Skip to main content

Posts

Showing posts from July, 2011

ತಡಿಯ೦ಡಮೋಳ್-ಗೆ ಸಾಗಸಮಯ ಯಾತ್ರೆ!!!

ತಡಿಯಂಡಮೋಳ್ ಮಡಿಕೇರಿಯ ಅತಿ ಎತ್ತರದ ಶಿಖರ. ಚಳಿಗಾಲದಲ್ಲಿ ಮನೆಯೊಳಗೆ ಬೆಚ್ಚಗೆ ಮಲಗುವುದು ಬಿಟ್ಟು, ತಡಿಯಂಡಮೋಳ್ ಬೆಟ್ಟವನ್ನು ಹತ್ತಿ, ಟೆಂಟ್ ಹಾಕಿ, ಬೆಂಕಿ ಹಚ್ಚಿಟ್ಟು, ರಾತ್ರಿಯೆಲ್ಲಾ ತೂಕಡಿಸಿದೆವು. ಈ ಸೌಭಾಗ್ಯಕ್ಕೆ ಅಷ್ಟು ದೂರ ಹೋಗಬೇಕಿತ್ತಾ. ? ಗೊತ್ತಿಲ್ಲ. ನಾವು ಏಳು ಜನ ಆಪ್ತಮಿತ್ರರು ' ಅಬಿ-ಜಾಬಿ-ರವಿ-ರೂಪಿ-ಗಜ-ಷೇಕು ಮತ್ತು ನಾನು ' ಚಾರಣಕ್ಕೆಂದು ಹೊರಟವರು. ಇವರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವ ದರ್ಶನವನ್ನು ಮಾಡಿಸುವುದು, ಸ್ಥಳ ಪುರಾಣವನ್ನು ವಿವರಿಸುವುದು, ಮುಖಸ್ತುತಿ ಇತ್ಯಾದಿ ಇತ್ಯಾದಿಗಳನ್ನು ಮಾಡುವುದು ಈ ಬರಹದ ಉದ್ದೇಶವಲ್ಲ. ಮುಂದುವರೆಯೋಣ. ಒಂದು ಸುಂದರ ಸಂಜೆಯಂದು ಬೆಂಗಳೂರಿನಿಂದ ಒಟ್ಟಾಗಿ ಹೊರಟವರು, ಮಧ್ಯ-ರಾತ್ರಿ ಎರಡರ ಹೊತ್ತಿಗೆ ಮೈಸೂರು ಮಾರ್ಗವಾಗಿ ಕುಶಾಲನಗರ ತಲುಪಿದೆವು. ಉಳಿದಿದ್ದ ಅಲ್ಪ ರಾತ್ರಿಯನ್ನು ಜಾಬಿಯ ಮನೆಯಲ್ಲಿ ಕಳೆದು, ಬೆಳಗಿನ ಜಾವ ಚಾರಣಕ್ಕೆಂದು ಸಿದ್ಧರಾಗಿ ನಿಂತೆವು. ನಮ್ಮಂತಹ ಅತಿಥಿಗಳ ಸೇವೆ ಮಾಡುವ ಪುಣ್ಯ ಜಾಬಿಗೆ ಲಭಿಸಿತ್ತು. ಆ ಪುಣ್ಯಕಾರ್ಯದಿಂದ ಜಾಬಿಯನ್ನು ವಂಚಿತನನ್ನಾಗಿ ಮಾಡಬಾರದೆಂಬ ಉದ್ದೇಶದಿಂದ, ಅವನ ಅತಿಥಿ ಸತ್ಕಾರ್ಯವನ್ನೂ ಸ್ವೀಕರಿಸಿದೆವು. ನಂತರ ಒಂದು ಕಾರು ಮತ್ತು ಒಂದು ಬೈಕಿನಲ್ಲಿ ನಮ್ಮ ಪ್ರಯಾಣ ಮಡಿಕೇರಿಯತ್ತ ಸಾಗಿತು. ಪರ್ವತ ನಗರ ಮಡಿಕೇರಿಯನ್ನು ಸುತ್ತಿಕೊಂಡು ನಾಪೋಕ್ಲು ಎಂಬ ಊರಿನ ಮಾರ್ಗವಾಗಿ ಕಕ್ಕಬ್ಬೆಯನ್ನು ತಲುಪಿದಾಗ ಮಧ್ಯಾಹ್