16/07/2007 16-07-2007 ಯುವದಸರ, ಮೈಸೂರು. ನರೇಶ್ ಐಯರ್ ರಸಸಂಜೆ ಕಾರ್ಯಕ್ರಮ ನೋಡಲು ಬಂದಾಗ ಸರಿ ಸುಮಾರು ಎಂಟು ಗಂಟೆ. ಯುವರಾಜ ಕಾಲೇಜು ಮೈದಾನ ಜನರಿಂದ ತುಂಬಿತ್ತು. ಆದರು ನೆನ್ನೆಯಷ್ಟು ಕಿಕ್ಕಿರಿದು ತುಂಬಿರಲಿಲ್ಲ. ನೆನ್ನೆಯ ದಿವಸ ಇದ್ದದ್ದಿ ಸುನಿಧಿ ಚೌಹಾನ್ ರಸಸಂಜೆ. ಅತ್ತ ಸುನಿಧಿ ‘ಬೀಡಿ ಜಲೈ, ಜಿಗರ್ ಸೆ ಪಿಯಾ. ಜಿಗರ್ ಬಡಿ ಆಗ್ ಹೈ. ಥಡುಂ ನಾ ದಡುಂ. ’ ಅಂತಿದ್ದರೆ ಇತ್ತ ಯುವಸಮೂಹದ ಎದೆಗೆ ಬೆಂಕಿ ಇಟ್ಟಂತಾಗಿ ಕುಣಿಯುತ್ತಿದ್ದರು. ಅದೊಂದು ಉದ್ರೇಕದ ಪೀಕ್ ಅಂದರೂ ತಪ್ಪಿಲ್ಲ. ಕಾರ್ಯಕ್ರಮದ ಹೊರ ನಡೆಯುತ್ತಿದ್ದ ಹೆಣ್ಣು ಮಕ್ಕಳು, ಅಪ್ಪಿ ತಪ್ಪಿ ಪುಂಡ ಹುಡುಗರ ಮಧ್ಯೆ ಸಿಕ್ಕು ಗುಂಪಲ್ಲಿ ಗೋವಿಂದ ಎಂದು ಕೆಲವರು ಮುಟ್ಟಿ ತಟ್ಟುವುದು, ಪೊಲೀಸರು ಬಂದಾಗ ಚೆಲ್ಲಾಪಿಲ್ಲಿಯಾಗಿ ಓಡುವುದು. ನಡೆದಿತ್ತು. ಈ ಪುಂಡನಕ್ಕೆ ಭಾಷೆ, ಪ್ರಾಂತ್ಯ, ಜಾತಿಯ ಹಂಗಿಲ್ಲ. ಈ ರೀತಿಯ ಮೊಲೆಸ್ಟೇಶನ್ ಗಳು ನಮ್ಮ ಮಧ್ಯೆ ನಡೆದಂತವು. ಯಾವುದೋ ಅಸ್ಸಾಮು, ಒರಿಸ್ಸಾದಲ್ಲಲ್ಲ.