ಕನ್ನಡಿಯ ಮುಂದೆ ನಿಂತು ' ಯಾರು ತಿಳಿಯರು ನನ್ನ ಭುಜಬಲದ ಪರಾಕ್ರಮವಾsss'
ಆರ್ಭಟಿಸುತ್ತಾ, ಮುಷ್ಟಿಯನ್ನು ಬಿಗಿಹಿಡಿದು, ಅಲ್ಪ ಸ್ವಲ್ಪ ಊದಿಕೊಂಡಿದ್ದ ತೋಳಿನ
ಮಾಂಸಖಂಡಗಳನ್ನು ನೋಡಿಕೊಳ್ಳುತ್ತಿದ್ದೆ. ಅಮ್ಮ ನಕ್ಕಳು. ಆ ಒಂದು ನಗುವಿನಲ್ಲಿಯೇ
ಹೇಳಬೇಕಾದುದನ್ನೆಲ್ಲಾ ಹೇಳಿಯಾಗಿತ್ತು.
'ಇರ್ಲಿ ಮಾತೆ. ನಮಗೂ ಟೈಮ್ ಬರುತ್ತೆ. ಒಂದಲ್ಲಾ ಒಂದು ದಿನ ನಾನೂ ದಪ್ಪ ಆಗ್ತೀನಿ.
ನಾಲ್ಕು ನಾಲ್ಕು ಬಾರಿ ಊಟ ಮಾಡಿಯಾದ್ರೂ ಸರಿ.' ಎಂದೆ.
'ಬರಿ ಊಟ ಮಾಡಿದ್ರೆ ದಪ್ಪ ಆಗಲ್ಲ ಮಗನೆ. ತಲೆಯಲ್ಲಿ ಒಳ್ಳೆ ಬುದ್ಧಿ ಇರಬೇಕು.
ಅವಾಗೇನಾದ್ರು ದಪ್ಪ ಆಗಬಹುದು.' ಅಣಕಿಸಿದಳು. ನಾನು ಅದನ್ನು ಒಪ್ಪಲಾರೆ.
ದಪ್ಪವಾಗುವುದಕ್ಕೂ ತಲೆಯಲ್ಲಿನ ಒಳ್ಳೆ ಬುದ್ಧಿಗಳಿಗೂ ಅಂತಹಾ ಸಂಬಂಧವಿರಲಾರದು.
'ಹಂಗಾದ್ರೆ ಜಾಸ್ತಿ ದಪ್ಪ ಇದ್ದವರಿಗೆ, ಜಾಸ್ತಿ ಜಾಸ್ತಿ ಒಳ್ಳೆ ಬುದ್ಧಿ ಇರುತ್ತೆ
ಅಂತಲೋ ನಿನ್ನ ಮಾತಿನ ಅರ್ಥ.'
'ಹಾ!! ಅಷ್ಟು ಖಂಡಿತವಾಗಿ ಹೇಳಕ್ಕಾಗಲ್ಲ, ಆದ್ರೆ ಸ್ವಲ್ಪಮಟ್ಟಿಗೆ ಊಹೆ ಮಾಡಬಹುದು.
ನನ್ನ ಕೈ ಅಡುಗೆ ತಿಂದ ಮೇಲೂ, ನೀ ದಪ್ಪ ಆಗ್ತಿಲ್ಲ ಅಂದ್ರೆ ಇನ್ನೇನು ಹೇಳೋದು. ಊರಲ್ಲಿ
`ನಿನ್ನ ಮಗನಿಗೆ ಸರಿಯಾಗಿ ಊಟ ಹಾಕಲ್ವ` ಅಂತ ನನ್ನ ಕೇಳ್ತಾರೆ. ಕೊನೆಪಕ್ಷ ದೇವರ
ಮುಂದೆನಾದ್ರು ನಿಂತು, ಒಳ್ಳೆ ಬುದ್ಧಿ ಕೊಡಪ್ಪಾ ಅಂತ ಬೇಡಿಕೊ. ಬುದ್ಧಿ ಬಂದರೂ
ಬರಬಹುದು. ದಪ್ಪ ಆದ್ರೂ ಆಗಬಹುದು. ' ಅಮ್ಮ ಎಂದಳು.
ಆದರೂ ಒಳ್ಳೆಯ ಬುದ್ಧಿಗಾಗಿ, ದೇವರ…