ಮನಸ್ಸು ಎರಡನೇ ಸಾರಿ ಎಚ್ಚರಿಕೆ ಕೊಡ್ತು : ‘ ಬೇಡ ಮಗ!! ಕೆರ ಕಳ್ಕೊಂಡು ಹೊಡಿತಾಳೆ. ’ ನೋಡೋಣ ಬಿಡು. ಯಾರಿಗಾದ್ರೂ ಏನನ್ನಾದ್ರೂ ಹೇಳಬೇಕು ಅಂತಿದ್ರೆ, ಹೇಳಿಬಿಡಬೇಕು. ಮುಂದೆ ಒಂದಿನ ವಿಷಾದ ಇರಬಾರದು. ನಾನೇನು ಅವಳಿಗೆ ಐ ಲವ್ ಯು ಅಂತ ಹೇಳ್ತಾ ಇಲ್ವಲ್ಲಾ. ಒಳ್ಳೇದು ಕೆಟ್ಟದ್ದು ಅಂತ ನೋಡ್ತಾ ಇದ್ರೆ… ಸೋತುಪುರುಕ ಆಗಿ ಬಿಡ್ತೇನೆ’ ಹೇಳೋದಾದರೂ ಏನು…? ಏನಿಲ್ಲ, ‘ ಯು ಆರ್ ಬ್ಯೂಟಿಫುಲ್’ ಅನ್ನೋದು. ಅದಕ್ಕಿಂತ ಹೆಚ್ಚು-ಕಮ್ಮಿ ಏನ್ ಹೇಳೋದಕ್ಕೆ ಸಾಧ್ಯ..? ತುಂಬಾ ಸುಂದರವಾಗಿ ಕಾಣ್ತಾಳೆ. ಯಾವತ್ತೋ ಒಂದಿನ ಎದುರಿಗೆ ಕಾಣಿಸಿಕೊಂಡು, ಸುಯ್ಯಂತ ಹೊರಟು ಹೋಗಿದ್ರೆ, ‘ಅಬ್ಬಾ!! ಏನ್ ಹುಡ್ಗಿ’ ಅಂತ ಅಂದು ಸುಮ್ಮನಾಗಿ ಬಿಡಬಹುದಿತ್ತು. ತೆರೆದ ಬಾಯಿ ಮುಚ್ಚೊದರೊಳಗಾಗಿ ಅವಳ ನೆನಪುಗಳು ಕಲೆಯುತ್ತಿದ್ದವೇನೊ. ಆದರೆ ಅವಳು ದಿನಾ ನಾಲಕ್ಕು ವರೆಗೆ ಸರಿಯಾಗಿ, ಕೆಫೆಟೇರಿಯಾದಲ್ಲಿ ಕಾಣಿಸಿಕೊಳ್ತಾಳೆ. ಅಲ್ಲಿ ಇಬ್ಬರು ಡುಮ್ಮನೆ ಬಾಡಿ-ಗಾರ್ಡ್ ಗಳು ಅವಳಿಗೋಸ್ಕರ ಕಾಯ್ತಾ ಇರ್ತಾರೆ. ಆ ಅಂಥವಳು ಕಾಫಿ ಕುಡಿಯೋವರೆಗೂ, ‘ಒನ್ ಓ ಕ್ಲಾಕ್ ‘ ದಿಕ್ಕಿಗೆ ಚೇರ್ ಜೋಡಿಸಿಕೊಂಡು ಕೂತು, ಅವಳನ್ನ ನೋಡ್ತೇನೆ. ಖುಷಿ ಅಂತೂ ಆಗತ್ತೆ. ತಾನು ಇಷ್ಟು ಸುಂದರವಾಗಿರೋದು ಗೊತ್ತಿರಬಹುದು. ಆದರೆ ಅದನ್ನ, ಅವಳಿಗೆ ಅಷ್ಟೇ ಸುಂದರವಾಗಿ ಯಾರೂ ಹೇಳಿರಬಾರದು. ಹಂಗೆ ಹೇಳಬೇಕು. ಹೇಳಲಿಲ್ಲ ಅಂದ್ರೆ!! ಹೇಳಬಹುದಿತ್ತಲ್ಲಾ ಅನ್ನೋ ಗುಂಗು ಇದ್ದುಬಿಡತ್ತೆ. ಸರಿ, ಹೇಳೋದಾದ್ರೂ ಏನು!! ಮತ್ತದ