ಭಾನುವಾರ ಸಂಜೆ ಆಗುವ ಹೊತ್ತಿಗೆ, ವಿಲವಿಲನೆ ಮನಸ್ಸು ಹೊಯ್ದಾಡುತ್ತಿರುತ್ತದೆ. ಒಂಥರಾ ಅಪೂರ್ಣತೆಯ ಅನುಭವ. ‘ಅಯ್ಯಯ್ಯೋ ನಾಳೆ ಮತ್ತೆ ಕೆಲಸಕ್ಕೆ ಹೋಗಬೇಕು’. ಎರಡು ದಿನ ರಜೆ ಸರಿಯಾಗಿ ಬಳಸಿಕೊಳ್ಳೋಕಾದೇ.. ದಿನವಿಡಿ ಮನೆಯೊಳಗೆ ಮಲಗಿದ್ದೇ ಆಗಿತ್ತು. ಈ ಬಿಸಿಲೂರಿನಲ್ಲಿ ಹಗಲೊತ್ತಿನಲ್ಲಿ ಮನೆಯಿಂದ ಹೊರಬೀಳಲು ಮೋಟಿವೇಷನ್ ಆದರೂ ಎಲ್ಲಿಂದ ಬರಬೇಕು..? ರೂಮ್ ಮೇಟ್ ಗಳಾದ ಜಾಕ್ಸನ್ ಮತ್ತು ಮೂರ್ತಿ ಇಬ್ಬರೂ ನನ್ನಂತೆ ವೀಕೆಂಡ್ ಅತೃಪ್ತಿ ಖಾಯಿಲೆಯಿಂದ ನರಳುತ್ತಿದ್ದರು. ‘ಎಂತ ಸಾವುದು ಮಾರಾಯ. ಭಾನುವರಾನೂ ಹಂಗೇ ಖಾಲಿ ಖಾಲಿ ಹೋಗ್ತಾ ಉಂಟು. ಎಂತದಾದ್ರು ಮಾಡ್ಬೇಕು’ ಜಾಕಿ ಗೊಣಗಿದ. ‘ ನನ್ನ ಹತ್ರ ಒಂದು ಮೆಗಾ-ಪ್ಲಾನ್ ಇದೆ. ಇಲ್ಲಿಂದ 15-20 ಕಿಲೋಮೀಟರು ದೂರದಲ್ಲಿ ವನಲೂರು ಅನ್ನೋ ಊರಿದೆ. ಅಲ್ಲಿ ಟೆಂಟ್ ಸಿನಿಮಾ ಮಂದಿರ ಇರೋದನ್ನ ಬಸ್ಸಲ್ಲಿ ಹೋಗುವಾಗ ನೋಡಿದ್ದೆ. ಟೆಂಟ್-ನಲ್ಲಿ ಸೆಕೆಂಡ್ ಶೋ ಸಿನಿಮಾ ನೋಡುವುದು ‘Just for a change’ ಅನುಭವ. ನಾನು ಮೈಸೂರಿನಲ್ಲಿದ್ದಾಗ ಮಾರುತಿ ಟೆಂಟ್ ಗೆ ಹಲವಾರು ಬಾರಿ ಹೋಗಿದ್ದೇನೆ. ಮಸ್ತ್ ಥಿಯೇಟ್ರಿಕಲ್ ಫೀಲ್ ಇರತ್ತೆ. ‘ ಎಂದೆ. “ ಲೋ!! ಮನೆಹಾಳು ಐಡಿಯಾ ಕೊಡ್ತಿಯಲ್ಲೊ. ಇಷ್ಟೋತ್ತಲ್ಲಿ ಅಲ್ಲಿಗೆ ಹೋಗೋದೆ, ಕಷ್ಟ ಇದೆ. ಅಂತದ್ರಲ್ಲಿ ಸೆಕೆಂಡ್ ಶೋ ಸಿನಿಮಾ ನೋಡಿ, ಅಲ್ಲಿಂದ ಬರೋದು; ಮನೆ ಸೇರೋದು; ಹುಡುಗಾಟವಾ.. ‘ ಮೂರ್ತಿ ಕ್ಯಾತೆ ತೆಗೆದ. ಆದರೆ ಜಾಕ್ಸನ್ ನನ್ನ ಐಡಿಯಾದಿಂದ ಥ್ರಿಲ