ಥ್ಯಾಂಕು ಮಮ್ಮಿ. ಲಾಲಿಸಿ, ಪಾಲಿಸಿ ಇಷ್ಟು ದೊಡ್ದವನನ್ನಾಗಿ ಮಾಡಿರೋದಕ್ಕಲ್ಲ. ನನಗೆ ಜನ್ಮ ಕೊಟ್ಟಿದ್ದಕ್ಕೆ. ಈ ಅದ್ಭುತ ವಿಶ್ವದಲ್ಲಿ ನಾನೂ ಒಬ್ಬ ಅನ್ನೋ ರೀತಿ ಮಾಡಿದ್ದಕ್ಕೆ. ಥ್ಯಾಂಕ್ ಯು. ‘ ಅಮ್ಮ ’ ಅನ್ನೋದು ವಿಶ್ವದ ಅತ್ಯಂತ ಹೆಚ್ಚು ಘನತೆ, ಗೌರವ ಇರುವ ಸರ್ವ ಶ್ರೇಷ್ಠ ಸಂಬಂಧಕ್ಕೆ ನಾವುಗಳು ಕೊಟ್ಟಿರುವ ಹೆಸರು. ಆದರೆ ನನಗೆ, ಅಮ್ಮ ಅಂದಾಗ ಕಣ್ಣ ಮುಂದೆ ಬರೋದು.. ನಿನ್ನ ಪೆದ್ದು ಪೆದ್ದು ಮುಖ. ನಾನು ಹೇಳುವ ಅಷ್ಟೂ ಸುಳ್ಳುಗಳನ್ನು ಅಷ್ಟೇ ಮುಗ್ಧವಾಗಿ ನಂಬುತ್ತಾ ಬಂದಿರುವ ಆ ಒಂದು ಪೆದ್ದು ಜೀವ. ನನ್ನನ್ನು ಅಚ್ಚರಿ ಮತ್ತು ಕೌತುಕದ ಸುಳಿಯಲ್ಲಿ ಸಿಕ್ಕಿಸಿರುವ ವಿಚಾರ ಅಂದ್ರೆ, ಎಲ್ಲಾ ಅಮ್ಮಂದಿರಿಗೆ!! ತಮ್ಮ ಮಕ್ಕಳು ಅಂದರೆ ಯಾಕೆ ಅಷ್ಟು ಇಷ್ಟ. ಹೇಳಮ್ಮಾ .. ಪ್ಲೀಸ್.. ಇನ್ನೂರ ಎಪ್ಪತ್ತು ದಿನಗಳು ಅಂದ್ರೆ 9 ಮಂತ್ಸ್ , ನಿನ್ನ ಒಡಲೊಳಗೆ ಬೆಚ್ಚಗೆ ಬಚ್ಚಿಟ್ಟು ಕೊಂಡಿರುವ ಹೊತ್ತಲ್ಲಿ ಮೋಹದ ಕೊಂಡಿ ಸೃಷ್ಟಿಸಿಯಾಗುತ್ತದೆಯಾ. ? ಆ ಹೊತ್ತಲ್ಲಿ ಇದು ನನ್ನ ಸ್ವತ್ತು, ನಾನು ಇದರ ವಾರಸುಧಾರಿಣಿ, ಇದರ ಸರ್ವಾಂಗೀಣ ಉದ್ಧಾರ ನನ್ನ ಜನ್ಮ ಸಿದ್ಧ ಕರ್ತವ್ಯ.. ಹೀಗೆಲ್ಲಾ ನಿನಗೆ ನೀನೆ ಏನೇನೋ ಅಂದುಕೊಂಡು ಬಿಟ್ಟೆಯಾ. ? ಅಮ್ಮ ನೀನೇ ಒಂದು ಸಮುದ್ರ. ನಿನ್ನ ಭಾವ ಪ್ರಪಂಚ ಆಳ ಅಗಲಗಳು ಎಷ್ಟೇ ವಿಶಾಲವಾಗಿದ್ದರೂ, ಮನಸ್ಸು ಮಾತ್ರ ಯಾವಾಗಲೂ ದಡದಲ್ಲಿ ಕೂತಿರುವ ಮಗುವಿನ ಮೇಲೆಯೇ. ಕ್ಷಣ ಕ್ಷಣವೂ ಬಂದು ಸೋಕಿಸಿ ಹೋಗುವೆ. ಈ ನಿಷ್ಕಲ್ಮಶ ಕಾಳಜಿಯ ಅಲೆಗಳ