ಟಾಟಾ ವಿಕಾಸ್ ; ಜೀವನೋತ್ಸಾಹಕ್ಕೆ ವಿಕಾಸದ ಹೆಸರು

ಎಜುಕೇಶನ್ ಕಂಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕಂಪನಿಯ, ಮೊದಲ ಕೆಲವು ದಿನಗಳು ನಿಜಕ್ಕೂ ಅವಿಸ್ಮರಣೀಯ ವಾಗಿರುತ್ತವೆ. ಯಾಕಂದ್ರೆ ಲಾರ್ವ ದಿಂದ ಕಪ್ಪೆ ಆಗಿ ಬೆಳವಣಿಗೆ ಹೊಂದುವಂತೆ, ನಾವು ಪ್ರೊಡಕ್ಟಿವ್ ಆಗಿ ಬದಲಾಗುವ ಸುವರ್ಣ ತಿರುವು ಇದು. ನಮ್ಮ ಕಂಪನಿಯ ಮೊದಲ ತರಬೇತಿಯ ದಿನಗಳು ಸೂಪರ್ ಆಗಿದ್ದವು. ಹಲವಾರು ರಾಜ್ಯಗಳಿಂದ ಬಂದ, ವಿವಿಧ ಭಾಷೆಗಳಿಂದ ಕೂಡಿದ ವೈವಿಧ್ಯಮಯ ತಾಣ ತ್ರಿವೇಂಡ್ರಮ್ ನಲ್ಲಿದ್ದ ನಮ್ಮ learning temple. ಈ ತರಬೇತಿಯ ಹೆಸರು ILP. ಅಂದರೆ initial learning program. ನಲವತ್ತು ದಿನಗಳ ಈ ತರಬೇತಿ ಶಿಬಿರದಲ್ಲಿನ ಮೋಜು, ಮಸ್ತಿ, ನಾಲಕ್ಕು ವರ್ಷಗಳ ಇಂಜಿನಿಯರಿಂಗ್ ಜೀವನ ಮರುಕಳಿಸಿದಂತಿತ್ತು. 
ಈಗ ನಾನು ಹೇಳ ಹೊರಟಿರುವ ಅದ್ಭುತ ವ್ಯಕ್ತಿಯ ಹೆಸರು ವಿಕಾಸ್. ನನ್ನನ್ನು ಅತಿಯಾಗಿ ಕಾಡಿದ್ದು ವಿಕಾಸ್ ನ ಅಗಾಧ Talent ಅಲ್ಲ. ಬದಲಾಗಿ ವಿಕಾಸ್ ನಲ್ಲಿದ್ದ ಬತ್ತಿ ಹೋಗದ ಉತ್ಸಾಹ ಮತ್ತು ಜೀವನ ಪ್ರೀತಿ. ವಿಕಾಸ್ ನಮ್ಮ ಇಂಗ್ಲೀಷ್ ಕಮ್ಯುನಿಕೇಶನ್ ಟೀಚರ್. ಸಂಪೂರ್ಣ ದೃಷ್ಟಿಯೇ ಇಲ್ಲದ ವಿಕಾಸ್, ಕಣ್ಣುಗಳಿರುವ ನಮಗೆಲ್ಲಾ ದಾರಿದೀಪ. 

ಮೊದಲ ದಿನ ತನ್ನ ಪರಿಚಯ ಮಾಡಿಕೊಂಡು, ಟೀಚಿಂಗ್ ಸೆಷನ್ ಶುರು ಮಾಡುವುದಕ್ಕೆ ಅಣಿಯಾದ ವಿಕಾಸ್. ಬಹುಶಃ ಎಬಿಲಿಟಿ ಇಲ್ಲದೆ ಇದ್ದರೂ, ಅಂಧ ಎನ್ನುವ ಕಾರಣಕ್ಕೆ ಸಹಾನುಭೂತಿ ಪಡೆದು ಬಂದಿರಬಹುದು. ಪಾಪ!! ಕಂಪನಿಯವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸುವ ಸಲುವಾಗಿ, ಅಂಧನನ್ನು ಬಲಿಪಶು ಮಾಡಿರುವರು ಎಂದುಕೊಂಡೆನು. ನಮಗೆಲ್ಲಾ, ಈತ ಏನ್ ತಾನೇ ಮಾಡೋದಕ್ಕೆ ಸಾಧ್ಯ ಅನ್ನೋ ತಾತ್ಸಾರ ಒಂದು ಕಡೆ ಆದರೆ, ಏನು ಮಾಡಬಹುದು ಅನ್ನೋ ಕಾತುರ ಇನ್ನೊಂದು ಕಡೆ. 

ನೂರಕ್ಕೂ ಜಾಸ್ತಿ ಜನರಿದ್ದ ಆಡಿಟೋರಿಯಂ. ಅಕ್ಷರಶಃ. ಪಿನ್ ಡ್ರಾಪ್ ಸೈಲೆಂಟ್. ವಿಕಾಸ್ ಪ್ರೊಜೆಕ್ಟರ್ ಆನ್ ಮಾಡಿ, ಕಂಪ್ಯೂಟರ್ ಲಾಗಿನ್ ಆಗ್ತಾ ಇದ್ದ ಹಾಗೆ, ನಾವುಗಳು ಬೆನ್ನು ನೇರ ಮಾಡಿಕೊಂಡು, ನಮ್ಮ ಸೀಟಿನ ತುದಿಗೆ ಬಂದು ಕುಳಿತೆವು. ವಿಕಾಸ್, ಆ ದಿನದ ತರಬೇತಿಗೆ ಬೇಕಾಗಿದ್ದಂತಹ ಪ್ರಸೆಂಟೇಷನ್ ಅನ್ನು, ಕಂಪ್ಯೂಟರಿನ ಮಿದುಳಿನಿಂದ ಹೆಕ್ಕಿ ತೆಗೆದು ಪರದೆಯ ಮೇಲೆ ಬಿಂಬಿಸುವ ತನ್ನ ಕಾರ್ಯದಲ್ಲಿ ಮಗ್ನನಾಗಿದ್ದ. ಆತ ಕಂಪ್ಯೂಟರ್ ಬಳಸುತ್ತಿದ್ದ ರೀತಿಯೇ ಒಂಥರಾ ಮ್ಯಾಜಿಕ್ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಎತ್ತ ಎತ್ತಲಾಗೋ ನೋಡಿಕೊಂಡು, ವಿಕಾಸ್, ಕಂಪ್ಯೂಟರಿನಲ್ಲಿ. ಪ್ರೆಸಂಟೇಷನ್ ಇಟ್ಟಿದ್ದ ಲೋಕೇಶನ್ ಟೈಪ್ ಮಾಡುತ್ತಿದ್ದ. ಬೃಹತ್ ಪರದೆಯ ಮೇಲೆ ಆತನ ಕೈಚಳಕ ಕಾಣಿಸುತ್ತಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದೆವು. 

C://datasource/ilp/ ಎಂದು ಟೈಪ್ ಮಾಡುವ ಬದಲು C://datadource/ilp/ ಎಂದು ಟೈಪ್ ಮಾಡುತ್ತಾ ಹೋದ. ಎಲ್ಲರು ವಿಕಾಸ್ ಮಾಡಿದ ಟೈಪೋ ಮಿಸ್ಟೇಕ್ ಹೇಳಬೇಕೆಂದು ಹೊರಟೆವು. ಅಷ್ಟರಲ್ಲಿ ವಿಕಾಸ್ ತನಗೆ ತಾನೇ ಟೈಪ್ ಮಾಡಿದಷ್ಟೇ ವೇಗದಲ್ಲಿ backspace ಒತ್ತುತ್ತಾ ಬಂದು exact ಆಗಿ datad ಬಳಿ ನಿಲ್ಲಿಸಿ d ತೆಗೆದು s ಹಾಕಿ ಅದೇ ವೇಗದಲ್ಲಿ ಪುನಃ ಪ್ರೋಸಿಡ್ ಆದನು. ಆ ಕ್ಷಣ ನಮ್ಮಲ್ಲಿ ಉಂಟಾದ ಭಾವೋದ್ವೇಗವನ್ನು ಪದಗಳಲ್ಲಿ ಕಟ್ಟಿ ಕೊಡಲು ಸಾಧ್ಯವಿಲ್ಲ. ಎಲ್ಲರೂ ಒಕ್ಕೂರಲಿನಿಂದ ಚಪ್ಪಾಳೆ ತಟ್ಟಿದೆವು. ಪಾಪ!! ವಿಕಾಸ್ ಗೆ ನಾವು ಚಪ್ಪಾಳೆ ತಟ್ಟಿದ್ದು ಯಾಕೆಂದೂ ಅರ್ಥವಾಗಲಿಲ್ಲ. 

ಇದು ವಿಕಾಸ್, ನಮ್ಮ ಮೂಲಭೂತ ನಂಬಿಕೆಗಳಿಗೆ ಕೊಟ್ಟ ಮೊದಲ ಚಡಿ ಏಟು. ಇದು ವಿಕಾಸ್, a man with vision with no eyes. ನಡೆದಾಡುವ ಉತ್ಸಾಹದ ಚಿಲುಮೆ. 

ಇಂಜಿನಿಯರಿಂಗ್ ಕ್ಲಾಸುಗಳಿಂದಾಗಿ ಈ ಮೆದುಳಿನ ಮೇಲೆ ಉಂಟಾಗಿರುವ ತೀವ್ರತರವಾದ ಹಾನಿ ಎಂದರೆ, ಬಹಳ ಬೇಗ ಅದು ನಿದ್ರೆಗೆ ಜಾರಿ ಬಿಡುತ್ತದೆ. ಕ್ಲಾಸ್ ತೆಗೆದುಕೊಳ್ಳುವುದು ಹಾಗಿರಲಿ, ಯಾರಾದರು ಬರಿ ಅರ್ಧ ಘಂಟೆಗಿಂತ ಜಾಸ್ತಿ ನಿರಂತರವಾಗಿ ಮಾತನಾಡಿದರು ಸಾಕು. ಅನಾಯಾಸವಾಗಿ ನಿದ್ರೆಗೆ ಜಾರಿ ಬಿಡುತ್ತಿದ್ದೆ. ಆದರೆ ವಿಕಾಸ್ ಕ್ಲಾಸ್ ಅಂದ್ರೆ ಆ ರೀತಿ ಬೋರ್ ಇರ್ತಾ ಇರಲಿಲ್ಲ. ಯಾಕಂದ್ರೆ ವಿಧ ವಿಧವಾದ ಆಕ್ಟಿವಿಟಿಸ್ ಇರ್ತಾ ಇತ್ತು ಆ ಕ್ಲಾಸಲ್ಲಿ. ಎಲ್ಲರನ್ನೂ involve ಮಾಡಿಕೊಂಡು ನಡೆಸುತ್ತಿದ್ದ ತರಬೇತಿ ಅದ್ಭುತ ವಾಗಿರುತ್ತಿತ್ತು. ತನ್ನ ಜವಾಬ್ದಾರಿಯನ್ನು ಅಷ್ಟೇ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರೂ- "ಬಹುಶಃ ನಾನು ನನ್ನ ವೃತ್ತಿಗೆ ನ್ಯಾಯ ಒದಗಿಸುತ್ತಿರುವೇನೋ, ಇಲ್ಲವೋ" ಎಂದು ತನ್ನನ್ನು ಪ್ರಶ್ನಿಸಿಕೊಳ್ಳುತ್ತಾ, 'ಸಾರಿ' ಕೇಳುತ್ತಿದ್ದುದು ಆತನ ನ್ಯೂನ್ಯತೆಯ ಮೀರಿದ ಸಾಮರ್ಥ್ಯಾದಾಚೆಗು ಇದ್ದ ವೃತ್ತಿಪರತೆಯ ಕಡೆಗಿನ ತುಡಿತಕ್ಕೆ ಸಾಕ್ಷಿಯಾಗಿತ್ತು. ಎಶ್ಟು ಜನ ಟೀಚರ್ ಗಳಿಗಿದೆ, ಇಶ್ಟು ಆತ್ಮಾವಲೋಕನ ಮಾಡಿಕೊಳ್ಳುವ ಬುದ್ಧಿ. 

ಒಮ್ಮೆ ಕ್ಲಾಸಿನಲ್ಲಿ, ಇಂಗ್ಲೀಷ್ ನಾಟಕ ಮಾಡಿದ್ದೆವು. ಆ ನಾಟಕದಲ್ಲಿ ಜೂನಿಯರ್ ಹುಡುಗಿಗೆ ರಾಗಿಂಗ್ ಮಾಡುವ ಸೀನಿಯರ್ ಹುಡುಗನ ಪಾತ್ರ ನನ್ನದಾಗಿತ್ತು. ಆದರೆ ಆ ಹುಡುಗಿಯ ಮುಂದೆ ನಿಂತಾಗ ಡೈಲಾಗ್ ಮರೆತು ಹೋಗಿ ಬೇಬೆ ಎನ್ನುತ್ತಿದ್ದೆ. ಆಗ ವಿಕಾಸ್ "ಅರೆ!! ಸೀನಿಯರ್. ಹುಡುಗಿ ಮುಂದೆ ಮಾತು ಮರೆತು ಹೋಯ್ತಾ. ?" ಅಂತ ಕಿಚಾಯಿಸಿದ್ದರು. ತಾಜಾ ಉದಾಹರಣೆಗೊಂದಿಗೆ ಲೈವ್ಲಿ ಯಾಗಿ ಕ್ಲಾಸ್ ಕ್ಯಾರಿ ಮಾಡುತ್ತಿದ್ದ ಆತನ ಸೆನ್ಸ್ ಆಫ್ ಹ್ಯೂಮರ್ ಮತ್ತು ಎನರ್ಜಿ ಗೆ ಒಂದು ಸಲಾಂ. 

ಪ್ರತಿಯೊಬ್ಬರೂ ಯಾವುದಾದರೊಂದು ವಿಷಯದ ಮೇಲೆ ಐದು ನಿಮಿಷಗಳ ಕಾಲ ಮಾತನಾಡುವುದು, ನಂತರ ವಿಕಾಸ್ ಅವರ ಇಂಗ್ಲೀಷ್ ನ ವ್ಯಾಕರಣ ತಪ್ಪುಗಳು, ಶೈಲಿ, ಪದ ಉಚ್ಚಾರಣೆಯಲ್ಲಿನ ದೋಷ, ವಿಷಯದ ಮೇಲಿನ ಹಿಡಿತ, ಮಾತಿನಲ್ಲಿನ confidence. ಇವುಗಳ ಬಗ್ಗೆ ಎಳೆ ಎಳೆಯಾಗಿ ಒಬ್ಬೊಬ್ಬರಿಗೂ ವಿವರವಾದ ಸಲಹೆ ಸೂಚನೆಗಳನ್ನು ನೀಡುವುದು. ಹೀಗೆ ಸಾಗಿತ್ತು ನಮ್ಮ ತರಬೇತಿ. ಒಟ್ಟಾರೆ ಎಲ್ಲರ ಮಾತುಗಳನ್ನೂ, ಎಲ್ಲರ ತಪ್ಪುಗಳನ್ನೂ ಗ್ರಹಿಸಿದ ಮೇಲೆ, ನಿಜವಾಗಲು ಇದೊಂದು ಅತ್ಯಂತ ಯಶಸ್ವಿ ಮಾದರಿಯ ಕಲಿಕೆಯ ಪದ್ಧತಿ ಎನ್ನಿಸಿತು. 

ಆದರೆ ನನಗನ್ನಿಸಿದ್ದು.., ಇದು ವಿಕಾಸ್ ಮಾತ್ರ ಇಷ್ಟು ಯಶಸ್ವಿಯಾಗಿ ನಡೆಸಿಕೊಡಲು ಸಾಧ್ಯ. ಯಾಕಂದ್ರೆ ಕಣ್ಣುಗಳಿರುವವರ ಗಮನ, ಗೆಶ್ಚರ್ ಮೇಲೆಯು ಹರಿಯುವುದರಿಂದ ಇಷ್ಟು ವಿವರವಾಗಿ ಓರಲ್ ಕಮ್ಯುನಿಕೇಶನ್ ನಲ್ಲಿರುವ ಆಳ ಅಗಲಗಳನ್ನು ಗ್ರಹಿಸಲಾರರು. ಬಹುಶಃ ತಮ್ಮಲ್ಲಿನ ನ್ಯೂನ್ಯತೆಗಳನ್ನು ವರದಂತೆ ಬಳಸಿಕೊಳ್ಳುವುದು ಅಂದರೆ ಇದೆ ಇರಬೇಕು. 


ವಿಕಾಸ್ ಕ್ಷಮೆ ಕೋರುತ್ತಾ. 

Comments

 1. inthavara bagge odhidhre... ondthara hesige ansutthe maga... yella iddhu... naavu jevanadalli kelavomme uthsahane thorsallvalla antha...!!
  Anyway.., Thanks for sharing about such a wonderful person.

  ReplyDelete
 2. ನಿಜ ಚೇತನ್, ವಿಕಾಸ್ ಜೀವನ ಪ್ರೀತಿ ಮೆಚ್ಚುವಂತದ್ದು. ಅವರಿಗೆ ಪ್ರತಿ ರೂಂ ಹೆಜ್ಜೆ ಲೆಕ್ಕದ ಮೇಲೆ ನೆನಪು ಇರ್ತ್ತಿತ್ತು. ಅವರ ಕಂಪ್ಯೂಟರ್ ಅಪರೆಟ್ ಮಾಡೋ ರೀತಿ ಕಣ್ಣು ಕಾಣಿಸುವವರಿಗೂ ನಾಚಿಕೆ ಆಗೋ ಹಾಗೆ ಇರ್ತಿತ್ತು. ಹ್ಯಾಟ್ಸ್ ಆಫ್ ಟು ಹಿಮ್.

  ReplyDelete
  Replies
  1. Thanks Vishal!!! I am happy that at least I got one feedback from those, who had the same feeling on vikas .. thanks for witnessing.

   Delete
 3. Energy flows through all our senses. If a person is blind, then the part energy, which needed to flow towards eye, flows through ears. That is why they can hear every single note of communication...

  Good one...

  ReplyDelete
  Replies
  1. Thanks maga!! his love towards life raa!! sooper

   Delete

Post a Comment