ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು
ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್
ಕೆ ಜಿ. ಮರಿ ಬ್ರದರ್ಸ್. ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ
ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು'
ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ
ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ
ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ
ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು...... ಬಿಲ ತೋಡುವುದರ ವರೆಗೆ
ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು
ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ
ಬಾಧೆ.
' ಏನ್ರೋ ಮಾಡ್ತಿದ್ದೀರ ಅಲ್ಲಿ. ?' ಕೂಗಿದೆ. ' ಹಾ ಏನೋ ಮಾಡ್ತಿದೀವಿ. ನಿಂಗೇನು?? '
ಎಕೋ ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ ತಮ್ಮರಿಂದ ಬಂದವು. ಹತ್ತಿರ ಹೋಗಿ ನೋಡಿದೆ.
ಕಿರಾತಕರು ತಾತನ ಶೇವಿಂಗ್ ಬ್ಲೇಡು ಕದ್ದು ತಂದು ಹುಲ್ಲು
ಕಟಾವು ಮಾಡುತ್ತಿದ್ದರು.
'ಲೇ ಉಗ್ರಗಾಮಿಗಳ, ಕೊಡ್ರೋ ಬ್ಲೇಡು. ಡೇಂಜರ್ ಅದು. ಕೈ ಕುಯ್ದುಬಿಡತ್ತೆ. " ಎಂದೆ.
ಅಷ್ಟು ಸುಲಭವಾಗಿ ಮಾತು ಕೇಳುವ ಜಾಯಮಾನ ಅವರದ್ದಲ್ಲ. ಕೊಡುವುದಿಲ್ಲವೆಂದು ಜಿದ್ದು
ಮಾಡಿದರು. ಚಿಕ್ಕವರಿದ್ದಾಗ ನಟರಾಜ ಪೆನ್ಸಿಲ್ ಅನ್ನು ಬ್ಲೇಡಿನಲ್ಲಿ ಕೆತ್ತುವಾಗ ಕೈ
ಹೆಚ್ಚಿಕೊಳ್ಳದವರಿಲ್ಲ. ಅವರು ಬ್ಲೇಡನ್ನು ಉಪಯೋಗಿಸುತ್ತಿದ್ದ ರೀತಿಯೇ ಗಾಬರಿ
ತರಿಸುವಂತಿತ್ತು. ಏನಾದರೂ ಹೆಚ್ಚು-ಕಮ್ಮಿ ಮಾಡಿಕೊಂಡಾರು ಎಂದು ಒತ್ತಾಯಪೂರ್ವಕವಾಗಿ
ಕಸಿದುಕೊಳ್ಳಲು ಹೋದೆ. ಹಿಂದೆ ಸರಿದು ಕಳ್ಳರು ಚಾಕು ತೋರಿಸುವ ರೀತಿಯಲ್ಲಿ ಪೋಜು ಕೊಟ್ಟು
ನನ್ನನ್ನೇ ಹೆದರಿಸಿದರು. ನಿಮ್ಮ ಅಮ್ಮನಿಗೆ ದೂರಿಡುತ್ತೇನೆ ಎಂದು ಹೆದರಿಸಿದರೂ ಮಾತು
ಕೇಳಲಿಲ್ಲ. ಮಕ್ಕಳ ಬಳಿ ವ್ಯವಹರಿಸುವ ಕನ್ನಿಂಗ್ ಚಾಕಚಕ್ಯತೆಯು ನನ್ನಲ್ಲಿರಲಿಲ್ಲ.
ತೀರ್ಥ ಶಂಖದಿಂದಲೇ ಬರಬೇಕೆಂದು ನಿರ್ಧರಿಸಿ ಅವರಮ್ಮನ ಬಳಿ ಬಂದು ಈ ಕುಲಪುತ್ರರ
ಪ್ರತಾಪವನ್ನು ಹೇಳಿದೆ.
ಅದಕ್ಕವಳು ' ಕುಯ್ಕಳಿ ಸುಮ್ನಿರು. ಆವಾಗ ಗೊತ್ತಾಗುತ್ತೆ, ಇನ್ನೋಂದು ಸಾರಿ ಬಿಲೇಡು
ಮುಟ್ಟಲ್ಲ. ' ಎಂದಳು. ಆಹಾ ನಿರ್ದಯಿ ಮಾತೃಶ್ರಿ. 'ಯಥಾ ಮಾತಾ ತಥಾ ಸುತ '; 'ಚೋರ್
ಅಮ್ಮನ, ಚಂಡಾಲ ಮಕ್ಕಳು.'
'ನೀನುಂಟು, ನಿನ್ನ ಪೋಕಿರಿ ಮಕ್ಕಳುಂಟು ' ಎಂದು ನಿಂದಿಸಿ ಅಲ್ಲಿಂದ ಹೊರಟು ಹೋದೆ.
---
ಮನೆಗೆ ಮರಳಿದಾಗ ಆಕಾಶ್ ಅಮ್ಮನ ತೊಡೆಯ ಮೇಲೆ ಕುಳಿತಿದ್ದ. ಅವಳು ಆಕುವಿನ ಬೆರಳನ್ನು
ಉಫ್-ಫ್ ಎಂದು ಊದುತ್ತಾ ಸುಧಾರಿಸುತ್ತಿದ್ದಳು. ಊಹಿಸಿದಂತೆಯೇ ಕ್ಷೌರಾಸ್ತ್ರ ಅವನ ತೋರು
ಬೆರಳು ಗೀರಿ ಗಾಯಗೊಳಿಸಿತ್ತು. ಇವನು ಹುಲ್ಲಿನ ತುದಿಯನ್ನು ಹಿಡಿದು ಕೊಂಡಿದ್ದನಂತೆ.
ತಾನು ನಂಬಿದ್ದ ಅಗ್ರಜಾ ಹುಲ್ಲು ಕತ್ತರಿಸುವ ಹುಮ್ಮಸ್ಸಿನಲ್ಲಿ, ಬೆರಳನ್ನೂ ಸೇರಿಸಿ
ಗೀರಿಬಿಟ್ಟು , ಯಾರಿಗೂ ಕಾಣದಂತೆ ಭೂಗತನಾಗಿದ್ದ. ಈ ಪೆದ್ದ ಆಕಾಶ್ ಅಣ್ಣನಿಂದ ಬೆರಳು
ಗೀಚಿಸಿಕೊಂಡು ಬಂದು, ಅಮ್ಮನ ಮುಂದೆ ಒಂದೇ ಸಮನೆ ಅಳುತ್ತಿರುವನು. ಕಣ್ಣೀರು
ಧಾರಾಕಾರವಾಗಿ ಹರಿದು, ಕಣ್ಣುಗಳು ಊದಿಕೊಂಡಿದ್ದವು.
ಬೆರಳಿಗೆ ಹರಿಶಿಣ ಪುಡಿಯನ್ನು ಮೆತ್ತಿ, ಅಭಿಗೆ ಹೊಡೆಯುವ ವಿಧಾನವನ್ನು
ಬಣ್ಣಿಸುತ್ತಿದ್ದಳು ಮಾತೆ. ತನಗಾಗುತ್ತಿರುವ ನೋವಿಗಿಂತ ಹೆಚ್ಚಾಗಿ, ಅಭಿಯನ್ನು ಹಿಡಿದು
ಶಿಕ್ಷಿಸುವ ಬಗೆಯನ್ನು ಕೇಳುವುದು ಆಕುವಿಗೆ ಹಿತಕರವಾಗಿತ್ತು. ಅಮ್ಮನಿಗೆ, ಅಮ್ಮನೇ
ಸಾಟಿ. ಅಮ್ಮನ ಸುಳ್ಳುಗಳನ್ನು ನಂಬದ ಮುಗ್ಧ ಮಕ್ಕಳು ಈ ಭೂಮಿ ಮೇಲಿರಲು ಸಾಧ್ಯವೇ ಇಲ್ಲ.
'ಅಲ್ವೇ ಆಗ ಹೇಳಿದಾಗಲೇ, ಬ್ಲೇಡು ತಗೋಬಹುದಿತ್ತಲ್ಲಾ. ?' ಎಂದೆ.
'ಮಕ್ಕಳ ಕೈಗೆ ಬ್ಲೇಡು ಸಿಗೋ ಹಾಗೆ ಇಡೋರಿಗೆ ಬುದ್ಧಿ ಇಲ್ಲ. ಅವರೇ ಮುದ್ದು ಮಾಡಿ ನನ್ನ
ಮಗನನ್ನು ಹಾಳು ಮಾಡಿರೋದು' ಮಗನ ನೋವಿಗೆ ಪ್ರತೀಕಾರವಾಗಿ ನುಡಿಯುತ್ತಾ, ತನ್ನ
ಹೊಣೆಗೇಡಿತನವನ್ನು ಪ್ರದರ್ಶಿಸಿದಳು.
' ದೊಡ್ಡವನ ಗಲಾಟೆ ಜಾಸ್ತಿಯಾಗಿದೆ. ಸ್ಕೂಲಲ್ಲಿ ಕೂಡ ಹಿಂಗೇ ಕ್ಯಾತೆ ಮಾಡ್ತಾನಂತೆ.
ಹೋಮ್-ವರ್ಕು ಅಂತ ಕೊಟ್ರೆ, ಪೇಪರ್ ದೋಣಿ ಮಾಡಿ ನೀರಲ್ಲಿ ಬಿಡ್ತಾನಂತೆ. ಓದು ಅಂತ
ಕೂರಿಸಿದ್ರೆ, ಅವರ ತಾತನ ಜೊತೆ ಮೀನು ಹಿಡಿಯಕ್ಕೆ ಕೆರೆ-ಕಟ್ಟೆ ಕಡೆಗೆ ಹೋಗ್ತಾನೆ.
ಬಿಲದೊಳಗಿರುವ ಜೀವದ ಏಡಿಗಳನ್ನ ಹಿಡಿದು ಕೊಂಡಿ ಮುರಿಯುವಷ್ಟು ಮುಂದುವರೆದಿದ್ದಾನೆ.'
ಒಂದೇ ಸಮನೆ ಮಗನ ಅವಗುಣಗಾನ ಮಾಡುತ್ತಿದ್ದಳು. ಅವಳು ಹೇಳಿದ್ದರಲ್ಲಿ ಅತಿಶಯೋಕ್ತಿಯೇನು
ಇರಲಿಲ್ಲ. ಅವನು ಮಾವಿನ ಮರವನ್ನು ಅಪ್ಪಿಕೊಂಡು ಮೇಲೇರುವಾಗ, ಏಳೆಕಾಲುಗಳಲ್ಲಿನ
ಚೈತನ್ಯವನ್ನು ಕಂಡು ಬೆರಗಾಗದವರಿಲ್ಲ. ತಾತನ ಜೊತೆ ಹಸು ಮೈ ತೊಳೆಸಲು, ಕಾಲುವೆಗೆ
ಹೋಗುತ್ತಿದ್ದವನು ಈಜುವ ಕಲೆಯನ್ನು ತಾತನಿಂದ ಸಹಜವಾಗಿಯೇ ಕಲಿತ. ಹ್ಯಾಗೆ ಅಂದ್ರೆ ನಾವು
ಊಟ ಮಾಡೋದು, ನಿದ್ದೆ ಮಾಡೋದು ಕಲಿತಿದ್ದೇವಲ್ಲ ಹಾಗೆ.
'ಅಮ್ಮಾ ಉರಿ -ಉರಿ ' ಎಂದು ಆಕಾಶ್ ಚೀರಿಕೊಂಡಾಗ ಮಾತು ನಿಲ್ಲಿಸಿ, ಉಫ್-ಫ್ ಎಂದು ಊದ
ಹತ್ತಿದಳು. 'ಅಣ್ಣನ ಜೊತೆ ತಮ್ಮನೂ ಸೇರ್ಕೊಂಡಿದಾನೆ. ಹೀಗೆ ಆದ್ರೆ ಇವ್ರು ಮುಂದೆ
ಓದ್ತಾರಾ. ನೀನೇ ಹೇಳು ಇವರು ಓದದೆ-ಬರೆಯದೇ ಹಿಂಗೇ ತಾತನ ಜೊತೆ ಹೊಲ-ತೋಟ
ಸುತ್ತಾಡಿಕೊಂಡು ಇದ್ರೆ, ಭವಿಷ್ಯದ ಕಥೆ ಏನು. ? ಈ ಹೊಲ ಮನೆ ಕೆಲಸ ನಮ್ಮ ತಲೆಮಾರಿಗೆ
ಮುಗಿದುಬಿಡಬೇಕು. ನಮ್ಮಪ್ಪ, ಇವರಪ್ಪ ವ್ಯವಸಾಯ ಮಾಡಿ ಹಾಳಾಗಿರೋದೆ ಸಾಕು. ಇವರಾದ್ರು
ಡಾಕ್ಟ್ರು - ಇಂಜಿನಿಯರು ಆಗಿ ದೊಡ್ಡ ಮನುಷ್ಯರಾಗಲಿ '
ಹತ್ತನೆ ಕ್ಲಾಸು ಫೇಲಾದವರೆಲ್ಲಾ ಊರಲ್ಲೇ ವ್ಯವಸಾಯ ಮಾಡಿಕೊಂಡು, ದನ
ಮೇಯಿಸಿಕೊಂಡು ಇರ್ತಾರೆ. ಅದೇ ಹತ್ತನೆ ಕ್ಲಾಸು ಒಂದೇ ಏಟಿಗೆ ಪಾಸಾದರೆ ಮುಗೀತು ಕಥೆ.
ದೊಡ್ಡದು... ಚಿಕ್ಕದು ಅಂತಿರೋದನ್ನೆಲ್ಲಾ ಓದಿ, ಪಟ್ಟಣ ಸೇರಿಕೊಂಡು ಅಧಿಕೃತ
ನೌಕರಿ ಹಿಡಿದು ಸೆಟಲ್ಲು. ಕೇವಲ ಜಾತ್ರೆಗಳಿಗೆ, ಹಬ್ಬ-ಹುಣ್ಣಿಮೆಗಳಿಗೆ ಊರಿಗೆ ಮುಖ
ತೋರಿಸಿ ಹೋಗಲು ಬರುವ ಈ ಎನ್-ಆರ್-ವಿ ಗಳು (ನಾನ್ ರೆಸಿಡೆಂಟ್ ವಿಲೇಜರ್ಸ್) ಅಥವಾ (ನಾಟ್
ರಿಯಲಿ ವಿಲೇಜರ್ಸ್) ಇತರೆ ಸಂತಾನ ಭಾಗ್ಯ ಪಡೆದ ದಂಪತಿಗಳಿಗೆಲ್ಲಾ ಸ್ಪೂರ್ಥಿದಾತರು.
ಒಂಥರಾ ಟ್ರೆಂಡ್ ಸೆಟ್ಟರ್ ಅನ್ನಬಹುದು. ' ನೋಡಿ ಮಕ್ಕಳಾ ನೀವೂ ಕೂಡ ದೊಡ್ಡವರಾದ ಮೇಲೆ
ಅವರಂತೆ ಆಗಬೇಕು ' ಎಂದು ಅಪ್ಪ ಅಮ್ಮ ಅಜ್ಜಿ ತಾತಗಳು ಉಪದೇಶಿಸುವರು.
' ಈ ಸುಡುಗಾಡು ಹಳ್ಳೀಲಿದ್ರೆ, ಇವ್ರು ಓದಲ್ಲ. ಮಠದ ಸ್ಕೂಲಿಗೆ ಸೇರಿಸಿಬುಡ್ತೀನಿ.
ಅಲ್ಲಿ ಮಕ್ಕಳು ಶಿಸ್ತಾಗಿ ಬೆಳೀತಾರೆ. ವರ್ಷಕ್ಕೆ ಇಪ್ಪತ್ತೈದು ಸಾವಿರ ಅಂತೆ.
ಸ್ವಾಮಿಗೋಳು ಒಬ್ಬೊಬ್ಬರ ಬಗ್ಗೇನು ನಿಗಾ ವಹಿಸಿ ನೋಡ್ಕೋತಾರೆ. ಬೇಸಿಗೆ ರಜಕ್ಕೂ ಮನೆಗೆ
ಬರೋ ಹಂಗಿಲ್ಲ. ಚಿತ್ರ ಬರೆಯೋದು, ಡಾನ್ಸು, ಕಲೆ ಅದೂ-ಇದು ಅಂತ ಶಿಬಿರಗಳನ್ನ ಮಾಡಿ
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡ್ತಾರಂತೆ. ಓದೋ ಟೈಮಲ್ಲಿ ಓದಿ ಬಿಡಬೇಕಪ್ಪ ಏನಂತೀಯ.
? '
ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು
ಸ್ವಾಮೀಜಿಗೆ ಔಟ್-ಸೋರ್ಸಿಂಗ್ ಕೊಡುತ್ತಿರುವಳು. ಆದರೂ ನನ್ನ ಅಳಿಯಂದಿರ ಬಗ್ಗೆ ಅತೀವ
ಆತ್ಮವಿಶ್ವಾಸವಿದೆ. ಅವರು ಮಠದ ಸ್ಕೂಲಿನಲ್ಲಿ ಹೆಚ್ಚು ದಿನ ನಿಲ್ಲಲಾರರು. ಸ್ವಾಮೀಜಿ
ಮತ್ತವರ ಗ್ಯಾಂಗಿಗೆ ಮಿಲಿಟರಿ ಪ್ರೊಟೆಕ್ಷನ್ ಬೇಕಾದೀತು. ಅವರ ಕಾವಿ ಬಟ್ಟೆಗೆ ಪಟಾಕಿ
ಕಟ್ಟಿ ಸಿಡಿಸಿಬಿಡುವಷ್ಟು ಶೂರರು.
' ದೊಡ್ಡ ದೊಡ್ಡ ಓದುಗಳಿಗೆ, ಮನೆ ಬಿಟ್ಟು ಹೊರಗೆ ಉಳಿಯುವುದು ಅನಿವಾರ್ಯ. ಈಗಲೇ ಯಾಕೆ
ಮನೆಯಿಂದ ದೂರ ಹಾಕ್ತೀಯ. ಮುಂದೆ ನೀನು ಬೇಕು ಅಂದ್ರೂ, ಅವರು ನಿಂಗ್ ಸಿಗಲ್ಲ. `ಅಯ್ಯೋ
ನನ್ನ ಮಕ್ಕಳು ದೊಡ್ಡವರಾಗಿಬಿಟ್ಟಿದಾರೆ. ಅದು ಹೆಂಗೆ ಬೆಳೆದರೋ ಗೊತ್ತೇ ಆಗಲಿಲ್ಲ.`
ಅಂತ ಅಚ್ಚರಿ ಪಡುವ ಸನ್ನಿವೇಶ ಸ್ವಂತ ಅಪ್ಪ-ಆಮ್ಮನಿಗೇ ಬರೋದು ಬೇಡ.' ಅಕ್ಕನ
ಮೇಲಿನ ಸಲುಗೆಯಿಂದ ಸ್ವಲ್ಪ ಅತಿಯಾಗಿಯೇ ಪಿಲಾಸಪಿ ಹೊಡೆದೆ.
' ನಿಮ್ಮ ಜೀವ್ನ ನೆಟ್ಟಗಾಗಿದೆಯಲ್ಲ, ಅದಕ್ಕೆ ನಮಗೆ ಹೇಳಕ್ ಬರ್ತೀರಾ..?' ಮುಖಕ್ಕೆ
ಹೊಡೆದಂತೆ ಹೇಳಿದಳು. ಇವೆಲ್ಲಾ ನಂಗೆ ಬೇಕಿತ್ತು.
ಬಲಗೈ ತೋರು ಬೆರಳೇ ಗಾಯವಾಗಿರುವುದರಿಂದ, ಮಿಸ್ಸುಗಳು ಕೊಡುವ ಹೋಮ್-ವರ್ಕುಗಳಿಂದ
ಸಂಪೂರ್ಣ ಮುಕ್ತಿ ಎಂಬ ರಹಸ್ಯವನ್ನು ಆಕಾಶನ ಕಿವಿಯಲ್ಲಿ ಗುಟ್ಟಾಗಿ ಹೇಳಿದೆ. ಕಣ್ಣುಗಳು
ಅಗಲಗೊಂಡ ರೀತಿಯಲ್ಲಿಯೇ ಅವನಿಗಾದ ಸಂತೋಷವನ್ನು ಊಹಿಸಬಹುದಿತ್ತು. ನಮ್ಮ ಸಂಭಾಷಣೆ
ನಡೆಯುತ್ತಿರುವಾಗಲೇ ಅಕ್ಕನ ಮಾವ ಮನೆಗೆ ಬಂದರು. ತುಂಬಾ ಹಳೇ ಕಾಲದವರು. ಅವರ ವಯಸ್ಸಿಗೂ,
ದೈಹಿಕ ಸಾಮರ್ಥ್ಯಕ್ಕೂ ಸಂಬಂಧವೇ ಇಲ್ಲ. ನೆಲ ಗುದ್ದಿ ನೀರು ತೆಗೆಯುವಂತಹುದೇ ಚೈತನ್ಯ
ಅವರಲ್ಲಿ ಇನ್ನೂ ಇದೆ. ಅವರ ಮುಖದಲ್ಲಿ ಕಳವಳ ಮನೆಮಾಡಿತ್ತು.
ಅಭಿ, ಆಕಾಶನ ಬೆರಳು ಗೀಚಿದ ವಿಷಯ ತಿಳಿಯುತ್ತಲೇ, ಓಡಿಹೋಗಿದ್ದ ಅಭಿಗಾಗಿ ಹುಡುಕಾಟ
ನಡೆಸಿದ್ದರು. ಅವನು ಎಲ್ಲಿಯೂ ಸಿಕ್ಕಿರಲಿಲ್ಲ. ಸಂಜೆಯವರೆಗೂ ಮನೆಮಂದಿಯೆಲ್ಲಾ ಒಂದಾಗಿ
ಹುಡುಕಿದೆವು. ಅಭಿ ಎಲ್ಲಿಯು ಕಾಣಸಿಗಲಿಲ್ಲ. ಬೇರೆಯ ದಿನಗಳಾಗಿದ್ದರೆ ಅಷ್ಟು ತಲೆ
ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ, ತಮ್ಮನ ಕೈಯಿಂದ ಚಿಮ್ಮಿದ ರಕ್ತವನ್ನು ನೋಡಿದ
ಮೇಲೆ ಅವನಿಗೂ ಸಾಕಷ್ಟು ಹೆದರಿಕೆಯಾಗಿರಬಹುದು. ಭಯದಿಂದ ಎಲ್ಲಿಗಾದರೂ ಓಡಿಬಿಟ್ಟನೇ. ?
ಭಾವ ಬೇರೆ ಮನೆಯಲ್ಲಿಲ್ಲ. ಕೆಲಸದ ಮೇಲೆ ಸಿಟಿಗೆ ಹೋಗಿದ್ದರು. ಹತ್ತಿರದಲ್ಲಿ ಕಾಲುವೆ
ಇದೆ; ಬಾವಿಗಳಿವೆ; ಸಗಣಿಯಿಂದ ತುಂಬಿರುವ ಗೋಬರ್ ಗ್ಯಾಸ್ ಗುಂಡಿಗಳಿವೆ; ರೈಲ್ವೆ
ಟ್ರಾಕಿದೆ.
ಅದುವರೆವಿಗೂ ಮಠಕ್ಕೆ ಸೇರಿಸುತ್ತೇನೆ ಎನ್ನುತ್ತಿದ್ದವಳು, ಈಗ ತನ್ನ ಮಗನ
ಸುಖಾಗಮನಕ್ಕಾಗಿ ಇಲ್ಲ-ಸಲ್ಲದ ದೇವರುಗಳಿಗೆಲ್ಲಾ ಏಕಾ-ಏಕಿ ಹರಕೆ ಕಟ್ಟಿಬಿಟ್ಟಳು.
ಹೊತ್ತು ಕಳೆದಂತೆ, ದಿಗಿಲು ಹೆಚ್ಚುತ್ತಾ ಸಾಗಿತು. ಅಜಾಮತಿ ಗೋವಿಂದಣ್ಣ, ಅಭಿ ಕಾಲುವೆ
ದಾಟಿ ತೋಟಗಳ ಕಡೆಗೆ ಹೋಗುತ್ತಿದುದನ್ನು ನೋಡಿರುವುದಾಗಿ ಹೇಳಿದ. ನಾನು, ತಾತ ಇಬ್ಬರೇ
ಕೆರೆ ಅಂಚಿನಲ್ಲಿದ್ದ ಅಡಿಕೆ ತೋಟದ ಕಡೆಗೆ ಹೊರಟೆವು. ಅಕ್ಕನೂ ಬರುತ್ತೇನೆಂದು ಹಠ
ಹಿಡಿದಳು.
'ಇಳಿ ಹೊತ್ತು ಬರೋದು ಬ್ಯಾಡ, ಇಲ್ಲೇ ಇರು.' ಎಂದು ತಾತ ವಾಪಾಸು ಕಳಿಸಿದರು.
----
ಮನೆಯಿಂದ ಓಡಿಹೋಗಿದ್ದ ಅಭಿ ಸೀದಾ ತೋಟಕ್ಕೆ ಬಂದಿದ್ದನು.
ಒಂದೆರಡು ಡಬ್ಬಗಳಲ್ಲಿ ತಾತ ಸುಣ್ಣ ಕಲಸಿ ಇಟ್ಟಿದ್ದರು. ಬಿಸಿಲನ ಝಳಕ್ಕೆ ಗಿಡಗಳು ಬಾಡದೇ
ಇರಲೆಂದು ಸುಣ್ಣ ಬಳಿಯುವರು. ಡಬ್ಬಿಯಲ್ಲಿದ್ದ ಸುಣ್ಣವನ್ನು ಪೊರಕೆಗೆ ಹಚ್ಚಿಕೊಂಡು,
ಎಲ್ಲಾ ಗಿಡಗಳಿಗೂ ಕೈಗೆ ಸಿಗುವವರೆಗೂ ಬಳಿದಿದ್ದನು. ಸಂಜೆಯೊಳಗಾಗಿ ಒಂದು ಎಕರೆ ಜಾಗದ
ಅಡಿಕೆ ಗಿಡಗಳಿಗೆಲ್ಲಾ ಅಚ್ಚು-ಕಟ್ಟಾಗಿ ಸುಣ್ಣ ಬಳಿದು ಮುಗಿಸಿ ಬಿಟ್ಟಿದ್ದ. ನಾವು
ತೋಟಕ್ಕೆ ಹೋದಾಗ, ಡಬ್ಬಿತಳದಲ್ಲಿ ಅಂಟಿದ್ದ ಸುಣ್ಣವನ್ನು ಕೆರೆಯುತ್ತಿದ್ದ. ಗಿಡಗಳಿಗೆ
ಪೇಂಟ್ ಮಾಡುವ ಕೆಲಸ ಖುಷಿ ಕೊಟ್ಟಿದ್ದಿರಬೇಕು. ಮೊಮ್ಮಗನ ಸಾಧನೆಯನ್ನು ನೋಡಿ ತಾತನಿಗೆ
ಖುಷಿಯೋ-ಖುಷಿ. ಎತ್ತಿಕೊಂಡು ಮುದ್ದಾಡಿದರು. ಅವನ ಎಳೆಕೈಗಳನ್ನು ತಮ್ಮ ಕಣ್ಣಿಗೆ
ಎರಡೆರಡು ಬಾರಿ ಒತ್ತಿಕೊಂಡರು. ಮನೆಗೆ ವಾಪಾಸಾದಾಗ ಅಮ್ಮ ಅತ್ತಳು, ನಕ್ಕಳು. ಹೊಡೆದಳು.
ಮುದ್ದುಮಾಡಿದಳು. ಸುಣ್ಣ ಬಳಿಯುವ ಹೀನ ಕ್ರುತ್ಯ ನಡೆಸಿದುದರಿಂದ ಕೊಂಚ ಅಸಮಾಧಾನಗೊಂಡಳು.
ಮಾರನೆಯ ದಿನ ಪತಿ-ಪತ್ನಿ ಸಮೇತರಾಗಿ ಸ್ವಾಮೀಜಿಯನ್ನು ಸಂದರ್ಶಿಸಿ, ಬೋರ್ಡಿಂಗ್ ಸ್ಕೂಲು
ಎಂಬ ಹೈ-ಫೈ ಮಠದ ಅಪ್ಲಿಕೇಷನ್ ಫಾರಮ್ಮುಗಳನ್ನು ಹೊತ್ತು ತಂದರು.

Le... A very good one... Liked it... :)
ReplyDeletei loved this one maga.
ReplyDeletechennagide le kc .... real aagirode bardidiya..... akkanige innu swalpa ugididre nange swalpa samadhana aaythithu............
ReplyDeleteChennagi idey le :-)
ReplyDeleteಹ್ಹೆ!! ಹ್ಹೆ!! ಓದಿ ಇಷ್ಟಪಟ್ಟವರಿಗೆಲ್ಲಾ ಥೆ೦ಕ್ಯು.... !!
ReplyDeleteಅಭಿ: ನಿನ್ನ ಥರ ಕ್ರಿಟಿಕಲ್ ರೀಡರ್ಸ್-ನ ತ್ರುಪ್ತಿ ಪಡಿಸೋದು ಕಷ್ಟ ಮಾರಾಯ. ಥೆ೦ಕು ಲೆ...
ನಿರ೦ಜನ್ : ಸರ್ಯಾಗಿ ಬರೀದೆ ಇದ್ದಾಗ ನೀನು ತಿದ್ದಿದಿಯ ಮಗ. ನಿನ್ನ ಸಪೋರ್ಟ್ ಹಿ೦ಗೇ ಇರ್ಲಿ ಎನ್ನುವುದು ನನ್ನ ಬಯಕೆ.
ರವಿ: ಅಕ್ಕ೦ದಿರಿಗೆ ಜಾಸ್ತಿ ಬಯ್ಯ೦ಗಿಲ್ಲ ಮಗ. ನಿಮ್ಮದೆಲ್ಲಾ ನೆಟ್ಟಗಾಯ್ತು.. ಅದುಕ್ಕೆ ಮಾತಾಡ್ತೀರ ಅ೦ತಾರೆ.
ಶೇಕ್: ಥೂ !! ನಿನ್ನ ಹಣೆಬರಹವೇ , , ಕನ್ನಡ ಓದಿ-ಮಾಡಿ ಕಾಮೆ೦ಟ್ ಮಾಡೋ!!
ಒನ್ ಸೈಡೆಡ್ ಪಿಲಾಸಫಿ ಅನ್ನೋ ಅ೦ಜಿಕೆ ಇದೆ. ಇರಲಿ ಇದು ನನ್ನ ಪರ್ಸ್-ಪೆಕ್ಟೀವ್ ಅಷ್ಟೆ.. !!
chennagide maga... adre swamiji galna heg nambodu
ReplyDelete'ಅವಗುಣಗಾನ'
ReplyDelete'ನಾನ್ ರೆಸಿಡೆ೦ಟ್ ವಿಲೇಜರ್ಸ್'
'ಕ್ಷೌರಾಸ್ತ್'
'ನೆಲ ಉಳುವುದರಿ೦ದ ಹಿಡಿದು ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನ'
"ಬೇಲಿ ಅ೦ಚಿನಲ್ಲಿ ಸರಿದಾಡುವ ಪಟ್ಟೆ-ಪ೦ಜ್ರ ಮರಿಹಾವುಗಳನ್ನು ಹೊಡೆದು , ಕಡ್ಡಿಯಲ್ಲಿ ಹಿ೦ಸಿಸುತ್ತಾ ಬೆರಗುಗಣ್ಣಿನಿ೦ದ ನೋಡುವರು"
"ಈ ವಿಷಯವನ್ನು ಪುನಿಯ ಕಿವಿಯಲ್ಲಿ ಗುಟ್ಟಾಗಿ ಹೇಳಿದೆ. ಕಣ್ಣುಗಳು ಅಗಲಗೊ೦ಡ ರೀತಿಯಲ್ಲಿಯೇ ಅವನಿಗಾದ ಸ೦ತೋಷವನ್ನು ಊಹಿಸಬಹುದಿತ್ತು."
"ಇವಳಿಗೆ ಸಾಕುವುದಾಕ್ಕಾಗದೆ , ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸ್ವಾಮೀಜಿಗೆ ಔಟ್-ಸೋರ್ಸಿ೦ಗ್ ಕೊಡುತ್ತಿರುವಳು"
ಲೈಕಡು ಇಟ್ಟು ಮಗಾ... ಭಾಷೆ ಕುಣಿದಾಡ್ತಿದೆ... ಶೈಲಿ ಸೂಪರ್ರು...
:)
---ರಂಜಿತ್.
@Raj: ಥ್ಯಾ೦ಕ್ಯು... ಡೂಡ್. ಮತ್ತೆ ಸ್ವಾಮೀಜಿ ವಿಸಯಗಳು ನಮಗ್ಯಾಕೆ ಹೇಳು...? ಕೆಲವ್ರು ಪಾದಪೂಜೆ , ಪೀಠಾರೋಹಣಗಳ ಮಧ್ಯೇನು.. ಟೈಮ್ ಮಾಡ್ಕೊ೦ಡು ಸಮಾಜಕ್ಕೆ ಒ೦ದಷ್ಟು ಒಳ್ಳೇದು ಮಾಡ್ತಿದ್ದಾರೆ. ವಿಷಯ ಸುತ್ತಬೇಕಿರೋದು ಕ್ರಾ೦ತಿಕಾರಿ ಮಗುವಿನ ಸುತ್ತ. ಏನ೦ತೀಯ..?
ReplyDeleteಫನ್-ಜಿತ್: ನಾನು ಬರೆದದ್ದನ್ನು ಇಷ್ಟು ಕೂಲ೦ಕುಷವಾಗಿ ಪರಿಶೀಲನೆ ಮಾಡಿದ್ದೀ ಅ೦ದ್ರೆ.., ನಿನ್ನ ಅಭಿಮಾನಕ್ಕೆ ತು೦ಬಾ ಥ್ಯಾ೦ಕ್ಸ್ ಪಾ!!
sooper maga........hey write mine also re........u told u will write
ReplyDelete'ನಾನ್ ರೆಸಿಡೆಂಟ್ ವಿಲೇಜೆರ್ಸ್' ಪದ ಇಷ್ಟ ಆಯಿತು ಚೇತನ್.
ReplyDelete