Skip to main content

ಒ೦ದು ಪ್ರೀತಿಯ ಕಥೆ

“ ಅಮ್ಮಾ!! ಅವಳ ಹುಟ್ಟುಹಬ್ಬಕ್ಕಾದರೆ ಪಾಯಸ ಮಾಡ್ತೀಯ. ಆದರೆ ಪ್ರತಿ ಸಾರಿ ನನ್ನ
ಹುಟ್ಟುಹಬ್ಬಕ್ಕಾದರೆ ಯಾಕಮ್ಮಾ… ? ಏನೂ ಮಾಡಲ್ಲ. ?. ನೋಡು!! ಈ ಸಾರಿ ನನ್ನ
ಹುಟ್ಟುಹಬ್ಬಕ್ಕೆ ಹೋಳಿಗೆ-ಊಟ ಮಾಡ್ಬೇಕು. ತಿಳೀತಾ. !!”.

“ ಸಾರಿ!! ಕಂದ. ತಪ್ಪಾಯ್ತು. ನಿನ್ನಾಣೆ ಮರೆಯೊಲ್ಲ. ಈ ಬಾರಿ ನಿನ್ನ ಹುಟ್ಟುಹಬ್ಬದ ದಿನ
ಹೋಳಿಗೆ ಊಟ ಮಾಡೋಣ, ಸರೀನಾ. ಅಡಿಕೆ ಕೊಯ್ಲು ಇರೋ ಟೈಮಲ್ಲೇ ನಿನ್ನ ಹುಟ್ಟುಹಬ್ಬ
ಬರುತ್ತಲ್ಲೋ ಮಗನೆ. ನಮ್ಮ ಕೆಲಸಗಳ ಮಧ್ಯೆ ಅದು ಬಂದದ್ದೂ; ಹೋದದ್ದು ಗೊತ್ತ್ ಇಲ್ಲ.
ಆದ್ರೆ ಈ ಸಾರಿ ಎಷ್ಟೇ. ಕಷ್ಟ ಆದರು. ಹೋಳಿಗೆ ಊಟ ಮಾಡೊಣ. ”

‘ ಆಯ್ತಮ್ಮಾ. ಸರಿ!! ’ ಎಂದನು ಚಿರಂಜೀವಿ. ಹುಟ್ಟುಹಬ್ಬಕ್ಕೆ ಹೋಳಿಗೆ ಅಡಿಗೆ ಮಾಡಬಾರದು
ಅಂತಲ್ಲ. ಆದರೆ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವಂತಹ ನಾಜೂಕು ಜೀವನ ಪದ್ಧತಿಯನ್ನು
ಅವರು ರೂಢಿಸಿಕೊಂಡಿರಲಿಲ್ಲ.

October 7, 2010 ‘ ಹೋಳಿಗೆ ಬೇಕು ಅಂದಿದ್ದ ಮಗು, ಇಷ್ಟು ಹೊತ್ತಾದರು ಊಟಕ್ಕೆ
ಯಾಕೆ ಬರಲಿಲ್ಲ.’ ಅಮ್ಮ ಹೋಳಿಗೆ ಅಡುಗೆ ಮಾಡಿಟ್ಟು ಮಗನ ಬರುವಿಗೆ ಕಾಯುತ್ತಾ,
ಗೊಣಗುತ್ತಾ ಕುಳಿತಿದ್ದಾಳೆ. ರಾತ್ರಿ ಹೊತ್ತು ಗೆಳೆಯರ ಮನೆಗೆ ಹೋಗಿ, ಹರಟುತ್ತಾ
ಕೂರುವುದು ಅವನ ಅಭ್ಯಾಸ. ಬಾಗಿಲ ಕಡೆಗೆ ನೋಡುತ್ತಾ “ ಪಾಪ ಮಗು!! ಹಗಲೆಲ್ಲಾ ಮನೇಲಿ,
ಒಬ್ಬನೇ ಕೂತು ಸಾಕಾಗಿರುತ್ತೆ. ಆಸರ-ಬೇಸರ ಕಳೆಯಲು ರಾತ್ರಿ ಹೊತ್ತು, ಒಂದಿಷ್ಟು
ಮಾತಾಡಿಕೊಂಡು ಬರುತ್ತೆ. ಸ್ಕೂಲಿಗೆ ಹೋಗುವ ಹುಡುಗರು ರಾತ್ರಿ ಹೊತ್ತು ಬಿಟ್ಟರೆ,
ಹಗಲಲ್ಲಿ ಸಿಕ್ತಾರಾ. ?‘ ಅವನು ಬಾರದೆ ಇದ್ದುದಕ್ಕೆ ಹುಡುಕಿಕೊಂಡು ಹೋಗುವ ಮನಸ್ಸಾಯಿತು,
ಹೋಗಲಿಲ್ಲ. ‘ಅಮ್ಮ!! ಹಂಗೆಲ್ಲಾ ನನ್ನನ್ನು ಹುಡುಕಿಕೊಂಡು, ಫ್ರೆಂಡು ಮನೆಗೆ ಬರಬೇಡ.
ಅವರ ಮುಂದೆ ನಂಗೆ ಶೇಮ್ ಆಗುತ್ತೆ ’ ಅಂತ ಹೇಳಿದ್ದಾನೆ ಮಗ. ಅವನ ಮಾತನ್ನು
ಮೀರೋದಕ್ಕಾಗುತ್ತಾ..

‘ಹೋಯ್!! ಎಂತದೆ!! ಯಾರಿಗಂತ ಕಾಯ್ತಿದಿ. ಬಾ!! ಊಟಕ್ಕೆ ನೀಡು. ಹೊಟ್ಟೆ ಹಸೀತಾ ಇದೆ’
ಯಜಮಾನನ ಮಾತಿಗೆ ಎಚ್ಚರಳಾದಳು. ‘ ಇಲ್ಲ ರೀ ಮಗ!! ಬರಲಿ. ಹೋಳಿಗೆ ಅಡುಗೆ ಮಾಡು
ಹುಟ್ಟುಹಬ್ಬಕ್ಕೆ ಅಂತ ಹೇಳಿದ್ದಾನೆ. ಎಲ್ಲರೂ ಒಟ್ಟಿಗೆ ಊಟ ಮಾಡೋಣ. ಅವನನ್ನು ಬಿಟ್ಟು
ಊಟಕ್ಕೆ ಕರೀತಿರಲ್ಲ.’ ಹೆಂಡತಿಯ ಮಾತು ಕೇಳಿ ಯಜಮಾನನಿಗೂ ಏನು ಹೇಳಬೇಕೆಂದು ತೋಚಲಿಲ್ಲ.
ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಸುಮ್ಮನೆ ಕುಳಿತರು. ಯಜಮಾನನೆ ಮಾತಿಗಿಳಿದ.

‘ ನೆನ್ನೆ ರಾತ್ರಿ ನಂಗೊಂದು ಕನಸು ಬಿದ್ದಿತ್ತು ಮಾರಾಯ್ತಿ. ನಾನು ಮಗನ ಜೊತೆ ಜೋಗ
ಜಲಪಾತ ನೋಡೋಕೆ ಹೋಗಿದ್ದೇನೆ. ಆದರೆ ಸಿಕ್ಕಾಪಟ್ಟೆ ಮಂಜು ಇತ್ತು. ಜಲಪಾತ ಕಾಣ್ತಲೆ
ಇರ್ಲಿಲ್ಲ. ಛೇ!! ಏನಂತ ಹೇಳೋದು. ತುಂಬಾನೆ ಬೇಜಾರಾಯ್ತು. ಮಧ್ಯಾಹ್ನದವರೆಗೂ ಅಲ್ಲೇ ಕಾಲ
ಹಾಕಿದ್ವಿ. ಆಮೇಲೆ ಸ್ವಲ್ಪ-ಸ್ವಲ್ಪ ಮಂಜು ಆರಿಹೋಗಿ, ಜಲಪಾತ ಕಾಣಿಸಿಕೊಳ್ಳುವುದಕ್ಕೆ
ಶುರುವಾಯ್ತು. ಮಳೆಗಾಲದಲ್ಲಿ ತುಂಬಿದ ಜೋಗ. ಎಷ್ಟು ಅದ್ಭುತವಾಗಿತ್ತು ಗೊತ್ತಾ. ಮಂಜು
ಆರುವ ಮೊದಲು ಕೂಡ ಅಲ್ಲಿ ಜಲಪಾತ ಇತ್ತು. ಅಲ್ಲಿ ಅದು ಇದೆ, ಅನ್ನೋ ನಂಬಿಕೆ ಮೇಲೆಯೇ
ನಾವೂ ಕೂಡ ಕುಳಿತದ್ದು. ಈಗ ಹೇಳು ಅಲ್ಲಿ ಜಲಪಾತ ಇದ್ದದ್ದು ಸತ್ಯಾನ..? ಅಥವಾ ಅರೆ-ಬರೆ
ಮಂಜು ನೋಡಿ ವಾಪಾಸ್ ಬಂದು, ಜಲಪಾತವೇ ಇಲ್ಲ ಅಂದುಕೊಳ್ಳುವುದು ಸರಿಯಾ ’

‘ ನಿಮ್ಮ ಪಿಲಾಸಪಿಗೆ ಬೆಂಕಿ ಬಿತ್ತು. ಮಗುಗೆ ಶೀತ ಅಂದ್ರೆ ಆಗಲ್ಲ. ಸಿಂಬಳ
ಸೀಟುವುದಕ್ಕೆ ತುಂಬಾ ಕಷ್ಟ ಪಡುತ್ತೆ. ಅವನ ಹ್ರುದಯದಿಂದ ದಮ್ಮು ಕಟ್ಟಿ ಉಸಿರು ಬರಲ್ಲ
ರೀ. ನೀವು ಅವನಿಗೆ ಮುಖದ ತುಂಬಾ ಮಂಕಿ-ಟೋಪಿ ಹಾಕಿಸಿಕೊಂಡು ಹೋಗಿದ್ರಿ ತಾನೆ.’

“ ಅಯ್ಯೋ!! ಅಲ್ಲಿ ಜನಗಳ ಮುಂದೆ, ‘ ನಂಗೆ ಶೇಮ್ ಆಗುತ್ತೆ ಅಪ್ಪ ’ ಅಂತ ಹಠ ಮಾಡಿ, ಟೋಪಿ
ತೆಗೆಸಿದ. ಕಿವಿಗೆ ಹತ್ತಿ ಅಷ್ಟನ್ನೇ ಇಟ್ಟುಕೊಂಡಿದ್ದು. ”

‘ ಹೌ. ದಾ!!!. ಪ್ಚ. ಪುರುಸೊತ್ತು ಕೊಡದ ಹಂಗೆ ಅವನನ್ನ ನಡೆದಾಡಿಸಿರ್ತೀರಾ. ? ಮಗೂಗೆ
ತುಂಬಾ ಬೇಗ ಸುಸ್ತಾಗಿಬಿಡುತ್ತೆ. ಆದರೆ ಅದನ್ನ ಬಾಯಿಬಿಟ್ಟು ಹೇಳಲ್ಲ. ಬಾಯಿ ತೆಗೆದು
ತೇಗುತ್ತಾ ಉಸಿರಾಡಿದರೂ… ಸರಿ; ಜೊತೆಯಲ್ಲಿದ್ದವರ ಮುಂದೆ ತಾನು ಖಾಯಿಲೆಯವನು ಅಂತ
ಸಹಾನುಭೂತಿ ತೋರಿಸದೆ ಇರೊ ಹಂಗೆ ನಡ್ಕೋತಾನೆ. ಮನಸ್ಸಿನಲ್ಲೇನೋ ಆಸೆ ಇದೆ. ಆದ್ರೆ ದೇಹ
ಬೆಂಬಲಿಸಬೇಕಲ್ಲಾ. ? ’

“ ನನ್ನ ಮಗನ ಬಗ್ಗೆ ನನಗೆ ಗೊತ್ತಿಲ್ವಾ. ಸ್ವಲ್ಪ-ಸ್ವಲ್ಪ ಹೊತ್ತಿಗೆ ನಾನೇ
ಸುಸ್ತಾದವನಂತೆ ನಟಿಸಿ ಕೂರುತ್ತಿದ್ದೆ. ‘ ಅಪ್ಪಾಜಿ ನಿಂಗೆ ವಯಸ್ಸಾಯ್ತು ’ ಅಂತ
ನನ್ನನ್ನೇ ರೇಗಿಸ್ತಿದ್ದ. ” ಇಬ್ಬರೂ ನಕ್ಕರು.

‘ ಮತ್ತೇನು!! ವಯಸ್ಸಾಗಿಲ್ವಾ. ? ತಲೆ ತುಂಬಾ ಬೆಳ್ಳಿ-ಕೂದಲುಗಳು ತುಂಬ್ಕೊಂಡಿವೆ. ನನ್ನ
ಮಗನೇನಾದ್ರು ಚೆನ್ನಾಗಿ ಇದ್ದಿದ್ರೆ, ನಿಮ್ಮನ್ನ ಹೊತ್ತುಕೊಂಡೆ ಜೋಗ ಸುತ್ತಿಸಿರೋನು.?’

ಮತ್ತೆ ನಗು!!

‘ಕನ್ನಡಕ ಹಾಕಿಸಿಕೊಂಡೇ!! ಹೋಗಿದ್ರಿ ತಾನೆ…?’ ತಾಯಿ ಕರುಳು ಕನಸಲ್ಲೂ ತನ್ನ
ನೋಡಿಕೊಳ್ಳುವಿಕೆಯನ್ನು ಮುಂದುವರೆಸಿತ್ತು. ‘ ಕನ್ನಡಕ ಬಿಟ್ಟು ಒಂದು ನಿಮಿಷ ಕೂಡ ಅವನು
ಇರಲ್ಲ. ತಲೆ ನೋವು, ಕಣ್ಣು ನೋವು ಬಂದುಬಿಡುತ್ತೆ. ಒಂದು ಸಾರಿ ಆ ಕನ್ನಡಕ ಕೆಳಗೆ
ಬಿದ್ದು, ಫ್ರೇಮು ಎರಡು ಪೀಸ್ ಆಗಿಬಿಟ್ಟಿತ್ತಂತೆ. ದಿನವಿಡೀ ಅಟ್ಟದ ಮೇಲೆ
ಬಚ್ಚಿಟ್ಟುಕೊಂಡು, ಆ ಕನ್ನಡಕವನ್ನ ಮೇಣದ ಬತ್ತಿಗೆ ಹಿಡಿದು ಅಂಟಿಸಿ, ಮೊದಲಿನಂತೆ
ಮಾಡಿಕೊಂಡಿದ್ದ. ಸಣಕಲು-ದೇಹ ಇಟ್ಟುಕೊಂಡರೂ ಎಷ್ಟು ಸ್ವಾಭಿಮಾನ ಅಂತೀರಾ. ? ಮೂಗಿನ ಮೇಲೆ
ಕಲೆಯಾಗಿದ್ದನ್ನು ನೋಡಿದ ಮೇಲೆ ಗೊತ್ತಾಗಿದ್ದು. ಯಾಕೊ ಹಿಂಗೆ ಮಾಡಿದ್ದು ಅಂತ ಕೇಳಿದರೆ…

‘ ಸುಮ್ಮನೆ ನಿಮಗ್ಯಾಕಮ್ಮ ತೊಂದರೆ. ಪಾಪ!! ಅಪ್ಪಾಜಿ ಎಷ್ಟು ಕಷ್ಟ ಪಡ್ತಾರೆ. ನನ್ನ
ಕೈಲಂತು ಯಾವ ಕೆಲಸಾನೂ ಮಾಡಕ್ಕಾಗಲ್ಲ. ಆದ್ರೆ ನನ್ನಿಂದ ನಿಮಗೆ ಇನ್ನೂ ಜಾಸ್ತಿ ತೊಂದ್ರೆ
ಆಗದು ಬೇಡ. ’ ಅಂತ ಏನೇನೆಲ್ಲಾ ಹೇಳ್ತಾನೆ.

‘ ಎಷ್ಟೇ ಆದ್ರು, ನನ್ನ ಮಗನಮ್ಮ ಅವನು. ಅವನಲ್ಲಿರೊ ಶಿಸ್ತು ನಮಗಿಲ್ಲ ಬಿಡು.

ಅದೆಷ್ಟು ಬಾರಿ ವಾಂತಿಯಾಗಿ; ಸುಸ್ತಾಗಿ ಹೋಗಿದ್ದರೂ, ಆಸ್ಪತ್ರೆಗೆ ಹೊರಡುವ ಮುಂಚೆ,
ಕನ್ನಡಿ ಮುಂದೆ ನಿಂತು; ಎಡಗೈಯಲ್ಲಿ ಬಾಚಣಿಕೆ ಹಿಡ್ಕೊಂಡು ಕ್ರಾಪು ತಗೆದು, ಮುಖ
ನೋಡಿಕೊಂಡು.. ಹೊರಗೆ ಬರ್ತಾನೆ.
ನಿಲ್ಲುವುದಕ್ಕೆ ತ್ರಾಣವೇ ಇಲ್ಲದೇ ಇರುವಷ್ಟು ಸುಸ್ತಾದರೂ, ಯಾವತ್ತೂ ತನ್ನನ್ನು
ಹೊತ್ತುಕೊಳ್ಳುವುದಕ್ಕೆ ಹೇಳುವವನಲ್ಲ.
ಬಾಯಿಂದ ರಕ್ತವನ್ನೇ ಉಗುಳುತ್ತಿದ್ದರೂ, ಕಣ್ಣಲ್ಲಿ ನೀರು ಹಾಕುವವನಲ್ಲ.
ತನ್ನನ್ನು ತಾನು ಯಾವತ್ತೂ ಶಪಿಸಿಕೊಳ್ಳಲಿಲ್ಲ.
ಬದುಕಿಗಾಗಿ ಅಂಗಲಾಚಿ ತನ್ನ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ.
ಅವನ ಮನಸ್ಸಿನ ಶಕ್ತಿಯ ಮುಂದೆ, ದೈಹಿಕ ನ್ಯೂನ್ಯತೆಗಳು ಮೊಣಕಾಲೂರಿ ಸೋಲು
ಒಪ್ಪಿಕೊಳ್ಳುತ್ತಿದ್ದವು.‘

ತಮ್ಮ ಮಗನ ಚಾರಿತ್ರ್ಯವನ್ನು ಬಾಯಿತುಂಬಾ-ಹೊಗಳುತ್ತಾ,
ಕಲ್ಪನೆಯ ಹಾಸಿನಲ್ಲಿ ತರ್ಕಕ್ಕೆ ಬಿದ್ದವರಂತೆ ಮಾತನಾಡುತ್ತಿದ್ದರು. ಮನೆಯ
ಸಾಕು-ಬೆಕ್ಕು ಸುಬ್ಬಿ ಮಿಯಾವ್ ಎಂದು ಒಂದೇ ರಾಗಕ್ಕೆ ಅಬ್ಬರಿಸುತ್ತ ಅಡುಗೆ ಕೋಣೆಗೆ
ಬಂದಳು. ಒಂದು ಕ್ಷಣ ಅವರ ಕಲ್ಪನಾ ಲೋಕ ನಡುಗಿದಂತಾಯ್ತು.

2. ಪಯಣ; ಸಂಜೀವಿನಿಯ ಕಡೆಗೆ


ರಾತ್ರಿಯಿಂದಲೂ ಒಂದೆ-ಸಮನೆ ಮಳೆ ಸುರಿಯುತ್ತಿತ್ತು. ಬೆಳಗಾದರೂ ಮಳೆ ನಿಲ್ಲುವ ಸೂಚನೆಗಳು
ಕಾಣಲಿಲ್ಲ. ಮುಂಜಾನೆ 7 ಗಂಟೆಯಾದರೂ ಸೂರ್ಯನ ಸುಳಿವು ಇರಲಿಲ್ಲ. ಕಪ್ಪನೆ ಮೋಡದ
ನೆರಳಿನಲ್ಲಿ ಅರೆ-ಬರೆ ಬೆಳಕು.

‘ರೀ!! ಮಳೆ ಕಮ್ಮಿ ಆಗ್ಲಿ, ಸ್ವಲ್ಪ-ಹೊತ್ತು ಬಿಟ್ಟು ಹೊರಡೋಣ’ ಹೊನ್ನಮ್ಮ ಗಂಡನ ಕಡೆಗೆ
ನೋಡುತ್ತಾ ಈಗ ಬೇಡವೆಂಬಂತೆ ಕೇಳಿದಳು.

‘ಅಯ್ಯೋ. ಮಾರಾಯ್ತಿ, ಮಲೆನಾಡಿನಲ್ಲಿ ಇದ್ದುಕೊಂಡು, ಮಳೆಗೆ ಹೆದರಿ ನಿಲ್ಲುವುದಾ. ? ಇದು
ಈವತ್ತಿಗೆ ನಿಲ್ಲುವ ಮಳೆಯಲ್ಲ. ಆಕಾಶ ತೂತು ಬಿದ್ದಂತೆ ಸುರೀತಾ ಇದೆ. ನಿಮ್ಮದು ತುಂಬಾ
ದೂರದ ಪ್ರಯಾಣ. ಶಿಮೊಗ್ಗ ಖಾಸಗಿ ಬಸ್-ಸ್ಟಾಪಿಗೆ ಹೋಗಿ, ಅಲ್ಲಿಂದ ಉಡುಪಿ ಕಡೆಗೆ ಹೋಗುವ
ಬಸ್ ಹಿಡೀಬೇಕು. ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆ-ಘಟ್ಟ ಇಳಿದು ಉಡುಪಿ ಸೇರುವುದು ಅತೀ
ತ್ರಾಸದಾಯಕ ಪ್ರಯಾಣ. ಉಡುಪಿಯಿಂದ ಮತ್ತೆ ಮಣಿಪಾಲು ಆಸ್ಪತ್ರೆಗೆ ಹೋಗುವಷ್ಟರಲ್ಲಿ
ಹೊತ್ತಾಗಿ ಬಿಡುತ್ತೆ. ’ ಎಂದು ರಾಜಪ್ಪ ಅವಸರಸ ಮಾಡಿ ಹೇಳಿದ.

ಹದಿನಾರು-ವರುಷದ ಹ್ರುದಯರೋಗಿ ಮಗ ಚಿರಂಜೀವಿಯನ್ನು ಕರೆದುಕೊಂಡು, ಹೊನ್ನಮ್ಮ ಒಬ್ಬಳೇ
ಮಣಿಪಾಲಿನ ಬಹುದೊಡ್ಡ ಆಸ್ಪತ್ರೆಗೆ ಹೊರಟು ನಿಂತಿದ್ದಳು. ಶಿವಮೊಗ್ಗದಿಂದ 10 ಮೈಲು
ದೂರದಲ್ಲಿದ್ದ, ಹೊನ್ನವಿಲೆ ಎಂಬ ಪುಟ್ಟ ಗ್ರಾಮದಲ್ಲಿ ಇವರು ವಾಸವಾಗಿದ್ದರು. ಮಳೆಯ
ಆರ್ಭಟದ ನಡುವಲ್ಲಿಯೇ ದಾರಿ ಮಾಡಿಕೊಂಡು, ಶಿಮೊಗ್ಗ ತಲುಪಿ, ಮಂಗಳೂರು ಕಡೆಗೆ ಹೊರಟಿದ್ದ
ಮಿನಿ-ಬಸ್ ಹತ್ತಿದರು. ಚೀರು ಕಿಟಕಿ-ಬದಿಯ ಸೀಟಿನಲ್ಲಿ ಕುಳಿತು, ಒದ್ದೆಯಾಗಿ
ತೊಟ್ಟಿಕ್ಕುತ್ತಿದ್ದ ಕಟ್ಟಡಗಳನ್ನು ನೋಡುತ್ತಿದ್ದ. ರಾಜಪ್ಪನಿಂದ ಬೀಳ್ಕೊಂಡು
ಬಸ್ಸನ್ನೇರಿದ ಹೊನ್ನಮ್ಮ, ಮಗನ ಪಕ್ಕದಲ್ಲಿ ಕುಳಿತಳು. ಮಿನಿ-ಬಸ್ಸು ದಾರಿಯುದ್ದಕ್ಕೂ
ಹಾರನ್ನು ಬಜಾಯಿಸುತ್ತಾ, ತುಂಬಿ-ಹರಿಯುತ್ತಿದ್ದ ತುಂಗಾನದಿಯನ್ನು ದಾಟಿ, ಸಿಟಿಯಿಂದ
ಹೊರಬಿದ್ದಾಗ ಸರಿಯಾಗಿ 8 ಘಂಟೆ.

ಮಗ ಚೀರುವನ್ನು ನೋಡಿ, ಅಮ್ಮನಿಗೆ ಒಂದು ಬಗೆಯ ಸಂಭ್ರಮ.

ನಿತ್ರಾಣನಾಗಿ ಮಡಿಲಲ್ಲಿ ಮಲಗಿದ್ದ, ಕೃಶ ಜೀವಿಯೊಂದನ್ನು ಐದಡಿ ಉದ್ದಕ್ಕೆ, ಬಸ್ಸಿನ
ಒಂದು ಸೀಟು ಆಕ್ರಮಿಸಿಕೊಳ್ಳುವ ಹಂತಕ್ಕೆ ದೊಡ್ಡವನನ್ನಾಗಿ ಮಾಡಿದೆನೆನ್ನುವ ಸಾರ್ಥಕ
ಭಾವ. ಅವನ ಮುಖವನ್ನು ಹಿಡಿದು, ಮೃದುವಾಗಿ ಕೆನ್ನೆಯ ಮೇಲೊಂದು ಪ್ರೀತಿಯ
ಮುತ್ತಿಟ್ಟಳು.

ತಾನು ಸ್ರುಷ್ಟಿಸಿದ ಈ ಅದ್ಭುತ ಪ್ರತಿಮೆಗೆ ಅಂತಿಮ-ರೂಪ ಕೊಡಲು ಹೊರಟಿರುವುದು, ತನಗಿದ್ದ
ಏಕಮಾತ್ರ ಧ್ಯೇಯ ಸಾಧನೆಗೆ ಹೊರಟಂತಿತ್ತು. ಆರ್ಥಿಕ ಧಾರಿದ್ರ್ಯದ ಮಡುವಿನಲ್ಲಿ; ತಮ್ಮ
ಜೀವನದ ಸಂಕಷ್ಟ ಕಾಲದಲ್ಲಿ ಹುಟ್ಟಿದ, ಪಾಪದ ಕೂಸನ್ನು ನೆನೆದು ಅವಳ ಕಣ್ಣು ತುಂಬಿ
ಬಂದವು. ಮಿನಿ-ಬಸ್ಸು ಪಶ್ಚಿಮ-ಘಟ್ಟದ ಅಭೇದ ಕಾಡನ್ನು ಸೀಳುತ್ತಾ,
ಭವಿಷ್ಯತ್ಕಾಲದಲ್ಲಿರುವ ಊರಿನ ದಿಕ್ಕಿಗೆ ಓಡುತ್ತಿದ್ದರೆ, ಹೊನ್ನಮ್ಮನ ಮನಸ್ಸು
ಭೂತಕಾಲದಲ್ಲಿ ಹುದುಗಿದ್ದ ನೆನಪುಗಳ ಶೋಧನೆಗೆ, ಕಾಲಗರ್ಭವನ್ನು ಸೀಳುತ್ತಾ ಹಿಂದೆ-ಹಿಂದೆ
ಹೊರಟಿತು.

ಅಂದಾಜು ಹದಿನೇಳು ವರುಷಗಳ ಹಿಂದೆ ಅನ್ಸತ್ತೆ. ‘ಹೊಟ್ಟೇಲಿ ಮಗುವಿನ ಬೆಳವಣಿಗೆ ಸರಿಯಾಗಿ
ಆಗಿಲ್ಲಮ್ಮ. ಸರಿಯಾದ ಊಟ-ಉಪಚಾರ ಇಲ್ಲದೇ, ಪೋಷಕಾಂಶಗಳ ಕೊರತೆ ಆದ್ರೆ ಹಿಂಗಾಗುತ್ತೆ.
ಸದ್ಯಕ್ಕೆ ಈ ಟಾನಿಕ್ಕು-ಮಾತ್ರೆ ತಗೋಳಿ. ಆರೋಗ್ಯ ಸರಿಯಾಗಿ ನೋಡ್ಕೋಬೇಕು. ಇಲ್ಲಾಂದ್ರೆ
ಹುಟ್ಟುವ ಮಗುವಿನಲ್ಲಿ ಸಮಸ್ಯೆಯಾಗುತ್ತೆ. ’ ಡಾಕ್ಟರಮ್ಮ ಚೀಟಿ ಹರಿದು ತೆಗೆದು
ಕೈಗಿತ್ತಳು. ಮೇಡಿಕಲ್-ಷಾಪಿ ನಲ್ಲಿ ಔಷದಿಗಳಿಗೆ 200 ರೂಪಾಯಿಯಾಗುತ್ತದೆ ಎಂದಾಕ್ಷಣ
ಚಿಂತೆಯಾದದ್ದು ಕಹಿ ಸತ್ಯ. ಒಪ್ಪತ್ತಿನ ಊಟಕ್ಕೆ ಸರಿದೂಗುತ್ತಿದ್ದ ಆದಾಯದಲ್ಲಿ ಔಷಧಿ
ಕೊಂಡು, ಎಲ್ಲರೂ ಸಾಮೂಹಿಕ ಉಪವಾಸ ಮಾಡುವ ಮಹಾಯೋಜನೆಯನ್ನು ಕೈಬಿಡಲಾಯ್ತು. ಡಾಕ್ಟರಮ್ಮ
ಕೊಟ್ಟ ಚೀಟಿಯನ್ನು ಹರಿದು ಹಾಕಿ ಮನೆಯತ್ತ ನಡೆದೆ. ಡಿಲೆವರಿಯ ದಿನವೂ ಬಂತು. ಆ
ಡಾಕ್ಟರಮ್ಮನ ನಿರೀಕ್ಷೆ ಸುಳ್ಳಾಗಿರಲಿಲ್ಲ. ನಮ್ಮ ಹಣೆಬರಹ ಸರಿ ಇರಲಿಲ್ಲ. ಹುಟ್ಟಿದ ಮಗು
ಮಾಂಸದ ಮುದ್ದೆಯಂತೆ ಮುದುಡಿಕೊಂಡಿತ್ತು. ಮೈ-ಕೈ-ಕಾಲು ರಚನೆಯಾಗಿ ಆಕಾರವಿತ್ತೇ ವಿನಃ
ಜೀವಕಳೆ ಇಲ್ಲ. ಕಪ್ಪಯಂತೆ ಬಾಯಿ ಅಗಲಿಸಿ ಹಾಲು ಗುಟುಕಿಸುವನು. ಮಗುವನ್ನೆತ್ತಿಕೊಂಡು
ಆಸ್ಪತ್ರೆಗಳಿಗೆ ಅಲೆದಾಡಿದೆವು. ‘ನೋಡಮ್ಮ !!! ನಿಮ್ಮಂತವರು ಸಾಕಬಹುದಾದ ಮಗು ಇದಲ್ಲ.
ಒಂದು ORS ಪ್ಯಾಕೆಟ್ ಕೊಡ್ತೇನೆ. ನೀರಿನಲ್ಲಿ ಕಲಸಿ ಒಂದೊಂದೇ ಚಮಚ ಬಾಯಿಗೆ ಹಾಕಿ.
ಎಲ್ಲಿವರೆಗು ಜೀವ ಇರುತ್ತೋ ಇರಲಿ. ಅದು ಯಾವಾಗ ಕುಡಿಯುವುದನ್ನು ನಿಲ್ಲಿಸುತ್ತೋ,
ಅಲ್ಲಿಗೆ ಪ್ರಾಣ ಹೋಯ್ತು ಅಂತ ಲೆಕ್ಕ. ನೀವು ಪಡೆದುಕೊಂಡು ಬಂದದ್ದು ಇಷ್ಟೇ ಎಂದು
ಭಾವಿಸಿ, ಮಗುವನ್ನು ಮಣ್ಣು ಮಾಡಿಬಿಡಿ.“ ಡಾಕ್ಟರೊಬ್ಬ ORS ಪ್ಯಾಕೆಟು ಕೊಟ್ಟು ಹೇಳಿದ.
ಡಾಕ್ಟರು ಇಷ್ಟು ಕ್ರೂರವಾಗಿ ಹೇಳಿದಾಗ, ಅವನೆದೆಯು ಒದ್ದೆಯಾಗಿದ್ದಿರಬಹುದು.

ಕಲ್ಲು-ದೇವರುಗಳಿಂದ ಕಮ್ಮಿ ಬೆಲೆಯಲ್ಲಿ ಚಿಕಿತ್ಸೆ ಕೇಳಿಕೊಂಡು, ದೇವಸ್ಥಾನಗಳನ್ನು
ಸುತ್ತಿದೆವು. ಅದೇನು ಪವಾಡವೋ..? ಮಗ ಚೇತರಿಸಿಕೊಂಡ. ಸಕ್ಕರೆನೀರು, ORS ಪುಡಿಯನ್ನು
ಸಂಜೀವಿನಿಯನ್ನಾಗಿ ಬಳಸಿ ಬೆಳೆಸಿದೆವು. ಆರೇಳು ವರುಷಗಳಲ್ಲಿ ಮಗ ಚಿರಂಜೀವಿ
ಕುಕ್ಕರ-ಗಾಲಿನಲ್ಲಿ ಅಂಡಿನ ಮೇಲೆ ಕುಳಿತು, ತೆವಳುತ್ತಾ ಸಾಗುವ ಮಟ್ಟಿಗೆ ಹುಷಾರಾದ.
ಕಾಲು ಬರ್ಲಿ ದೇವ್ರೆ ಅಂತ ಮರಳಿನಲ್ಲೆಲ್ಲಾ ಹೂತಿಟ್ಟೆವು. ಅವರು ಬೇಡ ಅಂದರೂ ಹಠ ಮಾಡಿ
ಮತ್ತೊಂದು ಮಗು ಬೇಕು ಅಂದೆ. ಅಷ್ಟರಲ್ಲಿ ನಮ್ಮ ಆರ್ಥಿಕ-ಸ್ಥಿತಿಯೂ ತಕ್ಕ ಮಟ್ಟಿಗೆ
ಸುಧಾರಿಸಿಕೊಂಡಿತ್ತು. ಚೀರುವಿಗೆ ಜೊತೆಯಾಗಿ ಆರೋಗ್ಯವಂತ ತಂಗಿಯು ನಮ್ಮ ಪುಟ್ಟ
ಸಂಸಾರವನ್ನು ಸೇರಿಕೊಂಡಳು. ಶಿಲ್ಪ ಅನ್ನೋ ಹೆಸರನ್ನೂ ಇಟ್ಟೆವು. ಅದಾಗಲೇ ಕಡ್ಡಿ
ಕಾಲುಗಳು ಬಲವಾಗಿ, ಚೀರು ನಡೆಯಲು ಪ್ರಾರಂಭಿಸಿದ್ದ.

ಹೀಗಿರುವಾಗ ಅವನ ಅನಾರೋಗ್ಯದ ರಹಸ್ಯವು ಅಧಿಕೃತವಾಗಿ ಹೊರಬಿತ್ತು. ಸ್ರುಷ್ಟಿ ಅವನನ್ನು
ತಿದ್ದುವಾಗ, ಹ್ರುದಯದಲ್ಲೊಂದು ತೂತು ಮಾಡಿ, ಭೂಮಿಗೆ ಸಾಗಿಸಿಬಿಟ್ಟಿದ್ದಳು. ‘ಹ್ರುದಯದ
ಕವಾಟಗಳ ನಡುವೆ ಒಂದು ತೂತು ಇರತ್ತಂತೆ. ಆ ತೂತು ಓಳ್ಳೆ-ರಕ್ತ ಮತ್ತು ಕೆಟ್ಟ
ರಕ್ತಗಳನ್ನು ಮಿಕ್ಸ್ ಮಾಡ್ತಾ ಇದಿಯಂತೆ. ಹೃದಯದ ಸ್ನಾಯುಗಳಲ್ಲಿ ಬಲವಿಲ್ಲದೇ , ರಕ್ತ
ಸರಿಯಾಗಿ ಪಂಪ್ ಆಗದೇ, ದೇಹದ ಅಂಗಾಂಗಗಳು ಬೆಳವಣಿಗೆಯಲ್ಲಿ ಹಿಂದೆ ಬಿದ್ದಿವೆಯಂತೆ. ’
ವೈದ್ಯನೊಬ್ಬ ಸಂಪೂರ್ಣ ತಪಾಸಣೆ ಮಾಡಿ ವರದಿ ಹೇಳಿದ. ‘ಮಗು ದೊಡ್ಡದಾದಂತೆ, ಕವಾಟಗಳ
ನಡುವಿನ ತೂತು ದೊಡ್ಡದಾಗಿ ಪ್ರಾಣಕ್ಕೆ ಹಾನಿ’ ಎಂದು ಒಬ್ಬರು, ‘ಹೇ!! ಇಲ್ಲ ಇಲ್ಲ ಹೃದಯ
ದೊಡ್ಡದಾದಂತೆ ಮಾಂಸ ಬೆಳೆದು ತೂತು ಮುಚ್ಚಿಹೋಗುತ್ತದೆ ಮತ್ತು ತಾನಾಗಿಯೇ ಸರಿಹೋಗುವನು’
ಎಂದು ಮತ್ತೊಬ್ಬ ಡಾಕ್ಟರು. ಇವರ ಮಾತುಗಳ ಹಿಂದು-ಮುಂದು ಅರ್ಥವಾಗುತ್ತಿರಲಿಲ್ಲ. ನನ್ನ
ಮಗನಿಗೆ ಹೃದಯ ಸಂಬಂಧಿ ಶ್ರೀಮಂತ ಖಾಯಿಲೆಯೊಂದು ಬಂದಿದೆ ಎಂಬುದಷ್ಟೇ ಅರ್ಥವಾಗಿದ್ದು.

ಜೀವಮಾನದ ಸಂಪಾದನೆಯನ್ನು ಸುರಿದರೂ, ದುಡ್ಡು ಕೊಟ್ಟು ಆಪರೇಷನ್ನು ಮಾಡಿಸುವುದು
ಸಾಧ್ಯವಿಲ್ಲ. ಅದಿಲ್ಲದೆಯೂ ಬೇರೇನೂ ದಾರಿ ತೋಚಲಿಲ್ಲ. ಅಯ್ಯೋ!! ದುಡ್ಡು ಅನ್ನೋದೊಂದು
ಧರಿದ್ರರ ಮರೀಚಿಕೆ. ತನು-ಮನ-ಧನ(?) ವನ್ನು ಚೀರುವಿನ ಸೇವೆಗಾಗಿಯೇ ಮುಡಿಪಿಟ್ಟು ಕಾಲ
ನೂಕಿದೆವು. ಬಾಯಿ ತುಂಬಾ ರಕ್ತವನ್ನೇ ತುಂಬಿಕೊಂಡು, ಬಕ್-ಬಕ್ ಎಂದು ವಾಂತಿಮಾಡಿಕೊಂಡರೂ
ಕೂಡ ಏನೂ ಆಗಿಲ್ಲವೆಂಬಂತೆ ಸಕ್ಕರೆ-ನೀರು ಕುಡಿಸುವಷ್ಟರ ಮಟ್ಟಿಗೆ ಕಟುಕರಾಗಿಬಿಟ್ಟೆವು.
ಕರುಳು ಹಿಂಡಿದಂತಾಗುತ್ತಿತ್ತು. ಅಂಗಳದಲ್ಲಿ ಕೆಂಪಗೆ ಚೆಲ್ಲಾಡಿರುತ್ತಿದ್ದ ರಕ್ತದ
ಕೋಡಿಯನ್ನು, ಭಾವನೆಗಳಿಲ್ಲದೇ ಪೊರಕೆಯಿಂದ ಗುಡಿಸಿ ಸಾರಿಸುವೆವು. ನಮ್ಮ
ಧಾರಿದ್ರ್ಯವನ್ನು ಮನಸೋ-ಇಚ್ಛೆ ಶಪಿಸುವುದು; ದೇವರಲ್ಲಿ ದಾರಿಗಾಗಿ ಧ್ವನಿ ಮಾಡುವುದು
ನಿತ್ಯ ಕರ್ಮಗಳಾದವು.

ಕೆಲವು ವರುಷಗಳು ಹೀಗೇ ಸಂದವು. ಪುಟ್ಟಪರ್ತಿಯಲ್ಲಿ ಸಾಯಿಬಾಬರವರ ಉಚಿತ ಹ್ರುದಯ
ಶುಶ್ರೂಷೆ ಆಸ್ಪತ್ರೆಯೊಂದು ಇರುವುದು ತಿಳಿಯಿತು. ಫಾರಿನ್ ಇಂದ ಡಾಕ್ಟ್ರುಗಳು
ಬರ್ತಾರಂತೆ, ಫ್ರೀ ಯಾಗಿ ಆಪ್ರೇಷನ್ನು ಮಾಡ್ತಾರಂತೆ ಎಂಬ ವಿಚಾರಗಳು ರೆಕ್ಕೆ-ಪುಕ್ಕ
ಕಟ್ಟಿಕೊಂಡು ಮನೆಯ ತುಂಬಾ ಹಾರಾಡ ತೊಡಗಿದವು. ನಮಗೂ ಒಂದು ಕಾಲ ಬರುತ್ತದೆಂದು
ಕಾಯುತ್ತಿದ್ದೆವು. ಅದು ಸಾಯಿಬಾಬಾರ ರೂಪದಲ್ಲಿ ಬಂದಿತ್ತು. ಆ ದಿನ ಖುಷಿಯಿಂದ,
ಕ್ರುತಜ್ನತೆಯಿಂದ ದೇವರಿಗೊಂದು ತುಪ್ಪದ ದೀಪ ಹಚ್ಚಿದೆನು.

ಸ್ವಲ್ಪವೂ ತಡ ಮಾಡದೆ ಪುಟ್ಟಪರ್ತಿಗೆ ಹೊರಟೆವು. ಪುಟ್ಟಪರ್ತಿಯಲ್ಲಿ ಎರಡು-ಮೂರು ದಿನಗಳು
ತಪಾಸಣೆ ನಡೆಸಿದ ವೈದ್ಯರು, ಆಪರೇಷನ್ನು ಮಾಡಿದರೆ ಸಂಪೂರ್ಣ ಗುಣವಾಗುವುದಾಗಿಯೂ; ಅತ್ಯಂತ
ಶಿಘ್ರದಲ್ಲಿ ಕರೆಸಿಕೊಳ್ಳುವೆವು ಎಂದು ಭರವಸೆ ನೀಡಿ ಕಳಿಸಿದರು. ನನ್ನ ಸಂತೋಷವನ್ನು
ಹೇಳಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಭರವಸೆಯ ಬೆಳಕಾಗಿ ಬಂದ ಜೀವಂತ ದೇವರು!!!
ಸಾಯಿಬಾಬರ ದರುಶನ ಮಾಡಿ, ವಾಪಾಸು ಊರಿಗೆ ಹಿಂತಿರುಗಿದೆವು. ಆ ದಿನ!! ಆ ಕ್ಷಣದಿಂದಲೇ
ನನ್ನ ಮಗ ಮನುಷ್ಯನಂತಾಗುತ್ತಾ ಸಾಗಿದ. ತಾನೂ ಬದುಕಬಲ್ಲೇ ಎಂಬ ಆತ್ಮವಿಶ್ವಾಸ ಅವನಲ್ಲಿ
ಚಿಗುರೊಡೆದದ್ದು ಆ ದಿನದಿಂದಲೇ.

ವರುಷಗಟ್ಟಲೆ ಕಾದೆವು. ಪುಟ್ಟಪರ್ತಿಯಿಂದ ಯಾವುದೆ ಕರೆ ಬರಲಿಲ್ಲ. ಡಾಕ್ಟರುಗಳಿಂದ
ಪತ್ರಗಳನ್ನು ಬರೆಸಿದೆವು. ಖುದ್ದಾಗಿ ಬೆಂಗಳೂರಿನ ವೈಟ್-ಫೀಲ್ಡಿನಲ್ಲಿ ಬಾಬ!!
ಆಸ್ಪತ್ರೆಗೆ ಎಡತಾಕಿದೆವು. ಪೊಳ್ಳು ಭರವಸೆಯ ಹೊರತಾಗಿ ಏನೂ ಸಿಗಲಿಲ್ಲ. ‘ ಫಾರಿನ್ನಿಂದ
ಫಂಡು ವಸೂಲಿ ಮಾಡಲು ಆಸ್ಪತ್ರೆಗಳೆಂಬ ನಾಟಕಶಾಲೆಗಳನ್ನು ತೆಗೆದಿರುವರು ’ ಎಂದು
ಮೂದಲಿಸಬೇಕು ಎನಿಸಿತು. ನಮ್ಮ ಹಣೆಬರಹಕ್ಕೆ ಯಾರನ್ನಂತ ತೆಗಳುವುದು. ಬಡತನವನ್ನು
ಹೀಗಳೆದು ಸುಮ್ಮನಾದೆವಾದರೂ.., ಮನೆಯಿಂದ ಮೊದಲ ಹೆಜ್ಜೆ ಹೊರಗಿಟ್ಟಿದ್ದು
ಸಾಯಿಬಾಬರಿಂದಾಗಿ. ಬಹುಷಃ ಅದೊಂದು ಕೃತಜ್ನತೆಗಾಗಿ, ಬಾಬಾರ ಫೋಟೋ ದೇವರ
ಪಕ್ಕದಲ್ಲಿಟ್ಟಿದ್ದೇವೆ.

ಇವುಗಳ ಮಧ್ಯೆ ಉತ್ತರ ಕರ್ನಾಟಕದ ತೆಲಗಿ ಎಂಬ ಊರಿನಿಂದ ಆಯುರ್ವೇದ ಔಷಧವನ್ನು
ಕೊಡಿಸಿದೆವು. ಹೃದಯ ಆಪರೇಷನ್ ಮಾಡಿಸದೆಯೂ ಆರೋಗ್ಯ ಕಾಪಾಡಬೇಕೆಂದು ಹರಸಾಹಸ ನಡೆಸಿದೆವು.
ಚಮತ್ಕಾರವೆಂಬಂತೆ ಚೀರು ಗುಣಮುಖನಾದ. ಜ್ವಾಲಾಮುಖಿಯಯಂತಹ ಸಮಸ್ಯೆಯೊಂದು ಎದೆಗರ್ಭದಲ್ಲಿ
ಅಡಗಿದ್ದರೂ, ಅತಿ-ಸಾಮಾನ್ಯನಂತೆ ಬೆಳವಣಿಗೆ ಕಂಡು ದೊಡ್ಡವನಾದ. ಹದಿನಾರು ವರುಷದ
ಯುವಕನಿಗೆ, ಚಿಗುರು ಮೀಸೆಗಳು ಚಿಗುರಲಾರಂಭಿಸಿವೆ. ಯಾರ ಸಹಾಯವೂ ಇಲ್ಲದೆ
ಜೀವಿಸುವುದನ್ನು ಕಲಿತ. ದುಡ್ಡಿಗೆ-ದುಡ್ಡು ಪೇರಿಸಿ, ಮಗನಿಗೊಂದು ಕೊಡಲೇಬೇಕು ಎಂದು
ನಿರ್ಧರಿಸಿ, ಮಣಿಪಾಲಿನ ಹೃದಯ ಆಸ್ಪತ್ರೆಗೆ ಹೊರಟಿದ್ದೇನೆ. ಈಗಲೂ ನನ್ನೊಳಗಿನ ಯಕ್ಷ
ಪ್ರಶ್ನೆ ಎಂದರೆ - ‘ಅಲ್ಲಾ!! ಇಷ್ಟು ಚೆನ್ನಾಗಿರೋ ನನ್ನ ಮುದ್ದು ಮಗನಿಗೆ, ಆಪರೇಷನ್
ಯಾಕೆ ಬೇಕು ಅಂತ. ’

ಭೂತಕಾಲದಿಂದ ಹೊರಟ ಅವಳ ಮನಸ್ಸು, ಭವಿಷ್ಯತ್ಕಾಲಕ್ಕೆಂದು ಹೊರಟ ಬಸ್ಸು ವರ್ತಮಾನದ
ಬಸ್-ಸ್ಟಾಪಿನಲ್ಲಿ ಬಂದು ಕೂಡಿದವು. 

3. ಸುಬ್ಬಿಯ ಅನುರಾಗ ಮತ್ತು ಅನುಕಂಪ


ಮನೆಯ ಸಾಕು-ಬೆಕ್ಕು ಸುಬ್ಬಿ ಮಿಯಾವ್ ಎಂದು ಒಂದೇ ರಾಗಕ್ಕೆ ಅಬ್ಬರಿಸುತ್ತ ಅಡುಗೆ
ಕೋಣೆಗೆ ಬಂದಳು. ಮಿಯಾವ್ ಎಂದಾಗಲೆಲ್ಲಾ ಹಾಲು ಸುರಿಯುವ ಗೆಳೆಯ ಮನೆಯಲ್ಲಿ ಇರಲಿಲ್ಲ. ‘
ಅಹ್ಹಾ !! ಸುಬ್ಬಿ!! ಈಗ ಬಂದೇನೆ. ಹೊಟ್ಟೆ ಹಸಿವಾದ ತಕ್ಷಣ ಬಂದ್ ಬಿಡ್ತಾಳೆ. ಹಾಲು
ಕುಡಿದ-ಮೇಲೆ ಕೈಗೆ ಸಿಗದ ಹಾಗೆ ಓಡಿ ಹೋಗ್ತಾಳೆ. ಹೊಟ್ಟೆಯೆಲ್ಲಾ ಒಳಗೋಗಿ ಸೊರಗಿ
ಬಿಟ್ಟಿದ್ದೀಯಲ್ಲೆ.’ ಎಂದು ಅದರ ತಲೆ ನೇವರಿಸುತ್ತಾ ಹೊನ್ನಮ್ಮ, ಬಟ್ಟಲಿಗೆ ಹಾಲು
ಹಾಕಿದಳು.

‘ ಅಲ್ಲಾ ರೀ!! ನಿಮಗೆ ಬೆಕ್ಕು ಅಂದ್ರೆ, ಆಜನ್ಮ ವೈರಿ ಇದ್ದ ಹಾಗೆ ಅಲ್ವಾ!!. ಮದುವೆಯಾದ
ಹೊಸತರಲ್ಲಿ ನಮ್ಮನೆಗೆ ಬಂದಾಗ, ನೀವು ಹೋಗುವವರೆಗೂ, ನಮ್ಮಮ್ಮ ಬೆಕ್ಕನ್ನು ಪುಟ್ಟಿ
ಅಡಿಯಲ್ಲಿ ಮುಚ್ಚಿ ಇಡುತ್ತಾ ಇದ್ದಳಂತೆ. ಈಗೇನು ಬೆಕ್ಕಿನ ಮೇಲೆ ಪ್ರೀತಿ
ಶುರುವಾಗಿಬಿಟ್ಟಿದೆ. ? ಮನೆಯಲ್ಲಿ ಬೆಕ್ಕು ಸಾಕುವುದಕ್ಕೆ ಅನುಮತಿ ಕೊಟ್ಟುಬಿಟ್ಟಿದೀರಿ.
? ’

‘ಥೂ…ಥ್ ಪ್ರೀತಿನಾ..? ಬೆಕ್ಕು!!! ಮನೆಯಲ್ಲಿ ಸಾಕುವುದಕ್ಕೆ ಲಾಯಕ್ಕಾದ ಪ್ರಾಣೀನಾ ?
ಹಾವು-ಉಳ-ಉಪ್ಪಟೆ ಸಿಕ್ಕಿದ್ದನ್ನೆಲ್ಲಾ ಕಚ್ಚಿಕೊಂಡು ಮನೆಯೊಳಗೆ ಬರುತ್ತೆ. ಅದನ್ನ
ಎತ್ತಿಕೊಂಡು ಮುದ್ದಾಡ್ತೀರಾ. ನಿಮಗೆ ಬುದ್ಧಿ ಇಲ್ಲ. ನನ್ನ ಮಗನಿಗೋಸ್ಕರ ಮಾತ್ರ
ಬೆಕ್ಕಿಗೆ ಮನೆಯೊಳಗೆ ಬರುವುದಕ್ಕೆ ಅವಕಾಶ ಕೊಟ್ಟಿದ್ದು.’

“ ನೀವು ಏನೇ ಹೇಳಿ ಸುಬ್ಬಿ!! ಅಂದ್ರೆ ಚೀರೂಗೆ ಪಂಚಪ್ರಾಣ. ಅದು ಒಂದು ಸಾರಿ ಮಿಯಾವ್
ಅನ್ನೋ ಹಂಗಿಲ್ಲ. ಅವನಿಗೋಸ್ಕರ ಇಟ್ಟಿರುತ್ತಿದ್ದ ಹಾಲನ್ನೂ ಅದಕ್ಕೇ ಹಾಕಿ ಬಿಡೋನು. ‘
ಏಯ್ ಬಾ. ರೆ ಸುಬ್ಬಿ. ನಿಂದು ಒಳ್ಳೆ. !!! ಹಾಲು-ಅನ್ನ ಹಾಕಿದ್ರೆ ಬರಿ-ಹಾಲನ್ನು ಹೀರಿ
ಹೋಗ್ತಾಳೆ. ಹಿಂಗೇ ಆದ್ರೆ ಬೆಕ್ಕು ಸಾಕಿದ ಕರ್ಮಕ್ಕೆ ನಮ್ಮ ಅಪ್ಪಾಜಿ ಹಸುನು ಸಾಕಬೇಕು ’
ಎಂದು ಬಯ್ಯುತ್ತಾ ಹಾಲು ಹಾಕುವನು. ಹಾಲು ಕುಡಿದ ಮೇಲೆ ಎತ್ತಿಕೊಂಡು ಮುದ್ದಾಡುವನು.
ದಿನವಿಡಿ ಅದರ ಜೊತೆ ಚಿನ್ನಾಟ ಆಡುವುದು, ರಾತ್ರಿ ಹಾಸಿಗೆ ಮೇಲೆ, ತನ್ನ ಮಗ್ಗುಲಲ್ಲೇ
ಮಲಗಿಸಿಕೊಂಡು, ಅದಕ್ಕೆ ಬೆನ್ನು ತಟ್ಟುತ್ತಾ ಮಲಗುವನು. ”

‘ಅದಕ್ಕೇ ಅಲ್ವೆ!! ಎಷ್ಟೇ ಮುಟ್ಟು-ಚಟ್ಟಾದರೂ ಇದನ್ನ ಸಾಕಿಕೊಂಡಿರೋದು. ಈಗೆಲ್ಲಾ…!!
ರಾತ್ರಿ ನನ್ನ ಹತ್ತಿರಾನೆ ಬಂದು ಮಲಗೋಕೆ ಪ್ರಾರಂಭಿಸಿದೆ ನೋಡು ಮಾರಾಯ್ತಿ.!!! ಬೆಳಗ್ಗೆ
ಬೆಳಗ್ಗೆ ಅದರ ದರುಶನ ಮಾಡಲಿಕ್ಕಾಗಲ್ಲ. ಏನಾದರು ಮಾಡು ಆಯ್ತಾ…?’

‘ಅಯ್ಯೋ. !! ಅದೇನು ನಿಮ್ಮ ಮೇಲ್ ಪ್ರೀತಿಗೆ ಬರುತ್ತೆ ಅಂದ್ಕೊಂಡ್ರಾ. ನೀವು ಹೊದಿಯೋ,
ಬೆಡ್-ಶೀಟು ನನ್ನ ಮಗನದ್ದು. ಅವನು ಅಂದುಕೊಂಡು, ನೀವು ಒದ್ದರು. !!! ನಿಮ್ಮ ಹತ್ತಿರವೇ,
ಬೆಡ್-ಶೀಟ್ ಮೇಲೆ ಬಂದು ಮಲಗುತ್ತೆ. ಅದನ್ನ ಮಡಿಸಿಟ್ಟರೂ, ಹುಡುಕಿಕೊಂಡು ಹೋಗಿ ಅದರ
ಮೇಲೆ ಮಲಗುತ್ತೆ ಗೊತ್ತಾ. ? ”

ಮೂಖ-ಪ್ರಾಣಿಗೂ ಇರುವ ವ್ಯಾಮೋಹವನ್ನು ಕಂಡು, ಪ್ರತಿಯಾಗಿ ಮಾತನಾಡಲಾಗದೆ ಸುಮ್ಮನಾದ.
ನಡುಮನೆಯಲ್ಲಿ ಟೀವಿ ನೋಡುತ್ತಿದ್ದ ಮಗಳು ಶಿಲ್ಪ - “ ಅಮ್ಮಾ!! ಊಟ ” ಅಂದುಕೊಂಡು ಅಡುಗೆ
ಕೋಣೆಗೆ ಬಂದಳು.

4. ಮುಂದುವರೆದ ಸಂಜೀವಿನಿಯ ಹುಡುಕಾಟ


ಚೀರುವನ್ನು ಮಣಿಪಾಲಿನ ಹಾರ್ಟ್-ಆಸ್ಪತ್ರೆಗೆ ದಾಖಲಿಸಿದರು. ಎಂಜಿಯೋಗ್ರಾಮ್; ಆಗ್ರಾಮ್;
ಈಸ್ಕ್ಯಾನ್; ತರತರದ ವೈದ್ಯಕೀಯ ವಿಸ್ಮಯಗಳನ್ನು ಪ್ರಯೋಗಿಸಿ ಹ್ರುದಯದ ಇಂಚಿಂಚನ್ನೂ
ಸೆರೆಹಿಡಿದರು. ದಬ್ಬಳದಂತಹ ಉಪಕರಣಗಳನ್ನು ತೊಡೆ ಸಂಧಿಯಲ್ಲಿ ಚುಚ್ಚುವಾಗ, ಚೀರು ಅಮ್ಮನ
ಕಡೆ ತಿರುಗಿ “ ಅಮ್ಮಾ!!! ” ಎಂದು ಮೆಲ್ಲಗೆ ಕೊಸರುವನು. ಹೊನ್ನಮ್ಮನಿಗೆ ಮಾತ್ರ
ಕಾಣುತ್ತಿದ್ದ, ಕಣ್ಣಂಚಿನ ಎರಡು-ಮೂರು ಹನಿ ಕಣ್ಣೀರು ಅವನ ನೋವಿನ ತೀವ್ರತೆಗೆ
ಸಾಕ್ಷ್ಯಗಳಾಗಿದ್ದವು.
‌ ತಾನೂ ಎಲ್ಲರಂತೆ ಆಗಬಲ್ಲೆ ಎಂಬ ಪುಟ್ಟ ಆಸೆಯೊಂದು, ಟ್ರೀಟ್ ಮೆಂಟ್ ಹೊತ್ತಿನ
ಯಮಯಾತನೆಯ ನೋವುಗಳನ್ನು ಮೆಟ್ಟುವ, ಮಾನಸಿಕ ಸ್ಥೈರ್ಯವನ್ನು ಕೃಶಕಾಯನಲ್ಲಿ
ತುಂಬುತ್ತಿತ್ತು. ತೆಕ್ಕೆ-ತೆಕ್ಕೆ ನೋಟಿನ ಕಂತೆಯನ್ನು ಹೊತ್ತು, ರಾಜಪ್ಪ
ಹೊನ್ನಮ್ಮನನ್ನು ಕೂಡಿಕೊಂಡ. ಒಂದು ವಾರಗಳ ತರುವಾಯ, ಸೀನಿಯರ್ ಸರ್ಜನ್ ದಂಪತಿಗಳನ್ನು
ತಮ್ಮ ಕೋಣೆಗೆ ಕರೆಸಿದರು.

‘ಕೇಸು!! ಸ್ವಲ್ಪ ಕ್ರಿಟಿಕಲ್ ಇದೆ. ಹುಷಾರಗಲ್ಲ ಅಂತೇನಿಲ್ಲ. ಇಂಥವನ್ನು ನಾವು ತುಂಬಾ
ನೋಡಿದ್ದೇವೆ. ಆದರೆ ನಮ್ಮಲ್ಲಿರುವ ಫೆಸಿಲಿಟಿಯಲ್ಲಿ ಹಂಡ್ರೆಡ್ ಪರ್ಸೆಂಟು ಛಾನ್ಸ್
ಕೊಟ್ಟು ಆಪ್ರೇಷನ್ನು ಮಾಡೋದು ಕಷ್ಟ. ನೀವು ಬೆಂಗಳೂರಿಗೆ ಹೋಗಿ. ಅಲ್ಲಿರುವ ಅತ್ಯಾಧುನಿಕ
ತಂತ್ರಾಜ್ನಾನದ ಪರಿಸರದಲ್ಲಿ ತುಂಬಾ ಸುಲಭವಾಗಿ ಮಾಡಿ ಬಿಡ್ತಾರೆ. ಐ ಯಾಮ್ ಸಾರಿ. ಬಿಲ್
ಪೇ ಮಾಡಿ, ನೀವ್ ಹೊರಡಬಹುದು’ ಎಂದರು ಡಾಕ್ಟರು.

ತೀರ್ಥ!! ಶಂಖದಿಂದಲೇ ಉದುರಿದ ಮೇಲೆ ಹೆಚ್ಚಿಗೆ ಮಾತಾಡುವಂತಿಲ್ಲ. ಆದರೂ ತಾಯಿ ಹೃದಯ.
ಡಾಕ್ಟರ ಮುಂದೆ ಅತ್ತು-ಕರೆದು ಗೋಳಾಡಿತು. ವಾಪಾಸು ಊರಿಗೆ ಹೊರಡಲು ಅಣಿಯಾದರು. ರಾಜಪ್ಪನ
ಮನಸ್ಸು, ಖಜಾನೆಯಲ್ಲಿ ಉಳಿದಿರಬಹುದಾದ ಸಂಪತ್ತಿನ ಲೆಕ್ಕದಲ್ಲಿ ಮಗ್ನವಾಯಿತು. ಮನದಲ್ಲಿ
ಭಾವನೆಗಳ ತಾಕಲಾಟ-ಪೀಕಲಾಟ ಎಷ್ಟೇ ಇದ್ದರೂ, ಕಾಂಚಾಣದ ಮುಂದೆ ಮಂಡಿಯೂರಿ
ಸೋಲೊಪ್ಪಿಕೊಳ್ಳಬೇಕೆಂಬುದನ್ನು ಅರಿತ ವಾಸ್ತವವಾದಿಯಾಗಿದ್ದನವನು.


‘ಅಮ್ಮಾ!! ಯಾಕಮ್ಮ ಹೋಗ್ತಿದೀವಿ. ಆಪರೇಷನ್ನು ಮಾಡಲ್ವಂತಾ. ಅವರು ಎಷ್ಟು ಬೇಕಾದ್ರು
ಟೆಷ್ಟು ಮಾಡಿಕೊಳ್ಳಲಿ. ನಂಗೇನು ನೋವಿಲ್ಲಪ್ಪ. ”

ಚೀರು ಮುಗ್ಧವಾಗಿ ಕೇಳಿದ್ದಕ್ಕೆ ಅಮ್ಮನಿಗೆ ದುಃಖ ಉಮ್ಮಳಿಸಿ ಬಂತು.

‘ಇಲ್ಲ!! ಕಂದ!! ಇವರ ಹತ್ರ ಸರಿಯಾದ ಸಾಮಾನುಗಳು ಇಲ್ವಂತೆ. ಡಬ್ಬ ಆಸ್ಪತ್ರೆ ಕಣೋ!!
ಸ್ವಲ್ಪ ದಿನ ಬಿಟ್ಟು ಬೆಂಗ್ಳೂರಿಗೆ ಹೋಗುವಾ. “ ನಗುತ್ತಾ ಉತ್ತರಿಸಿದಳು.

ಮಣಿಪಾಲಿನಿಂದ ಬಂದ ಮೇಲೆ ಒಂದು ವರುಷ ಹಾಗೆಯೇ ಕಳೆದು ಹೋಯಿತು. ಆರಾಮಾಗಿ ಓಡಾಡಿಕೊಂಡು
ಇರುತ್ತಿದ್ದವನನ್ನು ನೋಡಿದಾಗಲೆಲ್ಲಾ, ‘ ಯಾತಕ್ಕಾಗಿ ಆಪ್ರೇಷನ್ನು..? ’ ಎಂಬ ಮೂಲಭೂತ
ಪ್ರಶ್ನೆಯೊಂದು ಮತ್ತೆ ಮತ್ತೆ ಕಾಡುತ್ತಿತ್ತು. ಆದರೂ ಭವಿಷ್ಯದ ಕರಾಳ ದಿನಗಳನ್ನು
ನೆನೆದು, ಬೆಂಗ್ಳೂರಿಗು ಹೊರಟು ನಿಂತರು. ಯಶಸ್ವಿನಿ ಆರೋಗ್ಯ ವಿಮೆಯನ್ನು ಪಡೆದು,
ಡಾಕ್ಟರುಗಳು ನೀಡಿದ್ದ ವರದಿಗಳ ಭಾರಿ-ಕಡತವನ್ನು ಹೆಗಲಿಗೇರಿಸಿಕೊಂಡರು. ನಾರಾಯಣ
ಹೃದಯಾಲಯ ಎಂಬ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ಬಂದು ನಿಂತರು.

ಪುನಃ ಮೊದಲಿನಿಂದ ತಪಾಸಣೆ ಪ್ರಾರಂಭಿಸಿದ ಡಾಕ್ಟರುಗಳು, ಹಿಂದಿನವರು ನೀಡಿರಬಹುದಾದ
ಎಲ್ಲಾ ಚಿತ್ರ-ಹಿಂಸೆಗಳಲ್ಲಿ, ಒಂದನ್ನೂ ಬಿಡದೆ ಪಾಲಿಸಿದರು. ಅವರ ಮನೆ ಹಾಳಾಗ. ಡಾಕ್ಟರ್
ದೇವಿಶೆಟ್ಟಿ ಎಂಬ ತಜ್ನ-ವೈದ್ಯರು, ಚೀರುವಿಗೆ ಚಾಕಲೇಟು ಕೊಟ್ಟು ತಲೆ ಸವರುತ್ತಾ -

‘ಇದು ತುಂಬಾ!! ಮೈನರ್ ಪ್ರಾಬ್ಲಮ್ಮು. ಆರಾಮಾಗಿ ಗುಣ ಮಾಡಬಹುದು. ಒಂದು ತಿಂಗಳು
ಬಿಟ್ಟುಕೊಂಡು ಆಪರೇಷನ್ನಿಗೆ ರೆಡಿಯಾಗಿ ಬನ್ನಿ. ಮಾಡೋಣ’ ಎಂದರು.

ಪದೆ-ಪದೆ ಖುಷಿಯ ಉತ್ತುಂಗಕ್ಕೆ ಹೋಗುವುದು, ನಿರಾಶರಾಗುವುದು ಸಾಮಾನ್ಯವಾಗಿತ್ತು. ಆದರೂ
ಹೊನ್ನಮ್ಮನಿಗೆ ಸಂತಸ ತಾಳಲಾಗಲಿಲ್ಲ. ಆನಂದಬಾಷ್ಪಗಳನ್ನು ಹರಿಸುತ್ತಾ ಡಾಕ್ಟರಿಗೆ
ಕೃತಜ್ನತೆಯ ನಮಸ್ಕಾರ ಮಾಡಿ, ಆಸ್ಪತ್ರೆಯಿಂದ ಹೊರ ನಡೆದರು. ಮನಸ್ಸು
ಸಂಭ್ರಮಿಸುತ್ತಿತ್ತು. ಅಕ್ಕ-ಪಕ್ಕದ ಮನೆಯವರಿಗೂ, ನೆಂಟರಿಷ್ಟರಿಗೂ ಹೇಳಿಕೊಂಡು ಖುಷಿ
ಹಂಚಿಕೊಂಡರು. ಒಂದು ತಿಂಗಳು ಕಳೆದದ್ದೇ ತಿಳಿಯಲಿಲ್ಲ. ಚಿಕಿತ್ಸೆಗೆ ಬೇಕಾದ ಅನಿಶ್ಚಿತ
ಮೊತ್ತದ ಹಣವನ್ನು, ಸಾಕಷ್ಟು ಕ್ರೂಢೀಕರಿಸಿಕೊಂಡು ಮಲ್ಟಿ-ಸ್ಪೆಷಾಲಿಟಿ ಹೈ-ಟೆಕ್
ವಾರ್ಡಿನಲ್ಲಿ ಅಡ್ಮಿಟ್ ಮಾಡಿಯೇ ಬಿಟ್ಟರು. ರಕ್ತ ಹೀರುವುದು; ಸೂಜಿ ಚುಚ್ಚುವುದು;
ತರತರದ ತಪಾಸಣೆಗಳು ನಡೆದಿತ್ತು.


ದೇವರ ಮೇಲೆ; ದೇವರಂತಹ ವೈದ್ಯರ ಮೇಲೆ ನಂಬಿಕೆಯಿರಿಸಿ, ಸಾವು ಬದುಕಿನ ಅಖಾಡಕ್ಕೆ
ಮಗನನ್ನು ಇಳಿಸಿದರು. ಈ ಆಟದಲ್ಲಿ ಫಲಿತಾಂಶಕ್ಕಾಗಿ ಕಾಯುವಂತೆ ಇಲ್ಲ. ಸಾವು ಅಥವಾ ಸಫಲ
ಬದುಕು ನಿರ್ಧಾರವಾಗುವುದು.

ಅಮ್ಮನ ನಿಷ್ಕಲ್ಮಶ ಪ್ರೀತಿಯೊಂದೆ, ಇಷ್ಟು ವರುಷಗಳು ಚೀರು ಉಸಿರಾಡಲು ಬಳಸುತ್ತಿದ್ದ
ಜೀವವಾಯು. ಈಗಲೂ ಅದೊಂದೆ ನಂಬಿಕೆಯ ಬುನಾದಿ. ನಾಳೆ ನಾಡಿದ್ದು ಎನ್ನುತ್ತಾ ಆಪರೇಷನ್ನಿನ
ದಿನವನ್ನು, ತಿಂಗಳವರೆಗೂ ಮುಂದೂಡಿದರು. ಒಂದು ದಿನ ಎಲ್ಲರನ್ನೂ ತಮ್ಮ ಚೇಂಬರಿಗೆ
ಕರೆಸಿದರು. ತಜ್ನ ವೈದ್ಯರು ಚೀರುವನ್ನು ಉದ್ದೇಶಿಸಿ - ‘ಆಪರೇಷನ್ನು ಮಾಡುವ ಅಗತ್ಯವೇ
ಇಲ್ಲ. ಹೃದಯಕ್ಕೆ ಹೊಂದಿಕೊಂಡಿದ್ದ ರಕ್ತನಾಳದ ಬ್ಲಾಸ್ಟ್ ತಂತ್ರಜ್ನಾನ ಬಳಸಿ ಕ್ಲೀಯರ್
ಮಾಡಿದ್ದೇವೆ. ಇನ್ನು ಮುಂದೆ ಯಾವ ಸಮಸ್ಯೆಯೂ ಬರುವುದಿಲ್ಲ. ಮಗು!! ಯಾವುದಕ್ಕೂ
ಟೆನ್-ಶನ್ ಮಾಡ್ಕೊಳ್ಳದೆ ಆರಾಮಾಗಿ ಇರಬೇಕು. ನಿನ್ನ ಮುಂದಿರುವ ಜೀವನವನ್ನು
ಸಂಪೂರ್ಣವಾಗಿ ಎಂಜಾಯ್ ಮಾಡಬೇಕು. Now you are perfectly all right. May god
bless you my child.’ ಅವನ ಭುಜವನ್ನು ಹಿಡಿದು ಅಲುಗಿಸುತ್ತಾ ಹೇಳಿದರು.

ತಾನು ಮರುಜನ್ಮ ಪಡೆದಂತೆ ಸಂತಸಪಟ್ಟ. ಗಂಟು-ಮೂಟೆ ಕಟ್ಟಿಕೊಂಡು ವಾಪಾಸು ಹೊರಡುವಾಗ
‘ಅಮ್ಮಾ!! ಯಾಕಮ್ಮ ಆಪರೇಷನ್ನೇ ಮಾಡ್ಲಿಲ್ಲ. ?’ ಎಂದು ಪುನಃ ಕೇಳಿದ.

‘ಡಾಕ್ಟರೇ ಹೇಳಿದ್ರಲ್ಲಪ್ಪ!! ಆಪ್ರೇಷನ್ನು ಇಲ್ಲದೇ ವಾಸಿ ಮಾಡಿಬಿಟ್ಟರು. ಅವರು ಹೇಳಿದ
ಮೇಲೆ ಮುಗೀತು. ಅವರಿಗಿಂತ ದೊಡ್ಡೋರು ಯಾರಿದಾರೆ ಹೇಳು..? ಇನ್ನು-ಮುಂದೆ, ತಾನು
ಖಾಯಿಲೆಯವನು ಅಂತ ಭಾವಿಸದೆ, ಫುಲ್-ಲ್ ಎಂಜಾಯ್ ಆಗಿರಬೇಕು. ತಿಳೀತಾ ??’ ಅಮ್ಮ
ನಾಟುವಂತೆ ಹೇಳಿದಳು.

‘ಸರೀನಮ್ಮಾ!!! ಆಯ್ತು’ ಎಂದನು. 

5. ಹೋಳಿಗೆ ಊಟ


“ಅಮ್ಮಾ!! ಊಟ ” ಎಂದು ಕೂಗುತ್ತಾ ಬಂದವಳು, ಅಪ್ಪನ ಪಕ್ಕದಲ್ಲಿ ಕುಳಿತಳು. ಅಣ್ಣನ
ಹುಟ್ಟು ಹಬ್ಬದ ಸ್ಪೆಷಲ್-ಊಟ ನೋಡಿ ‘ಹೈ!!’ ಎಂದು ಬಾಯಿ ಚಪ್ಪರಿಸಿದಳು. ರಾಜಪ್ಪ ತನ್ನ
ಮಗಳ ತಲೆ ನೇವರಿಸುತ್ತಾ ಹೇಳಿದ -

‘ ಮಗನನ್ನು ನೋಡಿಕೊಳ್ಳುವ ಭರದಲ್ಲಿ, ನಿನ್ನ ಮರತೇ ಬಿಟ್ವಿ ಮಗಳೆ. ನೀ ಅದು ಹ್ಯಾಗೆ,
ದೊಡ್ಡ ಹುಡುಗಿ ಆಗಿ ಬೆಳೆದು ಬಿಟ್ಟೆಯೋ ತಿಳಿಲಿಲ್ಲ.’ ಅಪ್ಪ ಕನ್ಫೆಸ್ ಮಾಡಿಕೊಳ್ಳುವಂತೆ
ಮಗಳ ಮುಂದೆ ಹೇಳಿದ.

‘ ಹೂಂ!! ಒಂದೊಂದ್ ಸಾರಿ ನಂಗೂ ನಿಮ್ಮ ಮೇಲೆ ಕೋಪ ಬರ್ತಾ ಇತ್ತು. ಎಲ್ಲದಕ್ಕೂ ಚೀರು!!
ಚೀರು!! ಅಂತ ಅವನ ಹಿಂದೆ ಹೋಗ್ತಿದ್ರಿ. ಚಿಕ್ಕವಳಾಗಿದ್ದ ನನ್ನ, ಸರಿಯಾಗಿ ನೋಡ್ಲೇ
ಇಲ್ಲ. ಆದರೂ ನಂಗೇನು ಅಷ್ಟು ಬೇಜಾರಿಲ್ಲಪ್ಪ. ಅಣ್ಣನನ್ನ ಕೂಸುಮರಿ ಮಾಡ್ಕೊಂಡು
ಸ್ಕೂಲಿಗೆ ಹೋಗ್ತಿದ್ದ ದೃಶ್ಯಗಳು ನಿನ್ನೆ-ಮೊನ್ನೆ ನಡೆದ ಹಾಗಿವೆ. ನನ್ನ ನೋಡ್ಕೋಳೋ
ಅಣ್ಣಂಗಿಂತ, ನಾನು ಕೂಸುಮರಿ ಮಾಡಿದ ಅಣ್ಣನ ಮೇಲೆ ಪ್ರೀತಿ ಜಾಸ್ತಿ ನಂಗೆ ’

ಆ ದಿನ ಮನೆಯಲ್ಲಿದ್ದವರೆಲ್ಲಾ ಭಾವನೆಗಳ ಉತ್ತುಂಗದಲ್ಲಿದ್ದರು.

“ ಹಣ್ಣು ಹಣ್ಣು ಮುದುಕಿಯರ ಹತ್ತಿರ ಹಳೆ-ಕಾಲದ ಕಥೆ ಕೇಳುತ್ತಾ ಕಾಲ ಹಾಕುವನು. ಅವನು
ಅಂದ್ರೆ ಆಸೆ ಅವರಿಗೆ. ಕೆಲಸಕ್ಕೆ ಬರುವ ಹೆಂಗಸರ ಹತ್ರಾ ಪದ ಹಾಡಿಸಿ, ಮೊಬೈಲಲ್ಲಿ
ರಿಕಾರ್ಡು ಮಾಡಿ, ಅವರಿಗೆ ಕೇಳಿಸುವನು. ಕುಡುಕರೆಲ್ಲಾ!! ಹಾಡು ಹಾಕಿಸಿಕೊಂಡು ಅವನ
ಮುಂದೆ ತಕ ಥೈ ಅಂತ ಕುಣಿಯುವರು. ಫ್ರೆಂಡುಗಳಿಗೆ ಸ್ಕೂಲು ಫೀಜಿಗೆ ಅಂತ ದುಡ್ಡು
ಕೊಡ್ತಿದ್ದನಂತೆ. ಅತ್ತೆ, ಅಜ್ಜಿ, ಚಿಕ್ಕಮ್ಮರುಗಳ ಜೊತೆ ಚಿಕ್ಕ ಮಕ್ಕಳಂತೆ ಜಗಳ
ಆಡುವನು. ಪುಟಾಣಿ ಮಕ್ಕಳಿಗೆ ಸುಂಠಿ-ಕಾಮ್ ಕೊಟ್ಟು ಅಳಿಸಿ,ಆಡಿಸುವನು. ಯಾವ ಕಟ್ಟು
ಪಾಡುಗಳಿಲ್ಲದೇ ಸ್ವತಂತ್ರವಾಗಿ, ಬೇಕಾದ್ದು ಮಾಡುವನು. ನನ್ನ ಮಗ ಅಪರಂಜಿ!!! ಅಪರಂಜಿ!!!
ಇವತ್ತು ಅವನ ಹುಟ್ಟುಹಬ್ಬ, ಊಟಕ್ಕೆ ಬಂದೇ ಬರ್ತಾನೆ. ” ಅಮ್ಮ ಗೋಳಿಡಲು
ಪ್ರಾರಂಭಿಸಿದಳು.

ಭೌತಿಕವಾಗಿ ಅಸ್ತಿತ್ವದಲ್ಲಿದ್ದ ಆಪ್ತವಲಯಯೊಂದು, ಮನಸ್ಸಿನ ಮೇಲೆ ಅಗೋಚರವಾದ, ಅಳಿಸಲಾಗದ
ಛಾಯೆ ಸ್ರುಷ್ಟಿಸಿ, ವಾಸ್ತವಕ್ಕೂ ಭ್ರಮೆಗೂ ಮದ್ಯೆ ಇದ್ದ ಗೆರೆಯನ್ನು ಹಳಿಸಿ ಹಾಕಿತ್ತು.

‘ ಹುಚ್ಚಿ!! ಅವನನ್ನು ನಮ್ಮ ನೆನಪುಗಳಲ್ಲಿ ಮಾತ್ರ ಜೀವಂತವಾಗಿ ಇಡಲು ಪ್ರಯತ್ನಿಸಬೇಕೇ
ಹೊರತು, ಪವಾಡಗಳನ್ನು ನಿರಿಕ್ಷಿಸುತ್ತಾ ಸೈರಣೆ ಕಳೆದುಕೊಳ್ಳಬಾರದು. ಅಷ್ಟಕ್ಕೂ… ನಾವು
ಜೀವಿಸುತ್ತಿರುವುದು, ಭವಿಷ್ಯದ ಖಜಾನೆಯಲ್ಲಿ ಯಾರೋ ಬಚ್ಚಿಟ್ಟಿರುವ ಸುಳ್ಳುಗಳನ್ನು
ನಿಜಮಾಡಲೆಂದು. ಬಾ!! ಊಟಕ್ಕೆ ನೀಡು.’ ರಾಜಪ್ಪ ಎಲೆ ಹಾಕಿದನು.
 

6. ಮುಗಿದ ಮಾತುಗಳು


ಕೊನೆಯ ಬಾರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ವಾಪಾಸಾದ ಮೇಲೆ, ಚೀರು!! ಅತಿಯಾದ
ಆತ್ಮವಿಶ್ವಾಸದಿಂದ ನಲಿಯತೊಡಗಿದ. ಇದುವರೆವಿಗೂ ತಾನು ಖಾಯಿಲೆಯವನು ಮತ್ತು ಚಿಕ್ಕ
ಹುಡುಗನು ಎಂದು ಭಾವಿಸಿದ್ದವನು, ಬೆಂಗಳೂರಿಂದ ಬಂದ ಮೇಲೆ ಭವಿಷ್ಯದ ಬಗ್ಗೆ ಕನಸುಗಳನು
ಕಾಣಲು ಪ್ರಾರಂಭಿಸಿದ. ಚಿಕ್ಕ-ಪುಟ್ಟ ಕೆಲಸಗಳಲ್ಲಿ ಅಪ್ಪ-ಅಮ್ಮನಿಗೆ ನೆರವಾಗುವುದು;
ಓದುವುದು-ಬರೆಯುವುದು ; ಕಂಪ್ಯೂಟರ್-ಮೊಬೈಲು ಬಳಸುವುದು ;
ರಿಪೇರಿ ಕೆಲಸಗಳನ್ನು ಮಾಡುವುದು; ಏನಾದರೊಂದು ಮಾಡುತ್ತಾ, ತನ್ನ ಲಾಂಗ್-ಟರ್ಮ್
ಜೀವನಕ್ಕೆ ತಯ್ಯಾರಿ ನಡೆಸುವನು. ತಾನು ಎಲ್ಲರಂತೆ ಆಗಿಬಿಟ್ಟೆ ಎಂಬ ಭ್ರಮೆಯಲ್ಲಿ ಹೆಚ್ಚು
ಹೆಚ್ಚು ಆಸೆ-ಅಭಿರುಚಿಗಳನ್ನು ಬೆಳಸಿಕೊಂಡ. ಬಹಳ ಬೇಗ!! ಅವನ ಕನಸುಗಳು
ನುಚ್ಚು-ನೂರಾಗತೊಡಗಿದವು. ದೇಹದ ಆರೋಗ್ಯ ಹಂತ ಹಂತವಾಗಿ ಕುಸಿಯತೊಡಗಿತು. ಬಿಡದೆ
ಬೆಂಬತ್ತಿದ ವಾಂತಿ, ತಲೆ-ನೋವು, ಸುಸ್ತು, ಕೈ-ಕಾಲು ಶಕ್ತಿ ಹೀನತೆಗಳು, ಅವನ ದೇಹವನ್ನೂ
ಜೊತೆಗೆ ಆಸೆ-ಆಕಾಂಕ್ಷೆಗಳನ್ನೂ ಹಿಂಡಿ-ಹಿಪ್ಪೆ ಮಾಡಿ ಬಿಸಾಡಿದವು.


ಏನೇನೋ ಕನಸು ಕಾಣುತ್ತಿದ್ದವನು, ಕೊನೆಗೆ ‘ ತಾನೊಬ್ಬ ನೋವಿಲ್ಲದ ಜೀವಂತ
ಪ್ರಾಣಿಯಂತಾಗಿ ಉಳಿದರೆ ಸಾಕಲ್ಲವೇ ದೇವರೆ ’ ಎನ್ನುವ ಮಟ್ಟಿಗೆ ನಿರಾಶನಾದ.

ಬೆಂಗಳೂರಿನಿಂದ ಹೊರಡುವ ದಿನ ಆಪರೇಷನ್ನು ಮಾಡದ ಡಾಕ್ಟರು ಹೇಳಿದ್ದ ‘Now you are
perfectly all right ’ ಎಂಬ ಮಾತುಗಳ ಒಳಾರ್ಥ ತಿಳಿಯಿತು. ಆದರೂ ಒಮ್ಮೆಯೂ..
‘ನನಗೇನಾಗಿದೆಯಮ್ಮಾ ..? ನನಗೆ ಆಪರೇಷನ್ ಯಾಕ್ ಮಾಡ್ಲಿಲ್ಲ..? ನನ್ನ ಹತ್ತಿರ ಯಾಕ್
ಸುಳ್ಳು ಹೇಳಿದ್ರಿ..? ನಾನು ಬದುಕೋದಿಲ್ವಾ..? ’ ಎಂಬೆಲ್ಲಾ ಪ್ರಶ್ನೆಗಳನ್ನು ಅಮ್ಮನ
ಹತ್ತಿರ ಪ್ರಸ್ತಾಪಿಸಿ, ಅವಳನ್ನು ನೋಯಿಸುವ ಗೋಜಿಗೆ ಹೋಗಲಿಲ್ಲ. ಯಾಕಂದ್ರೆ ಅವನ
ಎದೆಯೊಳಗೆ ಇದ್ದದ್ದು ಒಂದು ಅತ್ಯಂತ ಸ್ಪೆಷಲ್ ಹಾರ್ಟು. ದುರಾದೃಷ್ಟವಶಾತ್ ಅದು ಹೊಲಿದು
ಮುಚ್ಚಲಾಗದಷ್ಟು ದೊಡ್ಡಗೆ ತೂತು ಬಿದ್ದಿತ್ತು.

ಆಸ್ಪತ್ರೆಯಿಂದ ಹೊರಡುವ ಕೊನೆಯ ದಿನ ತಜ್ನವೈದ್ಯರು!!, ಚೀರುವಿಗಿಂತಲೂ ಮೊದಲು ಹೊನ್ನಮ್ಮ
ಮತ್ತು ರಾಜಪ್ಪನನ್ನು ತಮ್ಮ ಬಳಿ ಕರೆಸಿದರು.

‘ ಪರಿಸ್ಥಿತಿ ಕೈ ಮೀರಿದೆ. ಆಪರೇಷನ್ನು ಮಾಡಿದರೂ ಬದುಕುವ ಛಾನ್ಸು ತುಂಬಾ ಕಡಿಮೆ ಇದೆ.
ಹಾರ್ಟ್ ಓಪನ್-ಮಾಡ್ತಿದ್ದಂತೆ ಬ್ಲಡ್ ತುಂಬಿಕೊಳ್ಳುತ್ತದೆ. ಏನು ಆಗುತ್ತದೆಯೋ
ಹೇಳಲಿಕ್ಕಾಗದಷ್ಟು ಕ್ರಿಟಿಕಲ್ ಆಗಿಬಿಡುತ್ತೆ. ಹೆಂಗಿದ್ರೂ ನೋಡ್ಲಿಕ್ಕೆ
ಆರೋಗ್ಯವಾಗಿದ್ದಾನೆ. ಎಷ್ಟು ದಿನ ಬದುಕುವನೋ ಅಷ್ಟು ದಿನ ಸಂತೋಷವಾಗಿರುವಂತೆ
ನೋಡಿಕೊಳ್ಳಿ. ನಮ್ಮ ಕೈಲಿ ಏನೂ ಇಲ್ಲ. ಐ ಯಾಮ್ ಸಾರಿ ’ ಡಾಕ್ಟರು ಅಕ್ಷರಷಃ ಕೈ
ಚೆಲ್ಲಿದರು.

ಆಕಾಶವೇ ಕಳಚಿ ಬಿದ್ದಂತಾಗಿರಬೇಕು.

‘ ಸಾ!! ಸಾ!! ಸಾ!! ಇದು ತುಂಬಾ ಚಿಕ್ಕ ಪ್ರಾಬ್ಲಮ್ಮು. ವಾಸಿಯಾಗುತ್ತೆ ಅಂತ, ನೀವೆ
ಅಲ್ವೇ ಹೇಳಿದ್ದು. ? ಈಗ ಏನೇನೊ ಹೇಳ್ತೀರಲ್ಲ. ನಾವ್ ಬಡವರು ಅಂತ ಹಿಂದೇಟು
ಆಗ್ತಿದಿರೇನು,,? ಹಣ ಎಷ್ಟು ಖರ್ಚಾದರೂ ಸರಿ. ಕೈಗೆ ಬಂದಿರುವ ತೋಟ ಇದೆ. ಮನೆ ತೋಟ
ಮಾರಿಯಾದ್ರು ಹಣ ಹೊಂದಿಸ್ತೇವೆ. ಆಗಲ್ಲ ಅಂತೆಲ್ಲಾ ಹೇಳಿಬಿಡಬೇಡಿ. ಹುಟ್ಟಿದಾಗಿನಿಂದಲೂ
ಬರೀ ನೋವನ್ನು ಮಾತ್ರ ನೋಡಿರುವವನು ನನ್ನ ಮಗು. ಅವನಿಗೊಂದು ಜೀವನ ಕೊಡಿ ಸಾ!!!. ’

ಜೋರಾಗಿ ಅಳುತ್ತಾ ಹೊನ್ನಮ್ಮ ಡಾಕ್ಟರರ ಕಾಲಿಗೆ ಬಿದ್ದಳು. ತಾಯಿ ಹೃದಯ ನಾಗರಿಕ
ಎಲ್ಲೆಯನ್ನು ಮೀರಿತ್ತು. ಡಾಕ್ಟರು ಸಮಾಧಾನ ಪಡಿಸುವಂತೆ ಹೇಳಿದರು.

‘ನೀವು ಕೊಡುವ ಹಣಕ್ಕೆ, ಜೀವದ ಜೊತೆ ಆಟ ಆಡಲಿಕ್ಕಾಗತ್ತಾ..? ನಮ್ಮ ಸೀನಿಯರ್
ಡಾಕ್ಟರುಗಳೆಲ್ಲಾ, ,, ವಾರಗಟ್ಟಲೇ ಈ ಕೇಸನ್ನು ಅಬ್ಸರ್ವೇಷನ್ ನಲ್ಲಿಟ್ಟು
ಪರೀಕ್ಷಿಸಿದ್ದೇವೆ. ನಾವೆಲ್ಲಾ ಸೇರಿ ಮೀಟಿಂಗ್ ಮಾಡಿಯೇ ನಿರ್ಧರಿಸಿದ್ದು. ಆಗುವ
ಹಾಗಿದ್ದರೆ ನಾವ್ಯಾಕೆ ಮಾಡಲ್ಲ ಅಂತೀವಿ ಹೇಳಿ. ? ನೀವು ಎಷ್ಟೇ ಹಣ ಸುರಿದರೂ,
ಫಾರಿನ್-ವರೆಗೂ ಹೋದರೂ ಇದು ಇಷ್ಟೇ. ಇಷ್ಟು ದಿವಸ ಹೆಂಗೆ ನೋಡ್ಕೊಂಡ್ರೊ,
ಇನ್ನು-ಮುಂದೆಯೂ ಹಂಗೇ ನೋಡ್ಕೋಳಿ. ದಟ್ಸ್-ಆಲ್. “ ಎನ್ನುತ್ತಾ ಹಿಂದೆ ಸರಿದರು.

ಈಗಲೂ ಡಾಕ್ಟರನ್ನು ದೇವರೆಂದು ಭಾವಿಸಿದ್ದವರಿಗೆ, ಡಾಕ್ಟರು ಹಿಂದೆ ಸರಿದದ್ದು.. ದೇವರೆ
ಕೈಬಿಟ್ಟು ಹಿಂದೆ ಸರಿದಂತತಾಯ್ತು. ಅಪ್ಪ-ಅಮ್ಮ ಎನಿಸಿಕೊಡವರಿಗೆ ತಮ್ಮ ಜೀವಿತಕಾಲದಲ್ಲಿ
ಇದಕ್ಕಿಂತಲೂ, ಕೆಟ್ಟ ಸುದ್ದಿಯೆಂಬುದು ಮತ್ತೊಂದು ಇರಲಿಲ್ಲ. ರಾಜಪ್ಪ, ಪರಿ ಪರಿಯಾಗಿ
ಬೇಡಿಕೊಳ್ಳುತ್ತಿದ್ದ ಹೊನ್ನಮ್ಮಳ ಭುಜವನ್ನು ಹಿಡಿದು ಹೊರಗೆ ನಡೆದ. ಪುನಃ ಏನನ್ನೋ
ನೆನಪಿಸಿಕೊಂಡವರಂತೆ ಒಳಬಂದು.

‘ಸಾರ್!! ಕೊನೆಯದಾಗಿ ಒಂದು ಮಾತು ಕೇಳ್ತೇವೆ. ದಯವಿಟ್ಟು ಸುಳ್ಳು ಹೇಳ್ಬೇಡಿ. ನಮ್ಮ ಮಗ
ಇನ್ನು ಎಷ್ಟು ವರುಷ ಬದುಕಿರಬಹುದು ಹೇಳಿ..? ದಯವಿಟ್ಟು ಸುಳ್ಳು ಹೇಳಬೇಡಿ. ಯಾಕಂದ್ರೆ!!
ಅವನ ವಿಷಯದಲ್ಲಿ ಆ ದೇವರಿಂದ ಹಿಡಿದು, ಎಲ್ಲರೂ ಸುಳ್ಳು ಭರವಸೆ ಕೊಟ್ಟುಕೊಂಡೇ
ಬದುಕಿಸ್ತಾ ಬಂದಿದ್ದೀರಾ..? ಈಗ ನಮಗೆ ಅವನ ಹತ್ತಿರ ಎಷ್ಟು ದಿನಗಳು, ಇದಾವೆ ಅನ್ನೋದನ್ನ
ತಿಳ್ಕೋಬೇಕು ಅಂತಿದೆ.’

‘ ಇಷ್ಟು!! ಅಂತ ಹೇಳಲಿಕ್ಕಾಗಲ್ಲ. ಒಂದೋ ಎರಡೋ ಅಥವಾ ಆಯಸ್ಸು ಗಟಿ ಇದ್ರೆ
ಹತ್ತು-ಇಪ್ಪತ್ತು ವರುಷಗಳು ಬೇಕಾದ್ರು ಬದುಕಬಹುದು. ಇಂಥ ಸಮಸ್ಯೆಯೊಂದನ್ನು
ಇಟ್ಟುಕೊಂಡು, ಇಷ್ಟು ವರುಷಾನೆ ನಿಮ್ಮ ಆರೈಕೆಯಲ್ಲಿ ಗಟ್ಟಿಯಾಗಿದ್ದಾನೆ ಅಂದ್ರೆ, ಗಟ್ಟಿ
ಮಗ!! ರಿ ಅವನು. ಚೆನ್ನಾಗಿ ನೋಡ್ಕೋಳಿ. ’

‘ ನನ್ನ ಮಗ ಕಲ್ಲು ತಿಂದು ಅರಗಿಸಿಕೊಳ್ಳುವಂತವನು. ಏನೂ ಆಗಲ್ಲ “ ರಾಜಪ್ಪ ತನಗೆ ತಾನೆ
ಧೈರ್ಯ ಹೇಳಿಕೊಳ್ಳುತ್ತಾ, ಹೊನ್ನಮ್ಮಳನ್ನು ಕರೆದುಕೊಂಡು ಆಸ್ಪತ್ರೆಯಿಂದ ಹೊರನಡೆದ.
ಪುನಃ ಮಗನ ಹತ್ತಿರ ಹೋಗಲು ಧೈರ್ಯ ಸಾಕಾಗಲಿಲ್ಲ. ಧೈರ್ಯ ಅಂದರೆ ಅರ್ಥ ಏನು ಇನ್ನೋದನ್ನ ಈ
ಸಂಧರ್ಭದಲ್ಲಿ ಯಾರಾದ್ರು ಪ್ರಶ್ನಿಸಬೇಕು ಅನ್ಸತ್ತೆ. ಇಬ್ಬರೂ ಆಸ್ಪತ್ರೆಯ ಹೊರಗಿದ್ದ
ಪಾರ್ಕಿನಲ್ಲಿ ಕುಳಿತರು. ಬೆಳಗಿನಿಂದ-ಸಂಜೆಯವರೆಗೂ ಮಸೋ-ಇಚ್ಛೆ, ಕಣ್ಣೀರು ಬತ್ತುವ
ವರೆಗೂ ಅತ್ತರು. ಸ್ವತಂತ್ರವಾಗಿ ಅಳಲೂ ಅವರ ಬಳಿ ಇದ್ದದ್ದು ಕೇವಲ ಕೆಲವೇ ಗಂಟೆಗಳು.
ಪಾರ್ಕಿನಿಂದ ಎದ್ದವರು ಪುನಃ ಡಾಕ್ಟರ ಬಳಿಗೆ ನಡೆದರು.

‘ಸಾ!! ನನ್ನ ಮಗ ತುಂಬಾ ಸೂಕ್ಷ್ಮ!!. ನಮ್ಮ ನಡುವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆದ್ರೂ
ಅವನಿಗೆ ಅನುಮಾನ ಬಂದುಬಿಡತ್ತೆ. ಅವನಿಗೆ ಧೈರ್ಯ ತುಂಬಿ, ಏನೂ ಆಗೊಲ್ಲ ಅಂತ ನಾಲ್ಕು
ಒಳ್ಳೆ ಮಾತಾಡಿ ಸಾರ್. ಅವನ ಮನಸ್ಸಿಗೂ ನೆಮ್ಮದಿ ಇರುತ್ತೆ.’

ಇದಾದ ನಂತರವೇ ಡಾಕ್ಟರ ‘perfectly all right’ ನುಡಿಮುತ್ತು ಬಂದಿದ್ದು.

ಅಮ್ಮನ ಮನಸ್ಸಿನಲ್ಲಿ ಒಪ್ಪಿಕೊಳ್ಳಲಾಗದ ಇಂಥಹ ಕಟು-ಸತ್ಯದ ಜ್ವಾಲಾಮುಖಿ ಇದ್ದರೂ,
ಹೊರಗೆಡವಲಾಗದಷ್ಟು ಅಸಹಾಯಕತೆ. ಪ್ರತಿ ಕ್ಷಣವೂ ಮಗ, ತನ್ನ ಕಣ್ಣಳತೆಯಲ್ಲಿಯೇ ಇರುವಂತೆ
ನೋಡಿಕೊಳ್ಳುವಳು.


ಅಕಸ್ಮಾತ್ ಮಗ ಬೆಳಗ್ಗೆ ಏಳುವುದು ತಡವಾದರೆ, ತಲೆ ಸವರುವ ನೆಪದಲ್ಲಿ ಅವನ ಬಳಿ ಹೋಗಿ,
ಮೆಲ್ಲಗೆ ಎದೆಯ ಮೇಲೆ ಕೈ ಇಡುವಳು. ಪಾಪಿ ಹೃದಯ ಬಡಿದುಕೊಳ್ಳುವುದನ್ನು ಕೇಳಿದ ಮೇಲೆ
ನಿಟ್ಟುಸಿರು ಬಿಡುವಳು. ಉಸಿರಿಗಿಂತ ಹೃದಯವನ್ನು ಹೆಚ್ಚು ನಂಬಿದ್ದಳು.

ಇಂತಹುದೇ ನೋವಿನ ಮಡುವಿನಲ್ಲಿ ಮತ್ತೊಂದು ವರುಷ ದೂಡಿದರು. ತನ್ನ ಮಗ ದಪ್ಪಗೆ,
ದುಂಡು-ದುಂಡಾಗಿ ಎಲ್ಲ ಮಕ್ಕಳಂತೆ ಮೈ ತುಂಬಿಕೊಳ್ಳುವುದು ಯಾವಾಗ ಎಂದು ಹೊನ್ನಮ್ಮ,
ಮೊದಲಿಂದಲೂ ಕಾಯುತ್ತಿದ್ದಳು. ಅವಳ ಅದೃಷ್ಟಕ್ಕೆ ಆ ದಿನವೂ ಬಂದುಬಿಟ್ಟಿತು. ಚೀರುವಿನ
ಕೈ-ಕಾಲುಗಳು ಅಸಾಧ್ಯವಾಗಿ ಊದಿಕೊಂಡವು. ಹಲವಾರು ಸಾವುಗಳನ್ನು ನೋಡಿದ್ದವರು, ಮೈ ಕೈ
ಊದಿಕೊಳ್ಳುವುದರ ಮುನ್ಸೂಚನೆಯನ್ನು ಅರಿಯಲಾರದವರಾಗಿರಲಿಲ್ಲ.

ಚೀರು ಅನ್ನಾಹಾರಗಳನ್ನು ತ್ಯಜಿಸಿ ತಿಂಗಳು ಕಳೆದಿತ್ತು. ಹಾಲು, ಸಕ್ಕರೆ ನೀರು, ಎಳನೀರು
ಗಳು ಜೀವಸತ್ವಗಳಾದವು. ತಾನು ಇಪ್ಪತ್ತೊಂದನೇ ವರುಷಕ್ಕೆ ಕಾಲಿಡಲು ಒಂದು ತಿಂಗಳು ಬಾಕಿ
ಇದ್ದಂತೆ 2010, September 8 ರಂದು, ಬೆಳಗ್ಗೆ 6 ಘಂಟೆಗೆ ಅಪ್ಪನ ಭುಜದ ಮೇಲೆ, ಪ್ರಾಣ
ಬಿಟ್ಟನು. ಆಸೆಗಳ ಮಹಾಗೋಪುರಗಳನ್ನು ಕಟ್ಟಿಕೊಂಡು, ಸಾಧಿಸಲಾಗದೇ, ನೋವಿಲ್ಲದ ಜೀವನವನ್ನು
ಅನುಭವಿಸಲೂ ಆಗದೆ ಹೊರಟು ಬಿಟ್ಟ. ಎಲ್ಲರನ್ನೂ ಪ್ರೀತಿಸಿದನು. ‘ಅಣ್ಣಯ್ಯ!! ಲೈಫು ಎಂಜಾಯ್ ಮಾಡ್ಬೇಕು’ ಎಂದು ಹೇಳಿ ಹೊರಟೇಬಿಟ್ಟ.

ಇಲ್ಲಿಗೆ ಈ ಕಥೆ ಮುಗಿಯಿತು.
 

7. ಬರೆದವನ ಸ್ವಗತ


ಕಥೆಯಲ್ಲಿರುವ ನನ್ನ ತಮ್ಮ!!ನ ಜೊತೆಗೆ ಕಳೆದ ಸಾವಿನ ಕೊನೆಯ ಎರಡು ದಿನಗಳು, ನಂತರದ
ದುರಂತಗಳು, ಜೀವನದ ಮತ್ತೊಂದು ಮಗ್ಗುಲನ್ನು ತೋರಿಸಿದಂತವು. ಅವುಗಳನ್ನು ವಿವರವಾಗಿ
ಬರೆಯುವ ಶಕ್ತಿ ಇಲ್ಲ.
ಸಾಯುವುದಕ್ಕೂ ಒಂದು ದಿನ ಮೊದಲು, ಹೊರಟು-ಹೋಗಿದ್ದ ಜೀವ
ಪುನಃ ಬಂದದ್ದು, ‘ಅಮ್ಮಾ ಅಳಬೇಡಮ್ಮ!! ನೀ ಅತ್ತೆ ಅಂತ ಬಂದೆ ’ ಎಂದು
ಹೇಳಿದ್ದು.
ದೊಡ್ಡಪ್ಪನನ್ನು ದೇವರು ಎಂದು ಭಾವಿಸಿ, ಬದುಕಿಸುವಂತೆ ಕೇಳಿಕೊಂಡಿದ್ದು,
ಸ್ನೇಹಿತರಿಗೆ ಗಣಪತಿ ಕೂರಿಸಲು ದುಡ್ಡು ಕೊಟ್ಟು, ಹಬ್ಬ ಮಾಡಲು
ಇಲ್ಲವಾಗಿದ್ದು,
೨ ಘಂಟೆ ಮೊದಲು, ಅಪ್ಪಾಜಿ ತನ್ನ ಕೈಯಾರೆ ಹೊಲೆದು ಕೊಟ್ಟ ಹೊಸ
ಬಟ್ಟೆಯನ್ನು ಹಾಕಿಸಿಕೊಂಡಿದ್ದು ಮತ್ತು ಭುಜದ ಮೇಲೆ ಪ್ರಾಣ ಬಿಟ್ಟದ್ದು.
ದುಃಖ ತಾಳಲಾಗದೇ ಒಬ್ಬೊಬ್ಬರೇ ಮೂರ್ಛೆ ಹೋಗಿದ್ದು, ಅಮ್ಮಂಗೆ ಸ್ವಲ್ಪ ಹೊತ್ತು
ಹುಚ್ಚು ಹಿಡಿದಂತಾಗಿ, ಆಸ್ಪತ್ರೆ ಸೇರಿದ್ದು,
ಬದುಕಿದ್ದಾಗ ಸಂಪಾದಿಸಿದ ಬಂಧುಗಳು, ಸ್ನೇಹಿತರು
ಅಂತಿಮ-ಯಾತ್ರೆಯಲ್ಲಿ ಸೇರಿದ್ದು.
ಪ್ರಾಣ-ಹೋದ 1 ಘಂಟೆ ನಂತರ ‘ಗುಡ್ ಮಾರ್ನಿಂಗ್ ಪವಿ, ಹ್ಯಾವ್ ಎ ನೈಸ್ ಡೇ’ ಎಂದು ಅವನ ಗೆಳತಿಯೊಬ್ಬಳು ಮೆಸೇಜ್ ಕಳಿಸಿದ್ದು,

ಯಾವುದನ್ನಂತ ಬರೆಯಲಿ. ಬದುಕು ಸಾರ್ಥಕ.
 

8. ನುಡಿ ನಮನಸಾವಿನ ಮನೆಯಲಿ ನರಳುವ ಪಾತ್ರವ
ಜೀವಿತದುದ್ದಕೂ ಜೀವತುಂಬಿ ನಟಿಸಿದೆ.

ಸೂತ್ರವ ಹಿಡಿದವನೊಬ್ಬ
ಪಾತ್ರವ ಗೋಳಾಡಿಸಿ
ಅಯ್ಯೋsss ನೋವು ಸಾಕೆನಿಸಿ
ಹಿಡಿದ ಸೂತ್ರವನೆ, ಹರಿದು ಬಿಸಾಡಿದ.

ನಿನ್ನಾತ್ಮಕೆ ಮೆತ್ತಿರುವ ತೊಗಲಿನ ಬಣ್ಣವ; ಮಣ್ಣು ತಿನ್ನಲು ಬಿಟ್ಟು, ರಂಗಮಂಚವನೆ
ತೊರೆದು ಹೊರಟೆಯಾ. ?

ಅದೆಷ್ಟೋ ರಾತ್ರಿಗಳು ನಿದಿರೆಗಾಗಿ ಪರಿತಪಿಸಿ;
ಚಿರನಿದ್ರೆಗೇ ಜಾರಿದೆಯಾ. ?

ಎಲ್ಲರ ಪ್ರೀತಿಯನು ಎದೆಗವುಚಿ ಬೆಳೆದೆ;
ನಲ್ಮೆಯ ಕೂಸಾಗಿ, ನಮ್ಮ ಮನ ಗೆದ್ದೆ.

ಮತ್ತೆ ದುಷ್ಟನಾಗಿ ಹುಟ್ಟಿದರೂ,
ಬಡವನಾಗಿ ಹುಟ್ಟದಿರು.

ನಿನ್ನಾತ್ಮಕೆ ಕೋರುವೆ.
ಶಾಂತಿ!! ಶಾಂತಿ!! ಶಾಂತಿ!!


------------------------------------
`ಕೈ ಕಾಲು ;
ಕಿವಿ ಕಣ್ಣು ;
ಹಾರ್ಟು ಕಿಡ್ನಿ ;
ಬ್ರೇನೋ..ಲಿವರ್ರೋ…. ಏನನ್ನಾದರೊಂದು ಕಳೆದುಕೊಂಡು ಹುಟ್ಟುವ ಮತ್ತು ಹುಟ್ತಾನೆ
ಧಾರಿದ್ರ್ಯವನ್ನ ತರುವ ಆ ಮಕ್ಕಳನ್ನು;
ತನಗರಿವಿಲ್ಲದೆ ಭೂಮಿಗೆ ಸಾಗಿಸುವಳು.

ಆಮೇಲೆ!! ಜನುಮ ನೀಡಿದ ಕರ್ಮಕ್ಕೋ;
ತಾಯ್ತನದ ಮರ್ಜಿಗೋ;
ಅಥವಾ ಹೆಣ್ತನದ ರಾಜಿಗೋ ಕಟ್ಟು ಬೀಳುವಳು;
ಮೊಲೆ-ಹಾಲಿನೊಂದಿಗೆ ಮಮತೆ-ಮಮಕಾರಗಳನ್ನು ಉಣಿಸಿ;
ಕೈ-ತುತ್ತಿನೊಂದಿಗೆ “ ನಿಂಗೇನಾದರೂ ಜೊತೆಯಲಿ ನಾನಿರುತ್ತೇನೆ ” ಅನ್ನೋ ಆತ್ಮವಿಶ್ವಾಸದ
ಟಾನಿಕ್ಕು ಕುಡಿಸಿ;
ಸ್ವಂತ ಆಸೆ, ಬಯಕೆ, ಬೇಕು-ಬೇಡಗಳನ್ನು ತಿಪ್ಪೆಗೆ ಎಸೆದು, ಮಗುವನ್ನು!!! ಕೊನೆವರೆಗೂ
ಮಗುವಿನಂತೆಯೇ ಕಣ್ಣಳತೆಯಲ್ಲಿಟ್ಟುಕೊಂಡು;
ಲಾಲಿಸಿ!! ಪಾಲಿಸಿ!! ಪೋಷಿಸಿ!!. ಮಗುವಿನ ನಗುವಿನಲ್ಲಿಯೇ ಜೀವನ ಸಾರ್ಥಕ್ಯ ಕಾಣುವ…
ವಿಕಲಾಂಗ ಮಕ್ಕಳನು ಹೆತ್ತ, ವಿಶೇಷ ಅಮ್ಮಂದಿರಿಗೆ ಮತ್ತು ಆ ವಿಶೇಷ ಮಕ್ಕಳಿಗೆ
ಈ ಪುಟ್ಟ ಕಥೆಯನ್ನು, ಪ್ರೀತಿಯಿಂದ ಅರ್ಪಿಸುತ್ತಿದ್ದೇನೆ.`

Comments

 1. Maga eno idu??? life istond krooravagiruthe antha namboke agalla.

  ReplyDelete
 2. ಫೀಲಿ೦ಗ್ಸ್ ಫಾರ್ ಸೇಲ್??


  "ಭೂತಕಾಲದಿ೦ದ ಹೊರಟ ಮನಸ್ಸು,ಭವಿಷ್ಯತ್ಕಾಲಕ್ಕೆ೦ದು ಹೊರಟ ಬಸ್ಸು ವರ್ತಮಾನದ ಬಸ್-ಸ್ಟಾಪಿನಲ್ಲಿ ಬ೦ದು ಕೂಡಿಯೇ ಬಿಟ್ಟವು"

  ""ಓಆರ್-ಎಸ್ ಪುಡಿಯನ್ನು ಸ೦ಜೀವಿನಿಯನ್ನಾಗಿ ಬಳಸಿ ಮಗುವನ್ನು ಬೆಳೆಸಿದರು."

  "ಬದುಕಿಗಾಗಿ ಅ೦ಗಲಾಚಿ ತನ್ನ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ"

  "ಅ೦ಗಳದಲ್ಲಿ ಕೆ೦ಪಗೆ ಚೆಲ್ಲಾಡಿರುತ್ತಿದ್ದ ರಕ್ತದ ಕೋಡಿಯನ್ನು ,ನಿರ್ಭಾವುಕರಾಗಿ ಪೊರಕೆಯಿ೦ದ ಗುಡಿಸಿ ಸಾರಿಸುವರು ... ದೇವರಲ್ಲಿ ದಾರಿಗಾಗಿ ಧ್ವನಿ ಮಾಡುವುದು.."

  "ಅಷ್ಟಕ್ಕೂ... ನಾವು ಜೀವಿಸುತ್ತಿರುವುದು , ಭವಿಷ್ಯದ ಖಜಾನೆಯಲ್ಲಿ ಯಾರೋ ಬಚ್ಚಿಟ್ಟಿರುವ ಸುಳ್ಳುಗಳನ್ನು ನಿಜಮಾಡಲೆ೦ದು.ಬಾ!!"

  ..ಮಾತುಗಳೇ ಇಲ್ಲ ಮಚ್ಚಿ.. ಅದ್ಭುತ ಬರವಣಿಗೆ..
  .., ಲೈಫು ಇಷ್ಟೇನಾ? ...

  ReplyDelete
 3. maga... Presentation is very good.
  Moreover, You made my eyes wet once more.

  ReplyDelete
 4. ONE OF THE FINEST WRITINGS FROM YOU.

  EACH WORD AND SENTENCE HAVE THEIR OWN WEIGHT IN THIS ONE......

  ReplyDelete
 5. Hego barede? Thumbaa edegaarike nindu. Avanu yaavagalu nimma jothege iddane antha bhaavisthini. Haage irali antha haaraisthini. Aa devaru nimage avana bhoutika agalikeya bhara tadedukollo shakti kodali antha prarthisuthini geleya. Shanti... Shanti... Shanti...

  ReplyDelete
 6. ಬರಿ ಕಥೆಯಗಿದ್ದರೆ ಚೆನ್ನಾಗಿ ಇರ್ತಾ ಇತ್ತು..

  ReplyDelete

Post a Comment

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು. ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ. ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ. ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು. 'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು. ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ... 'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ ' ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು. ' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು. ' ಲ

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು. ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ. ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿ

ಇಬ್ಬರು ಪೋಕರಿ ಮಕ್ಕಳ ಜೊತೆಗೆ

ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್ ಕೆ ಜಿ. ಮರಿ ಬ್ರದರ್ಸ್. ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು' ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು......  ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ ಬಾಧೆ. ' ಏನ್ರೋ ಮಾಡ್ತಿದ್ದೀರ ಅಲ್ಲಿ. ?' ಕೂಗಿದೆ. ' ಹಾ ಏನೋ ಮಾಡ್ತಿದೀವಿ. ನಿಂಗೇನು?? ' ಎಕೋ ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ ತಮ್ಮರಿಂದ ಬಂದವು. ಹತ್ತಿರ ಹೋಗಿ ನೋಡಿದೆ. ಕಿರಾತಕರು ತಾತನ ಶೇವಿಂಗ್ ಬ್ಲೇಡು ಕದ್ದು ತಂದು ಹುಲ್ಲು ಕಟಾವು ಮಾಡುತ್ತಿದ್ದರು. 'ಲೇ ಉಗ್ರಗಾಮಿಗಳ, ಕೊಡ್ರೋ ಬ್ಲೇಡು. ಡೇಂಜರ್ ಅದು. ಕೈ ಕುಯ್ದುಬ

ಎಮ್ಮೆ ಕಾನೂನು ; ಜಸ್ಟಿಸ್ ಡೀಲೈಡ್ ಈಸ್ ಜಸ್ಟಿಸ್ ಡಿನೈಡ್

'ಜನನ ಪ್ರಮಾಣ ಪತ್ರ' ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿಂಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕಂಡು 'ನಾನು ಹುಟ್ಟಿರುವುದು ಸತ್ಯ ಎಂದು ಇರುವಾಗ,  ಎಲ್ಲೋss ಒಂದು ಕಡೆ ಜನನ ಆಗಿರಲೇಬೇಕಾಗಿಯೂ,  ಸೊ ಅದನ್ನು  ಪರಿಗಣಿಸಿ ದಾಖಲೆ ಒದಗಿಸಬೇಕಾಗಿಯೂ ' ಕೇಳೋಣವೆಂದು ಹೊರಟೆ. 1995ಮಾಡೆಲ್ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದಂತೆ - ' ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ.  ಮಕ್ಳು-ಮರಿ ಓಡಾಡ್ತಿರ್ತವೆ ' ಕೀರಲು ಧ್ವನಿಯೊಂದು ಒಳಗಿನಿಂದ ಕೇಳಿಸಿತು. ಬ್ರೇಕ್ ನ ಮೇಲೆ ಹತ್ತಿ-ನಿಂತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ.  ಅಷ್ಟೋಂದು ಕಂಡೀಶನ್ ನಲ್ಲಿರುವ ಬೈಕನ್ನು,  ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ. ? ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ,  ಗಾಡಿ ಓಡಿಸಬೇಕು.  ಅವರು ಅಡ್ಡ-ಬರುವುದನ್ನು ಮೊದಲೇ. , ಊಹಿಸಿ ಸ್ವಲ್ಪ ದೂರದಿಂದಲೇ ಬ್ರೇಕು-ಕಾಲು ಉಪಯೋಗಿಸಿ,  ಬೈಕು ನಿಲ್ಲಿಸಬೇಕು.  ಹಾರನ್ನು ಇಲ್ಲದಿರುವುದರಿಂದ ಕ್ಲಚ್-ಹಿಡಿದು ಅಕ್ಸಿಲರೇಟರ್ ರೈಸ್  ಮಾಡಿ ಬರ್-ರ್-ರ್sssss ಎಂದು ಶಬ್ದ ಮಾಡುತ್ತಾ ದಾರಿ ಬಿಡಿಸಿಕೊಳ್ಳಬೇಕು. ಬೈಕ್-ಸ್ಟಾರ್ಟ್ ಮಾಡಿ ಮನೆಯಿಂದ ನೂರು-ಗಜ ಕೂಡ ಮುಂದೆ ಬಂದಿರಲಿಲ್ಲ,  ಅಂಗಡಿ-ಲಕ್ಕಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆಂದು, ಹಲ್ಲು-ಬಿಡುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು. &

ಬಿಸಿಲುಕುದುರಿ-ಸವಾರಿ ; ಚೆನ್ನೈ ಬಸ್ ಪಯಣದ ಒಂದು ಅನುಭವ

ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ. ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ, ‌ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್ ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು. ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ ಹಾಕಿಸಿಕೊಂಡವರಿರಬಹುದು ಎಂದು

ತೀರದ ಹುಡುಕಾಟ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. 'ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.' ​ಹೀಗಿರುವಾಗ ರೆಕ್ಕೆ ಮೂಡಿ ವರುಷಗಳು ಕಳೆದರೂ ನನ್ನನ್ನು ಹಾರಲು ಬಿಡಲಿಲ್ಲವೇಕೆ.? ಅರೆ!! ಮನುಷ್ಯರು ಎನಿಸಿಕೊಂಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊಂಡಿದ್ದರಲ್ಲಿ, ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ. ? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ. ಅದೇನೋ ನಮಗಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವಂತೆ ನಡೆದುಕೊಳ್ಳುವರಲ್ಲಾ... ನಿನಗೊಂದು ಒಳ್ಳೆಯ ಭವಿಷ್ಯ ಕಟ್ಟಬೇಕು ಎಂಬ ಸುಳ್ಳು ಆಸೆಗಳು. ನಾನಿನ್ನು ಚಿಕ್ಕವನಾ..? ನನ್ನ ಆಲೋಚನೆಗಳು ಎಲ್ಲರಿಗಿಂತಲೂ.., ಎಲ್ಲದಕ್ಕಿಂತಲೂ ಭಿನ್ನ. ಏನನ್ನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊಂಬೆಯನ್ನಾಗಿಸಿದರು. ಅಮ್ಮ ಹೇಳುವಳು ‘ ಅಪ್ಪ ನಿನ್ ಮೇಲೆ ಅತೀ ಪ್ರೀತಿ ಇಟ್ಟಿದಾನೆ ’. ಎಲ್ಲರೂ ಅವರವರ ಸ್ವಾರ್ಥದ ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರು. ಛೇ ಭವಿಷ್ಯದ ವಿಶ್ವಮಾನವನಿಗೆ ಎಂಥಹ ದುರಂತ ಪೋಷಕರು. ಯಾರೋ ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ತಮ್ಮ ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹಂಬಲ

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)  ' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ' ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ.  ಬಹುಷಃ ಹಳೇ ಸಿನಿಮಾಗ

ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು. ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು. ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!! ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ. ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ. 'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ. ' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ. 'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು. 'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ. ಇಬ್ಬರೂ ಎದ್ದು ಹೊರಟರು. ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು ' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' . 'ಯಾಕೆ..? ನಾನೇನ್ ಮಾಡಿದೆ..?' ಎಂದ. 'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್

ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ. ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ ಸುತ್ತು, **ಪೋಷಾಕು** ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ, ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು, ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್ ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು. ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು 'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ. ನನ್ನನ್ನು ನೋಡುತ್ತಿದ್ದಂತೆ ಅಮ

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು. ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು. ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ. ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ, ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು. ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು. ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ, ಇವರನ್ನು ಒಂದೇ ಮನೆಯ ಅಣ್ಣ ತ