ರವಿ!! ರೂಪಿ!! ಮತ್ತು ನಾನು(ಚೇತನ್) ಚಳಿಗಾಲದ ಮಲೆನಾಡಿನ ಹಲ ತುಣುಕುಗಳ ಆಸ್ವಾದನೆಗೆಂದು ಹೊರಟವರು. ಮೂರು ದಿನಗಳ ಟ್ರಿಪ್ಪು. ಮಿಜಾಲ್ಟಿಗೆ ಬಂದಿರೋ ಗಂಡು ಮಕ್ಳದೆಲ್ಲಾ ಒಂದೇ ಸಮ ಮದ್ವೆಗಳು ನಡೆಯುತ್ತಿರುವುದರಿಂದ, ಟೆಂಪೋ ಟ್ರಾವೆಲ್ಸ್ ನಂಥ ಗಾಡಿಗಳಲ್ಲಿ ತಿರುಗುತ್ತಿದ್ದ ನಮ್ಮ ದೊಡ್ಡ ಗುಂಪು, ವ್ಯಾಗನಾರ್ ಗೂ ಸಾಕೆನಿಸುತ್ತಲಿದೆ. ಪ್ರವಾಸದ ಸ್ಟಾರ್ಟಿಂಗ್ ಪಾಯಿಂಟ್ ಹೊನ್ನವಿಲೆ. ಅಂದರೆ ನನ್ನೂರು. ಬಂದಿದ್ದ ಗೆಳೆಯರ ಅತಿಥಿ ಸತ್ಕಾರ ಮಾಡಿ, ಬೇಗಬೇಗ ಕಾರು ಹತ್ತಿಸುವ ಅನಿವಾರ್ಯತೆ ಇತ್ತು. ಯಾಕಂದ್ರೆ ಎಲ್ಲರ ಮದುವೆ ಮಾಡಿಸಿಯೇ ತೀರಬೇಕೆಂದು ಹಠ ತೊಟ್ಟಿರುವ ನಾವುಗಳು, ಪ್ರತಿ ಬಾರಿ ಒಬ್ಬೊಬ್ಬರ ಮನೆಗೆ ಹೋದಾಗಲೂ.. ಮದುವೆಯ ಬಗೆಗಿನ ಸಕಾರಣಗಳನ್ನು ವಿವರಿಸಿ ಪೋಷಕರ ಬ್ರೇನ್ ವಾಷ್ ಮಾಡುವ ಯಾನೆ ಫಿಟಿಂಗ್ ಇಟ್ಟು ಬರುವ ಕೆಲಸಗಳನ್ನು ಸಾಂಘಿಕವಾಗಿ ನಡೆಸುತ್ತಲಿದ್ದೆವು. ಈ ಬಾರಿ ಬಲಿ ಕಾ ಬಕ್ರ ನಾನು. ಸಕ್ರೆಬೈಲು !! ಪಸ್ಟು ವಿಸಿಟ್ ಕೊಟ್ಟ ಸ್ಥಳ ಸಕ್ರೆಬೈಲು. ಸಕ್ರೆಬೈಲಿನಲ್ಲಿ ಆನೆ ಬಿಡಾರವಿದೆ. ಆನೆ ಸವಾರಿ, ಆನೆ ಸೆಲ್ಫಿ, ಸೊಂಡಿಲು ಆಶೀರ್ವಾದ ಎಲ್ಲವೂ ಇದೆ. ರಜಾ ದಿನವಾದ್ದರಿಂದ ಆನೆಗಳನ್ನ ನೋಡೋದಕ್ಕೆ ತುಂಬಾ ಜನ ಮುತ್ತಿಕೊಂಡಿದ್ದರು. ಒಂದೊಂದು ಸೊಂಡಿಲ ಆಶಿರ್ವಾದಕ್ಕೂ ಹತ್ತು ರೂಪಾಯಿ ನೋಟು ಸೊಂಡಿಲ ಸಂದಿಗೆ ಸೇರಿಸುತ್ತಿದ್ದುದು ನೋಡಲು ಮಜವಾಗಿತ್ತು. ನಾವು, ಸೊಂಡಿಲಿನ ಏಟಿಗೂ, ಕೋರೆ ಹಲ್ಲಿ