Skip to main content

​ಕಿಚ್ಚ ಸುದೀಪನ ಮೇಲಿನ ಅಭಿಮಾನ


ಟಿವಿನಲ್ಲಿ ಅಣ್ಣಾವರದ್ದು ಸಿನಿಮಾಗಳು ನೋಡುವಾಗ, 'ಛೇ ಈಗಲೇ ಇದನ್ನ ನೋಡಿದರೆ ಇಷ್ಟು
ಅಭಿಮಾನದ ಉದ್ವೇಗ ಬರತ್ತಲ್ಲ, ಇನ್ನು ತತ್ಸಮಾನ ಕಾಲದಲ್ಲಿ ಬದುಕಿದ್ದ ಅಭಿಮಾನಿಗಳು
ಥಿಯೇಟರಿನಲ್ಲಿ ಕುಳಿತಾಗ ಹೆಂಗೆಲ್ಲಾ ಸಂಭ್ರಮ ಪಟ್ಟಿರಬಹುದು ಅನ್ನೋದನ್ನ ಊಹಿಸಲಾರೆ.

ನಮ್ಮ ನಮ್ಮ ಜಮಾನದಲ್ಲಿ, ಸಿನಿಮಾದಲ್ಲಿ ನಮಗೊಬ್ಬ ಹೀರೋ ಇರಬೇಕು; ಥಿಯೇಟರ್ ಅನ್ನೋ
ಕತ್ತಲ ಲೋಕದಲ್ಲಿ, ಮೈಯೆಲ್ಲಾ ಕಣ್ಣಾಗಿಸಿ ಕೂತಾಗ, ಶಿಳ್ಳೆ ಕರತಾಡನಗಳ ಮಧ್ಯೆ
ಧೈತ್ಯಾಕಾರದ ವ್ಯಕ್ತಿ ಜಿಗಿದು ಬರಬೇಕು; ಥಿಯೇಟರಿನಲ್ಲಿದ್ದ ಎ ಸಿ ಯ ಪ್ರಭಾವಕ್ಕೋ ಅಥವಾ
ಮೆಚ್ಚಿನ ಹೀರೋ ಬಂದ ಸಂತೋಷಕ್ಕೋ ಗೂಸ್ ಬಂಪಿನ ನಡುಕವೊಂದು ಎದೆಯನ್ನು ನಡುಗಿಸಬೇಕು;
ಕೂತಿದ್ದ ಸೀಟು ಅಕಸ್ಮಾತ್ ಹಿಂದಕ್ಕೆ ಜಗ್ಗಿದ್ದರೆ, ಅಂಡನ್ನು ಸ್ಲೈಡ್ ಮಾಡಿ ಮುಂದಕ್ಕೆ
ತರಿಸಬೇಕು. ನಮ್ಮ ನಮ್ಮ ಜಮಾನದಲ್ಲಿ, ಸಿನಿಮಾದಲ್ಲಿ ನಮಗೊಬ್ಬ ಹೀರೋ ಬೇಕು.

ನನ್ನ ಪಾಲಿಗೆ ಹೇಳುವುದಾದರೆ ಕಿಚ್ಚ ಸುದೀಪ ನನ್ನ ಜಮಾನದ ನಾ ಮೆಚ್ಚಿದ ನನ್ನ ಹೀರೋ. ಹಾ
ನಿಮ್ಮ ಹೀರೋ ನಿಮಗೆ, ನನ್ನ ಹೀರೋ ನನಗೆ..

ಕಿಚ್ಚ; ಕಿಚ್ಚ; ಕಿಚ್ಚ; ಹೈಟು ಪರ್ಸನಾಲಿಟಿ ಗೆಶ್ಚರ್-ಗಳು.. ಅಬ್ಬಾ ಸುಪರೋ ಸೂಪರು.
ಕಿಚ್ಚ ಎಂಬ ಮೇರುಪರ್ವತಕ್ಕೆ ಜ್ವಾಲಾಮುಖಿಯಂತಹ ಕಂಠವಿದೆ. ಬಾವಿಯಲ್ಲಿ ನೀರು ಸೇದುವಾಗ
ಬರುವ ರಾಟೆಯ ಕಟ್-ಕಟ್-ಕಟ್ ಸದ್ದಿನಂತೆ, ಕಿಚ್ಚನ ಧ್ವನಿ ಎದೆಯನ್ನು ಗುದ್ದಿ ಒಳಗೆ
ಇಳಿಯುತ್ತದೆ. ಅಬ್ಬಬ್ಬಾ ಎಂಥಾ ಕ್ಲಾರಿಟಿ ಎಂಥಾ ಪಿಚ್ಚು ಎಂಥಾ ಶಾರ್ಪು. ಕಿಚ್ಚನ
ಬಾಯಲ್ಲಿ ಡೈಲಾಗ್ ಗಳನ್ನು ಕೇಳುವಾಗ ತಲೆ ಕೆಡ್ತಿರತ್ತೆ.

ನಾನು ಸ್ವತಂತ್ರವಾಗಿ ಸಿನಿಮಾವೊಂದನ್ನು (ಕದ್ದು) ನೋಡುವ ಹೊತ್ತಿಗೆ ಆಗಲೇ, ಕಿಚ್ಚ ಹೀರೋ
ಆಗಿ ಬಿಟ್ಟಿದ್ದ. ಸಾರಿ ಸ್ಟಾರ್ ಆಗಿಬಿಟ್ಟಿದ್ದ. ಹೀರೋ ಗು ಸ್ಟಾರ್ ಗು ತುಂಬಾನೆ
ವ್ಯತ್ಯಾಸ ಇದೆ. ಕಿಚ್ಚ ಈಸ್ ಅ ಸ್ಟಾರ್.

ದ್ವಿತೀಯ ಪಿ-ಯು-ಸಿ; ನಾನು ಅಧಿಕೃತವಾಗಿ ಸಿನಿಮಾರಂಗಕ್ಕೆ  ಅಂದರೆ, ಕದ್ದು ಮುಚ್ಚಿ
ಸಿನಿಮಾ ನೋಡೋದಕ್ಕೆ ಪ್ರಾರಂಭ ಮಾಡಿದ್ದು. ಆ ಹೊತ್ತಿನಲ್ಲಿ ಬಂದ ಯಾವ ಭಾಷೆಯ, ಯಾವೊಂದೂ
ಸಿನಿಮಾವನ್ನೂ ಬಿಡದೇ ಸೆಕೆಂಡ್ ಶೋನಲ್ಲಿ ನೋಡಿದ್ದೆ. ಸಿನಿಮಾ ವ್ಯಾಮೋಹ
ತೀವ್ರವಾಗಿತ್ತು. ಸ್ಪರ್ಷ, ಹುಚ್ಚ, ಕಿಚ್ಚ ಬಂದು ಹೋಗಿತ್ತು. ಮಹಾರಾಜ ನಲ್ಲನ ಹಾವಳಿ
ನಡೆದಿತ್ತು. ಅಲ್ಲಿಂದ ಮುಂದೆ ರಿಲೀಸ್ ಆದ ಹೆಚ್ಚು-ಕಮ್ಮಿ ಎಲ್ಲಾ ಕಿಚ್ಚನ
ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ.

ಮೊದಲನೇ ಸಾರಿ ಕಿಚ್ಚನನ್ನು ನೇರವಾಗಿ ನೋಡಿದ್ದು, ಮೈಸೂರಿನ ಯುವ ದಸರಾ ಉದ್ಘಾಟನಾ
ಕಾರ್ಯಕ್ರಮದಲ್ಲಿ. ಅದುವರೆಗೂ ಮಾನಸ ಗಂಗೋತ್ರಿಯ ಓಪನ್ ಥಿಯೇಟರಿನಲ್ಲಿ ಸಿಂಪಲ್-ಡೀಸೆಂಟ್
ಆಗಿ ನಡೆಯುತ್ತಿದ್ದ ಯುವ-ದಸರಾ,
 ತನ್ನ ಪಾಪುಲಾರಿಟಿಯನ್ನು ಅರಗಿಸಿಕೊಳ್ಳಲಾಗದೇ ಬೃಹತ್ ಆವರಣಕ್ಕೆ ಸ್ಥಳಾಂತರಗೊಂಡಿತ್ತು.
ಆರು ಘಂಟೆಯ ಕಾರ್ಯಕ್ರಮಕ್ಕೆ ಮೂರು ಘಂಟೆಗೆ ಹೋಗಿ, ಜನರಲ್ ಆಡಿಯನ್ಸು ಕುಳಿತುಕೊಳ್ಳುವ
ವಿಭಾಗದಲ್ಲಿ ಮುಂದಿನ ಸಾಲಿನಲ್ಲೇ ಸೀಟು ಹಿಡಿದು ಕುಳಿತೆ.  ಕಿಚ್ಚನನ್ನು ಸಾಧ್ಯವಾದಷ್ಟು
ಹತ್ತಿರದಿಂದ ಕಾಣಬೇಕು ಎಂಬುದು ನನ್ನ ಆಸೆ ಆಗಿತ್ತು.

ಬಂದನಾ ಕಿಚ್ಚ ಶ್ಯಾನೆ ಖುಸಿ ಆಗೋಯ್ತು ನೋಡಿ. ದಸರಾ ಸಾಂಸ್ಕೃತಿಕ ಸಮಾರಂಭದ ಉದ್ಘಾಟನ
ಸಮಾರಂಭದಲ್ಲಿ ಕಿಚ್ಚ ಹೆಂಗಸರ ಬಾಯಲ್ಲಿ 'ಸೊಂಟದ ವಿಷ್ಯ, ಬ್ಯಾಡವೋ ಶಿಷ್ಯ .. ಸೊಂಟಕಿಂತ
ವಾಸಿ ಕಣೋ ಗುಂಡಿನ ದಾಸ್ಯ' ಹಾಡು ಹೇಳಿಸಿ ಎಲ್ಲರೂ ಮುಜುಗರ ಪಟ್ಟುಕೊಳ್ಳುವನಂತೆ
ಮಾಡಿದನಾದರೂ 'ಇದು ಯುವ ದಸರಾ ಇಲ್ಲಿ ಯುವ ಮನಸ್ಸು ಇರುವ ಪ್ರೇಕ್ಷಕರು ಮಾತ್ರ ಬರಲು
ಸಾಧ್ಯ ' ಎಂಬುದನ್ನು ಸೂಚ್ಯವಾಗಿ ಹೇಳಿದ.

ಕಿಚ್ಚ ಒಬ್ಬ ಅಸಾಧಾರಣ ನಟ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ..ಆದರೆ ಭಯಾನಕ
ಆಟ್ಟಿಟೂಡ್ ಇರುವಂಥ ಅದ್ಭುತ ಪಾತ್ರವೊಂದರಲ್ಲಿ ಕಿಚ್ಚನನ್ನು ಕಾಣಬೇಕು ಎಂಬುದು ನನ್ನ
ಆಸೆಯಾಗಿತ್ತು.  'ಕಾಖಿ' ಹಿಂದಿ ಸಿನಿಮಾ ಬಂದಾಗ ಅದರಲ್ಲಿ ಅಜಯ್ ದೇವಗಣ್ ಮಾಡಿದ್ದ
ವಿಲನ್ ರೋಲ್ ನೋಡಿ ಅಬ್ಬಾ ಇದನ್ನ ಕಿಚ್ಚ ಮಾಡಬೇಕು ಅಂದುಕೊಳ್ಳುತ್ತಿದ್ದೆ.  ಡಾರ್ಕ್
ನೈಟ್ ನ ಜೋಕರ್ ನಂತಹ ವಿಕ್ಷಿಪ್ತ ಮನಸ್ತಿಥಿಯ ಪಾತ್ರವೊಂದರಲ್ಲಿ ಕಿಚ್ಚನನ್ನು
ಕಾಣಬೇಕು.ಯಾವುದಾದರೂ ಒಳ್ಳೆ ಒಳ್ಳೇ ವಿಷುಯಲ್ಸುಗಳನ್ನು ಕಂಡಾಗ "ಹಾ ಕಿಚ್ಚ ಈ ಪಾತ್ರ
ಮಾಡಿದರೆ ಚಚ್ಚಾಡಿ ಬಿಡುತ್ತಿದ್ದ " ಅನಿಸುತ್ತದೆ.

ಕಿಚ್ಚ ಮೊದಲನೇ ಸಾರಿ ನಿರ್ದೇಶನ ಮಾಡಿದ 'ಮೈ ಆಟೋಗ್ರಾಫ್' ಸಿನಿಮಾವನ್ನು ಫಸ್ಟ್ ಡೇ
ಫರ್ಸ್ಟ್ ಶೋ ಮೈಸೂರಿನ ಗಾಯತ್ರಿ ಸಿನಿಮಾ ಮಂದಿರದಲ್ಲಿ ಗಾಂಧಿ ಸೀಟಿಗೆ, ಬ್ಲಾಕ್ ಟಿಕೇಟು
ಕೊಟ್ಟು ಹೋಗಬೇಕಾದ ದುರ್ದೈವ ಒದಗಿತು.
ನೂರ ಎಪ್ಪತ್ತೈದು ದಿನಗಳ ಕಾಲ ಗಾಯತ್ರಿ ಸಿನಿಮಾ ಮಂದಿರದಲ್ಲಿದ್ದಾಗ, ನಾಲ್ಕು ಬಾರಿ ಆ
ಸಿನಿಮಾವನ್ನು ನೋಡಿದೆ. ಎಲ್ಲವೂ ಕಿಚ್ಚನ ಅಭಿಮಾನಕ್ಕೆ.  ಶಾಂತಿ ನಿವಾಸ ಆಗಿರಬಹುದು,
ಜಸ್ಟು ಮಾತ್ ಮಾತಲ್ಲೇ ಆಗಿರಬಹುದು ಅಥವಾ
ಸ್ವಾತಿ ಮುತ್ತೇ ಆಗಿರಬಹುದು. ಕಮರ್ಷಿಯಲಿ ಕಡಿಮೆ ಸುದ್ದಿ ಮಾಡಿದ ಕಿಚ್ಚನ ಸಿನಿಮಾಗಳ
ಮೇಲೆ ಒಂದು ಹಿಡಿ ಹೆಚ್ಚು ಪ್ರೀತಿ ನನಗೆ. ಯಾಕಂದ್ರೆ ಅವೆಲ್ಲಾ ಕಿಚ್ಚನ ಸಿನಿಮಾ
ಪ್ರೀತಿಯ experimet ಗಳು.

ಕಿಚ್ಚನ ರಣ್ ಸಿನಿಮಾ ರಿಲೀಸಾದಾಗ ತ್ರಿವೇಂಡ್ರಮ್ ನಲ್ಲಿದ್ದೆ. ಸಿನಿಮಾ ಹೆಂಗಾದ್ರು
ಇರಲಿ. ಕಿಚ್ಚ ಅಮಿತಾಬ್ ಬಚ್ಚನ್ ಜೊತೆಗೆ ಅಭಿನಯಿಸಿರೋದು, ಸಿಕ್ಕಾಪಟ್ಟೆ ಹೆಮ್ಮೆಯ
ವಿಷಯವಾಗಿದ್ದರಿಂದ ಆಗಿಂದಾಗಲೇ ಅದನ್ನು ನೋಡುವ ತುಡಿತವಿತ್ತು.
ಸಂಜೆಯಾಗುತ್ತಿದ್ದಂತೆ ಸುಮಾರು ಹತ್ತು ಹದಿನೈದು ಕನ್ನಡ ಮಿತ್ರರಿಗೆ ಜಾಕ್ ಎತ್ತಿಸಿ,
 ತ್ರಿವೇಂಡ್ರಮ್ ನಲ್ಲೇ ಥಿಯೇಟರ್ ಹುಡುಕಿ ಹೋಗಿದ್ದೆ.

ಮಂತ್ರಿ ಮಾಲ್ ನಲ್ಲಿ ಇದ್ದ ಲಾಂಡ್ ಮಾರ್ಕ್ ಮಳಿಗೆಯಲ್ಲಿ ಪುಸ್ತಕಗಳ ಸಾಲಿನಲ್ಲಿ ನನ್ನ
ಪಾಡಿಗೆ ನಾ ಪುಸ್ತಕದ ಹುಡುಕಾಟದಲ್ಲಿದ್ದೆ.  ಗೆಳೆಯ ಅಭಿ ಬಂದವನೇ, "ಲೋ ನೋಡೋ ನಿಮ್
ಗುರು ಬಂದಿದಾನೆ." ಅಂದ.  ಆ ಅಂಗಡಿಯೊಳಗೇ ಚಿಕ್ಕದಾಗಿ ಒಂದೈವತ್ತು ಚೇರುಗಳನ್ನು ಹಾಕಿ
'ಮುಂಬೈಸ್ತಾನ್' ಅನ್ನೋ ಆಂಗ್ಲ ಪುಸ್ತಕದ ಕಿರು ಉದ್ಘಾಟನಾ ಸಮಾರಂಭವನ್ನು
ಇಟ್ಟುಕೊಂಡಿದ್ದರು. ಕಣ್ಣಳತೆಯ ದೂರದಲ್ಲಿ ಕಿಚ್ಚ ಸುದೀಪ; ಪುಸ್ತಕ ಬಿಡುಗಡೆಗೆ ಅತಿಥಿ
ಆಗಿ ಬಂದಿದ್ದು.
ಯೊಪ್ಪ!! ಮೊದಲಿದ್ದ ಜೋಷ್ ಈಗ ಇರಲಿಲ್ಲ. ಇಲ್ಲಾಂದ್ರೆ ಕಿಚ್ಚ ಅಂತಲಾದರೂ
ಕೂಗಿಬಿಡುತ್ತಿದ್ದೆ. ಬಹುಷಃ ಅದು ವಯಸ್ಸಿನ ಜೊತೆಗೆ ಬಂದಂತಹ ಪ್ಸೂಡೋ-ಪ್ರೌಢಿಮೆ
ಇರಬಹುದು. ಅದನ್ನ ಡೀಸೆನ್ಸಿ ಅಂತಾನು ಕರೆಯಬಹುದು. ಅಥವಾ ಇನ್ನೇನೋ ಗೊತ್ತಿಲ್ಲ.
ದೂರದಲ್ಲಿ ನಿಂತು ಕಿಚ್ಚನನ್ನು ಸುಮ್ಮನೇ ನೋಡಿದೆ. ' ಏನ್ ಆಟ್ಟಿಟೂಡ್ ಗುರು ನಿಂದು '
ಸೂಪರು

 ಕಿಚ್ಚನ ಅಭಿಮಾನದ ಹೊರತಾಗಿಯೂ .... ಭಾಷೆ, genre, ಮತ್ತು ಹೀರೋಗಳ ಹಂಗಿಲ್ಲದೇ
ಸದಭಿರುಚಿಯ ಚಂದ ಸಿನಿಮಾಗಳನ್ನು ಕಾದು ನೋಡುವ ಸಿನಿಮಾಗಳ ಅಭಿಮಾನಿ ನಾನು.

 ಎನಿ ವೇ .... ಆಲ್ ದಿ ಬೆಸ್ಟು ಕಿಚ್ಚ
 (ಸಾಗುವ ಹೆಜ್ಜೆಗೆ ಸವೆಯುವ ಹಾದಿಗೆ ನೆನಪೇ ಬೆಳಕು ಸುಳ್ಳಲ್ಲ )

Comments

Post a Comment

Popular posts from this blog

ಕಾಮೆಂಟ್ ಕವಿಗಳು

ಕವಿತೆಗಳನ್ನು ಮೆಚ್ಚಿ, ಯಾರಾದ್ರು ಬರೆದಾಗ ತುಂಬಾ ಖುಷಿ ಆಗತ್ತೆ. ಆ ರೀತಿ ಉತ್ಸಾಹದಿಂದ
ಬರೆದವರನ್ನ, ಸರಿಯಾಗಿ aknowledge ಮಾಡಕ್ಕಾಗದೇ ಇದ್ರೂ ಕೂಡ, ಅವರುಗಳ ಸಾಲುಗಳು
ಮಾತ್ರ, ನನ್ನ ಖುಷಿಯ ಬುತ್ತಿಯ ತುತ್ತುಗಳಂತಿವೆ.

ಅರೆಘಳಿಗೆಯ ಮನೋಲ್ಲಾಸಕ್ಕೆ ಕಾರಣವಾದ ನನ್ನ ಪದ್ಯಗಳಿಗೂ ಮತ್ತು ಮೆಚ್ಚಿ ಭಾವನೆಗಳಿಗೆ
ಪ್ರತಿಯಾಗಿ ಸ್ಪಂದಿಸಿರುವ ಕಾಮೆಂಟ್ ಕವಿಗಳಿಗೂ ಇಬ್ರಿಗೂ ಥ್ಯಾಂಕ್ಯು. ಕೆಲವು ಕವಿತೆಗಳು
ಮತ್ತು ಕವಿತೆಯ ಭಾವಕ್ಕೆ ಕಾಮೆಂಟ್ ರೂಪದಲ್ಲಿ ಬಂದ ಗೆಳೆಯರ ಪ್ರತಿ ಭಾವಗಳನ್ನು ಇಲ್ಲಿ
ಹಾಕುತ್ತಿರುವೆ. Enjoy :)

1. ಕನಸೂರ ದಾರಿಯಲಿರೆಪ್ಪೆ ಕೂಡಿದ ಮೇಲೆ,  ತೆರೆದುಕೊಳ್ಳುವ ಮಾಯಾನಗರಿ(ಕನಸು)  ಮೈ ಕೊಡವಿ ಏಳುವ ಪಾತ್ರಗಳು  ಸೂತ್ರ ಹರಿದು ಸಜ್ಜಾಗುವ  ಎಲ್ಲೋ. ನೋಡಿದ ಮುಖಗಳು.
ಕನಸೂರ ದಾರಿಯಲಿ  ಅಂತ್ಯಗಾಣದ ದೃಶ್ಯಗಳು.  ಭ್ರಮೆಯ ಸೂರಿನಡಿಯಲ್ಲಿ  ನನ್ನ ಕೂಡುವ ಜೀವಗಳು.
ಅಲ್ಲೊಂದು ಕಥೆ,  ಕಥೆಯೊಳಗೊಂದು ಉಪಕಥೆ  ಎಚ್ಚರವಾದಾಗಲೆಲ್ಲಾ ಅದಲು ಬದಲಾಗುವ ಪಾತ್ರಗಳು.
ಕನಸುಗಳ ಮೌನ ಮೆರವಣಿಗೆಯಲ್ಲಿ  ಕಲ್ಪನೆಗಳದ್ದೆ ಕಾರು-ಬಾರು  ಅಲ್ಲಿ ನಾನೇ ರಾಜ, ಅವಳೇ ರಾಣಿ,  ನನ್ನ ಬಂಧು-ಮಿತ್ರರೆಲ್ಲಾ ಸೈನಿಕರು.
ಮೊದಮೊದಲು ನನ್ನ ಕವಿತೆಗಳನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ, ಗೆಳೆಯ ನಿರಂಜನ ಈ
ಕವಿತೆಗೆ ಪ್ರತಿಕ್ರಿಯಿಸಿದ್ದು ಹೀಗೆ.
`ಕನಸುಗಳ ಮೌನ ಮೆರವಣಿಗೆಯಲ್ಲಿ ಕಲ್ಪನೆಗಳದ್ದೆ ಕಾರು-ಬಾರು  ಅಲ್ಲಿ ನಾನೇ ರಾಜ……. ಅಲ್ಲಿ ನೀ ಪ್ರಣಯರಾಜ, ಪ್ರೇಮ…

short write ups

ಚಕ್ಲಿಹೊಳೆ ನೋಡೋದಕ್ಕೆ ಅಂತ ಹೊರಟಿದ್ದೆ. ರಾಮು ' ತಾನು ದೇವಸ್ಥಾನಕ್ಕೆ ಹೋಗಬೇಕಾಗಿಯೂ,
ಅಲ್ಲಿವರೆಗೂ ಡ್ರಾಪ್ ಕೊಟ್ಟು ಹೋಗುವಂತೆಯೂ ' ಕೇಳಿದ. 'ಸರಿ ನಡೆಯಪ್ಪಾ ' ಅಂದೆ.

'ಬರೋದು ಬಂದಿದ್ದೀಯ. ಪೂಜೆ ಟೈಮು,ಒಳಕ್ ಬಂದು ಹೋಗು' ಅಂದ. ಉದ್ದದ ಸಾಲುಗಳಲ್ಲಿ ನಿಂತು
ಕಾಯುವುದಾದರೆ ಹೊರಗಿಂದಲೇ ಉದ್ದಂಡ ನಮಸ್ಕಾರ ಮಾಡಿ ಹೊರಟು ಬಿಡುತ್ತಿದ್ದೆ. ದೇವರು ಕೂಡ,
ಫ್ರೀ ಆಗಿ ಇದ್ದಿದ್ದರಿಂದ ನನ್ನದೇನು ಅಭ್ಯಂತರ ಇರಲಿಲ್ಲ.

ಅದು ಗಣಪತಿ ದೇವಸ್ಥಾನ. ಒಂದು ದಿನದ ಹಿಂದೆಯಷ್ಟೇ ಮದುವೆಯಾಗಿದ ರಾಮುವಿನ ಸ್ನೇಹಿತನಿಗೆ,
ಅಂದ್ರೆ ನವ ದಂಪತಿಗಳಿಗೆ 'ಶ್ರೀ ಸತ್ಯನಾರಾಯಣ' ಕಥೆ ಹೇಳುತ್ತಿದ್ದರು. ಸಾಕಷ್ಟು ಭಕ್ತ
ಸಮೂಹ ಭಕ್ತಿರಸದಲ್ಲಿ ಮುಳುಗಿದ್ದರು. ದೇವರಿಗೆ ನಮಸ್ಕಾರ ಮಾಡಿ, ತೀರ್ಥ ಕುಡಿದು ಮೂರು
ಸುತ್ತು ಹಾಕಿ ಹೊರಡಲು ಅನುವಾದೆ.

ರಾಮು - 'ಕಥೆಯ ಕೊನೆಯ ಭಾಗದಲ್ಲಿದೀವಿ, ಅನ್ಸತ್ತೆ. ಸ್ವಲ್ಪ ಹೊತ್ತು; ಕೂತು; ಕೇಳಿ
ಪ್ರಸಾದ ತಗೋಂಡು ಹೊಗಿವಂತೆ. ನಾನು ನಿನಗೆ ಸಂಜೆ-ಮೇಲೆ ಸಿಗ್ತೇನೆ' ಅಂದ. ಕಥೆ ಮುಗಿದ
ಮೇಲೆ ಪ್ರಸಾದ ರೂಪದಲ್ಲಿ ಕೊಡುವ ರವೆ ಉಂಡೆಯಂತದ್ದು ಅಲ್ಲೇ ಇತ್ತು. ಅದನ್ನು ನೋಡಿದ
ಮೇಲೆ ಹೋಗುವ ಮನಸ್ಸಾಗಲಿಲ್ಲ. ನಮ್ಮ ಮನೆಗಳಲ್ಲೂ ವೆರೈಟಿಯಾಗಿ ರವೆ ಉಂಡೆ ಮಾಡುವರು.
ಆದರೆ ದೇವಸ್ಥಾನಗಳಲ್ಲಿ ಕೊಡುವ ಪ್ರಸಾದದ ರುಚಿಯೇ ಬೇರೆ. ಮೈಸೂರಿನಲ್ಲಿದ್ದಾಗ ನಮ್ಮ
ರೂಮಿನ ಬಳಿ ಇದ್ದ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಮಿ ಬರೋದ…

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು.
ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು.
ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ.
ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು.
ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು.

ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು.
ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ.
ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ,
ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು.
ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು.
ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ
ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು
ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ
ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ,
ಇವರನ್ನು ಒಂದೇ ಮನೆಯ ಅಣ್ಣ ತಮ್ಮರಿಗೆ ಕ…

ಕಾರು, ದೇವರು ಮತ್ತು ಕಲ್ಪವೃಕ್ಷ

ಸೆಕೆಂಡ್ ಹ್ಯಾಂಡ್ ಕಾರು ಕೊಡಿಸಿದ್ದೂ ಅಲ್ಲದೆ, ಆ ಕಾರನ್ನು ಮನೆವರೆಗೂ ತಂದು ಬಿಟ್ಟು ಹೋಗುವ ಕರ್ಮವು 'ಕರುಣ' ನ ತಲೆಗೇ ಅಂಟಿಕೊಂಡಿತು. ಕಾರು ಬೇಕು ಅಂತ ಅಂದುಕೊಂಡಾಗಲೇ ಡ್ರೈವಿಂಗ್ ಕಲಿಯಲು ಸೇರಿಕೊಳ್ಳಬೇಕೆಂಬುದು ಅವನ ವಾದ. ಆದರೆ ಕೂಸು ಹುಟ್ಟದೇ ಕುಲಾವಿ ಹೊಲಿಸೋದು ಬೇಡ ಎಂಬುದು ನನ್ನ ಮನಸ್ಥಿತಿ. ಅಂತೂ ಬೈದುಕೊಳ್ಳುತ್ತಲೇ ಮನೆವರೆಗೂ ಕಾರು ಓಡಿಸಿಕೊಂಡು ಬಂದ.


ಅಮ್ಮ; ಕಾರಿಗೆ ಭರ್ಜರಿಯಾಗಿಯೇ ಪೂಜೆ ಮಾಡಲು ಅನುವಾದಳು. ಅಪ್ಪನಂತು, ‘ ಎಷ್ಟು ಕೊಡಬೋದು ಹೇಳಿ ಕಾರಿಗೆ..? ’ ಅಂತ ಪೂಜೆಗೆ ನಿಂತಿದ್ದ ಊರಿನ ಸಹ ವರ್ತಿಗಳಿಗೆ ಕೇಳಿ; ಕೇಳಿ; ಹೆಮ್ಮೆಯಿಂದ ಬೀಗುತ್ತಿದ್ದರು. ಅದು ಅಭಿಮಾನಕ್ಕೂ ಹೆಚ್ಚಾಗಿ; ತನ್ನ ಮಗ ಮೋಸ ಹೋಗದೇ ವ್ಯವಹಾರವೊಂದನ್ನು ಕುದುರಿಸಿಕೊಂಡು ಕಾರು ತಂದಿದ್ದಾನೆಂಬುದನ್ನು ಪದೆಪದೆ ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದ ರೀತಿ. ಮಧ್ಯಮ ವರ್ಗದ ಪುಟ್ಟ ಪುಟ್ಟ ಸಂಭ್ರಮಗಳನ್ನು ಮರೆಸುವಂತೆ ಆವರಿಸಿಕೊಳ್ಳುವುದು ಅವರ ಅತಿಯಾದ ವ್ಯವಹಾರ ಜ್ನಾನ ಎನಿಸುತ್ತದೆ.


ಕಾರಿನ ಸಂಪೂರ್ಣ ಚೌಕಾಸಿ-ಡೀಲ್ ಅನ್ನು ಕರುಣನ ತಲೆಗೆ ಕಟ್ಟಿ ನಾ ನೆಮ್ಮದಿಯಿಂದಿದ್ದೆ. ಪೂಜೆ ಸಾಂಗವಾಗಿ ನಡೀತಲಿತ್ತು. ಅತ್ತ ಕಡೆ ಕಾರಿನ ಗುಣಗಾನ ಮತ್ತು ಅವಗುಣಗಾನದ ಕೆಲವು ಮಂತ್ರಗಳೂ ಕೇಳಿಸುತ್ತಿದ್ದವು.


ಹೇ!! ಪೆಟ್ರೋಲ್ ಕಾರಾ… ರೀಸೇಲ್ ವ್ಯಾಲ್ಯೂ ಕಮ್ಮಿ. ಯಾರ್ ತಗೋತಾರೆ.?


ಜಾಸ್ತಿ ಆಯ್ತೇನೋ, ಮಾಡೆಲ್ ಸ್ವಲ್ಪ ಹಳೇದು


ಎಷ್ಟ್ ಓಡಿದೆ..? ಟೈರ್ ಹೊಸಾವ. ಸ್ಟ…

ಒ೦ದು ಪ್ರೀತಿಯ ಕಥೆ

“ ಅಮ್ಮಾ!! ಅವಳ ಹುಟ್ಟುಹಬ್ಬಕ್ಕಾದರೆ ಪಾಯಸ ಮಾಡ್ತೀಯ. ಆದರೆ ಪ್ರತಿ ಸಾರಿ ನನ್ನ
ಹುಟ್ಟುಹಬ್ಬಕ್ಕಾದರೆ ಯಾಕಮ್ಮಾ… ? ಏನೂ ಮಾಡಲ್ಲ. ?. ನೋಡು!! ಈ ಸಾರಿ ನನ್ನ
ಹುಟ್ಟುಹಬ್ಬಕ್ಕೆ ಹೋಳಿಗೆ-ಊಟ ಮಾಡ್ಬೇಕು. ತಿಳೀತಾ. !!”.

“ ಸಾರಿ!! ಕಂದ. ತಪ್ಪಾಯ್ತು. ನಿನ್ನಾಣೆ ಮರೆಯೊಲ್ಲ. ಈ ಬಾರಿ ನಿನ್ನ ಹುಟ್ಟುಹಬ್ಬದ ದಿನ
ಹೋಳಿಗೆ ಊಟ ಮಾಡೋಣ, ಸರೀನಾ. ಅಡಿಕೆ ಕೊಯ್ಲು ಇರೋ ಟೈಮಲ್ಲೇ ನಿನ್ನ ಹುಟ್ಟುಹಬ್ಬ
ಬರುತ್ತಲ್ಲೋ ಮಗನೆ. ನಮ್ಮ ಕೆಲಸಗಳ ಮಧ್ಯೆ ಅದು ಬಂದದ್ದೂ; ಹೋದದ್ದು ಗೊತ್ತ್ ಇಲ್ಲ.
ಆದ್ರೆ ಈ ಸಾರಿ ಎಷ್ಟೇ. ಕಷ್ಟ ಆದರು. ಹೋಳಿಗೆ ಊಟ ಮಾಡೊಣ. ”

‘ ಆಯ್ತಮ್ಮಾ. ಸರಿ!! ’ ಎಂದನು ಚಿರಂಜೀವಿ. ಹುಟ್ಟುಹಬ್ಬಕ್ಕೆ ಹೋಳಿಗೆ ಅಡಿಗೆ ಮಾಡಬಾರದು
ಅಂತಲ್ಲ. ಆದರೆ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವಂತಹ ನಾಜೂಕು ಜೀವನ ಪದ್ಧತಿಯನ್ನು
ಅವರು ರೂಢಿಸಿಕೊಂಡಿರಲಿಲ್ಲ.

October 7, 2010 ‘ ಹೋಳಿಗೆ ಬೇಕು ಅಂದಿದ್ದ ಮಗು, ಇಷ್ಟು ಹೊತ್ತಾದರು ಊಟಕ್ಕೆ
ಯಾಕೆ ಬರಲಿಲ್ಲ.’ ಅಮ್ಮ ಹೋಳಿಗೆ ಅಡುಗೆ ಮಾಡಿಟ್ಟು ಮಗನ ಬರುವಿಗೆ ಕಾಯುತ್ತಾ,
ಗೊಣಗುತ್ತಾ ಕುಳಿತಿದ್ದಾಳೆ. ರಾತ್ರಿ ಹೊತ್ತು ಗೆಳೆಯರ ಮನೆಗೆ ಹೋಗಿ, ಹರಟುತ್ತಾ
ಕೂರುವುದು ಅವನ ಅಭ್ಯಾಸ. ಬಾಗಿಲ ಕಡೆಗೆ ನೋಡುತ್ತಾ “ ಪಾಪ ಮಗು!! ಹಗಲೆಲ್ಲಾ ಮನೇಲಿ,
ಒಬ್ಬನೇ ಕೂತು ಸಾಕಾಗಿರುತ್ತೆ. ಆಸರ-ಬೇಸರ ಕಳೆಯಲು ರಾತ್ರಿ ಹೊತ್ತು, ಒಂದಿಷ್ಟು
ಮಾತಾಡಿಕೊಂಡು ಬರುತ್ತೆ. ಸ್ಕೂಲಿಗೆ ಹೋಗುವ ಹುಡುಗರು ರಾತ್ರಿ ಹೊತ್ತು ಬಿಟ್…

​ಶಿವಮೊಗ್ಗ ಸುತ್ತಮುತ್ತ ​ ( ದಿನ -1)

ರವಿ!! ರೂಪಿ!! ಮತ್ತು ನಾನು(ಚೇತನ್) ಚಳಿಗಾಲದ ಮಲೆನಾಡಿನ ಹಲ ತುಣುಕುಗಳ ಆಸ್ವಾದನೆಗೆಂದು ಹೊರಟವರು. ಮೂರು ದಿನಗಳ ಟ್ರಿಪ್ಪು. ಮಿಜಾಲ್ಟಿಗೆ ಬಂದಿರೋ ಗಂಡು ಮಕ್ಳದೆಲ್ಲಾ ಒಂದೇ ಸಮ ಮದ್ವೆಗಳು ನಡೆಯುತ್ತಿರುವುದರಿಂದ, ಟೆಂಪೋ ಟ್ರಾವೆಲ್ಸ್ ನಂಥ ಗಾಡಿಗಳಲ್ಲಿ ತಿರುಗುತ್ತಿದ್ದ ನಮ್ಮ ದೊಡ್ಡ ಗುಂಪು, ವ್ಯಾಗನಾರ್ ಗೂ ಸಾಕೆನಿಸುತ್ತಲಿದೆ.
ಪ್ರವಾಸದ ಸ್ಟಾರ್ಟಿಂಗ್ ಪಾಯಿಂಟ್ ಹೊನ್ನವಿಲೆ. ಅಂದರೆ ನನ್ನೂರು.  ಬಂದಿದ್ದ ಗೆಳೆಯರ ಅತಿಥಿ ಸತ್ಕಾರ ಮಾಡಿ, ಬೇಗಬೇಗ ಕಾರು ಹತ್ತಿಸುವ ಅನಿವಾರ್ಯತೆ ಇತ್ತು. ಯಾಕಂದ್ರೆ ಎಲ್ಲರ ಮದುವೆ ಮಾಡಿಸಿಯೇ ತೀರಬೇಕೆಂದು ಹಠ ತೊಟ್ಟಿರುವ ನಾವುಗಳು, ಪ್ರತಿ ಬಾರಿ ಒಬ್ಬೊಬ್ಬರ ಮನೆಗೆ ಹೋದಾಗಲೂ.. ಮದುವೆಯ ಬಗೆಗಿನ ಸಕಾರಣಗಳನ್ನು ವಿವರಿಸಿ ಪೋಷಕರ ಬ್ರೇನ್ ವಾಷ್ ಮಾಡುವ ಯಾನೆ ಫಿಟಿಂಗ್ ಇಟ್ಟು ಬರುವ ಕೆಲಸಗಳನ್ನು ಸಾಂಘಿಕವಾಗಿ ನಡೆಸುತ್ತಲಿದ್ದೆವು. ಈ ಬಾರಿ ಬಲಿ ಕಾ ಬಕ್ರ ನಾನು.

ಸಕ್ರೆಬೈಲು!! ಪಸ್ಟು ವಿಸಿಟ್ ಕೊಟ್ಟ ಸ್ಥಳ ಸಕ್ರೆಬೈಲು.  ಸಕ್ರೆಬೈಲಿನಲ್ಲಿ ಆನೆ ಬಿಡಾರವಿದೆ. ಆನೆ ಸವಾರಿ, ಆನೆ ಸೆಲ್ಫಿ, ಸೊಂಡಿಲು ಆಶೀರ್ವಾದ ಎಲ್ಲವೂ ಇದೆ. ರಜಾ ದಿನವಾದ್ದರಿಂದ ಆನೆಗಳನ್ನ ನೋಡೋದಕ್ಕೆ ತುಂಬಾ ಜನ ಮುತ್ತಿಕೊಂಡಿದ್ದರು. ಒಂದೊಂದು ಸೊಂಡಿಲ ಆಶಿರ್ವಾದಕ್ಕೂ ಹತ್ತು ರೂಪಾಯಿ ನೋಟು ಸೊಂಡಿಲ ಸಂದಿಗೆ ಸೇರಿಸುತ್ತಿದ್ದುದು ನೋಡಲು ಮಜವಾಗಿತ್ತು. ನಾವು, ಸೊಂಡಿಲಿನ ಏಟಿಗೂ, ಕೋರೆ ಹಲ್ಲಿನ ಸ್ಪರ್ಶಕ್ಕಾಗಿಯೂ …

ಬಸ್ ಪಾಸು ಕಳೆದುಕೊಂಡಿದ್ದ ಕಥೆ

ಏಳನೇ ಕ್ಲಾಸಿನ ಶೈಕ್ಷಣಿಕ ವರ್ಷವು ಪ್ರಾರಂಭವಾಗಿ ಸುಮಾರು, ಮೂರು ತಿಂಗಳು ಕಳೆಯುವ ಹೊತ್ತಿಗೆ, ಅಚಾತುರ್ಯವೊಂದು ನನ್ನಿಂದ ನಡೆದು ಹೋಯ್ತು. ನನ್ನ ಬಸ್ ಪಾಸನ್ನು ಕಳೆದುಕೊಂಡು ಬಿಟ್ಟೆ. ಶಾಲಾ ಜೀವನದಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬೇಕಾಗಿದ್ದ ಏಕೈಕ ಅತ್ಯಮೂಲ್ಯವಾದ ವಸ್ತುವೆಂದರೆ, ಬಸ್ ಪಾಸು. ನಮ್ಮ ಹಳ್ಳಿಯಿಂದ ಪೇಟೆಯ ಸ್ಕೂಲಿಗೆ ಬರಲು, KSRTC ಯವರು ಕೊಟ್ಟಿದ್ದ ಉಚಿತ ಬಸ್ ಪಾಸು ಅದು. ಎಲ್ಲೆಲ್ಲಿ ಅಂತ ಹುಡುಕಿದರೂ ಸಿಗಲಿಲ್ಲ.