Skip to main content

Posts

Showing posts from March, 2013

ಕಿಚ್ಚನ ಅಭಿಮಾನ!!

ಟಿವಿನಲ್ಲಿ ಅಣ್ಣಾವರದ್ದು ಸಿನಿಮಾಗಳು ನೋಡುವಾಗ, 'ಛೇ ಈಗಲೇ ಇದನ್ನ ನೋಡಿದರೆ ಇಷ್ಟು
ಅಭಿಮಾನದ ಉದ್ವೇಗ ಬರತ್ತಲ್ಲ, ಇನ್ನು ತತ್ಸಮಾನ ಕಾಲದಲ್ಲಿ ಬದುಕಿದ್ದ ಅಭಿಮಾನಿಗಳು
ಥಿಯೇಟರಿನಲ್ಲಿ ಕುಳಿತಾಗ ಹೆಂಗೆಲ್ಲಾ ಸಂಭ್ರಮ ಪಟ್ಟಿರಬಹುದು ಅನ್ನೋದನ್ನ ಊಹಿಸಲಾರೆ.

ನಮ್ಮ ನಮ್ಮ ಜಮಾನದಲ್ಲಿ, ಸಿನಿಮಾದಲ್ಲಿ ನಮಗೊಬ್ಬ ಹೀರೋ ಇರಬೇಕು; ಥಿಯೇಟರ್ ಅನ್ನೋ
ಕತ್ತಲ ಲೋಕದಲ್ಲಿ, ಮೈಯೆಲ್ಲಾ ಕಣ್ಣಾಗಿಸಿ ಕೂತಾಗ, ಶಿಳ್ಳೆ ಕರತಾಡನಗಳ ಮಧ್ಯೆ
ಧೈತ್ಯಾಕಾರದ ವ್ಯಕ್ತಿ ಜಿಗಿದು ಬರಬೇಕು; ಥಿಯೇಟರಿನಲ್ಲಿದ್ದ ಎ ಸಿ ಯ ಪ್ರಭಾವಕ್ಕೋ ಅಥವಾ
ಮೆಚ್ಚಿನ ಹೀರೋ ಬಂದ ಸಂತೋಷಕ್ಕೋ ಗೂಸ್ ಬಂಪಿನ ನಡುಕವೊಂದು ಎದೆಯನ್ನು ನಡುಗಿಸಬೇಕು;
ಕೂತಿದ್ದ ಸೀಟು ಅಕಸ್ಮಾತ್ ಹಿಂದಕ್ಕೆ ಜಗ್ಗಿದ್ದರೆ, ಅಂಡನ್ನು ಸ್ಲೈಡ್ ಮಾಡಿ ಮುಂದಕ್ಕೆ
ತರಿಸಬೇಕು. ನಮ್ಮ ನಮ್ಮ ಜಮಾನದಲ್ಲಿ, ಸಿನಿಮಾದಲ್ಲಿ ನಮಗೊಬ್ಬ ಹೀರೋ ಬೇಕು.

ನನ್ನ ಪಾಲಿಗೆ ಹೇಳುವುದಾದರೆ ಕಿಚ್ಚ ಸುದೀಪ ನನ್ನ ಜಮಾನದ ನಾ ಮೆಚ್ಚಿದ ನನ್ನ ಹೀರೋ. ಹಾ
ನಿಮ್ಮ ಹೀರೋ ನಿಮಗೆ, ನನ್ನ ಹೀರೋ ನನಗೆ..

ಕಿಚ್ಚ; ಕಿಚ್ಚ; ಕಿಚ್ಚ; ಹೈಟು ಪರ್ಸನಾಲಿಟಿ ಗೆಶ್ಚರ್-ಗಳು.. ಅಬ್ಬಾ ಸುಪರೋ ಸೂಪರು.
ಕಿಚ್ಚ ಎಂಬ ಮೇರುಪರ್ವತಕ್ಕೆ ಜ್ವಾಲಾಮುಖಿಯಂತಹ ಕಂಠವಿದೆ. ಬಾವಿಯಲ್ಲಿ ನೀರು ಸೇದುವಾಗ
ಬರುವ ರಾಟೆಯ ಕಟ್-ಕಟ್-ಕಟ್ ಸದ್ದಿನಂತೆ, ಕಿಚ್ಚನ ಧ್ವನಿ ಎದೆಯನ್ನು ಗುದ್ದಿ ಒಳಗೆ
ಇಳಿಯುತ್ತದೆ. ಅಬ್ಬಬ್ಬಾ ಎಂಥಾ ಕ್ಲಾರಿಟಿ ಎಂಥಾ ಪಿಚ್ಚು ಎಂಥಾ ಶಾರ್ಪು. ಕಿಚ್ಚನ
ಬಾಯಲ್ಲಿ ಡ…

4:20 PM ; ರೈಲಿನಲ್ಲಿ ಸಿಗುವ ಅರೆಕಾಲಿಕ ಮಿತ್ರ

ಫೋರ್ ಟ್ವೆಂಟಿ pm!!
ಶಿವಮೊಗ್ಗ ಇಂಟರ್-ಸಿಟಿ ರೈಲು ಹೊರಡಲು, ಇನ್ನೂ ಹತ್ತು ನಿಮಿಷ ಬಾಕಿ ಇತ್ತು.
ಈ ವಿರಾಮದಲ್ಲಿ, ಬಾಂಬಿನ ವಿಯರ್ಡ್ ಕಲ್ಪನೆಯೊಂದು ತಲೆಯಲ್ಲಿ ಮೂಡಿತು. ಪ್ರಾಣ ಭಯ ಅಂತಲ್ಲ. ಆದರೂ ನನ್ನ ಕರ್ಮಕ್ಕೆ!!  ನಮ್ಮದೇ ರೈಲು ಡಮ್ ಅಂದು,
ಹೃದಯ ವಿದ್ರಾವಕವಾಗಿ, ಟಿವಿಯಲ್ಲಿ ಜೂಮ್ ಇನ್ ಆಗುವ ಸುದೈವ, ಒದಗಿ ಬಿಟ್ಟರೆ...?!!
ರೈಲಿನಿಂದ ಇಳಿದೆ.
ಉದ್ದಕ್ಕೂ ಹಳಿಗಳ ಮೇಲೆ ಏನಾದರೂ, ಅನಾಮಧೇಯ!! ಅವಿಧೇಯ!! ಚೀಲದ ಗಂಟುಗಳು ಕಾಣಬಹುದೇನೋ ಎಂದು ಹುಡುಕುತ್ತಾ ಹೋದೆ.
ಅಂತಹದ್ದೇನು ಕಾಣಲಿಲ್ಲ.
ಅಕಸ್ಮಾತ್ ಕಂಡರೆ ಏನು ಮಾಡುವುದು...?
ಏನಿಲ್ಲ!! ಸುತ್ತಮುತ್ತ ಇದ್ದವರೆನ್ನೆಲ್ಲಾ ರೈಲಿನೊಳಗೆ ಹತ್ತಿಸಿಕೊಂಡು, ರೈಲು ಸ್ಟಾರ್ಟ್ ಮಾಡಿಸಿ, ಹೊರಟುಬಿಡೋದು.
ಖಾಲಿ ಜಾಗದಲ್ಲಿ,  ಬಾಂಬು ಸಿಡಿದರೆಷ್ಟು, ಡಿಫ್ಯೂಸ್ ಮಾಡಿದರೆಷ್ಟು..ಜನಗಳ ಜೀವಕ್ಕೆ ಆಪತ್ತಂತು ಇಲ್ಲ.
' ಆದರೂ ಎಲ್ಲಾ ಬಿಟ್ಟು, ನಮ್ಮ ಶಿಮೊಗ್ಗ ರೈಲನ್ನೇಕೆ ಟಾರ್ಗೆಟ್ ಮಾಡ್ತಾರೆ..? ' ಅಂದುಕೊಳ್ಳುವಾಗಲೇ ರೈಲಿನ ಆರ್ತನಾದ ಕೇಳಿತು.
ಮೆಲ್ಲಗೆ ಮೈ ನಲುಗಿಸುತ್ತಾ ಮುಂದಕ್ಕೆ ಹೊರಟದ್ದು ಕಂಡ ಮೇಲೆ, ಅದು ನಮ್ಮದೇ ರೈಲಿನ ಹಾರನ್, ಅಂತೆಣಿಸಿ  ಸಿಕ್ಕ ಭೋಗಿಯೊಂದರೊಳಗೆ ತೂರಿದೆ.
ಬಿಸಿಲಿಗೆ ವಿರುದ್ಧದ, ಡೋರ್-ನಲ್ಲಿ, ಕಾಲು ಇಳಿಬಿಟ್ಟು ಕುಳಿತೆ.   

ನಮ್ಮ ರೈಲು ಸಾಗುತ್ತಿತ್ತು.
ಅಂಡಿನ ಕೆಳಗೆ ರೈಲಿನ 'ದಡಕ್ ಬಡಕ್' 'ದಬಡ…