Skip to main content

ಕನಸೂರಲ್ಲಿ ಸ್ಕೂಲ್ ಡೇ

ಚಕ್ಕಳಂಬಕ್ಕಳ ಹಾಕಿ ಕುಳಿತಿದ್ದ ಸೀನನ ಮಂಡಿಯು, ಬಲಭಾಗದಲ್ಲಿ ಕುಳಿತಿದ್ದ ಗೌತಮನ ಮಂಡಿಗೆ ತಗುಲುತ್ತಿತ್ತು. ತನ್ನ ಅಸಮಾಧಾನವನ್ನು ತೋರಿಸಲು ಗೌತಮನು, ಆಗಾಗ ಮಂಡಿಯನ್ನು ಮೇಲಕ್ಕೆತ್ತಿ ಸೀನನ ತೊಡೆಯ ಮೇಲೆ ಹಾಕುತ್ತಿದ್ದ. ಸೀನನ ಎಡಭಾಗದಲ್ಲಿ ಕುಳಿತಿದ್ದ ಪುತ್ತು, ಇವರ ತಿಕ್ಕಾಟದ ಪರಿವಿಯೇ ಇಲ್ಲದೆ ಕಲಾವತಿ ಟೀಚರ್ ಹೇಳುತ್ತಿದ್ದ ಭಾರತ ಸಂವಿಧಾನದ ಕಥೆಯನ್ನು ಕೇಳುತ್ತಿದ್ದ.

ಗೌತಮ ತನ್ನ ಮಂಡಿಯನ್ನು ಎತ್ತಿ ಸೀನನ ಮೇಲೆ ಹಾಕಿದ.

ಸೀನ ಗುಟುರು ಹಾಕಿದ ‘ಲೇ ಗೌತಮ ಬುದ್ಧ, ಬ್ಯಾಡ ನೋಡು. ಆವಾಗ್ಲಿಂದ ನೀನೆ ಮೇಲೆ ಹಾಕಿದ್ದೆ ’.

‘ಹಿಂದೆ ಮಹಾ ಪುರುಷರುಗಳೆಲ್ಲಾ ಬೀದಿ ದೀಪದಲ್ಲಿ ಓದಿ ಮುಂದೆ ಬಂದರು. ಅವರೆಲ್ಲಾ ನಮಗೆ ಆದರ್ಶವಾಗಬೇಕು. ’ ಕಲಾವತಿ ಟೀಚರಿನ ಪಾಠ ಮುಂದುವರೆದಿತ್ತು.

‘ ನಾನು, ರಾತ್ರಿ ಸೀಮೆ ಎಣ್ಣೆ ಬುಡ್ಡಿ ಕೆಳಗೆ ಸಮಾಜ ವಿಜ್ಞಾನ ಓದ್ತಾ ಇದ್ದೆ. ಹಂಗೇ ನಿದ್ದೆ ಬಂದು ತೂಕಡಿಸಿದೆ. ಮುಂದೆ ತಲೆಗೂದಲು ದೀಪಕ್ಕೆ ತಾಗಿ ಚರ್ ಅಂದಾಗಲೇ ಎಚ್ಚರ ಆಗಿದ್ದು. ನೋಡು ಇಲ್ಲಿ ಕೂದಲು ಹೆಂಗ್ ಅರ್ಧಂಬರ್ದ ಸುಟ್ಟು ಹೋಗಿದೆ.’ ಗೌತಮ ಬುದ್ಧ ನಕ್ಕ. ಅರ್ಧ ಸುಟ್ಟು ಹೋಗಿದ್ದ ಕೂದಲು ಅದುವರೆಗೂ ಗಮನಿಸಿಯೇ ಇರಲಿಲ್ಲವೆಂಬಂತೆ ‘ಸಸ್ ’ ಎನ್ನುತ್ತಾ ನೋಡಿ ‘ಆಮೇಲೆ. ? ’ ಎಂದು ಪುತ್ತು ಪ್ರಶ್ನೆ ಮಾಡಿದ. ಇವರ ಗುಸುಗುಸು ಪಿಸಿಪಿಸು ಮಾತು ನಡೆದೇ ಇತ್ತು.

‘ ಪುತ್ತು. ಎದ್ದೇಳು ಮೇಲೆ. ’ ಟೀಚರು ಕೂಗಿದರು.

ಗಾಬರಿಯಲ್ಲಿ ಪುತ್ತು ಎದ್ದು ನಿಂತ. ಅಕಸ್ಮಾತ್ ವೆಂಕಟೇಶಪ್ಪ ಮಾಸ್ತರು ನಿಲ್ಲಲು ಹೇಳಿದ್ದರೆ, ಎದ್ದು ನಿಲ್ಲುವ ಮೊದಲೇ ‘ಸಾರ್ ನಾನಲ್ಲ ಸಾರ್ ಸೀನ ಮಾತಾಡಿದ್ದು. ’ ಎಂದು ಗೋಳಿಟ್ಟು ಬಿಡುತ್ತಿದ್ದ. ಆದರೆ ಕಲಾವತಿ ಟೀಚರ್ ಆಗಿದ್ದರಿಂದ ಧೈರ್ಯವಾಗಿಯೇ ನಿಂತ. ಅವರು ಕ್ಲಾಸಿಗೆ ಬರುವಾಗ ಪ್ರತಿ ಸಾರಿಯೂ ಕೋಲು ಮರೆತು ಬರುತ್ತಿದ್ದರು ಎಂದೇ ಎಲ್ಲಾ ಹುಡುಗರು ಭಾವಿಸಿದ್ದರು.

‘ಹೇ ಪುತ್ತು!! ನೀನು ಸೀನ ಅಕ್ಕ ಪಕ್ಕ ಕೂರಬೇಡಿ ಅಂತ ಎಷ್ಟು ಸಾರಿ ಹೇಳಿದ್ದೀನಿ. ಆಕಳ್ಳ-ಮಾಕಳ್ಳ ಜೊತೆ ಜೊತೆ ಇದ್ರೆ ಊರನ್ನೇ ಹಾಳುಮಾಡಿ ಬಿಡ್ತೀರ. ’ ಪುತ್ತು ತಲೆ ತಗ್ಗಿಸಿಕೊಂಡು ‘ಹಿ ಹಿ ಹಿ’ ನಗುತ್ತಾ ತಲೆ ಕೆರೆದುಕೊಂಡ.
ಸೀನ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಎತ್ತಲೋ ನೋಡುತ್ತಿದ್ದ.

‘ಪುತ್ತು ಈ ಸಾರಿ ಸ್ಕೂಲ್-ಡೇ ಗೆ ನೀನು ಗುರು-ಶಿಷ್ಯ ಅನ್ನೋ ಏಕಪಾತ್ರಾಭಿನಯ ಮಾಡಬೇಕು. ಆಮೇಲೆ ಸ್ಟಾಫ್ ರೂಮಿಗೆ ಬಂದು ಡೈಲಾಗ್ ಹಾಳೆಗಳನ್ನು ತಗೋಂಡು ಹೋಗು. ’ ಟೀಚರ್ ಹೇಳಿದರು.

‘ಟೀಚರ್ ನನ್ನ ಜೊತೆ ಮತ್ಯಾರು ಪಾಲ್ಟು ಮಾಡ್ತಾರೆ ’ ಕೇಳಿದ.

ಎಲ್ಲರೂ ಗೊಳ್ಳೆಂದು ನಕ್ಕರು.

‘ದಡ್ಡಾ ಏಕಪಾತ್ರಾಭಿನಯ ಅಂದ್ರೆ ಒಬ್ಬರೇ ಮಾಡೋದು. ಗುರು ಮತ್ತೆ ಶಿಷ್ಯ ಇರ್ತಾರೆ. ಇಬ್ಬರ ಪಾತ್ರವನ್ನು ನೀನೆ ಮಾಡಬೇಕು. ಮೊದಲು ನಾನು ಕೊಡೊ ಡೈಲಾಗ್ ಶೀಟು ಬಯಾಟ್ ಹೊಡ್ಕೊಂಡು ಬಾ. ಆಮೇಲೆ ಅದನ್ನ ಹೆಂಗ್ ಮಾಡಬೇಕು ಅನ್ನೋದನ್ನ ನಾನು ಹೇಳಿಕೊಡ್ತೀನಿ. ’ ಅಂದರು.

ನಾಲ್ಕನೇ ತರಗತಿಯಲ್ಲಿದ್ದ್ ನಲವತ್ತೆರಡು ಜನರಲ್ಲಿ ತನ್ನನ್ನೇ ಹುಡುಕಿ, ನಾಟಕ ಮಾಡಲು ಹೇಳಿದ್ದಕ್ಕೆ ಪುತ್ತುವಿಗೆ ಅತೀವ ಖುಷಿಯಾಯಿತು. ಸಂಜೆಯಾದ ಮೇಲೆ ಕ್ಲಾಸ್-ರೂಮಿನಲ್ಲಿ ಟೇಪ್-ರಿಕಾರ್ಡು ಹಾಕಿಕೊಂಡು, ಹುಡುಗ ಹುಡುಗಿಯರೊಂದಿಗೆ ಡ್ಯಾನ್ಸ್ ಪ್ರಾಕ್ಟೀಸು ಮಾಡುತ್ತಿದ್ದ ಗೌತಮ, ನೋಡಲು ಬಂದವರೆನ್ನೆಲ್ಲಾ ಹೊರದಬ್ಬಿ ಬಾಗಿಲು ಹಾಕಿಕೊಂಡಿದ್ದ. ಸಾಲದೆಂಬಂತೆ ಕಿಟಕಿಯ ಬಳಿ ಇಣುಕಿ ನೋಡುತ್ತಿದ್ದ ಪುತ್ತು ಮತ್ತು ಸೀನರಿಬ್ಬರಿಗೂ ಕಪಾಳಕ್ಕೆ ಹೊಡೆದ ಮಾದರಿಯಲ್ಲಿ ಕಿಟಕಿಯನ್ನು ಮುಚ್ಚಿದ್ದ. ಪುತ್ತು ಎದೆಯುಬ್ಬಿಸಿಕೊಂಡು ಸೀನನ ಕಡೆ ನೋಡಿದ. ಸೀನ ಹೆಮ್ಮೆಯಿಂದ ಗೌತಮನ ಕಡೆಗೆ ನೋಡಿದ. ಗೌತಮ ಕಣ್ಣಗಲಿಸಿಕೊಂಡು ಪುತ್ತುವಿನ ಕಡೆಗೆ ನೋಡುತ್ತಿದ್ದ ‘ಎಲಾ ಬಡ್ಡಿಮಗನೆ. ನೀನು ನಾಟ್ಕ ಮಾಡ್ತಿಯ. ? ’ ಎಂಬ ಪ್ರಶ್ನೆಯೊಂದು ಆ ಮುಖದ ಮೇಲಿತ್ತು.

ಹಿಂದಿನ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಸೀನ ಮತ್ತು ಪುತ್ತು ಇಬ್ಬರನ್ನು ನೃತ್ಯ ಒಂದಕ್ಕೆ ಸೇರಿಸಿಕೊಂಡಿದ್ದ ಗೌತಮ. ಇಡೀ ಹಾಡಿನಲ್ಲಿ ಕನ್ನಡ ಬಾವುಟ ಅಲ್ಲಾಡಿಸುವ ಸ್ಟೆಪ್ ಬಿಟ್ಟು ಬೇರೆ ಸ್ಟೆಪ್ ಇರಲಿಲ್ಲ. ಗೌತಮ ಮಾತ್ರ, ತಲೆಗೆ ಪಟ್ಟಿ ಕಟ್ಟಿಕೊಂಡು ಹುಡುಗ ಹುಡುಗಿಯರೊಂದಿಗೆ ‘ ಕನ್ನಡದ ನೆಲ ಚೆನ್ನ, ಕನ್ನಡದ ಜಲ ಚೆನ್ನ, ಕನ್ನಡಿಗರಾ ಮನಸು ಚಿನ್ನಾ ಹೇ ಹೇ ’ ಎಂದು ಕುಣಿದಾಡಿದ. ಸೀನ ಮತ್ತು ಪುತ್ತು ಹಾಡು ಮುಗಿಯುವವರೆಗೂ ವೇದಿಕೆಯ ಎರಡು ಬದಿಯಲ್ಲಿ ಬಾವುಟ ಅಲ್ಲಾಡಿಸುತ್ತಾ ನಿಂತಿದ್ದರು.

*********

ಮೂರು ಘಂಟೆಯಾಗುತ್ತಲೇ ಪುತ್ತು, ಸೀನ ಇಬ್ಬರೂ ಸ್ಟಾಫ್ ರೂಮಿನ ಕಡೆ ನಡೆದರು. ಒಂದು ಪಾರ್ಶ್ವದಲ್ಲಿ ಕುಳಿತಿದ್ದ ಒಂದನೇ ತರಗತಿಯ ಮಕ್ಕಳು ಆಟವಾಡಲು ಹೊರಗೆ ಹೋಗಿದ್ದರಿಂದ ಸ್ಟಾಫ್ ರೂಮು ಸ್ವಲ್ಪ ನಿಶ್ಯಬ್ಧವಾಗಿತ್ತು. ಕಲಾವತಿ ಟೀಚರು ಶಿಲ್ಪ ಮೇಡಂ ಜೊತೆ ಮಾತನಾಡುತ್ತಾ ಕುಳಿತಿದ್ದರು. ಕಳ್ಳ ಹೆಜ್ಜೆ ಹಾಕಿಕೊಂಡು ಮೆತ್ತಗೆ ಒಳಬಂದವರನ್ನು ಕಂಡ ವೆಂಕಟೇಶಪ್ಪ ಮಾಸ್ತರು ‘ಏನ್ರೋ. ?’ಎಂಬಂತೆ ಹುಬ್ಬೇರಿಸಿದರು.

 ಕಲಾವತಿ ಮೇಡಂ ತಮ್ಮ ಬೀರುವಿನಿಂದ ಎರಡು ಹಾಳೆ ತೆಗೆದು ಪುತ್ತು ವಿಗೆ ಕೊಡುತ್ತಾ ಹೇಳಿದರು- ‘ಚೆನ್ನಾಗಿ ಬಯಾಟ್ ಹೊಡೆದುಕೊಂಡು ಬಾ. ಗುರು ಮತ್ತೆ ಶಿಷ್ಯ ನಾಟಕ. ಸೀನ ಇವನಿಗೆ ಸ್ವಲ್ಪ ಸಹಾಯ ಮಾಡೋ. ’

ವೆಂಕಟೇಷಪ್ಪಾ ಮಾಸ್ತರು ಕನ್ನಡಕ ತೆಗೆದು ಕಣ್ಣು ತಿಕ್ಕಿಕೊಳ್ಳುತ್ತಾ. ‘ ಏನ್ರೀ ಮೇಡಮ್ಮರೇ ನಾಟ್ಕ-ಗೀಟ್ಕ ಎಲ್ಲಾ ಯಾಕ್ ಮಾಡಿಸ್ತೀರ. ಸುಮ್ಮನೆ ರಿಸ್ಕು. ಈ ಹುಡುಗ್ರು ಮೇಷ್ಟ್ರು ಮುಂದೆ ನಿಲ್ಲಕ್ಕೆ ಹೆದರ್ತವೆ. ಅಂಥಾದ್ರಲ್ಲಿ ಸ್ಟೇಜ್ ಮೇಲೆ ಅದೇನು ಮಾಡ್ತವೆ ಅಂಥಾ ಸುಮ್ಮನೆ ಒಂದೊಂದು ಹಾಡು ಹಾಕಿ ಅವರಿಗೆ ಕುಣಿತ ಕಲಿತುಕೊಂಡು ಬಂದು ಮಾಡೋದಕ್ಕೆ ಹೇಳಿದ್ರೆ ಆಯ್ತು. ಅದು ಬಿಟ್ಟು ನೀವು ನಾಟ್ಕ, ರಂಗೋಲಿ, ಚಿತ್ರಕಲೆ, ಹಾಡು, ಏನೇನೋ ಮಾಡ್ತಿಸ್ತಾ ಇದ್ದೀರ ’ ಎಂದರು.

‘ ಏನೂ ಕಾರಣ ಸಿಗಲಿಲ್ಲ ಅಂದ್ರೆ, ತಲೆ ಸರ್ಯಾಗಿ ಬಾಚಿಲ್ಲ ಅಂತ ಹೊಡಿತಾನೆ. ಇಲ್ಲಿ ಮೇಡಮ್ ಮುಂದೆ, ನಮಗೇ ಬಯ್ತಾ ಇದಾನೆ. ’ ಸೀನ ಹಲ್ಲು ಮಸೆದ. ತಮ್ಮ ಫೆವರಿಟ್ ಮೇಡಂ ಗೆ ಮತ್ತು ತಮಗೂ ಬಯ್ಯುತ್ತಿದ್ದುದು ಅಸಮಧಾನದ ಸಂಗತಿಯಾಗಿತ್ತು.

‘ಸಾರ್ ನಾವೇ ಹಿಂಗದ್ರೆ ಹೆಂಗೆ ಸಾರ್. ಇದು ನಮ್ಮ ಶಾಲೆ ಕಾರ್ಯಕ್ರಮ. ಎಲ್ಲಾ ಮಕ್ಕಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಭಾಗಿಯಾಗಿಸಿಕೊಂಡು ಅವರ ಭವಿಷ್ಯ ರೂಪಿಸಬೇಕು. ಕೆಲವರು ಓದಿನಲ್ಲಿ ಇದ್ರೆ, ಇನ್ನು ಕೆಲವರು ಆಟದಲ್ಲಿ ಇರ್ತಾರೆ, ಇನ್ನ ಕೆಲವರು ಚಿತ್ರಕಲೆ, ಸಾಹಿತ್ಯ, ನೃತ್ಯ, ನಾಟಕ. ಅವರವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನ ಅಭಿವ್ಯಕ್ತ ಗೊಳಿಸಬೇಕು. ’ ಎಂದ್ರು.

ಈವಮ್ಮಂಗೆ ಮಾತು ಕೊಡೋದಕ್ಕಾಗಲ್ಲ ಅಂದುಕೊಂಡು ಮಾಸ್ತರು ಸುಮ್ಮನಾದರು. ಸೀನಿಯರ್ ಮಾಸ್ಟರರ ವಿರೋಧದ ನಡುವೆಯೂ ಪುತ್ತುವಿನ ಏಕಪಾತ್ರಾಭಿನಯ ತಯಾರಿ ಸಾಂಗವಾಗಿ ನಡೆಯಿತು.

********

ಕಚ್ಚೆ ಪಂಜೆ ಮತ್ತು ಬಿಳಿ ಬನಿಯಾನಿನಲ್ಲಿ ಕೆಸರಿನ ಮೇಲೆ ನಿಂತವನಂತೆ ಒದ್ದಾಡುತ್ತಿದ್ದ ಪುತ್ತು, ಸೀಮೆಸುಣ್ಣದಲ್ಲಿ ಬರೆದಿದ್ದ ತನ್ನ ಮೀಸೆ ಅಳಿಸಿ ಹೋಗಿದ್ದಕ್ಕೆ ಗಾಬರಿ ಮಾಡಿಕೊಂಡು ಸೀನನಿಗಾಗಿ ಕಾಯುತ್ತಿದ್ದ. ನಾಟಕಕ್ಕೆ ಬೇಕಾಗಿದ್ದ ಮೂರು ಬಾಳೆಹಣ್ಣುಗಳನ್ನು ತರಲು ಹೋಗಿದ್ದ ಸೀನ ಅದುವರೆವಿಗೂ ಪತ್ತೆ ಇರಲಿಲ್ಲ.

 ಸುನೀತ ಮತ್ತು ಮಮತಾ ‘ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ೧೯೯೬-೯೭ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ. ಕನಸೂರು. ಸರ್ವರಿಗೂ ಆದರದ ಸ್ವಾಗತ. ’ ಎಂದು ಬಣ್ಣ ಬಣ್ಣದ ಸೀಮೆ ಸುಣ್ಣದಲ್ಲಿ ಬೋರ್ಡಿನ ಮೇಲೆ ದಪ್ಪ ದಪ್ಪ ಅಕ್ಷರಗಳಲ್ಲಿ ಬರೆದು ಅದರ ಕೆಳಗೆ ಹೂವಿನ ಚಿತ್ರಗಳನ್ನು ಬಿಡಿಸಿದರು.

ವೆಂಕಟೇಷಪ್ಪ ಮತ್ತು ಇತರ ಮಾಸ್ತರುಗಳು ಕನಸೂರಿನ ಶ್ಯಾನುಭೋಗರನ್ನು, ಚೇರ್ಮನ್ ಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಹೋದರು.

 ಶಿಲ್ಪಾ ಮೇಡಂ ಸ್ವಾಗತ ಭಾಷಣದಲ್ಲಿದ್ದ ಸಾಲುಗಳನ್ನು ಹೇಗೆಲ್ಲಾ ಹೇಳಬೇಕೆಂದು ಶಾಲಿನಿಗೆ ಕೊನೆ ಹಂತದ ಸಲಹೆ ನೀಡುತ್ತಿದ್ದರು.

 ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಕಲಾವತಿ ಮೇಡಂ ವೇದಿಕೆಯಿಂದ, ಡ್ರೆಸ್ಸಿಂಗ್ ರೂಮಿಗೂ. ಅಲ್ಲಿಂದ ಇಲ್ಲಿಗೂ ಪಾದರಸದಂತೆ ಓಡಾಡುತ್ತಾ ಎಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ಇನ್ನು ಗೌತಮ ಬುದ್ಧ ಈ ಬಾರಿ ಪ್ರೇಮಲೋಕ ಸಿನಿಮಾದ ‘ಬಂದ್ಲು ಸಾರ್ ಹೋ ಹೋ ಶಕುಂತಲಾ ಹೋ ಹೋ ’ ಹಾಡಿಗೆ, ಏಳನೇ ತರಗತಿಯ ಸೂಪರ್ ಸಿನಿಯರ್ ಅಂಜಿನಿಯ ಜೊತೆ ಸೇರಿಕೊಂಡು ತಯಾರಿ ನಡೆಸಿದ್ದ.

ಅವರೆಲ್ಲರೂ ಬಣ್ಣ ಬಣ್ಣದ ಬಟ್ಟೆಗಳಲ್ಲಿ, ಟೋಪಿ ಬೂಟ್ಸು ಗಳಲ್ಲಿ ಮಿಂಚುತ್ತಿದ್ದರು.

ಅಂತೂ ಸೀನ ಶೆಟ್ಟರ ಅಂಗಡಿಯಿಂದ ಮೂರು ಪಚ್-ಬಾಳೆಹಣ್ಣು ತಂದವನೇ ಪುತ್ತುವಿನ ಕೈಗೆ ಕೊಟ್ಟನು.

 ‘ಲೋ ಸೀನ. ನಾಟಕದಲ್ಲಿ ಈ ಮೂರೂ ಬಾಳೆ ಹಣ್ಣು ಗಳನ್ನೂ ನಾನೇ ತಿನ್ನಬೇಕು. ಇಷ್ಟು ದೊಡ್ಡ ದೊಡ್ಡ ಬಾಳೆ ಹಣ್ಣು ತಂದಿದ್ದಿಯಲ್ಲ. ಹೆಂಗೋ ತಿನ್ನೋದು. ? ’ ಎಂದ. ಸೀನ ಶೆಟ್ಟರ ಅಂಗಡಿಯಲ್ಲಿ ದುಡ್ಡು ಮತ್ತು ಪ್ರಮಾಣ ಎರಡನ್ನೂ ಸಮೀಕರಿಸಿ ತಾಳೆ ನೋಡಿ, ಚೌಕಾಸಿ ಮಾಡಿ ಈ ಬಾಳೆ ಹಣ್ಣು ಗಳನ್ನು ತಂದಿದ್ದ. ಪುತ್ತುವಿನ ಮಾತಿಗೆ ಕ್ಯಾರೆ ಎನ್ನದೆ ಅಳಿಸಿ ಹೋಗಿದ್ದ ಮೀಸೆ ಬರೆಯಲು ಸೀಮೆಸುಣ್ಣ ಹುಡುಕಿ ತಂದು ಜರಿ ಮೀಸೆಯನ್ನು ಬಿಡಿಸಿದ.

 ಪ್ರಾರ್ಥನೆ, ಸ್ವಾಗತ ಭಾಷಣ, ಮುಖ್ಯೋಪಾಧ್ಯಾಯರ ಭಾಷಣ, ಊರಿನ ಮುಖ್ಯಸ್ಥರ ಭಾಷಣ, ಶಾಲಾ ವರದಿ ೯೬-೯೭. ಇವುಗಳ ಸತತ ದಾಳಿಯ ನಂತರ ಅಧಿಕೃತವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

‘ ಮೊದಲನೆಯದಾಗಿ ಕನ್ನಡಮ್ಮನಿಗೆ ನುಡಿ ನಮನವನ್ನು ಸಲ್ಲಿಸುತ್ತಾ, ಅಂಧಕಾರಾದ ಮಡುವಿನಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡು ಹೋಗುವಂತೆ ಪ್ರಾರ್ಥಿಸಲು ಏಳನೆಯ ತರಗತಿಯ ಮಕ್ಕಳು ನಿಮ್ಮ ಮುಂದೆ ಬರುತ್ತಿದ್ದಾರೆ. ’ ಕಲಾವತಿ ಮೇಡಂರ ಲವಲವಿಕೆಯ ಮಾತುಗಳು ಧ್ವನಿವರ್ಧಕಗಳ ದೊಗಲೆ ಬಾಯಿಯಿಂದ ಹೊರಬಂದವು.

‘ಹಚ್ಚೇವು ಕನ್ನಡ ದೀಪ, ಹಚ್ಚೇವು ಕನ್ನಡದ ದೀಪ ’ ಹಿನ್ನಲೆಯಲ್ಲಿ ಹಾಡು ಮೊಳಗಿತು. ವೇದಿಕೆಯ ಬಲಭಾಗದಲ್ಲಿ ಐದು ಜನ ಹುಡುಗಿಯರು, ಎಡ ಭಾಗದಲ್ಲಿ ಐದು ಜನ ಹುಡುಗಿಯರು ಒರಿಜಿನಲ್ ದೀಪಗಳನ್ನು ಹಿಡಿದುಕೊಂಡು ಸಾಲಾಗಿ ಬಂದರು. ವೇದಿಕೆಯ ಮೇಲೆ ಬರುತ್ತಿದ್ದಂತೆ ಪ್ರತಿಯೊಬ್ಬರ ಕೈಯಲಿದ್ದ ದೀಪವು ತಮ್ಮ ಮುಂದಿದ್ದವರ ಜಡೆಗೆ ತಗುಲಿ, ಏಕಕಾಲದಲ್ಲಿ ಎಲ್ಲರ ಜಡೆಗಳಿಗೂ ಬೆಂಕಿ ಹತ್ತಿತು. ದಿಪಗಳನ್ನು ಎಸೆದವರೇ ಕಿಟಾರನೆ ಕಿರುಚಿಕೊಂಡು ವೇದಿಕೆಯಿಂದ ಓಡಿ ಹೋದರು.

ಶುರುವಿನಲ್ಲೇ ಸ್ವಲ್ಪ ಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ಏನೂ ಆಗಿಯೇ ಇಲ್ಲವೆಂಬಂತೆ, ಎಲ್ಲರನ್ನೂ ಸಮಾಧಾನ ಪಡಿಸಿ ಅವರಿಂದಲೇ ಕಾರ್ಯಕ್ರಮ ಶುರುವಾಗುವಂತೆ ನೋಡಿಕೊಂಡವರು ಕಲಾವತಿ ಮೇಡಂ. ಒಂದಾದ ಮೇಲೆ ಒಂದರಂತೆ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿದ್ದವು.

ಕಲಾವತಿ ಟೀಚರ್ ಪುತ್ತುವಿನ ಬಳಿ ಬಂದು ‘ ಪುತ್ತು ರೆಡಿ ತಾನೆ. ಹೆದರ್ಕೋ ಬೇಡ. ಮುಂದಿನ ಕಾರ್ಯಕ್ರಮ ನಿಂದು. ಯಾವುದಕ್ಕೂ ಭಯ ಪಡಬೇಡ. ವೇದಿಕೆ ಸೈಡಲ್ಲಿ ನಾನು ನಿಂತಿರ್ತೇನೆ. ಏನಾದ್ರೂ ಭಯ ಆದ್ರೆ, ಮರೆತು ಹೋದ ಹಂಗಾದ್ರೆ ನನ್ನ ಕಡೆ ನೋಡು. ಗೊತ್ತಾಯ್ತ. ಆಲ್ ದಿ ಬೇಸ್ಟ್. ’ ಎಂದರು.

ಸೀನ - ‘ನಾನು ಸ್ಟೇಜ್ ಹತ್ರ ಕೂತಿರ್ತೀನಿ. ನೀನು ನಾಟಕದಲ್ಲಿ ಬಾಳೆ ಹಣ್ಣು ತರೋದಕ್ಕೆ ಬರ್ತಿಯಲ್ಲ, ಆಗ ನಾನು ಅಂಗಡಿಯವನ ತರಹಾ ಬಾಳೆ ಹಣ್ಣುಗಳನ್ನು ಕೆಳಗಿನಿಂದ್ಲೆ ಕೊಡ್ತೇನೆ. ’ ಎಂದ.

‘ಎಲ್ಲಾದರು ಹೋಗಿ ಬಿಟ್ಟಿಯೋ ಸೀನ. ಬಾಳೆ ಹಣ್ಣು ಹುಡುಕಿಕೊಂಡು ಈ ಪೆದ್ದ ಸ್ಟೇಜ್ ಬಿಟ್ಟು, ಇಳಿದು ಬಂದುಬಿಡ್ತಾನೆ. ’ ಎಂದರು ಟೀಚರ್.

ಸೀನ ವೇದಿಕೆಯ ಮುಂಬಾಗದಲ್ಲಿ ಹೋಗಿ ಕುಳಿತ. ಪುತ್ತು ವೇದಿಕೆಯ ಮೆಟ್ಟಿಲಿನ ಬಳಿ ಬಂದು ತನ್ನ ಸರತಿಗಾಗಿ ಕಾಯುತ್ತಾ ನಿಂತ. ಗೌತಮ ಮತ್ತು ಅವನ ಸೀನಿಯರ್ ಮಿತ್ರರು ತಮ್ಮ - ‘ಬಂದ್ಲು ಸಾರ್ ಹೋ ಹೋ ಶಂಕುಂತಲಾ ಹೋ ಹೋ ’ ಹಾಡಿಗಾಗಿ ಕಾಯುತ್ತಿದ್ದರು. ಸೀನಿಯರ್ ಶಾಲಿನಿ ಶಂಕುಂತಲ ಕೂಡ ಅವರ ಜೊತೆಯಲ್ಲಿದ್ದಳು. ಗೌತಮ, ಪುತ್ತುವಿನ ಕಡೆಗೆ ನೋಡುತ್ತಾ ಜೋಕು ಮಾಡಿದ. ಎಲ್ಲರೂ ನಕ್ಕರು.

‘ಈಗ ನಮ್ಮೆಲ್ಲರನ್ನು ಏಕಪಾತ್ರಾಭಿನಯದ ಮೂಲಕ ರಂಜಿಸಲು ನಾಲ್ಕನೆಯ ತರಗತಿಯ ಪುಟ್ಟರಾಜು ವೇದಿಕೆಯ ಮೇಲೆ ಬರುತ್ತಿದ್ದಾನೆ. ಎಲ್ಲರೂ ಚಪ್ಪಾಳೆಯ ಮೂಲಕ ಸ್ವಾಗತಿಸಬೇಕು. ’ ಕಲಾವತಿ ಮೇಡಂ ಘೋಷಿಸಿದರು.

ಪುತ್ತು ಇನ್ನೇನು ವೇದಿಕೆ ಮೇಲೆ ಹತ್ತಬೇಕು ಎನ್ನುವಷ್ಟರಲ್ಲಿ, ಅಂಜಿನಿ ಹಿಂದಿನಿಂದ ಪುತ್ತುವಿನ ಹಿಂದಕ್ಕೆ ಸಿಗಿಸಿದ್ದ ಕಚ್ಚೆ ಪಂಜೆಯ ಮಾಸ್ಟರ್ ಲಾಕ್ ಅನ್ನು ಎಳೆದ. ಪಂಜೆಯು ಬಿಚ್ಚಿಕೊಂಡು ನೆಲದ ಮೇಲೆ ಸೂರೆಯಾಯಿತು. ಎಲ್ಲರೂ ಗೊಳ್ಳೆಂದು ನಕ್ಕರು. ಪುತ್ತು ಹರಡಿದ್ದ ಪಂಜೆಯಷ್ಟನ್ನೂ ಬಾಚಿಕೊಂಡು ವೇದಿಕೆಯಿಂದ ಓಡಿ ಹೋದ. ಮುಂದಿನ ಕಾರ್ಯಕ್ರಮ ಮುಂದುವರೆಯಿತು.

ಪುತ್ತು ಸ್ಕೂಲಿನ ಕಟ್ಟೆಯ ಬಳಿ ಒಬ್ಬನೇ ಅಳುತ್ತಾ ಕುಳಿತ. ಕಲಾವತಿ ಟೀಚರ್ ಪುತ್ತುವಿಗಾಗಿ ಹುಡುಕಿದರು. ‘ ಕಲಾವತಿ ಟೀಚರ್ ನಿನ್ನ ಹುಡುಕ್ತಾ ಇದಾರೆ ಬಾರೋ ಪುತ್ತು ’ ಎಂದು ಸೀನ ಪುತ್ತುವನ್ನು ಹಿಡಿದು ವೇದಿಕೆಯ ಬಳಿ ಬಂದ. ಟೀಚರು ಪುತ್ತುವಿಗೆ ಸಮಾಧಾನ ಮಾಡಿ ವೇದಿಕೆಯ ಮೇಲೆ ದಬ್ಬಿದರು. ಪುತ್ತು ವೇದಿಕೆಯ ಮೇಲೆ ಬರುತ್ತಿದ್ದಂತೆಯೇ ಪುನಃ ಪ್ರೇಕ್ಷಕ ಸಮೂಹ ನಗೆಗಡಲಿನಲ್ಲಿ ತೇಲಿ ಹೋಯಿತು.

‘ನೋಡಿ ಇಲ್ಲಿ ನಿಂತುಕೊಂಡ್ರೆ ಗುರು ’ ಎರಡು ಹೆಜ್ಜೆ ಪಕ್ಕಕೆ ಇಟ್ಟು ‘ಇಲ್ಲಿ ನಿಂತುಕೊಂಡ್ರೆ ಶಿಷ್ಯ’ ಎಂದು ಹೇಳಿದ.
ಬಲಭಾಗದಲ್ಲಿ ನಿಂತು ‘ಶಿಷ್ಯಾ ಶಿಷ್ಯಾ ’ ಎಂದ.
ಎಡಭಾಗಕ್ಕೆ ಓಡಿ ಹೋಗಿ ನಿಂತು ಏನನ್ನೋ ಓದುವುದರಲ್ಲಿ ಮಗ್ನನಾಗಿರುವಂತೆ ಪೋಸು ನೀಡಿದ.
ಪುನಃ ಬಲಭಾಗಕ್ಕೆ ಬಂದು ‘ಶಿಷ್ಯಾ ಶಿಷ್ಯಾ ’ ಎಂದ. ಈ ರೀತಿ ಮೂರು ಬಾರಿ ಆಚೆ ಈಚೆ ಮಾಡಿದ ಮೇಲೆ ಶಿಷ್ಯನಿಗೆ ಎಚ್ಚರವಾಯಿತು.

ಒಂದಷ್ಟು ಕುಶಲೋಪರಿಯ ನಂತರ. ಬಲಭಾಗದಲ್ಲಿ ನಿಂತು ಗುರುವಿನಂತೆ
‘ ಶಿಷ್ಯಾ ಅಂಗಡಿಗೆ ಹೋಗಿ ಮೂರು ಬಾಳೆ ಹಣ್ಣು ತಗೋಂಡ್ ಬಾ. ’ .

ಎಡಭಾಗಕ್ಕೆ ಓಡಿಹೋಗಿ ಶಿಷ್ಯನಂತೆ :‘ ಸರಿ ಗುರುಗಳೇ ’ ಎಂದು ಹೇಳಿ ದುಡ್ಡು ಕೊಟ್ಟವನಂತೆ ಮಾಡಿ, ದುಡ್ಡು ಪಡೆದವನಂತೆ ಮಾಡಿ ಅಂಗಡಿಗೆ ಹೊರಟ.

ವೇದಿಕೆಯ ಅಂಚಿನಲ್ಲಿದ್ದ ಸೀನನ ಕೈಯಿಂದ ಬಾಳೆ ಹಣ್ಣು ಪಡೆದು ವಾಪಾಸು ಬರುವಾಗ -
‘ಗುರುಗಳು ಮೂರು ಬಾಳೆ ಹಣ್ಣು ಯಾಕೆ ತರೋದಕ್ಕೆ ಹೇಳಿದ್ದಾರೆ. ? ಪೂಜೆಗೆ ಕೇವಲ ಎರಡು ಬಾಳೆ ಹಣ್ಣುಗಳನ್ನು ಮಾತ್ರವಲ್ಲವೇ ಬಳಸುವುದು. ?’ ಎಂದು ತನಗೆ ತಾನೆ ಪ್ರಶ್ನಿಸಿಕೊಂಡ. ‘ ಹಂಗಾದ್ರೆ ಉಳಿದ ಒಂದು ಬಾಳೆ ಹಣ್ಣನ್ನು ತಿಂದು ಬಿಡಬಹುದಲ್ಲವೇ ’ ಎಂದು ನಿರ್ಧರಿಸಿದ.

ಸಂಜೆಯಿಂದಲೂ ಬಾಳೆ ಹಣ್ಣುಗಳನ್ನು ಕೈಯಲ್ಲೇ ಹಿಡಿದು ಕೊಂಡಿದ್ದರಿಂದ ಅವುಗಳು ಸಂಪೂರ್ಣವಾಗಿ ಮೆತ್ತಗಾಗಿ ಹೋಗಿದ್ದವು. ಸರಿ ಒಂದು ಬಾಳೆ ಹಣ್ಣಿನ ಸಿಪ್ಪೆಯನ್ನು ಸಂಪೂರ್ಣವಾಗಿ ಸುಲಿದು ಗುಳುಂ ಗುಳುಂ ಎಂದು ನಟಿಸುತ್ತಾ ತಿಂದ.

ತಿನ್ನುವ ಶೈಲಿಯಿಂದಲೇ ಪ್ರೇಕ್ಷಕರು ನಕ್ಕರು. ಸರಿ ಬಾಳೆಹಣ್ಣು ತಿಂದಾಯಿತು. ಸಿಪ್ಪೆಯನ್ನು ಏನು ಮಾಡುವುದು. ? ಸ್ಟೇಜ್ ಮೇಲೆ ಹಾಕಲಿಲ್ಲ. ವೇದಿಕೆಯ ಬಳಿ ನಿಂತಿದ್ದ ಕಲಾವತಿ ಮೇಡಂ ಕಡೆಗೆ ನೋಡಿದ. ಅವರು ಏನಾಯಿತು. ? ಎಂಬಂತೆ ಪ್ರಶ್ನಿಸಿದರು. ಪುತ್ತು ಸೀದಾ ಮೈಕಿನ ಹತ್ತಿರ ಹೋದವನೇ

‘ಟೀಚರ್ ಸಿಪ್ಪೆ ಎಲ್ಲಿ ಹಾಕಲಿ. ? ’ ಎಂದ.

ಅಷ್ಟೇ ಪ್ರೇಕ್ಷಕ ಸಮೂಹ ಬಿದ್ದು ಬಿದ್ದು ನಗಲು ಪ್ರಾರಂಭಿಸಿತು.
ಬಾಳೆ ಹಣ್ಣಿನ ಸಿಪ್ಪೆಯನ್ನು ಕೈಯಲ್ಲಿ ಹಿಡಿದು ಟೀಚರ್ ಕಡೆಗೆ ನೋಡುತ್ತಾ ಪುನಃ ಮೈಕಿನಲ್ಲಿ ಕೇಳಿದ

‘ಟೀಚರ್ ಸಿಪ್ಪೆ ಎಲ್ಲಿ ಹಾಕಲಿ. ?’ ಎಲ್ಲರೂ ಗೊಳ್ಳೆಂದು ನಕ್ಕರು.

ಕಲಾವತಿ ಟೀಚರು, ಸೀನ ತಲೆ ತಲೆ ಚಚ್ಚಿಕೊಂಡರು.
ಎಲ್ಲರಿಗಿಂತ ಹೆಚ್ಚು ನಕ್ಕವರೆಂದರೆ ವೆಂಕಟೇಶಪ್ಪ ಮಾಸ್ಟರು.

Comments

  1. sooper maga ...
    chikka hudugara mughdhathe chennagi nirupisidiya... :-)
    mundhakke yenaaythu..?! kaathuranaagidinni..!!

    ReplyDelete

Post a Comment

Popular posts from this blog

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು. ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ. ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ. ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು. 'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು. ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ... 'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ ' ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು. ' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು. ' ಲ

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು. ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ. ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿ

ಇಬ್ಬರು ಪೋಕರಿ ಮಕ್ಕಳ ಜೊತೆಗೆ

ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್ ಕೆ ಜಿ. ಮರಿ ಬ್ರದರ್ಸ್. ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು' ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು......  ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ ಬಾಧೆ. ' ಏನ್ರೋ ಮಾಡ್ತಿದ್ದೀರ ಅಲ್ಲಿ. ?' ಕೂಗಿದೆ. ' ಹಾ ಏನೋ ಮಾಡ್ತಿದೀವಿ. ನಿಂಗೇನು?? ' ಎಕೋ ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ ತಮ್ಮರಿಂದ ಬಂದವು. ಹತ್ತಿರ ಹೋಗಿ ನೋಡಿದೆ. ಕಿರಾತಕರು ತಾತನ ಶೇವಿಂಗ್ ಬ್ಲೇಡು ಕದ್ದು ತಂದು ಹುಲ್ಲು ಕಟಾವು ಮಾಡುತ್ತಿದ್ದರು. 'ಲೇ ಉಗ್ರಗಾಮಿಗಳ, ಕೊಡ್ರೋ ಬ್ಲೇಡು. ಡೇಂಜರ್ ಅದು. ಕೈ ಕುಯ್ದುಬ

ಎಮ್ಮೆ ಕಾನೂನು ; ಜಸ್ಟಿಸ್ ಡೀಲೈಡ್ ಈಸ್ ಜಸ್ಟಿಸ್ ಡಿನೈಡ್

'ಜನನ ಪ್ರಮಾಣ ಪತ್ರ' ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿಂಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕಂಡು 'ನಾನು ಹುಟ್ಟಿರುವುದು ಸತ್ಯ ಎಂದು ಇರುವಾಗ,  ಎಲ್ಲೋss ಒಂದು ಕಡೆ ಜನನ ಆಗಿರಲೇಬೇಕಾಗಿಯೂ,  ಸೊ ಅದನ್ನು  ಪರಿಗಣಿಸಿ ದಾಖಲೆ ಒದಗಿಸಬೇಕಾಗಿಯೂ ' ಕೇಳೋಣವೆಂದು ಹೊರಟೆ. 1995ಮಾಡೆಲ್ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದಂತೆ - ' ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ.  ಮಕ್ಳು-ಮರಿ ಓಡಾಡ್ತಿರ್ತವೆ ' ಕೀರಲು ಧ್ವನಿಯೊಂದು ಒಳಗಿನಿಂದ ಕೇಳಿಸಿತು. ಬ್ರೇಕ್ ನ ಮೇಲೆ ಹತ್ತಿ-ನಿಂತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ.  ಅಷ್ಟೋಂದು ಕಂಡೀಶನ್ ನಲ್ಲಿರುವ ಬೈಕನ್ನು,  ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ. ? ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ,  ಗಾಡಿ ಓಡಿಸಬೇಕು.  ಅವರು ಅಡ್ಡ-ಬರುವುದನ್ನು ಮೊದಲೇ. , ಊಹಿಸಿ ಸ್ವಲ್ಪ ದೂರದಿಂದಲೇ ಬ್ರೇಕು-ಕಾಲು ಉಪಯೋಗಿಸಿ,  ಬೈಕು ನಿಲ್ಲಿಸಬೇಕು.  ಹಾರನ್ನು ಇಲ್ಲದಿರುವುದರಿಂದ ಕ್ಲಚ್-ಹಿಡಿದು ಅಕ್ಸಿಲರೇಟರ್ ರೈಸ್  ಮಾಡಿ ಬರ್-ರ್-ರ್sssss ಎಂದು ಶಬ್ದ ಮಾಡುತ್ತಾ ದಾರಿ ಬಿಡಿಸಿಕೊಳ್ಳಬೇಕು. ಬೈಕ್-ಸ್ಟಾರ್ಟ್ ಮಾಡಿ ಮನೆಯಿಂದ ನೂರು-ಗಜ ಕೂಡ ಮುಂದೆ ಬಂದಿರಲಿಲ್ಲ,  ಅಂಗಡಿ-ಲಕ್ಕಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆಂದು, ಹಲ್ಲು-ಬಿಡುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು. &

ಬಿಸಿಲುಕುದುರಿ-ಸವಾರಿ ; ಚೆನ್ನೈ ಬಸ್ ಪಯಣದ ಒಂದು ಅನುಭವ

ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ. ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ, ‌ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್ ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು. ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ ಹಾಕಿಸಿಕೊಂಡವರಿರಬಹುದು ಎಂದು

ತೀರದ ಹುಡುಕಾಟ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. 'ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.' ​ಹೀಗಿರುವಾಗ ರೆಕ್ಕೆ ಮೂಡಿ ವರುಷಗಳು ಕಳೆದರೂ ನನ್ನನ್ನು ಹಾರಲು ಬಿಡಲಿಲ್ಲವೇಕೆ.? ಅರೆ!! ಮನುಷ್ಯರು ಎನಿಸಿಕೊಂಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊಂಡಿದ್ದರಲ್ಲಿ, ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ. ? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ. ಅದೇನೋ ನಮಗಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವಂತೆ ನಡೆದುಕೊಳ್ಳುವರಲ್ಲಾ... ನಿನಗೊಂದು ಒಳ್ಳೆಯ ಭವಿಷ್ಯ ಕಟ್ಟಬೇಕು ಎಂಬ ಸುಳ್ಳು ಆಸೆಗಳು. ನಾನಿನ್ನು ಚಿಕ್ಕವನಾ..? ನನ್ನ ಆಲೋಚನೆಗಳು ಎಲ್ಲರಿಗಿಂತಲೂ.., ಎಲ್ಲದಕ್ಕಿಂತಲೂ ಭಿನ್ನ. ಏನನ್ನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊಂಬೆಯನ್ನಾಗಿಸಿದರು. ಅಮ್ಮ ಹೇಳುವಳು ‘ ಅಪ್ಪ ನಿನ್ ಮೇಲೆ ಅತೀ ಪ್ರೀತಿ ಇಟ್ಟಿದಾನೆ ’. ಎಲ್ಲರೂ ಅವರವರ ಸ್ವಾರ್ಥದ ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರು. ಛೇ ಭವಿಷ್ಯದ ವಿಶ್ವಮಾನವನಿಗೆ ಎಂಥಹ ದುರಂತ ಪೋಷಕರು. ಯಾರೋ ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ತಮ್ಮ ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹಂಬಲ

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)  ' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ' ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ.  ಬಹುಷಃ ಹಳೇ ಸಿನಿಮಾಗ

ಕಪ್ಪು ಗುಲಾಬಿ

ಅದೊಂದು ಗೋವಾದ ಪ್ರೈವೇಟ್ ಬೀಚು. ಮಲೈಮಾ!! ಕಂಪನಿಯಿಂದ ಸಹೋದ್ಯೋಗಿಗಳೆಲ್ಲಾ ಮೂರು ದಿನಗಳ ಪ್ರವಾಸಕ್ಕೆಂದು ಹೋಗಿದ್ದರು. ಗೆಳೆಯರ ಗುಂಪು ನೀರಿಗಿಳಿದು ಆಡುತ್ತಿದ್ದರು!! ಅಲೆಯಿಂದ ದೂರದಲ್ಲಿ... ಮರಳಿನ ದಿಬ್ಬದ ಮೇಲೆ ಗೂಡು ಕಟ್ಟುತ್ತಾ ಒಂಟಿಯಾಗಿ ಕುಳಿತಿದ್ದಳು ರಾಧ. ನೀರಿನಿಂದ ಹೊರ ಬಂದು ವಿನೋದ, ರಾಧಾಳ ಬಳಿ ಕುಳಿತ. 'ಏನಿದು ತಾಜಾ ಮಹಲ!! ಅಥವಾ ರಾಧ ಮಂಟಪಾನ..?' ಅವಳು ಕಟ್ಟುತ್ತಿದ್ದ ಗೂಡಿಗೆ ಹಿಂಬದಿಯಿಂದ ತೂತು ಕೊರೆಯುತ್ತಾ ಕೇಳಿದ. ' ಎರಡೂ ಅಲ್ಲ!! ' ಎನ್ನುತ್ತಾ ಮೆತ್ತಗೆ ಕೈ ಹೊರ ತೆಗೆದಳು. ಗೂಡು ಬೀಳಲಿಲ್ಲ. 'ವಿನು!! ಒಂದು ವಾಕ್ ಹೋಗಿ ಬರೋಣ .... ಬಂದು ಹೋಗೋ ಅಲೆಗಳ ಹಸಿ ಮರಳಿನ ಮೇಲೆ ಹೆಜ್ಜೆ ಗುರುತು ಬಿಡುತ್ತಾ ನಡೆಯೋದು ಚೆನ್ನಾಗಿರತ್ತೆ' ಅಂದಳು. 'ಸುಂದರವಾದ ಹುಡುಗಿ!!, ಸೂರ್ಯಾಸ್ತ ಆಗೋ ಹೊತ್ತಲ್ಲಿ , ಸಮುದ್ರದ ದಡದಲ್ಲಿ ಹೆಜ್ಜೆ ಗುರುತು ಬಿಡೋದಕ್ಕೆ ಕರೆದರೆ!! ಬರಲ್ಲ ಅಂತ ಹ್ಯಾಗೆ ಹೇಳಲಿ. ನಡೆ ಹೋಗೋಣ!!!' ಅಂದ. ಇಬ್ಬರೂ ಎದ್ದು ಹೊರಟರು. ಎದುರಿಗೆ ಬರುತ್ತಿದ್ದ ಬಿಕಿನಿ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ವಿನೋದನ ಕಾಲರ್ ಹಿಡಿದು ಜಗ್ಗಿ ಹೇಳಿದಳು ' ನೀನು ತುಂಬಾ ಕೆಟ್ಟು ಹೋಗ್ತಾ ಇದಿಯ ಕಣೋ!! ' . 'ಯಾಕೆ..? ನಾನೇನ್ ಮಾಡಿದೆ..?' ಎಂದ. 'ಹುಡುಗೀರನ್ನೇ ನೋಡದೆ ಇರೋನ ತರಹ.. ಆ ಅವಳನ್ನ ಬಾಯಿ ಬಿಟ್ಟುಕೊಂಡು ನೋಡ್ತೀಯಲ್ಲ ಅದಕ್

ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ. ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ ಸುತ್ತು, **ಪೋಷಾಕು** ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ, ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು, ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್ ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು. ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು 'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ. ನನ್ನನ್ನು ನೋಡುತ್ತಿದ್ದಂತೆ ಅಮ

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು. ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು. ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ. ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ, ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು. ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು. ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ, ಇವರನ್ನು ಒಂದೇ ಮನೆಯ ಅಣ್ಣ ತ