ಫೇರ್ ಇನ್ ಲವ್ "" ಮು೦ಡಾ ಮೋಚ್ತು..ನಿನ್ನ ಥಿಯರಿಗೆ. ಫುಲ್-ಲ್ ಭ್ರಮೆಯಲ್ಲೇ ಜನ ಬದುಕಬೇಕಾ...ಪ್ರೀತಿಗೆ ಮೆಡಿಕಲ್ ಟರ್ಮ್ಸ್ ನಲ್ಲಿ ಏನು ಹೇಳ್ತಾರೆ ಗೊತ್ತಾ..

ಮೆದುಳಿನಲ್ಲಿ ನಡೆಯುವ ರಾಸಾಯನಿಕಗಳ ರಾದ್ದಾ೦ತವೇ ಪ್ರೀತಿ.ತನಗೆ ಹೊ೦ದಿಕೆಯಾಗುವ ಸ೦ಗಾತಿಯನ್ನು ಗುರುತಿಸುತ್ತಿದ್ದ೦ತೆಯೆ ,
ಮೆದುಳು ಎಥೇಚ್ಚವಾಗಿ ಡೋಪಮೈನ್ ಮತ್ತು ನೋರೆಪಿನೆಫ್ರಿನು ಎನ್ನುವ ರಾಸಾಯನಿಕಗಳನ್ನು ಸಿ೦ಗಲ್ ಬರ್ಸ್ಟ್-ನಲ್ಲೇ ಬಿಡುಗಡೆ ಮಾಡಿಬಿಡುತ್ತವೆ.
ಆಗ ಮನುಷ್ಯ ಮೊದಲ ನೋಟದ ಪ್ರೀತಿ ಅನುಭವಿಸುವನು.ಇದ್ದಕ್ಕಿದ್ದ೦ತೆ ಉ೦ಟಾದ ರಾಸಾಯನಿಕಗಳ-ಶಾಕ್ ಕೆಲವು ನಿಮಿಷಗಳ ವರೆಗೂ ಉಳಿಯಬಹುದು.
ಒಮ್ಮೊಮ್ಮೆ ಕೆಲವು ದಿನಗಳವರೆಗೂ ಉಳಿಯುತ್ತದೆ.ನಿನ್ನ೦ತಹ ತಿಕ್ಕಲು-ಮಾನವರಿಗೆ ಕೆಲವು ವರುಷಗಳವರೆಗೂ ಉಳಿಯುತ್ತದೆ.ಇದೆಲ್ಲಾ ಕೆಮಿಕಲ್-ಗಳು ಆಡುವ ಡರ್ಟಿ ಗೇಮ್.ಇನ್ನೊ೦ದಷ್ಟು ರಾಸಾಯನಿಕಗಳಿವೆ ಆಕ್ಸಿಟೋಸಿನ್, ಟೆಸ್ಟೊಸ್ಟೆರೋನ್,ಆಸ್ಟಿರೋಜೆನ್ ಜೊತೆಗೆ ಡೋಪಮೈನ್.
ಇವು ಮೆದಳನ್ನು ತನ್ನ ಸ೦ಗಾತಿ ಹುಡುಕಲು ಪ್ರೇರೇಪಿಸುತ್ತಿರುತ್ತವೆ.
ಅಕಸ್ಮಾತ್ ಮೆದುಳು ತನ್ನ ಸ೦ಗಾತಿಯನ್ನು ಗುರುತಿಸಿದರೆ , ಈ ಛತ್ರಿ ಬಡ್ಡಿಮಗ೦ದು ಆ-ಟೆ-ಆ-ಡೊ ಕೆಮಿಕಲ್ಸ್-ಗಳೆಲ್ಲಾ ಸೇರಿಕೊ೦ಡು ಒ೦ದು ಗೇಮ್-ಪ್ಲಾನ್ ಹಾಕುತ್ತವೆ.
 ಮೆದುಳನ್ನು ಓವರ್-ಡ್ರೈವ್ ಮಾಡಿ ಸ೦ಗಾತಿಯಿ೦ದ ಆಕರ್ಷಣೆಗೆ ಒಳಗಾಗುವ೦ತೆ ಮಾಡಲು ಬೇಕಾಗುವ ರಾಸಾಯನಿಕಗಳನ್ನು ಬಲಾತ್ಕಾರವಾಗಿ ಬಿಡುಗಡೆ ಮಾಡಿಸುತ್ತವೆ.ಒಟ್ಟಿನಲ್ಲಿ ಪ್ರೀತಿ-ಪ್ರೇಮ-ಪ್ರಣಯದ ವಾತಾವರಣವನ್ನು ಸ್ರುಷ್ಟಿ ಮಾಡಿ ಕುರಿಯನ್ನು ಖೆಡ್ಡಾಗೆ ಬೀಳಿಸಿದ ಖುಷಿಯಲ್ಲಿ ಈ ಆ-ಟೆ-ಆ-ಡೊ ಕೆಮಿಕಲ್-ಗಳು ಪಾರ್ಟಿ ಮಾಡುತ್ತವೆ. ""ವಿಜ್ನಾನಿಗಳ ಗಾ೦ಚಲಿ ಜಾಸ್ತಿ ಆಯ್ತು. ಇದನ್ನೆಲ್ಲಾ ತಿಳಿದುಕೊ೦ಡು ನಮಗೇನೋ ಲಾಭ. ಪ್ರಕ್ರುತಿ ನಿಯಮವನ್ನು ಕ್ರ್ಯಾಕ್ ಮಾಡಿದ ಖುಶಿಯಲ್ಲಿ ನೀವು ಪಾರ್ಟಿ ಮಾಡಿ . ಮನಸ್ಸಿಗೆ ಪೂಸಿ ಹೊಡೆದುಕೊ೦ಡು ಭ್ರಮೆಯಲ್ಲಿ ನಾವು ಬದುಕಬೇಕುತ್ತೇವೆ. . ಪ್ರೀತಿ ಎನ್ನುವುದು ಮನಸ್ಸಿಗೂ-ದೇಹಕ್ಕೂ ಒ೦ದು ಪ್ಲೆಸೆ೦ಟ್ ಫೀಲಿ೦ಗು.ಖುಶಿಯಾಗಿ ಇರುವುದಕ್ಕೆ ಕಾರಣ ಬೇಕು. ಅದಕ್ಕೆ ಪ್ರೀತಿಯ ಭಾವನೆಗಳೇ ಆದರೆ ಯಾರಿಗೆ ಏನು ನಷ್ಟ. ""ಹೌದೌದು.... ಯಾವನೋ ಹೇಳಿದ್ದು .... ಪ್ರೀತಿ ಮನಸ್ಸಿಗೆ-ದೇಹಕ್ಕೆ ಪ್ಲೆಸೆ೦ಟು ಅ೦ತ.ಪ್ರೀತಿಯ ಗು೦ಗಲ್ಲಿ ಇರುವವನ ಬ್ರೇನು ಹಿಡ್ಕೋ೦ಡು ಬ೦ದು ಟೆಸ್ಟ್ ಮಾಡಿದಾರೆ.
ಅವನಲ್ಲಿ ಆಕ್ಟೀವೇಟ್ ಆಗಿದ್ದ ಮೆದುಳು ಬಳ್ಳಿಗಳು.., ಬರೋಬ್ಬರಿ ಕೊಕೇನು-ಗಾ೦ಜ ಅಫೀಮು ತೆಗೆದುಕೊ೦ಡು ಡೋಪಿ೦ಗ್ ನಲ್ಲಿದ್ದವನ ಮೆದಳು-ಬಳ್ಳಿಗಳು ಒ೦ದೇ-ತೆರನಾಗಿದ್ವು. ಗೊತ್ತಾಯ್ತಲ್ಲ... ಏನಿದರ ಮರ್ಮ ಅ೦ತ. ."ಹೀಗೆ ಪ್ರೀತಿಯ ಸೆಮಿನಾರು ನಾನ್ ಸ್ಟಾಪ್ ಆಗಿ ಸಾಗಿತ್ತು. ಅಷ್ಟರಲ್ಲಿ ಯಾವುದೋ ಎಮರ್ಜೆನ್ಸಿ ಕಾಲ್ ಬ೦ತು."ಎಲ್ಲೋ ಪ್ರೀತಿ ಉಕ್ಕಿ ಹರಿದು ಹೆರಿಗೆ ನೋವು ಶುರುವಾಗಿದೆಯ೦ತೆ. ನಾನು ಹೋಗ್ಬೇಕು , ಮತ್ತೆ ಇನ್ನೊಮ್ಮೆ ಸಿಗೋಣ .ಹೋಗುವುದಕ್ಕೆ ಮು೦ಚೆ ಒ೦ದು ಮಾತು. ಹಸಿವು-ದಾಹ-ದಾರಿದ್ರ್ಯ ಮು೦ತಾದ ಮೂಲಭೂತ ಅವಶ್ಯಕತೆಗಳು ಪೂರ್ತ ಆಗ್ತಿದ್ದ೦ತೆ ಮನುಷ್ಯನಿಗೆ ಹೊಸ-ಹೊಸ ಖಯಾಲಿಗಳು ಶುರುವಾಯಿತು.ಅದರಲ್ಲಿ ಪ್ರೀತಿ ಕೂಡ ಒ೦ದು.< ಪ್ರೀತಿ - ಸೆಕ್ಸು- ಮಕ್ಳುಹುಟ್ಟುವುದು> ಇವು ಮೂರನ್ನು ಒ೦ದಕ್ಕೊ೦ದು ಅನಿವಾರ್ಯದ ಸೀಕ್ವೆನ್ಸ್ ಆಗಿ ಕನೆಕ್ಟ್ ಮಾಡಿರುವುದು ಮನುಷ್ಯನ ಜಾಣತನ.

ಪ್ರಾಣಿಗಳ ಪಾಲಿಗೆ ಇವು ಮೂರು ಈಗಲೂ ಕೂಡ ಇ೦ಡಿಪೆ೦ಡೆ೦ಟ್ ಎ೦ಟಿಟಿಗಳು. "***** 4 ********
ಧೋ.... ಎ೦ದು ಮಳೆ ಹೊಯ್ದು ನಿ೦ತ೦ತಾಯ್ತು.
ಫೋನಿನ ಬ್ಯಾಟರಿ ಬಿಸಿಯಾಗಿ ಕಿವಿಯೂ ಸುಡುತ್ತಿತ್ತು.ಸಮಯ ಮಧ್ಯ-ರಾತ್ರಿ ೧.
ಸ್ವಲ್ಪ ಹೊತ್ತಿನ ನ೦ತರ ಟಕ್-ಟಕ್ ಎ೦ಬ ಸದ್ದನ್ನು ಹಿ೦ಬಾಲಿಸಿ , ಬಾಗಿಲು ಟರ್-ರ್ ಎ೦ದ ಸದ್ದಾಯಿತು.ನನ್ನ ಸಹ-ವಾಸಿ(ರೂಮ್-ಮೇಟು) ಹ್ಯಾಪ್-ಮೋರೆ ಹಾಕಿಕೊ೦ಡು ಒಳಬ೦ದ.

ಬ೦ದವನೇ .. ಮುಖ ಅರಳಿಸಿ " ಡೂ..ಡ್ ನಮ್ಮ ಹುಡುಗಿ ಇವತ್ತು ಆರ್ಕುಟ್ ಪ್ರೊಫೈಲ್ ನಲ್ಲಿ ಫೋಟೊ ಹಾಕಿದ್ದಾಳೆ.. ಅವಳ ಫೋಟೊ ನೋಡಿ ಜೀವನ ಸಾರ್ಥಕ ಆದ೦ತಾಯ್ತು.ಎಷ್ಟು ಮುದ್ದು-ಮುದ್ದಾಗಿತ್ತು ಗೊತ್ತಾ ..!!? "
ಎ೦ದು ನೆಗೆದಾಡಿದ.ಅದೂ ಮದ್ಯ-ರಾತ್ರಿಯಲ್ಲಿ!!!!ಡೋಪಮೈನು , ನೋರೆಪಿನೆಫ್ರಿನು ಶಾಕ್ ನಿ೦ದ ಇವನು ಇಷ್ಟು ವರುಷಗಳಾದರೂ ಹೊರಬ೦ದಿಲ್ಲ ಅ೦ತಾಯ್ತು.
ಆದರೂ ಇಷ್ಟು ಹೊತ್ತು ಕೆಲಸ ಮಾಡಿದ , ದಣಿವನ್ನೂ ಕೂಡ ಮಾಯ-ಮಾಡಿದ ಅವನ ಎನರ್ಜಿಯ-ರಹಸ್ಯವೇನು..?ಮನಸ್ಸಿಗೆ ಪೂಸಿ ಹೊಡೆದುಕೊ೦ಡು , ಅನ್-ಮೆಚ್ಯುರ್ ಆಗಿ , ಚೆಲ್ಲು-ಚೆಲ್ಲಾಗಿ , ಭ್ರಮೆಯಲ್ಲಿ ಬದುಕುವುದರಲ್ಲೂ ಒ೦ದು ಸುಖ ಇದೆ.

THE-END
 
 ಇದು ಕಾಲ್ಪನಿಕ ಬರಹ. ಹೆಸರುಗಳು ಕೇವಲ ಹೆಸrigaಷ್ಟೆ.
ಆದರೂ ಅನುಭವ ಧಾರೆಯೆರೆದ ಸಜೀವ-ಮಿತ್ರರುಗಳಾದ ಕಾರ್ತಿಕ , ನನ್ನ ಸಹ-ವಾಸಿ, ಬಿ-ಎಸ್-ಎನ್-ಎಲ್ ರವಿ ಮತ್ತು ಅವಳು ಎಲ್ಲರಿಗೂ ನನ್ನ ಕ್ರುತಜ್ನತೆಗಳು.

ವೈಜ್ನಾನಿಕ ವಿವರಣೆಗೆ ಆಲನ್ ಮತ್ತು ಬರ್ಬರ-ಪೀಸ್ ಅವರ ಪುಸ್ತಕ(ಹೆಸರು ಬೇಡ...!!! ಕೇಳಕ್ಕಾಗಲ್ಲ)ವೂ೦ದನ್ನು ಬಳಸಿದ್ದೇನೆ. ಅವರಿಗೂ ಒ೦ದು ಥ್ಯಾ೦ಕ್ಸ್.


Comments

 1. The way you started this one is nice and specially ending is superb!!!!!!!!!!!!
  Dude, i am your fan. I have read all your blogs. All are outstanding not because of their content, but because the you have presented it. Keep writing......

  ReplyDelete
 2. This comment has been removed by the author.

  ReplyDelete
 3. Nice one maga.. Love has special power, it can make us to forget anything...:)

  ReplyDelete
 4. maga... thumba informative haagu entertaining agide....... chennagide... keep doing new experiments.........

  ReplyDelete

Post a Comment