Skip to main content

Posts

Showing posts from 2018

ಇರುಪ್ಪು : ಏಳು-ಬೀಳು

​ಮಂಗಳೂರಿಂದ - ಮಡಿಕೇರಿ ತಲುಪಿದಾಗ ಸುಡು ಬಿಸಿಲು.

ಅಲ್ಲಿಂದ ಇರುಪ್ಪು ಜಲಪಾತ ಬೋರ್ಡ್ ತೋರಿದ್ದ ಕಡೆಗೆ ಕಾರನ್ನು ತಿರುಗಿಸಿದೆವು

ಕಾರು ಬಿಡುತ್ತಿದ್ದವನು ಅಭಿ. ಅವನ ಪಕ್ಕದಲ್ಲಿ ನಾನು ಮತ್ತು ಹಿಂಬದಿಯ ಸೀಟಿನಲ್ಲಿದ್ದವನು ರವಿ.

ಇರುಪ್ಪು ತಲುಪಿದಾಗ ಮಧ್ಯಾಹ್ನ ಮೂರು ಘಂಟೆ.

ಇರುಪ್ಪು ಜಲಪಾತದ ಕಾಡು ದಟ್ಟವಾಗಿತ್ತು. ಕಾಡಿನ ಘನತೆಗೆ ತಕ್ಕಂತಹ ಯಮಗಾತ್ರದ ಮರಗಳಿದ್ದವು. ಕತ್ತೆತ್ತಿ ಅವುಗಳ ತುದಿ ಎಲ್ಲಿದೆ..? ಎಂದು ನೋಡುವುದೇ ಕಷ್ಟವೆನಿಸುತ್ತಿತ್ತು.

ಕಾಳಿಂಗ ಸರ್ಪ, ಹುಲಿ-ಸಿಮ್ಮ, ಕರಡಿ ಮುಂತಾದವುಗಳ ಬೋರ್ಡುಗಳು ಸಾಕಷ್ಟಿದ್ದವು. ಬಿಸಿಲಿನ ಜಳ ಹೆಚ್ಚಿದ್ದರೂ ಸಹ, ಕಾಡುದಾರಿಯ ನಡಿಗೆಯು ಸುಖಕರವಾಗಿತ್ತು.

ತೂಗುಸೇತುವೆಯೊಂದನ್ನು ದಾಟುವಾಗ, ಖಾಕಿ ವಸ್ತ್ರ ಧರಿಸಿದ್ದ ಕಾಡಿನ ಕೆಲ್ಸಗಾರರೊಬ್ಬರು ಎದುರಾದರು. ಖಾಕಿ ಬಟ್ಟೆ ಹಾಕಿದ್ದರಿಂದಾಗಿ ಅವರು ಡಿಪಾರ್ಟ್ಪೆಂಟಿನವರು ಎಂಬುದಾಗಿ ಹೇಳಬಹುದಾಗಿತ್ತು ಅಷ್ಟೇ. ಅನಾಟಮಿ ಲೆಕ್ಕದಲ್ಲಿ ದೇಹದ ಅಸ್ಥಿಯ ಗುರುತುಗಳೂ ಇಲ್ಲದೆ, ಅಂಗಾಂಗಳೆಲ್ಲವೂ ಊನವಾಗಿದ್ದವು. ಮೂರ್ನಾಕು ಭಂಗಿಯಲ್ಲಿ ಬಾಗಿದ್ದ ದೇಹವನ್ನು ಮತ್ತಷ್ಟು ಭಾಗಿಸಿ, ಕೈಯಿಂದ ಕಾಲನ್ನೆತ್ತಿ ಮುಂದಕ್ಕಿಕ್ಕುತ್ತಿದ್ದರು. ಇನ್ನೊಂದು ಕೈಯಲ್ಲಿ ಗೂಟವಾಗಿ ಕೋಲಿತ್ತು. ತಮ್ಮ ಹೆಜ್ಜೆ ತಾವಿಡುವುದೇ ದುಸ್ತರವಾಗಿದ್ದ ದೇಹ ಸ್ಥಿತಿ. ' ಯಾವಾನಪ್ಪಾ ಇವನಿಗೆ ಕೆಲಸ ಕೊಟ್ಟವನು..? ಈ ಕಾಡಲ್ಲಿ ಈ ಮನ್ಷ ಮಾಡೋದಾದರೂ ಏನಿದೆ ..? ' ಅಂದುಕೊಂ…