1. ಟಾಟಾ ವಿಕಾಸ್ ಎಜುಕೇಶನ್ ಕಂಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕಂಪನಿಯ, ಮೊದಲ ಕೆಲವು ದಿನಗಳು ಅವಿಸ್ಮರಣೀಯ ವಾಗಿರುತ್ತವೆ. ಯಾಕಂದ್ರೆ ಲಾರ್ವ ದಿಂದ ಕಪ್ಪೆ ಆಗಿ ಬೆಳವಣಿಗೆ ಹೊಂದುವಂತೆ, ನಾವು ಪ್ರೊಡಕ್ಟಿವ್ ಆಗಿ ಬದಲಾಗುವ ಸುವರ್ಣ ತಿರುವು ಇದು. ನಮ್ಮ ಕಂಪನಿಯ ಮೊದಲ ತರಬೇತಿಯ ದಿನಗಳು ಸೂಪರ್ ಆಗಿದ್ದವು. ಹಲವಾರು ರಾಜ್ಯಗಳಿಂದ ಬಂದ, ವಿವಿಧ ಭಾಷೆಗಳಿಂದ ಕೂಡಿದ ವೈವಿಧ್ಯಮಯ ತಾಣ ತ್ರಿವೇಂಡ್ರಮ್ ನಲ್ಲಿದ್ದ ನಮ್ಮ learning temple. ಈ ತರಬೇತಿಯ ಹೆಸರು ILP. ಅಂದರೆ initial learning program. ನಲವತ್ತು ದಿನಗಳ ಈ ತರಬೇತಿ ಶಿಬಿರದಲ್ಲಿನ ಮೋಜು, ಮಸ್ತಿ, ನಾಲಕ್ಕು ವರ್ಷಗಳ ಇಂಜಿನಿಯರಿಂಗ್ ಜೀವನ ಮರುಕಳಿಸಿದಂತಿತ್ತು. ಈ ತರಬೇತಿ ಶಿಬಿರದಲ್ಲಿ ನನ್ನನ್ನು ಅತಿಯಾಗಿ ಸೆಳೆದಿದ್ದು 'ವಿಕಾಸ್' ಎಂಬ ಟ್ರೈನರ್. ಸಂಪೂರ್ಣ ದೃಷ್ಟಿಯೇ ಇಲ್ಲದ ವಿಕಾಸ್, ಕಣ್ಣುಗಳಿರುವ ನಮಗೆಲ್ಲಾ ಇಂಗ್ಲೀಷ್ ಕಲಿಯುವಿಕೆಗೆ ದಾರಿದೀಪ. ವಿಕಾಸ್ ಇಷ್ಟವಾಗಿದ್ದು ಆತನ ಅಗಾಧ Talent ನಿಂದ ಅಲ್ಲ. ಬದಲಾಗಿ ವಿಕಾಸ್ ನಲ್ಲಿದ್ದ ಬತ್ತಿ ಹೋಗದ ಉತ್ಸಾಹ ಮತ್ತು ಜೀವನ ಪ್ರೀತಿ. ಮೊದಲ ದಿನ ತನ್ನ ಪರಿಚಯ ಮಾಡಿಕೊಂಡು, ಟೀಚಿಂಗ್ ಸೆಷನ್ ಶುರು ಮಾಡುವುದಕ್ಕೆ ಅಣಿಯಾದ ವಿಕಾಸ್. ಬಹುಶಃ ಎಬಿಲಿಟಿ ಇಲ್ಲದೆ ಇದ್ದರೂ, ಅಂಧ ಎನ್ನುವ ಕಾರಣಕ್ಕೆ ಸಹಾನುಭೂತಿ ಪಡೆದು ಬಂದಿರಬಹುದು. ಪಾಪ!! ಕಂಪನಿಯವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿ