ನಾವು ಇದ್ದವರು ಒಟ್ಟು ಐದು ಜನ(ಅಭಿ, ರವಿ, ರೂಪಿ, ಶೈಲು ಮತ್ತು ನಾನು). ಮಂಗಳೂರಿನಿಂದ ಪ್ರವಾಸಕ್ಕೆಂದು ಹೊರಟವರು, ಗೂಗಲ್ ನಲ್ಲಿ ಪತ್ತೆ ಮಾಡಿದ ಒಂದು ದ್ವೀಪವನ್ನು ಹುಡುಕುತ್ತಾ ಕರಾವಳಿ ತೀರದಲ್ಲಿ ಸಮುದ್ರಕ್ಕೆ ಸಮಾನಾಂತರವಾಗಿ ಅಲೆಯುತ್ತಿದ್ದೆವು. GPS, ನೀರಿನ ಮೇಲೆಲ್ಲಾ ದಾರಿ ತೋರಿಸಿದ್ದರಿಂದ, ಕಾರು ದಾರಿ ತಪ್ಪಿತ್ತು. ಅಂತೂ ದಾರಿಹೋಕರ ಮಾರ್ಗದರ್ಶನದಂತೆ 'ಕುದ್ರು’ ಅನ್ನೋ ದ್ವೀಪಕ್ಕೆ ಬಂದ್ವು. ಎಲ್ಲಿಗೋ ಹೋಗಬೇಕಾದವರು, ಮತ್ತೆಲ್ಲಿಗೋ ಬಂದು ಸೇರಿದೆವಾದರೂ, ಡೆಸ್ಟಿನಿ ಅನ್ನೋದು ನಮ್ಮನ್ನ ತುಂಬಾ ಒಳ್ಳೆಯ ಜಾಗಕ್ಕೆ ತಂದು ಹಾಕಿತ್ತು. ನಾವುಗಳು ಸ್ಕೂಲಲ್ಲಿ ಓದಿರುವ ಪ್ರಕಾರ, ಸುತ್ತಲೂ ನೀರಿನಿಂದ ಆವರಿಸಿರುವ ಮಧ್ಯದ ಯಾವುದೇ ನೆಲಭಾಗವನ್ನು ದ್ವೀಪ ಅಂತ ಕರೀತಾರೆ. ಕುದ್ರು ಅನ್ನೋದು ಹದಿನೆಂಟು ಎಕರೆಯಷ್ಟು ವಿಶಾಲವಾಗಿರುವ ಭೂ ಭಾಗ. ಸುತ್ತಲೂ ಹರಿಯುವುದು ಸೌಪರ್ಣಿಕ ನದಿ. ಕಲ್ಲೂರಿನಲ್ಲಿ ಹುಟ್ಟುವ ಸೌಪರ್ಣಿಕ ನದಿ, ಮರವಂತೆ ಬೀಚ್ ಹತ್ತಿರ ಮುಂದೆಲ್ಲೋ ಅರಬ್ಬೀ ಸಮುದ್ರವನ್ನು ಸೇರುತ್ತದೆ. ತಾನು ಹರಿಯುವಾಗ ಈ ಪುಟ್ಟ ದ್ವೀಪವನ್ನು ಸೃಷ್ಟಿಸಿದೆ. ನೀರು ದಾಟಿ ದ್ವೀಪಕ್ಕೆ ಹೋಗಬೇಕೆಂದು ಕಾಯುತ್ತಾ ನಿಂತವರಿಗೆ, ಅಲ್ಲೇ ಇದ್ದ ಒಬ್ಬರು ಮಹಿಳೆಯಿಂದ ಇವಿಷ್ಟು ಇನ್ಫಾರ್ಮೇಷನ್ ಸಿಕ್ತು. ಅಂದರೆ ಇದೊಂದು ಪ್ರವಾಸೀ ತಾಣ ಅಲ್ಲ. ಒಂದು ವಿಭಿನ್ನ ಅನುಭವಕ್ಕಾಗಿ ಬಂದು ನಿಂತವರಿಗೆ, ಅಲ್ಲಿ ಯಾವ