ಭಾನುವಾರ, ನಾನು ಮತ್ತು ರಾಮು ನಡೆದಾಡುವ ಗಟ್ಟಿಬಿಲ್ಲೆ(portable harddisk ) ತರಲು ಎಸ್ -ಪಿ ರಸ್ತೆಗೆ ಹೋಗಿದ್ದೆವು. ನಮ್ಮ ಕೆಲಸ ಮುಗಿದ ಮೇಲೆ ರಾಮುಗೆ, 'ಚೋರ್ ಬಜಾರ್' ನೋಡುವ, ಹಂಬಲ ಉಂಟಾಯಿತು. ಸಂಡೆ ಕಳ್ಳರ ಸಂತೆಗೆ ಭೆಟ್ಟಿ ಕೊಡಬೇಕೆಂಬುದು ಅವನ ಬಹುದಿನದ ಆಸೆ. ಕೃಷ್ಣರಾಜ ಮಾರುಕಟ್ಟೆಯ ಸುತ್ತ-ಮುತ್ತ ಎಲ್ಲೋ ಇದೆ ಎಂಬುದನ್ನು ಗೂಗಲ್ ನಲ್ಲಿ ಪತ್ತೆ ಮಾಡಿ, ಚೋರ್ ಬಜಾರು ಹುಡುಕುತ್ತಾ ಹೊರಟೆವು. ಸಿಕ್ಕ ಸಿಕ್ಕವರಿಗೆ ಅಡ್ರೆಸ್ ಕೇಳುವುದು ಕೂಡ ಮುಜುಗರದ ಸಂಗತಿಯಾಗಿತ್ತು. ಯಾಕಂದ್ರೆ, ಮಹಾತ್ಮ ಗಾಂಧಿ ಸರ್ಕಲ್ಲು ಎಲ್ಲಿದೆ; ಕೆಂಪೇಗೌಡ ನಗರ ಎಲ್ಲಿದೆ; ಅನ್ನೋದನ್ನ ಹೆಮ್ಮೆಯಿಂದ ಕೇಳಬಹುದು. ಆದರೆ 'ಚೋರ್ ಬಜಾರು' ಅಂತ ಕೇಳೋದಾದರು ಹೆಂಗೆ? ನಾವು ಮೆತ್ತಗೆ 'ಇಲ್ಲಿ ಚೋರ್ ಬಜಾರಿಗೆ ಯಾವ ಕಡೆಗೆ ಹೋಗಬೇಕು. ?' ಅಂತ ಕೇಳಿದಾಗ, ಕೆಲವರು ಅಡ್ರೆಸ್ಸು ಹೇಳುವ ಔದಾರ್ಯ ತೋರದಿದ್ದರೂ; ಬೇಜಾನ್ ಗುರಾಯಿಸಿದರು. 'ಗೊತ್ತಿದ್ರೆ ಗೊತ್ತು ಅನ್ನಿ, ಇಲ್ಲಾಂದ್ರೆ ಇಲ್ಲ ಅನ್ನಿ. ಅದುಕ್ಯಾಕೆ ಹಂಗೆ ಲುಕ್ ಕೊಡ್ತೀರ' ಅಂತ ಹೇಳಬೇಕೆನಿಸುತ್ತಿತ್ತು. ಅಪರಿಚಿತ ಸ್ಥಳಗಳಲ್ಲಿ, ಗೊತ್ತಿಲ್ಲದ ವಿಷಯದ ಮಾಹಿತಿ ಪಡೆಯಲು ಒಂದು ಛೋಟಾ ಟೀ ಮೊರೆ ಹೋಗಬೇಕಾಯಿತು. ಇದು ನಮ್ಮ ಹಳೆಯ ಫಾರ್ಮುಲ. ' ಎ ಲಾಟ್ ಕೆನ್ ಹ್ಯಾಪನ್ ಓವರ್ ಎ ಛೋಟಾ ಟೀ '. ತನ್ನ ಕ್ಯಾಂಟೀನಲ್ಲಿ ಟೀ ಕುಡಿಯುತ್ತಿರುವುದರ ಮರ್ಜಿಗಾದರು ಓನರು