ಅಮ್ಮ ಒಂದಷ್ಟು ಪಿಂಗಾಣಿ ಲೋಟಗಳನ್ನು ತಂದಿದ್ದಳು. ‘ಸೋ-ಕೇಸ್ ನಲ್ಲಿ ಮೊದಲೇ ಜಾಗ ಇಲ್ಲ. ಇನ್ನು ಈ ಸೋ ಪೀಸುಗಳು ತಂದದ್ದು ಯಾಕೆ. ? ’ ಅಂದೆ. ‘ಹೆಂಗಂತಿಯಲ್ಲೋ. ? ಇವು ಶೋ ಇಡೋದಕ್ಕಲ್ಲ, ಬಳಸೋದಕ್ಕೆ. ತಂದಿರೋದು’ ಎಂದಳು. ಅಮ್ಮನ ಆಸೆಯಂತೆ ಪಿಂಗಾಣಿ ಲೋಟದಲ್ಲೇ ಟೀ ಸಮಾರಧಾನೆ ನಡೆಯುತ್ತಿತ್ತು. ಮೊದಮೊದಲು ತುಟಿ ಸುಟ್ಟುಕೊಳ್ಳುತ್ತಿದ್ದುದೂ,. ಟೀ ಮುಗಿದು ಹೋದ ಮೇಲೆಯೂ, ತಳದಲ್ಲಿ ಇನ್ನೂ ಇರಬಹುದೇನೋ ಎಂದು ಲೋಟವನ್ನು ಎತ್ತಿ ಸುರಿದುಕೊಂಡು, ಖಾಲಿ ಅಂತ ಗೊತ್ತಾದ ಮೇಲೆ ನಿರಾಶರಾಗಿ ಕೆಳಗಿಡುತ್ತಿದ್ದುದು ನಡೆದೇ ಇತ್ತು. ಇದು ಭಾರದ ಪಿಂಗಾಣಿ ಲೋಟ ಮತ್ತು ಹಿಂದೆ ಇದ್ದ ಹಗುರದ ಸ್ಟೀಲ್ ಲೋಟಗಳ ನಡುವಿದ್ದ inertia ಸಮಸ್ಯೆ. ಅವಶ್ಯಕತೆ ಇರಲಿ ಬಿಡಲಿ, ಅಡುಗೆ ಮನೆಯು ತುಂಬಿ ತುಳುಕಬೇಕು ಎಂಬುದು ಅವಳ ಆಶಯ. ಅದಕ್ಕಾಗಿ ವಿವಿಧ ರೇಡಿಯಸ್ ಗಳ ತಟ್ಟೆ , ಪಾತ್ರೆ, ಬಾಕ್ಸು , ಲೋಟ, ಸೌಟುಗಳ ಪರ್ಮುಟೇಷನ್ನು ಕಾಂಬಿನೇಷನ್ನುಗಳು. ‘ ಇರೋರು ನಾಲಕ್ಕು ಜನಕ್ಕೆ ಇಷ್ಟೆಲಾ ಯಾಕಮ್ಮಿ. ? ’ ಅಂದರೆ ಸಾಕು ‘ ನೆಂಟ್ರು ಬಂದರೆ ಪಕ್ಕದ ಮನೆಗೆ ಹೋಗಿ ಅನ್ನೋದಕ್ಕಾಗುತ್ತೇನೊ. ? ’ ಎನ್ನುವಳು. ಸ್ಕೂಲ್ ಡೇ ಗಳಲ್ಲಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ, ತಟ್ಟೆ , ಟಿಫೀನು ಕ್ಯಾರಿಯರು ಮತ್ತು ದೊಡ್ಡ ಬೇಸಿನುಗಳನ್ನು ಗೆದ್ದು ತಂದಾಗ ಖುಷಿ ಪಡುತ್ತಿದ್ದಳು. ಅದನ್ನು ಹೇಳಿಕೊಳ್ಳುತ್ತಿದ್ದುದರಲ್ಲಿಯೂ ಯಾವುದೇ ಚೌಕಾಸಿ ಇರುತ್ತಿರಲಿಲ್ಲ. ಮನೆಗೆ ಬರುತ್ತಿದ್ದ