Skip to main content

ಹೂನವಿಲೆಯ ಹ೦ತಕ
‘ ನಾಯಿಗಳು ಬೂದಿ ಮೇಲೆ ಮಲಗಿರುವಾಗ, ಹಿಂದಿನ ಜನುಮ ನೆನಪಾಗುತ್ತೆ. ಅದಕ್ಕೆ ಮಂಕಾಗಿ ಕಾಣುತ್ತವೆ.’ 

ದೆವ್ವ ಭೂತದ ಕಥೆ ಸಾಕೆನಿಸಿ, ಪುವರ್ಜನ್ಮದ ಎಳೆಯೊಂದನ್ನು ಬಿಡಿಸಿಟ್ಟಳು ಅಜ್ಜಿ. ಬೆಂಬಿಡದೆ ಬಾರಿಸುತ್ತಿದ್ದ ಮಳೆಯ ಕಾರಣದಿಂದ ಸ್ಕೂಲಿಗೂ ರಜೆ ಕೊಟ್ಟಿದ್ದರು. ಸರಿ ಹಾಗಾದರೆ, ನೋಡಿಯೇ ಬಿಡುವ ಎಂದು, ನನ್ನ ಕಿಲಾಡಿ ಕಂತ್ರಿ ನಾಯಿ ಜಿಮ್ಮಿಯನ್ನು ಹಿಡಿದು ತಂದೆ. ಅಡಿಕೆ ಒಲೆಯ ಜಾಲರಿಯನ್ನು ಎತ್ತಿ; ಬೂದಿ ಹೊರ ಎಳೆದು; ಬೂದಿಯ ಮೇಲೆ ಜಿಮ್ಮಿಯನ್ನು ಮಲಗುವಂತೆ ಸೂಚಿಸಿದೆ. ಅಡಿಕೆ ಬೇಯಿಸುವ ಬೃಹತ್ ಒಲೆಯ ಗೂಡಿನಲ್ಲಿ ಮೂರು ಸುತ್ತು ಹಾಕಿದವನೆ ಬಿದ್ದುಕೊಂಡ. ಮಲಗುವ ವಿಷಯದಲ್ಲಿ ಎಂದಿಗೂ ಮೀನ-ಮೇಷ ಎಣಿಸುವನಲ್ಲ ನನ್ನ ಜಿಮ್ಮಿ. ಸ್ವಲ್ಪ ಹೊತ್ತಿನಲ್ಲಿಯೇ ಗಾಢ ನಿದ್ರೆಗೆ ಜಾರಿದ.

ನಾಯಿಗಳಿಗೂ ಕನಸು ಬೀಳುತ್ತದಾ. ? ಹಿಂದಿನ ಜನುಮ ನೆನಪಾಗುತ್ತದಾ. ? ನೆನಪಾದರೂ ಜಿಮ್ಮಿ ನನ್ನ ಬಳಿ ಹೇಳಿಕೊಳ್ಳುವನಾ. ಹತ್ತಿರದಲ್ಲಿಯೇ ಪರಿಶೀಲಿಸುತ್ತಾ ಕುಳಿತಿದ್ದೆ. ಮೈ ಸೆಟೆದುಕೊಂಡು, ತನ್ನ ನಾಲ್ಕೂ ಕಾಲುಗಳನ್ನು ಮೇಲೆತ್ತಿ, ಮೂತಿ ಸೊಟ್ಟ ಮಾಡಿಕೊಂಡು, ಇಹ-ಪರದ ಪರಿವೆಯೇ ಇಲ್ಲದಂತೆ ಮಲಗಿದ್ದ ಜಿಮ್ಮಿಯ ಭಂಗಿಯು, ಏನನ್ನೋ ಕಂಡು ಹಿಡಿಯಲು ಕುಳಿತಿದ್ದ ನನ್ನನ್ನು ಅಣಕಿಸಿದಂತಾಯಿತು. ‘ ಥೂ. ಥ್ ಬಡ್ದಿ-ಮಗಂದು. ಯಾವ ಜನುಮದ ರಹಸ್ಯಾನೂ ಇಲ್ಲ, ಮಲೆನಾಡಿನ ಚಳಿಗೆ ಬೂದಿ ಮೇಲೆ ಬಿಸಿ-ಬಿಸಿ ನಿದ್ದೆ ಹೊಡಿತಿದೆ ಅಷ್ಟೆ!! ’ ಬಯ್ದುಕೊಂಡು ಆ ಸಂಶೊಧನೆಯನ್ನು ಅಲ್ಲಿಗೇ ನಿಲ್ಲಿಸಿದೆ. ನಾಯಿಗಳಿಗೆ ಮಾತು ಬರುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ, ಇಲ್ಲ-ಸಲ್ಲದ ಅತೀಂದ್ರಿಯ ಶಕ್ತಿಗಳನ್ನು ತಲೆಗೆ ಕಟ್ಟಿ, ಅವುಗಳ ಪ್ರತಿಷ್ಠೆ ಹೆಚ್ಚಿಸುವರಲ್ಲ. ನನ್ನ ಜಿಮ್ಮಿಗೆ ಭೂಕಂಪನ ತಿಳಿಯುತ್ತಾ; ಅಥವಾ ಭೂತ ಕಾಣಿಸುತ್ತಾ, ನನ್ನಜ್ಜಿಗೆ ತಲೆ ಇಲ್ಲ.

****** 1 ******

ನಾಯಿ-ಬೆಕ್ಕುಗಳನ್ನು ವಿಷಜಂತುಗಳಂತೆ ಕಾಣುತ್ತಿದ್ದ, ಮನೆಯವರ ವಿರೋಧ ಕಟ್ಟಿಕೊಂಡು, ಕಂತ್ರಿ ಕುತಂತ್ರಿ ಗಂಡು ನಾಯಿ ಜಿಮ್ಮಿಯನ್ನು ತಂದು ಸಾಕಿದೆ. ಜಿಮ್ಮಿಯ ಮೊದಲ ನಾಮಧೇಯ ಹನುಮಂತ. ಅದೇಕೊ ಕುರ್ರೋ.. , ಕುರ್ರೋ.. , ಎನ್ನುವ ಶ್ವಾನ ಸಹಜ ಪುರಾತನ ಸಂಭೋಧನೆಯ ರಾಗಕ್ಕೆ ’ಹನುಮಂತ’ ಹೊಂದಿಕೆಯಾಗಲಿಲ್ಲ. ಹೆಸರನ್ನು ’ಜಿಮ್ಮಿ’ ಎಂದು ಬದಲಿಸಿದ ಮೇಲೆ ಆ ದ್ವಿರುಕ್ತಿ ಸಮಸ್ಯೆ ಬಗೆಹರಿಯಿತು.

ಗಂಡು ನಾಯಿ ಜಿಮ್ಮಿಯನ್ನೇ, ಹುಡುಕಿ ತಂದದ್ದಕ್ಕೂ ಒಂದು ಮುಖ್ಯ ಕಾರಣವಿದೆ. ಪದೆಪದೆ ಬಸುರಾಗುವ ಹೆಣ್ಣು ನಾಯಿಗಳ ಬಾಣಂತನದ ಜವಾಬ್ದಾರಿಯನ್ನು ಹೊರಲು ಸಾಧ್ಯವೇ .? ಒಂದೇ ಬಾರಿಗೆ ಏಳೆಂಟು ಮರಿಗಳಿಗೆ ಜನುಮ ನೀಡಿ ತಾನು ‘ಮಹಾತಾಯಿ’ ಆಗುವುದರ ಜೊತೆಗೆ, ಆ ಸಂತ್ರಸ್ತ ಮರಿಗಳ ಹೊಣೆಯನ್ನು ನಮ್ಮ ತಲೆಗೆ ಕಟ್ಟಿ ಬಿಡುವವು. ಒಂದು ನಾಯಿ ಸಾಕುವುದಕ್ಕೇ ಎನ್ ಒ ಸಿ ಪಡೆದುಕೊಳ್ಳಲು ಪರದಾಡಿದ್ದಾಗಿತ್ತು.

ನಾನು ಸಾಕುತ್ತಿದ್ದ ಕಂತ್ರಿ ನಾಯಿ ’ಜಿಮ್ಮಿ’ಯನ್ನು ಪೋಲೀಸು ನಾಯಿಯಂತೆ ಚೂಟಿಯನ್ನಾಗಿ ಮಾಡಲು ಹರಸಾಹಸ ಪಟ್ಟೆ. ಎತ್ತರಕ್ಕೆ ನೆಗೆಯುವುದನ್ನು ಕಲಿಸಲು ಆಳವಾದ ಗುಂಡಿಯಲ್ಲಿ ಹಾಕಿ ಪ್ರಚೋಧಿಸಿದೆ. ತಿನ್ನುವಾಗ ಇರುತ್ತಿದ್ದ ಉತ್ಸಾಹ ನೆಗೆಯುವಾಗ ಇರುತ್ತಿರಲಿಲ್ಲ. ನಾಯಿಯನ್ನು ಕಟ್ಟಿ ಬೆಳೆಸಿದರೆ, ಹೆಚ್ಚು-ಹೆಚ್ಚು ರೋಷ ಬರುತ್ತದೆಂದು ಗೆಳೆಯ ಸೀನ ಐಡಿಯಾ ಕೊಟ್ಟ. ಆದರೆ ಜಿಮ್ಮಿಯನ್ನು ಕಟ್ಟಿ ಹಾಕುತ್ತಲೇ.. ಅದು ಕುಯ್ಯೋ, ಅಯ್ಯಯ್ಯೋ, ಎಂದು ಊಳಿಡಲು ಶುರುವಿಟ್ಟಿತು. ಹಂದಿಗಳ ಆರ್ತನಾದಕ್ಕಿಂತ ಕರ್ಕಶವಾಗಿದ್ದ ಧ್ವನಿಯಿಂದಾಗಿ, ಅಕ್ಕ-ಪಕ್ಕದ ಮನೆಯವರು ಬಂದು ಛೀ-ಥೂ ಎಂದು ಉಗಿದರು. ಅಮ್ಮನಿಗೂ ರೇಜಿಗೆಯಾಗಿ ಹಗ್ಗ ಬಿಚ್ಚಿ ಓಡಿಸಿ ಬಿಡುತ್ತಿದ್ದಳು.

ಬಿದಿರಿನ ದಬ್ಬೆಯನ್ನು ಅಡ್ಡಲಾಗಿ ಕಟ್ಟಿ. , ಅದರಾಚೆಗೆ ಒಂದು ಬನ್ ಇಟ್ಟು ‘ಜಿಮ್ಮಿ ಛೂ.. ’ ಎಂದರೆ, ಹೈ ಜಂಪ್ ಮಾಡುವ ಬದಲು, ದಬ್ಬೆಯ ಅಡಿಯಲ್ಲಿ ನುಸುಳಿಕೊಂಡು ಹೋಗಿ ’ಬನ್’ ಹಿಡಿಯುತ್ತಿತ್ತು. ಸ್ಪರ್ಧಾ ಮನೋಭಾವ ಹೋಗಲಿ, ಶ್ವಾನ ಕುಲದ ಕನಿಷ್ಠ ಯೋಗ್ಯತೆಗಳಾದರೂ ಇರಲಿಲ್ಲ.

ನನ್ನ ಸರ್ವ-ಪ್ರಯತ್ನಗಳನ್ನೂ ಅಣಕಿಸುತಿದ್ದ ಜಿಮ್ಮಿ ಉಡಾಳನಂತೆ ಬೆಳೆದನು. ಈ ವಿದ್ಯೆಗಳನ್ನು ಮುಂದೆ ಬೇಲಿ ಸಂಧಿಗಳಲ್ಲಿ ನುಗ್ಗಿ, ಮನೆ-ಮನೆಯ ಅಡುಗೆ-ಕೊಬ್ಬರಿಗಳನ್ನು ಲೂಟಿ ಮಾಡಲು ಬಳಸಿಕೊಂಡಿದ್ದು ದುರಂತ ಎಂದೇ ಹೇಳಬೇಕು.

ಯಕಃಶ್ಚಿತ್ ಒಂದು ಬನ್ ಗಾಗಿ, ನನ್ನ ಹಿಂದೆ ಮುಂದೆ ಬಾಲ ಅಲ್ಲಾಡಿಸಿಕೊಂಡು ತಿರುಗುತ್ತಿದ್ದ ಜಿಮ್ಮಿ, ಮುಂದೊಂದು ದಿನ ಊರೆಂಬ ಊರಿಗೇ, ಢಾಕುವಿನಂತೆ ಕಾಡಿದನು ಎಂದರೆ, ಆಶ್ಚರ್ಯವಾಗಬಹುದು. ಅಡ್ಡ ದಾರಿಯಲ್ಲಿ ಸ್ವಂತಂತ್ರನಾಗಿ-ಅತಂತ್ರನಾಗಿ, ಬೆಳೆಯುತ್ತಾ ಸಾಗಿದ ಜಿಮ್ಮಿಯ ಪ್ರತಾಪ ದಿನೆ-ದಿನೆ ಹೆಚ್ಚುತ್ತಾ ಸಾಗಿತು. ‘ಆಡು ಮುಟ್ಟದ ಸೊಪ್ಪಿಲ್ಲ, ಜಿಮ್ಮಿ ನುಗ್ಗಲಾಗದ ಮನೆಯಿಲ್ಲ’ ಎಂಬಂತಾಯಿತು.

ತೆಂಗಿನಕಾಯಿ ಇಂದಾ ಹಿಡಿದು ’ಮಾಡಿದ ಅಡುಗೆ’ ಯನ್ನು ಪಾತ್ರೆ-ಸೌಟು ಸಮೇತ ಹೊತ್ತು ಓಡುತ್ತಿದ್ದನು. ಮರುದಿನ ಮನೆಯ ಹಿಂದಿನ ತಿಪ್ಪೆಗಳಲ್ಲಿ ಪಾತ್ರೆಯ ಅವಶೇಷಗಳು ಅನಾಥವಾಗಿ ಬಿದ್ದಿರುತ್ತಿದ್ದವು. ’ಅಂಗಳದ-ಕೋಳಿ’ ಗಳನ್ನು ಹಾಡಹಗಲಲ್ಲೇ, ಮನೆಯಜಮಾನನ ಕಣ್ಮುಂದೆಯೆ ಬೇಟೆಯಾಡುತ್ತಿತ್ತು. ಯಾರದರೂ ಹೊಡೆಯಲು ಅಟ್ಟಿಸಿಕೊಂಡು ಬಂದರೆ, ಹತ್ತಿರ ಬರುವವರೆಗೂ ಸುಮ್ಮನಿದ್ದು ನಂತರ ಛಂಗನೆ ನೆಗೆದು ಓಡುತ್ತಿತ್ತು. ನಾಯಿಯ ಈ ’ವಿಲಕ್ಷಣ ಅತಿರೇಕದಿಂದ ’ ಬರೀ ಹೊಡೆಯಲು ಬರುತ್ತಿದ್ದವರು, ಕೊಲ್ಲಲೇಬೇಕೆಂದು ನಿರ್ಧರಿಸಿ ಬಿಡುತ್ತಿದ್ದರು. ಬಹಳಷ್ಟು ಬಾರಿ ಮಾರಣಾಂತಿಕ ಹಲ್ಲೆಗಳು ನಡೆದಿದ್ದರೂ ಬದುಕಿ-ಉಳಿದದ್ದು ಮಾತ್ರ ಸೋಜಿಗ.

ನಮ್ಮ ಊರಿನ ಏಕೈಕ ಸಾರಿಗೆ, ವೆಂಕಟೇಶ್ವರ ಬಸ್ ಡ್ರೈವರನ್ನು, ಕಾಡಿಸಿದ್ದು ದಾರುಣವೆಂದೇ ಹೇಳಬೇಕು. ಡಕೋಟ ಬಸ್ಸಿನ ಸೂತ್ರ ಹಿಡಿದವನು, ಪ್ರಯಾಸ ಪಟ್ಟುಕೊಂಡು ಊರಿನ ಗಡಿ ಪ್ರವೇಶ ಮಾಡುವಾಗ, ರಸ್ತೆ ಮಧ್ಯದಲ್ಲಿ ಸ್ವೇಚ್ಚೆಯಾಗಿ ಮಲಗಿರುತ್ತಿದ್ದ ಜಿಮ್ಮಿಯನ್ನು ಕಂಡು, ಅದರ ಮೇಲೆ ಹತ್ತಿಸಿಕೊಂಡು ಹೋಗದೇ ಇದ್ದುದು ಡ್ರೈವರು ಜನಾಂಗದ ತಾಳ್ಮೆಯ ಮಿತಿಯನ್ನು ತೋರಿಸುವಂತದು. ಜಿಮ್ಮಿಯ ರುಂಡದವರೆಗೂ ಟೈರು ಉರುಳಿಸಿ, ಉಭಯಸಂಕಟದಿಂದ ನರಳಿ ಬ್ರೇಕು ಹಾಕುವನು. ಕಿವಿ-ಬಿದ್ದು ಹೋಗುವಂತೆ ಹಾರನ್ನು ಬಾರಿಸಿದ ಮೇಲೆ, ಮಲಗಿದ್ದ ಜಿಮ್ಮಿ ಮೆಲ್ಲಗೆ ಎದ್ದು, ತಲೆ ಕೊಡವಿ, ಮೈ ಮುರಿಯುತ್ತಾ ಒಂದೊಂದೆ ಹೆಜ್ಜೆ ಇಟ್ಟುಕೊಂಡು ನಡೆಯುವನು. ಎಷ್ಟೋ ಬಾರಿ!! ರೊಚ್ಚಿಗೆದ್ದು, ತಾನೇ ಬಸ್ಸಿನಿಂದ ಇಳಿದು, ನಾಯಿಯನ್ನು ಹೊಡೆಯಲೋಸುಗ ಅಟ್ಟಿಸಿಕೊಂಡು ಹೋದದ್ದೂ ಇದೆ.

ಶ್ವಾನಪ್ರಪಂಚದ ವಿವಿಧ ಗಡಿಗಳನ್ನು ಉಪಾಯವಾಗಿ ದಾಟಿಕೊಂಡು ನಮ್ಮೂರಿನ ಸರ್ವಂತರ್ಯಾಮಿ ಜೀವಿಯಾಗಿ ಹೋದ. ಒಮ್ಮೊಮ್ಮೆ ಗಡಿದಾಟುವ ಪ್ರಯತ್ನಗಳಲ್ಲಿ, ಅನ್ಯಾಯವಾಗಿ ನನ್ನನ್ನು ಬಲಿಪಶು ಮಾಡುತ್ತಿದ್ದುದೂ ಇದೆ. ನನ್ನ ಸೈಕಲ್ ನೆರಳಿನಲ್ಲೇ ಕಳ್ಳನಂತೆ ಓಡಿ ಬರುವನು. ದಾರಿಯುದ್ದಕ್ಕೂ ಜಿಮ್ಮಿಯ ಮೇಲೆ ಮುಗಿಬೀಳುವ ನಾಯಿಪಡೆಗಳಿಂದ ತಪ್ಪಿಸಿಕೊಳ್ಳಲು ರೇಸಿಗೆ ಬಿದ್ದವನಂತೆ ಸೈಕಲ್ ಓಡಿಸಬೇಕಾಗುತ್ತಿತ್ತು. ಒಂದು ದಿನ ಅಂಗಡಿ-ಲಕ್ಕಮ್ಮ ಊರಿನ ಹಬ್ಬಕ್ಕೆಂದು ಎಳೆ ಕುರಿಯನ್ನು ತಂದು ಹಿತ್ತಲಲ್ಲಿ ಕಟ್ಟಿದ್ದಳು. ಉರುಳಿ ಹೊತ್ತು ತರುವುದರೊಳಗಾಗಿ ಜಿಮ್ಮಿ ಮತ್ತು ಸಹಚರರು ಹಗ್ಗದ ಸಮೇತ ಕುರಿಯನ್ನು ಹೈಜಾಕ್ ಮಾಡಿ ದಾರುಣವಾಗಿ ಕೊಂದು ತಿಂದಿದ್ದರು. ಮಾಂಸವು ಬೀದಿನಾಯಿಗಳ ಪಾಲಾಗಿದ್ದನ್ನು ಕಂಡು ಕುಪಿತಗೊಂಡ ಲಕ್ಕಮ್ಮ, ಜಿಮ್ಮಿಯ ಬೇಟೆಗಾಗಿ ಹಂಬಲಿಸುತ್ತಿದ್ದಳು.

ಗಬ್ಬಿಗೆ ಬಂದಿದ್ದ ಹಸುಗಳು, ಕರು ಹಾಕುವ ಸಂದರ್ಭದಲ್ಲಿ ಸರ್ಪಗಾವಲಿನಂತೆ ಸುತ್ತುವರೆದು ಕಾಯುವರು. ಏಳಲು ತ್ರಾಣವೇ ಇರದ ಎಳೆಯ ಕರುಗಳ ಗೋಣು, ನಾಯಿಗಳ ಬರ್ಚಿಯಂತಹ ಹಲ್ಲುಗಳಿಗೆ ಸಿಕ್ಕರೆ, ಪ್ರಾಣಪಕ್ಷಿ ಹಾರಿಹೋಗಲು ನಿಮಿಷಮಾತ್ರ ಸಾಕು. ಇಂತಹ ಕ್ರೌರ್ಯಗಳಲ್ಲಿ ಜಿಮ್ಮಿಯ ಪಾಲು ಇರುತ್ತಿತ್ತು.

‘ ನಿನ್ನ ಸಹವಾಸ ಮಾಡಿಯೇ. , ಆ ನಾಯಿ ಹಾಳಾ.. ಗಿ ಹೋಗಿರುವುದು’ ಎಂದು ಅಮ್ಮ ಹೆಳುತ್ತಿದುದು, ಅದರ ಪಾಪಕಾರ್ಯಗಳಲ್ಲಿ ಯಾವ ವಿಧದಲ್ಲೂ ಭಾಗಿಯಾಗಲಾಗದವನನ್ನು ಇರಿದಂತಿರುತ್ತಿತ್ತು. ಒಳ್ಳೆ ಹುಡುಗ ಎಂದು ಬೇರೆಯವರಿಂದ ಅನಿಸಿಕೊಳ್ಳುತ್ತಿದ್ದವನ ಸಂಘದಲ್ಲಿ ಬೆಳೆದು, ಚಾರಿತ್ರ ಹಾಳುಮಾಡಿಕೊಂಡಿದ್ದು ಮಾತ್ರ ವಿಪರ್ಯಾಸವೆ ಸರಿ.

‘ ಎಂಥಾ ಕ್ರಿಮಿನಲ್ ನಾಯಿ!! ಅದಕ್ಕೆಷ್ಟು ಗಾಂಚಲಿ ಅಂದ್ರೆ!! ಮುಂದಿನ ಬಾಗಿಲಿನಿಂದಲೇ ಅಡುಗೆ-ಮನೆವರೆಗೂ ಒಳ-ನುಗ್ಗಿ, ಮತ್ತದೇ ಬಾಗಿಲಿಂದ ಬೇಕಿದ್ದನ್ನು ಕಚ್ಚಿಕೊಂಡು ಬಂದು .. ಮೇನ್ ರೋಡಲ್ಲೇ ಓಡಾಡುತ್ತೆ ... ’ ಹರಟೆ-ಕಟ್ಟೆಯಲ್ಲಿ ತೊಂದರೆಗೀಡಾದವರು ನಾಯಿಯ ಅವಗುಣಗಾನ ಮಾಡುವರು. ‘ಕಂಡಲ್ಲಿ ಗುಂಡು’ ಕಾಯಿದೆಯನ್ನು ಜಿಮ್ಮಿಯ ಮೇಲೆ ಅಘೋಷಿತವಾಗಿ ಜಾರಿಗೆ ತರಲಾಗಿತ್ತು. ಒಂದುಕಾಲದಲ್ಲಿ ಸೈಕಲ್ ಮುಂದಿನ ಕ್ಯಾರಿಯರ್ ಮೇಲೆ ಅಮ್ಮಣ್ಣಿ-ಪಾಪುವಿನಂತೆ ಕೂತು ನನ್ನೊಂದಿಗೆ ಊರು ಸುತ್ತುದ್ದಿದ್ದ ಪುಟಾಣಿ ಜಿಮ್ಮಿ , ಈಗ ಎಲ್ಲರಿಗೂ ಬೇಕಾದ ವಾಂಟೆಡ್ ಪಶು.

****** 2  ******

ಬಹಳಷ್ಟು ದಿನಗಳಾದರೂ. ಊರಿನಲ್ಲಿ ಜಿಮ್ಮಿಯ ಸುಳಿವು ಇರಲಿಲ್ಲ. ಅದರಿಂದ ತೊಂದರೆಗೀಡಾದ ಮನೆಯವರ ಟಪಾಲುಗಳೂ ಸಂಪೂರ್ಣವಾಗಿ ನಿಂತು ಹೋಗಿದ್ದವು.

‘ ಯಾರೋ. ಅದರ ರಂಡಿ ಮುರಿದು ಕಾಲುವೆಗೆ ಎಸೆದಿರಬೇಕು. ಬಿಡ್ತಾರ..? ಅದನ್ನ. ಅದೇನು ನಾಯಿನೋ, ದೆವ್ವನೋ, ನೆಮ್ಮದಿಯಾಗಿ ರಸ್ತೆಯಲ್ಲಿ ತಿರುಗಾಡುವಂತಿರಲಿಲ್ಲ ಅದರ ದೆಸೆಯಿಂದ ’ ಎಂಬುದಾಗಿ ಎಣ್ಣೆ-ರಂಗಣ್ಣ ಹೇಳುತ್ತಿದುದರಲ್ಲಿ ಅತಿಶಯೋಕ್ತಿ ಇಲ್ಲದಿಲ್ಲ. ಒಮ್ಮೆ ಸರಿ ರಾತ್ರಿಯಲ್ಲಿ ಕುಡಿದು ತೇಲುತ್ತಾ ರಸ್ತೆ-ಯೆಂಬೋ ರಸ್ತೆಯಲ್ಲಿ, ಅತ್ತಿತ್ತ-ತೂರಾಡುತ್ತ, ಉಟ್ಟ ಪಂಜೆಯಲ್ಲಿ ನೆಲಗುಡಿಸುತ್ತಾ ಬರುತ್ತಿದ್ದವನಿಗೆ.. ಊರ-ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋಗಿ ಬೆದರಿಸಿತ್ತು. ಕುಡಿದ-ನಷೆ ಇಳಿದು, ಜೀವ ಬಾಯಿಗೆ ಬಂದಂತಾಗಿದ್ದ ರಂಗಣ್ಣ, ಅಂದಿನಿಂದ ಸರಿ-ರಾತ್ರಿಯಲ್ಲಿ ಬಂದರೂ ಜಿಮ್ಮಿಗೆ ಹೆದರಿ ಶಿಸ್ತಿನ ಸಿಪಾಯಿಯಂತೆ ನಡೆದು ಮನೆ ಸೇರುತ್ತಿದ್ದ. ಅವನಿಗೂ ಜಿಮ್ಮಿಯ ಮೇಲೊಂದು ಕಣ್ಣಿತ್ತು. ಯಾರೋ ಅಲ್ಲದಿದ್ದರೂ. ಇವನೇ ಅದನ್ನು ಕೊಂದು ಮುಗಿಸಿ ಬಿಡುತ್ತಿದ್ದ.

ದನಕಾಯುವ ಬಸಿಯಣ್ಣ ಜಿಮ್ಮಿಯನ್ನು ಒಂದಷ್ಟು ಬಾರಿ, ಊರಾಚೆಯ ಪೊದೆಗಳಲ್ಲಿ ನೋಡಿರುವುದಾಗಿ ಹೇಳಿದನಾದರೂ, ಬದುಕಿದ್ದಿದ್ದರೆ ಕಣ್ಣಿಗೆ ಕಾಣಿಸದೆ ಇರುತ್ತಿತ್ತೆ. ? ‘ಅದ್ಯಾರ ಕೋಪಾಗ್ನಿಗೆ ಬಲಿಯಾಗಿ. , ರಣಹದ್ದುಗಳಿಗೆ ಆಹಾರವಾಗಿದೆಯೋ ’ ಎಂದುಕೊಂಡು ಸುಮ್ಮನಾದೆ.

ಒಂದಷ್ಟು ತಿಂಗಳುಗಳ ನಂತರ ಊರಿನ ರಸ್ತೆಯಲ್ಲಿ ಏಕಾ ಏಕಿ ಜಿಮ್ಮಿ ಪ್ರತ್ಯಕ್ಷನಾಗಿಬಿಟ್ಟ. ಮೈಕೈ ಭಾರಿಯಾಗಿ ತುಂಬಿಕೊಂಡು ಬೆಳ್ಳಗೆ ಮಿಂಚುತ್ತಿದ್ದ ಜಿಮ್ಮಿ. ನನ್ನನ್ನು ನೋಡುತ್ತಲೇ, ಅತಿ ವಿನಯದಿಂದಲೋ!! ಅಚ್ಚರಿಯಿಂದಲೋ!! ನುಲಿಯತೊಡಗಿದ. ‘ ಏನ್ ಗುರುಗಳೇ ಹೆಂಗಿದೀರಿ. ನನ್ನನ್ನು ನೋಡಿ!, ಸೂಪರ್ ಆಗಿದ್ದೀನಿ. ಈ ಊರಿನ ಜನ ನನ್ನನ್ನು ಏನೂ ಮಾಡ್ಕೊಳಕ್ಕಾಗ್ಲಿಲ್ಲ” ಜಿಮ್ಮಿ ರೇಗಿಸಿದಂತಾಯ್ತು.

‘ ಜಿಮ್ಮಿ ನೋಡೋ!!. ನಿನಗಿಂತ ದಪ್ಪ ಆಗಿ ಬಿಟ್ಟಿದ್ದಾನೆ ’ ಎಂದು ಅಮ್ಮ ಹೆಳಿದ್ದರಲ್ಲಿ ಅಚ್ಚರಿ ಇರಲಿಲ್ಲ. ಇನ್ನು ಇಷ್ಟು ದಿನ ಭೂಗತನಾಗಿದ್ದ ಜಿಮ್ಮಿ, ಇದ್ದಕ್ಕಿದ್ದಂತೆ ಆನೆ ಮರಿಯಂತಾಗಿ ಬಂದಿದ್ದರ ರಹಸ್ಯ ಭೇದಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಶಿವಮೊಗ್ಗ ಬೆಂಗಳೂರು ರೈಲು ಹಳಿಯು ಊರಿನ ದ್ವಾರದಲ್ಲಿಯೇ ಹಾದು ಹೋಗುತ್ತದೆ. ಗೇಟು ಇಲ್ಲದ ಈ ರೈಲು ಹಳಿಯನ್ನು ದಾಟಿಯೇ ಊರಿನ ಪ್ರವೇಶ ಮಾಡಬೇಕು. ಕೇಕೆ ಹಾಕಿಕೊಂಡು ಓಡಾಡುವ ರೈಲುಗಾಡಿಗಳಿಗೆ ಸಿಕ್ಕಿ, ಹಸು-ಎಮ್ಮೆ-ಮನುಷ್ಯಾದಿ ಜೀವಿಗಳು ಆಕಸ್ಮಿಕವಾಗಿ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದವು. ಹೀಗೆ ಸಾಯುವ ಜೀವಿಗಳ ತೊಗಲು ತಿಂದೇ ಜಿಮ್ಮಿ ದಷ್ಟ-ಪುಷ್ಟನಾಗಿದ್ದ.

ಸಸ್ಯಾಹಾರವನ್ನು ಸಂಪಾರ್ಣವಾಗಿ ತ್ಯಜಿಸಿದ್ದ ಜಿಮ್ಮಿ, ಚಿಕ್ಕಪುಟ್ಟ ಡೀಲು ಗಳಿಗೆಲ್ಲಾ ಊರಿನೊಳಗೆ ಬರುವುದನ್ನು ನಿಲ್ಲಿಸಿದ. ಅಕಸ್ಮಾತ್ ಆಹಾರದ ಕೊರತೆಯಾದಗ ಊರಿಗೆ ಬಂದು ತನ್ನ ಹಳೆ ಶೈಲಿಯಂತೆ ಕೋಳಿ ಹಿಡಿದು ಭೂಗತನಾಗುವನು. ಏನೆಲ್ಲಾ ಮಾಡಲು ಹೊಂಚು ಹಾಕಿದವರ ಎದುರೇ.. ಕೊಬ್ಬಿನಿಂದ ಬೆಳೆಯುತ್ತಿದ್ದನು ಜಿಮ್ಮಿ.

Comments

 1. Good one maga.. Nidde antakshana nange blacky nenapige barutte... dinakke 23 gante nidde madutte baddi magandu..

  ReplyDelete
 2. maga...
  yen changes maadidiya gothilla...
  but still enjoyed second time reading...

  ReplyDelete
 3. beedi naayigalanthe beediyalli otigaagi kai mugidu baruva RAJAKARANIGALA katheyanthide ee "jimmi" katthe...namma aashirvadadinda beledu konege bhoogatharaguva namma brasta rajakaranigalu... thumba olikegalive.. aadare jimmi aa rajakaranigaligintha faar better :).. yaakandre adu thindi beleda manege yenu thondare madilla ee katheyalli :) "Man is a Animal" "Man is THE CRUELEST animal" :)

  ReplyDelete
 4. maga ee kathena hattu sala odidru matte biddi biddu nagtha irtini. superb one maga, give us a sequel of this story.

  ReplyDelete
 5. Tumba chennagide maga... odutta tumba enjoy madide...

  ReplyDelete
 6. @uppi: ನಿದ್ದೆ ನಾಯಿಯ ಆಜನ್ಮ ಸಿದ್ಧ ಹಕ್ಕು .. ಮಾಡ್ಲಿ ಬಿಡು .
  @roopi : not much changes le.. its same ,,
  @darshu :ರಾಜಕಾರಣಿಗಳನ್ನು ಜಿಮ್ಮಿ ಗೆ ಹೋಲಿಸಿ , ಜಿಮ್ಮಿ ಯ ಮರ್ಯಾದೆ ಕಮ್ಮಿ ಮಾಡ್ತಿದೀರಿ.
  @NM: sequel try maadtene maga . I have to ask my mother for more details
  @manju: Thanks maga

  Once again @ALL :: thanks for ur love and regards ON jimmy ..

  ReplyDelete
 7. I just read now!!!!!!!!!
  From start to end i couldn't stop myself from laughing. Awesome story, awesome narration.


  This is what we call "MASTER PIECE"


  AS REQUESTED ABOVE BY NM, WAITING FOR THE SEQUEL.....

  ReplyDelete

Post a Comment

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು.

ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ.

ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ.
ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು.

'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು.

ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ...
'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ '
ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು.

' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು.

' ಲೋ!! ಇವ್ರು ಆಲ್ಬಂ ಕೊ…

You are Beautiful ; ಅಪ್ರತಿಮ ಸುಂದರಿಗೆ ಹೀಗೊಂದು ಕಾಂಪ್ಲಿಮೆಂಟು

ಮನಸ್ಸು ಎರಡನೇ ಸಾರಿ ಎಚ್ಚರಿಕೆ ಕೊಡ್ತು : ‘ ಬೇಡ ಮಗ!! ಕೆರ ಕಳ್ಕೊಂಡು ಹೊಡಿತಾಳೆ. ’


ನೋಡೋಣ ಬಿಡು. ಯಾರಿಗಾದ್ರೂ ಏನನ್ನಾದ್ರೂ ಹೇಳಬೇಕು ಅಂತಿದ್ರೆ, ಹೇಳಿಬಿಡಬೇಕು. ಮುಂದೆ ಒಂದಿನ ವಿಷಾದ ಇರಬಾರದು. ನಾನೇನು ಅವಳಿಗೆ ಐ ಲವ್ ಯು ಅಂತ ಹೇಳ್ತಾ ಇಲ್ವಲ್ಲಾ. ಒಳ್ಳೇದು ಕೆಟ್ಟದ್ದು ಅಂತ ನೋಡ್ತಾ ಇದ್ರೆ… ಸೋತುಪುರುಕ ಆಗಿ ಬಿಡ್ತೇನೆ’

ಹೇಳೋದಾದರೂ ಏನು…? ಏನಿಲ್ಲ, ‘ ಯು ಆರ್ ಬ್ಯೂಟಿಫುಲ್’ ಅನ್ನೋದು. ಅದಕ್ಕಿಂತ ಹೆಚ್ಚು-ಕಮ್ಮಿ ಏನ್ ಹೇಳೋದಕ್ಕೆ ಸಾಧ್ಯ..?

ತುಂಬಾ ಸುಂದರವಾಗಿ ಕಾಣ್ತಾಳೆ. ಯಾವತ್ತೋ ಒಂದಿನ ಎದುರಿಗೆ ಕಾಣಿಸಿಕೊಂಡು, ಸುಯ್ಯಂತ ಹೊರಟು ಹೋಗಿದ್ರೆ, ‘ಅಬ್ಬಾ!! ಏನ್ ಹುಡ್ಗಿ’ ಅಂತ ಅಂದು ಸುಮ್ಮನಾಗಿ ಬಿಡಬಹುದಿತ್ತು. ತೆರೆದ ಬಾಯಿ ಮುಚ್ಚೊದರೊಳಗಾಗಿ ಅವಳ ನೆನಪುಗಳು ಕಲೆಯುತ್ತಿದ್ದವೇನೊ. ಆದರೆ ಅವಳು ದಿನಾ ನಾಲಕ್ಕು ವರೆಗೆ ಸರಿಯಾಗಿ, ಕೆಫೆಟೇರಿಯಾದಲ್ಲಿ ಕಾಣಿಸಿಕೊಳ್ತಾಳೆ. ಅಲ್ಲಿ ಇಬ್ಬರು ಡುಮ್ಮನೆ ಬಾಡಿ-ಗಾರ್ಡ್ ಗಳು ಅವಳಿಗೋಸ್ಕರ ಕಾಯ್ತಾ ಇರ್ತಾರೆ. ಆ ಅಂಥವಳು ಕಾಫಿ ಕುಡಿಯೋವರೆಗೂ, ‘ಒನ್ ಓ ಕ್ಲಾಕ್ ‘ ದಿಕ್ಕಿಗೆ ಚೇರ್ ಜೋಡಿಸಿಕೊಂಡು ಕೂತು, ಅವಳನ್ನ ನೋಡ್ತೇನೆ. ಖುಷಿ ಅಂತೂ ಆಗತ್ತೆ. ತಾನು ಇಷ್ಟು ಸುಂದರವಾಗಿರೋದು ಗೊತ್ತಿರಬಹುದು. ಆದರೆ ಅದನ್ನ, ಅವಳಿಗೆ ಅಷ್ಟೇ ಸುಂದರವಾಗಿ ಯಾರೂ ಹೇಳಿರಬಾರದು. ಹಂಗೆ ಹೇಳಬೇಕು. ಹೇಳಲಿಲ್ಲ ಅಂದ್ರೆ!! ಹೇಳಬಹುದಿತ್ತಲ್ಲಾ ಅನ್ನೋ ಗುಂಗು ಇದ್ದುಬಿಡತ್ತೆ.

ಸರಿ, ಹೇಳೋದಾದ್ರೂ ಏನು!! ಮತ್ತದ…

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು.

ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ.

ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ.

ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿಗರು…

ಒ೦ದು ಪ್ರೀತಿಯ ಕಥೆ

“ ಅಮ್ಮಾ!! ಅವಳ ಹುಟ್ಟುಹಬ್ಬಕ್ಕಾದರೆ ಪಾಯಸ ಮಾಡ್ತೀಯ. ಆದರೆ ಪ್ರತಿ ಸಾರಿ ನನ್ನ
ಹುಟ್ಟುಹಬ್ಬಕ್ಕಾದರೆ ಯಾಕಮ್ಮಾ… ? ಏನೂ ಮಾಡಲ್ಲ. ?. ನೋಡು!! ಈ ಸಾರಿ ನನ್ನ
ಹುಟ್ಟುಹಬ್ಬಕ್ಕೆ ಹೋಳಿಗೆ-ಊಟ ಮಾಡ್ಬೇಕು. ತಿಳೀತಾ. !!”.

“ ಸಾರಿ!! ಕಂದ. ತಪ್ಪಾಯ್ತು. ನಿನ್ನಾಣೆ ಮರೆಯೊಲ್ಲ. ಈ ಬಾರಿ ನಿನ್ನ ಹುಟ್ಟುಹಬ್ಬದ ದಿನ
ಹೋಳಿಗೆ ಊಟ ಮಾಡೋಣ, ಸರೀನಾ. ಅಡಿಕೆ ಕೊಯ್ಲು ಇರೋ ಟೈಮಲ್ಲೇ ನಿನ್ನ ಹುಟ್ಟುಹಬ್ಬ
ಬರುತ್ತಲ್ಲೋ ಮಗನೆ. ನಮ್ಮ ಕೆಲಸಗಳ ಮಧ್ಯೆ ಅದು ಬಂದದ್ದೂ; ಹೋದದ್ದು ಗೊತ್ತ್ ಇಲ್ಲ.
ಆದ್ರೆ ಈ ಸಾರಿ ಎಷ್ಟೇ. ಕಷ್ಟ ಆದರು. ಹೋಳಿಗೆ ಊಟ ಮಾಡೊಣ. ”

‘ ಆಯ್ತಮ್ಮಾ. ಸರಿ!! ’ ಎಂದನು ಚಿರಂಜೀವಿ. ಹುಟ್ಟುಹಬ್ಬಕ್ಕೆ ಹೋಳಿಗೆ ಅಡಿಗೆ ಮಾಡಬಾರದು
ಅಂತಲ್ಲ. ಆದರೆ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವಂತಹ ನಾಜೂಕು ಜೀವನ ಪದ್ಧತಿಯನ್ನು
ಅವರು ರೂಢಿಸಿಕೊಂಡಿರಲಿಲ್ಲ.

October 7, 2010 ‘ ಹೋಳಿಗೆ ಬೇಕು ಅಂದಿದ್ದ ಮಗು, ಇಷ್ಟು ಹೊತ್ತಾದರು ಊಟಕ್ಕೆ
ಯಾಕೆ ಬರಲಿಲ್ಲ.’ ಅಮ್ಮ ಹೋಳಿಗೆ ಅಡುಗೆ ಮಾಡಿಟ್ಟು ಮಗನ ಬರುವಿಗೆ ಕಾಯುತ್ತಾ,
ಗೊಣಗುತ್ತಾ ಕುಳಿತಿದ್ದಾಳೆ. ರಾತ್ರಿ ಹೊತ್ತು ಗೆಳೆಯರ ಮನೆಗೆ ಹೋಗಿ, ಹರಟುತ್ತಾ
ಕೂರುವುದು ಅವನ ಅಭ್ಯಾಸ. ಬಾಗಿಲ ಕಡೆಗೆ ನೋಡುತ್ತಾ “ ಪಾಪ ಮಗು!! ಹಗಲೆಲ್ಲಾ ಮನೇಲಿ,
ಒಬ್ಬನೇ ಕೂತು ಸಾಕಾಗಿರುತ್ತೆ. ಆಸರ-ಬೇಸರ ಕಳೆಯಲು ರಾತ್ರಿ ಹೊತ್ತು, ಒಂದಿಷ್ಟು
ಮಾತಾಡಿಕೊಂಡು ಬರುತ್ತೆ. ಸ್ಕೂಲಿಗೆ ಹೋಗುವ ಹುಡುಗರು ರಾತ್ರಿ ಹೊತ್ತು ಬಿಟ್…

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.) 


' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. '

ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ. 

ಬಹುಷಃ ಹಳೇ ಸಿನಿಮಾಗಳಲ್ಲಿ ನೋಡಿ…

ಒಂದು ಅಪಘಾತದ ಸುತ್ತ

ಇಂಜಿನಿಯರಿಂಗ್ ಅಂತಿಮ ವರ್ಷ. ಶೈಲು, ರವಿ ಹೊರತಾಗಿ ನಮ್ಮಲ್ಲಿ( ಗುಂಪಿನ ಹೆಸರು ಬಿ ಬಿ ಹುಡುಗರು) ಉಳಿದೋರಿಗೆಲ್ಲಾ ಕೆಲಸ ಸಿಕ್ಕಿತ್ತು. ಶೈಲುಗೆ, ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿ ಗೊತ್ತಿತ್ತು. ಸೋ ಅದರ ಬಗ್ಗೆ ವಿಷಾಧ ಇರಲಿಲ್ಲ. ಇನ್ನು ರವಿ:

ಒಂದು ಕೆಲಸದ ಅವಶ್ಯಕತೆ, ಎಲ್ಲರಿಗಿಂತಲು ಅವನಿಗೆ ಜಾಸ್ತಿ ಇತ್ತು. ಆ ಅವಶ್ಯಕತೆ ಅವನಿಗೆ ಮಾತ್ರ ಅಲ್ಲ, ಖುಷ್ ಖುಷಿಯಾಗಿದ್ದ ನಮ್ಮೆಲ್ಲರಿಗೂ ಇತ್ತು. ಸುಮಾರು ಕಂಪನಿಗಳಿಗೆ ಎಡತಾಕಿದರೂ, ಒಂದಕ್ಕೂ ಆಯ್ಕೆ ಆಗಲಿಲ್ಲ. ಅಭಿ, ಜೋಬಿ, ಶೇಕ್ ನಂತ ಗಮಾಡ್ ಗಳಿಗೇ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಸಿಕ್ಕಿರೋವಾಗ, ಧೈತ್ಯ ಪ್ರತಿಭೆ ‘ರವಿ’ ಗೆಕೆಲಸ ಸಿಗದೇ ಇದ್ದದ್ದು, ನಮಗೆಲ್ಲಾ ಖೇದಕರ ಅನ್ನಿಸುತ್ತಿತ್ತು.

ರವಿಗೆ ಕೆಲಸ ಸಿಗದೇ ಇದ್ದದ್ದಕ್ಕೆ, ಕಾರಣಗಳೂ ಇದ್ದವು. ಲಕ್ ಇರಲಿಲ್ಲ, ಇಂಗ್ಲೀಷ್ ಸಮಸ್ಯೆ. ಕೋಡಿಂಗ್ ಬಗ್ಗೆ ಆಸಕ್ತಿ ಇಲ್ಲದೇ ಇರೋದು. ಆದರೂ ಜೀವನೋಪಾಯಕ್ಕೆ ಒಂದು ಕೆಲಸದ ಅನಿವಾರ್ಯತೆ ಇತ್ತು. ಪ್ರತಿ ಕಂಪನಿ ಮಿಸ್ ಆದಾಗಲೂ. ‘ ನಿನಗೋಸ್ಕರ ಯಾವುದೋ ದೊಡ್ಡದು, ಕಾಯ್ತಾ ಇರಬೇಕು ಬಿಡು, ಮಗ ’ ಅಂತ ನಾವು, ಸಮಾಧಾನ ಮಾಡೋದಕ್ಕೆ ಹೋದರೆ, ‘ನನಗೆ, ನನ್ನ ಬಗ್ಗೆ ಬೇಜಾರಿಲ್ಲ ಮಗ. ಆದರೆ ಒಂದು ಒಳ್ಳೆ ಕಂಪನಿ, ಗ್ಲೋಬಲ್ ಟಾಪ್ ಟೆನ್ ಒಳಗೆ ಬರೋದನ್ನ, ಜಸ್ಟು ಮಿಸ್ ಮಾಡಿಕೊಂಡು ಬಿಡ್ತು. ‘ಎನ್ನುವನು. ‘ಎಲಾ ಬಡ್ಡಿಮಗನೆ ’ ಅಂದುಕೊಂಡುಸುಮ್ಮನಾಗುತ್ತಿದ್ದೆವು.

ಇಂತಹ ಸಂದಿಗ್ಧ, ಸುಸಂದರ್ಭದಲ್ಲಿ ಬಿ ಇ …

ಬಿಸಿಲುಕುದುರಿ-ಸವಾರಿ ; ಚೆನ್ನೈ ಬಸ್ ಪಯಣದ ಒಂದು ಅನುಭವ

ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು
MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ
ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ
ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ
ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ
ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ.

ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ,
‌ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ
ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್
ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ
ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು
ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು
ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು.
ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ
ಹಾಕಿಸಿಕೊಂಡವರಿರಬಹುದು ಎಂದು ಊಹಿಸಬಹುದಾಗಿ…

ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು.
ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು.
ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!!
ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ.
ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ.
'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ.

' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ.

'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು.

'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ.

ಇಬ್ಬರೂ ಎದ್ದು ಹೊರಟರು.

ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು
' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' .

'ಯಾಕೆ..? ನಾನೇನ್ ಮಾಡಿದೆ..?' ಎಂದ.

'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್ಕೆ!!. ?…

ತಡಿಯ೦ಡಮೋಳ್-ಗೆ ಸಾಗಸಮಯ ಯಾತ್ರೆ!!!

ತಡಿಯಂಡಮೋಳ್ ಮಡಿಕೇರಿಯ ಅತಿ ಎತ್ತರದ ಶಿಖರ. ಚಳಿಗಾಲದಲ್ಲಿ ಮನೆಯೊಳಗೆ ಬೆಚ್ಚಗೆ
ಮಲಗುವುದು ಬಿಟ್ಟು, ತಡಿಯಂಡಮೋಳ್ ಬೆಟ್ಟವನ್ನು ಹತ್ತಿ, ಟೆಂಟ್ ಹಾಕಿ, ಬೆಂಕಿ
ಹಚ್ಚಿಟ್ಟು, ರಾತ್ರಿಯೆಲ್ಲಾ ತೂಕಡಿಸಿದೆವು. ಈ ಸೌಭಾಗ್ಯಕ್ಕೆ ಅಷ್ಟು ದೂರ
ಹೋಗಬೇಕಿತ್ತಾ. ? ಗೊತ್ತಿಲ್ಲ.

ನಾವು ಏಳು ಜನ ಆಪ್ತಮಿತ್ರರು ' ಅಬಿ-ಜಾಬಿ-ರವಿ-ರೂಪಿ-ಗಜ-ಷೇಕು ಮತ್ತು ನಾನು '
ಚಾರಣಕ್ಕೆಂದು ಹೊರಟವರು. ಇವರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವ ದರ್ಶನವನ್ನು ಮಾಡಿಸುವುದು,
ಸ್ಥಳ ಪುರಾಣವನ್ನು ವಿವರಿಸುವುದು, ಮುಖಸ್ತುತಿ ಇತ್ಯಾದಿ ಇತ್ಯಾದಿಗಳನ್ನು ಮಾಡುವುದು ಈ
ಬರಹದ ಉದ್ದೇಶವಲ್ಲ. ಮುಂದುವರೆಯೋಣ.

ಒಂದು ಸುಂದರ ಸಂಜೆಯಂದು ಬೆಂಗಳೂರಿನಿಂದ ಒಟ್ಟಾಗಿ ಹೊರಟವರು, ಮಧ್ಯ-ರಾತ್ರಿ ಎರಡರ
ಹೊತ್ತಿಗೆ ಮೈಸೂರು ಮಾರ್ಗವಾಗಿ ಕುಶಾಲನಗರ ತಲುಪಿದೆವು. ಉಳಿದಿದ್ದ ಅಲ್ಪ ರಾತ್ರಿಯನ್ನು
ಜಾಬಿಯ ಮನೆಯಲ್ಲಿ ಕಳೆದು, ಬೆಳಗಿನ ಜಾವ ಚಾರಣಕ್ಕೆಂದು ಸಿದ್ಧರಾಗಿ ನಿಂತೆವು. ನಮ್ಮಂತಹ
ಅತಿಥಿಗಳ ಸೇವೆ ಮಾಡುವ ಪುಣ್ಯ ಜಾಬಿಗೆ ಲಭಿಸಿತ್ತು. ಆ ಪುಣ್ಯಕಾರ್ಯದಿಂದ ಜಾಬಿಯನ್ನು
ವಂಚಿತನನ್ನಾಗಿ ಮಾಡಬಾರದೆಂಬ ಉದ್ದೇಶದಿಂದ, ಅವನ ಅತಿಥಿ ಸತ್ಕಾರ್ಯವನ್ನೂ
ಸ್ವೀಕರಿಸಿದೆವು. ನಂತರ ಒಂದು ಕಾರು ಮತ್ತು ಒಂದು ಬೈಕಿನಲ್ಲಿ ನಮ್ಮ ಪ್ರಯಾಣ
ಮಡಿಕೇರಿಯತ್ತ ಸಾಗಿತು. ಪರ್ವತ ನಗರ ಮಡಿಕೇರಿಯನ್ನು ಸುತ್ತಿಕೊಂಡು ನಾಪೋಕ್ಲು ಎಂಬ ಊರಿನ
ಮಾರ್ಗವಾಗಿ ಕಕ್ಕಬ್ಬೆಯನ್ನು ತಲುಪಿದಾಗ ಮಧ್ಯಾಹ್ನ 12.

ಕರ್ನಾಟಕ…

ಡ್ರೈವಿಂಗ್ ಸ್ಕೂಲ್

ಸೆಕೆಂಡ್ ಹ್ಯಾಂಡ್ ಕಾರು ಕೊಂಡುಕೊಂಡ ಮೇಲೆ ಡ್ರೈವಿಂಗ್ ಸ್ಕೂಲಿಗೆ ಸೇರಿದೆ.

ಡ್ರೈವಿಂಗ್ ಹೇಳಿಕೊಡುವವನು ಕೊಂಚ ವಯಸ್ಸಾದ ವ್ಯಕ್ತಿ.
ಡ್ರೈವಿಂಗ್ ಜೊತೆಗೆ!! ತನ್ನ ಡ್ರೈವಿಂಗ್ ಜೀವನದ ಸಾಹಸಗಥೆಗಳನ್ನೆಲ್ಲಾ ಹೇಳುತ್ತಿದ್ದರು.
ಆ ಸಾಹಸಗಾಥೆಗಳ ಸಾಲಿನಲ್ಲಿ ..
' ನೈಜವಾಗಿ ಕಂಡಂತಹಾ ಅಪಘಾತಗಳ ಭಯಾನಕ ವರ್ಣನೆಗಳೂ' ಸೇರಿರುತ್ತಿದ್ದವು.

"ಹೈವೇನಲ್ಲಿ ನೂರ್ ಕಿಲೋಮೀಟರು ಸ್ಪೀಡಲ್ಲಿ ಗಾಡಿ ಬರ್ತಾ ಇದೆ.
ಇದಕ್ಕಿದ್ದಂಗೆ ಫ್ರೆಂಟ್ ದು ರೈಟ್ ಟೈರು ಬರ್ಸ್ಟ್ ಆಗಿದೆ.
ಸ್ಟೇರಿಂಗು ಅದೇ ಫೋರ್ಸಲ್ಲಿ ಕ್ಲಾಕ್ ವೈಸ್ ತಿರುಗಿ ಬಿಟೈತೆ.
ಸ್ಟೇರಿಂಗ್ ಒಳಗೆ ಕೈ ಜಾರಿದ್ದರಿಂದ, ಕೈ ಲಟಕ್ ಅಂತ ಪೀಸಾಗಿದೆ.
ಗಾಡಿ ಸೀದಾ ಹೋಗಿ!! ಡಿವೈಡರ್ ಗೆ ಬಡಿದ ತಕ್ಷಣ...,
ಮಂಡಿ ಕೆಳಗೆ ಕಾಲು ಇದಿಯಲ್ಲಾ.. ಅವು ಹಂಗೇ ಪೀಸ್ ಪೀಸ್ "
ಎಲ್ಲದಕ್ಕೂ ಹೂ ಗುಡುತ್ತಿದ್ದವನು ...

" ಏನ್ ಸಾರ್ ಬರಿ ಕೈ - ಕಾಲು ಮುರ್ದೋದ ಕಥೆಗಳೇ ಹೇಳ್ತೀರಾ .. " ಅಂದ್ರೆ

ನನ್ನ ಪ್ರಶ್ನೆಯನ್ನು ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡು...

" ಬರಿ ಕೈ ಕಾಲು ಮುರ್ದಿರೋದಲ್ಲಾ,
ನನ್ನ ಸರ್ವೀಸ್ ನಲ್ಲಿ, ತಲೆಗಳೇ ಜಜ್ಜಿ ಹೋಗಿರೋ ಘಟನೆಗಳನ್ನ ನೋಡಿದ್ದೇನೆ.
ಹೋಗ್ತಾ ಹೋಗ್ತಾ.. ಸ್ಟೇರಿಂಗ್ ರಾಡು ಕಟ್ಟಾಗಿ..,
ಕಂಟ್ರೋಲ್ ಸಿಗದೇ ಪಲ್ಟಿ ಹೊಡೆದದ್ದೂ ಇವೆ, ಗಾಡಿಗಳು." ಎಂದು ಶುರುವಚ್ಚಿಕೊಂಡರು.

" ಡ್ರೈವಿಂಗ್ ತುಂಬಾ ಕೆಟ್ಟ ಪ್ರೊಫೆಷ…