'ಸ್ಕಂದಗಿರಿ' ಗೆ ಚಾರಣಕ್ಕೆಂದು ಹೊರಟಾಗ, ರಾತ್ರಿ ಹನ್ನೊಂದು ದಾಟಿತ್ತು. ಹೋಗುವಾಗ
ಇದ್ದದ್ದು ಒಟ್ಟು ಏಳು ಜನ ಮತ್ತು ನಾಲ್ಕು ಬೈಕು. ನಮ್ಮಲ್ಲಿ ಅತ್ಯಂತ ಸುಳ್ಳುಗಾರನೆಂದು
ಹೆಸರಾದವನು ಶ್ರೀ. ಎಲ್ಲಾ ಗೊತ್ತು ಎಂದು ಎಲ್ಲರನ್ನು ಕರೆದುಕೊಂಡು ಹೋಗಿ,
ನಡುದಾರಿಯಲ್ಲಿ ಕೈ ಚೆಲ್ಲಿಬಿಡುವುದೇ ಹೆಚ್ಚು. ಸ್ಕಂದಗಿರಿಯದ್ದೂ ಹೆಚ್ಚು ಕಮ್ಮಿ ಅದೇ
ಸ್ಥಿತಿ.
ಬೆಂಗಳೂರಿನಿಂದ ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದ ಬದಲಾಗಿ, ಯಲಹಂಕದೊಳಗಿಂದ ಹಳ್ಳಿ
ಹಳ್ಳಿಗಳನ್ನು ಬಳಸುತ್ತಾ ಸಾಗಿದೆವು. ತಾನು ಈ ಹಿಂದೆ ಹಲವಾರು ಬಾರಿ ಹೋಗಿರುವುದಾಗಿ
ಶ್ರೀ ಹೇಳಿಕೊಳ್ಳುವನಾದರೂ, ಆ ಹೇಳಿಕೊಳ್ಳುವಿಕೆಯಲ್ಲಿಯೇ ಕಪಟತೆ ಕಾಣಿಸುತ್ತಿತ್ತು.
ಆದರೂ ಜಡ, ನಿರ್ವಿಕಾರ, ನಿರ್ಲಿಪ್ತ, ನಿರ್ವೀರ್ಯ ಟೆಕ್ಕಿ ಸಮುದಾಯಕ್ಕೆ ಏನಾದರೊಂದು
ಮಾಡಲು ಒಂದು ಸಣ್ಣ ಪುಶ್ ಬೇಕು. ಇಲ್ಲಾಂದ್ರೆ ಹೊರಡೋದಕ್ಕೆ ಮನಸ್ಸು ಬರೋದಿಲ್ಲ.
ಮೊದಲು ಹಳ್ಳಿಗಳ ಮಧ್ಯೆ ಕಳೆದು ಹೋದೆವು. ಕತ್ತಲಲ್ಲಿ, ಹಳ್ಳಿ ರಸ್ತೆಗಳಲ್ಲಿ ಲೆಫ್ಟು
ರೈಟು ಗಳು ಸ್ಪಷ್ಟವಾಗಿ ಕಾಣಿಸುತ್ತಿದುದೇ ಕಷ್ಟಸಾಧ್ಯ. ಅಂತಾದ್ರಲ್ಲಿ ಮಾರ್ಗ ಸೂಚಿ
ಸೈನ್ ಬೋರ್ಡುಗಳನ್ನು ಎಲ್ಲಿಂದ ಹುಡುಕುವುದು. ತಡರಾತ್ರಿ ಆಗುವ ಹೊತ್ತಿಗೆ ಸರಿಯಾಗಿ
ಸ್ಕಂದಗಿರಿ ಮಾರ್ಗ gps ನಲ್ಲಿ ಟ್ರೇಸ್ ಆಯ್ತು. ಅದರ ಬಾಲ ಹಿಡಿದು ಹೊರಟೆವು. ಆನಂತರ
ತಗಲಾಕ್ಕೊಂಡಿದ್ದು ನಾಲ್ಕು ಬೀಟ್ ಪೋಲೀಸುಗಳ ಕೈಲಿ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್
ಗಳನ್ನು ಇಟ್ಟವರ…