1 . ಸವಿಜೇನು ಕಚ್ಚಿದ ದಿನ
GKVK ಕ್ಯಾಂಪಸ್ ಖಾಲಿ ರೋಡಲ್ಲಿ, ಜೋರ್ ಬೈಕ್ ಓಡಿಸಿಕೊಂಡು ಆಫೀಸ್ ಕಡೆಗೆ ಬರ್ತಿದ್ದೆ.
ಇದ್ದಕಿದ್ದಂತೆ .. ನೊಣದಷ್ಟು ದಪ್ಪದ ಕಾಡ್ ಜೇನು ಎಡಗಾಲಿನ ನಡುಬೆರಳಿಗೆ ಕಚ್ಚಿತು.
ಅದು ಜೇನು ಅಂತ ಗೊತ್ತಾಗ್ತಿದ್ದಂಗೆ, ಉರೀತಾ ಇದ್ದ ಕಾಲು ಕೊಡವೋದಕ್ಕೆ ಶುರು ಮಾಡ್ದೆ.
ಗಾಬರಿ ಮಾಡ್ಕೊಂಡು ಬೀಳೋದೊಂದು ಬಾಕಿ. ಹಂಗೂ ಬೀಳ್ತಾ ಇದ್ದ ಬೈಕು ನೆಟ್ಟಗೆ ಮಾಡ್ಕಂಡು, ನಿಲ್ಲಿಸಿದೆ.
ಕಸದ ರಾಶಿಯೊಳಗೆ ಮುಕ್ಕುತ್ತಿದ್ದ ಮೂರು ಕಂತ್ರಿ ನಾಯಿಗಳು,
ನಾನು ಬೈಕು ನಿಲ್ಲಿಸಿದ ರೀತಿಯಿಂದ ಅಪಾರ್ಥ ಮಾಡಿಕೊಂಡವೋ ಏನೋ..?
ಒಟ್ಟೊಟ್ಟಿಗೆ ಆ ಮೂರೂ ಕಂತ್ರಿ ನಾಯಿಗಳು ಅಟ್ಟಿಸಿಕೊಂಡು ಬರೋದಕ್ಕೆ ಶುರು ಮಾಡಿದವು.
ಜೇನು ಇನ್ನ ಕಾಲಿನ ಮೇಲೇ ಇತ್ತು. ಅಯ್ಯಯ್ಯೋ ಬೇಡ ಕಥೆ…
ಆ ನಾಯಿಗಳ ಸರಹದ್ದಿನಿಂದ ಒಂದೇ ಉಸಿರಿಗೆ ದೂರ ಬಂದು ನಿಲ್ಲಿಸಿದೆ. ಜೇನು ಕೊಡಲಿಯಾಕಾರದ
ಮುಳ್ಳು ಬಿಟ್ಟು, ಹಾರಿತು.
ಉರಿ ಉರಿ ಪಾದ ಊದಿಕೊಳ್ತು. ಆಫಿಸಿನಲ್ಲಿ ಕುಂಟುವಾಗ, ನನ್ನ ಕಥೆ ಕೇಳಿ ನಕ್ಕರು.
“Dog chasing part is a good one.” ಅಂತ ಕಾಂಪ್ಲಿಮೆಂಟು.
ಆದರೂ ಜೇನನ್ನು ಅದು ಯಾವ ಕವಿ ಮೊದಲನೇ ಸಾರಿ, ರೊಮ್ಯಾಂಟಿಕ್ ಆಗಿ ನೋಡಿದನೋ ಗೊತ್ತಿಲ್ಲ.
ಚಿಕ್ಕವನಿದ್ದಾಗ ನನ್ನ ಗೆಳೆಯ ಹೇಳ್ತಾ ಇದ್ದ, ‘ಜೇನಿಗೆ ಕಲ್ಲು ಹೊಡೆದರೆ… ಹೊಡೆದವರನ್ನೇ
ಅಟ್ಟಿಸಿಕೊಂಡು ಬಂದು ಕಚ್ಚತ್ತೆ’ ಅಂತ.
‘ ಅದಕ್ಕೆ ನಾನೇ ಹೊಡೆದದ್ದು ಅಂತ ಹೆಂಗ್ ಗೊತ್ತಾಗತ್ತೆ ’ ಎಂದು ಕೇಳಿದ್ದಕ್ಕೆ..ಸ್ವಲ್ಪ confuse ಆಗಿ
“ಹೊಡೆದ ಕಲ್ಲನ್ನು ಮೂಸಿ ನೋಡಿಬಿಟ್ಟು , ಅದು ಯಾರು ಹೊಡೆದದ್ದು ಅಂತ ಕಂಡುಹಿಡಿಯತ್ತೆ .” ಅಂತ ಹೇಳ್ದ..
ಎಲ್ಲಾ ಮೋಸ ಇದು… ನಾನು ಯಾವ ಜೇನಿಗೂ ಕಲ್ಲು ಹೊಡೆದಿರಲಿಲ್ಲ.
ಕಚ್ಚಿದ ಒಂದು ಜೇನು, ಸಂಜೆ ಆದ್ರೂ ಇನ್ನೂ ಕಾಲು ಉರಿಸುತ್ತಿದೆ ಅಂದ್ರೆ, ಜೇನಿನ ದಾಳಿಗೆ ಒಳಗಾದವರ ಬಗ್ಗೆ ಕನಿಕರ ಪಡಲೇ ಬೇಕು.
ಎರಡನೇ
ದಿನಕ್ಕೆ ಕಾಲಿಟ್ಟರೂ, ಜೇನು ಕಚ್ಚಿದ್ದ ಕಾಲಿನ ಬಾವು ಕಮ್ಮಿಯಾಗಲೇ ಇಲ್ಲ. ನಮ್ಮ
ಫ್ಯಾಮಿಲಿ ತಜ್ಞರಾದ ‘ರವಿ ಡಾಕ್ಟ್ರು’ ಹತ್ರ ಹೋದೆ. ಅವರ ಕೈಗುಣ ಮತ್ತು ಬದಲಾಗದ ನಮ್ಮ
ಮೈಗುಣದ ಹಗ್ಗಜಗ್ಗಾಟಗಳ ಫಲವಾಗಿ, ದಶಕಗಳಿಂದಲೂ ನಮ್ಮ ಪ್ಯಾಮಿಲಿ ತಜ್ನರಾಗಿರುವುದು ‘ರವಿ
ಡಾಕ್ಟರ’ ದುರ್ದೈವ.
ಮಧ್ಯಾಹ್ನದ ಹೊತ್ತಿಗೆ ಪೇಶೆಂಟುಗಳೆಲ್ಲಾ ಖಾಲಿಯಾದ ಮೇಲೆ, ಕ್ಲೀನಿಕ್ ಒಳಗೆ ಹೋದೆ.
ನನ್ನನ್ನು ನೋಡಿದವರೇ ಪುನಃ ಕರ್ಟನ್ ಸರಿಸಿ, ಆಚೆ ನೋಡಿದರು.
“ಹೋ!! ಒಬ್ಬನೇ ಬಂದು ಬಿಟ್ಟಿದಿಯಾ..? ” ಅಂತ ವಿಡಂಬನಾತ್ಮಕ ನಗೆ ನಕ್ಕು, ಹುಬ್ಬೇರಿಸಿದರು.
“ಜೇನು!! ಕಚ್ಚಿದೆ ಸಾರ್ “ ಅಂದೆ.
ಮಡಚಿದ ಸೆತಸ್ಕೋಪ್ ನಿಂದ ಅಂಡಿಗೆ ಭಾರಿಸಿ, “ಅಲ್ಲಾ ಕಚ್ಚಿರೋದು ” ಅಂದರು.
“ಇಲ್ಲಾ ಸಾರ್!! ಕಾಲಿಗೆ ” ಅಂದೆ. ಅದಕ್ಕೆ
“ ಒಂದು ಜೇನು ಕಚ್ಚಿದ್ದಕ್ಕೆಲ್ಲಾ, ಟ್ರೀಟ್-ಮೆಂಟು ಕೊಡಬೇಕು ಅಂದ್ರೆ, ತುಂಬಾ ಖೇದಕರ ಆಗುತ್ತೆ ..”
“ಪ್ರಪಂಚದ ಮೊದಲನೇ ಡಾಕ್ಟರು ಸಾರ್ ನೀವು, ಬಂದ ಪೇಶೆಂಟ್ ನ ಈ ರೀತಿ ’ಯಾಕ್ ಬಂದೆ.. ’
ಅನ್ನೋ ಟೋನ್ ನಲ್ಲಿ ಕೇಳೋದು. “
”
ಮತ್ತೇನೋ!! ನನ್ನ ಡಿಗ್ರಿಗೆ, ಇಪ್ಪತ್ತು ವರ್ಷಗಳ ಸರ್ವೀಸಿಗೆ ಸ್ವಲ್ಪನಾದ್ರು,
ಮರ್ಯಾದೆ ಬೇಡ.. ಒಂದು ಜೇನಿಗೆ… ” ಅಂತನ್ನುತ್ತಾ ಊದಿದ್ದ ಪಾದದ ಮೇಲೆ ಟಪ್ ಅಂತ
ಕೊಟ್ಟರು.
” ನಿಮ್ಮಮ್ಮ!! ಸರ್ಜನ್ ಸ್ಪೆಷಲಿಸ್ಟು…, ಇದಕ್ಕೇನು ಮಾಡಲಿಲ್ವಾ …? ”
“ಮಾಡದೇ ಇರ್ತಾರ!! ಗಂಧದ ತುಂಡು ತಂದು, ತೇದು ಕಾಲಿಗೆ ಹಚ್ಚಿದರು. ಆಮೇಲೇನೆ ಕಾಲು,
ಜಾಸ್ತಿ ಊದಿದ್ದು ”
ಊದಿದ್ದ ಕಾಲನ್ನು ದಿಟ್ಟಿಸಿ ನೋಡುತ್ತಾ “ಇದು ಜೇನಲ್ಲ, ಹಾವು!! ಹಾವು ಕಚ್ಚಿರೋದು.”
” ಚಾನ್ಸೇ ಇಲ್ಲ. ಜೇನೆ ಕಚ್ಚಿರೋದು. ಮುಳ್ಲಿತ್ತು ಸಾರ್, ಕಚ್ಚಿದ ಜಾಗದಲ್ಲಿ “
” ಈಗೆಲ್ಲಾ ಮುಳ್ಳು ಬಿಡೋ ಹಾವುಗಳೂ ಬಂದಿವೆ, ಗೊತ್ತಿಲ್ವಾ ನಿನಗೆ ..?”
“ಇರಬಹುದೇನೋ!! ಆದರೇ ಒಂದೇ ಮುಳ್ಳು ಇತ್ತು. ಹಾವಾಗಿದ್ರೆ ಎರಡು ಇರಬೇಕಿತ್ತು. “
“ಆ ಹಾವಿಗೆ ಒಂದು ಹಲ್ಲು ಮುರಿದು ಹೋಗಿತ್ತು ಅನ್ಸತ್ತೆ…” ಅಂತನ್ನುತ್ತಾ ಸಿರಿಂಜು ಎತ್ತಿಕೊಂಡರು.
” ಇಲ್ಲ!! ಹಾವಲ್ಲ ಅದು ಜೇನು.” ಅಂದೆ
” ಪುಕ್ಲ ಪುಕ್ಲ ” ಅಂತನ್ನುತ್ತಾ ಧನಸ್ಸನ್ನು ಹೆಗಲಿಗೇರಿಸುವಂತೆ, ಸಿರಿಂಜನ್ನು ಮೇಲೆತ್ತಿ!! ಬೇಕಂತಲೇ
ಜೋರಾಗಿ ಚಚ್ಚಿದರು.
” ಪುಕ್ಲ ನೀನು, ಧೈರ್ಯ ನಿಂಗೆ. ಹಿಂಗೆ ಹೆದರುತ್ತಾ ಇದ್ದರೆ, ಲೈಫಲ್ಲಿ ಏನೂ ಮಾಡಕ್ಕಾಗಲ್ಲ… ” ಅಂದರು.
ಕಾಮೆಡಿಯಾಗಿ ಹೇಳಿದ್ರು, ಶ್ಯಾನೆ ಬೇಜಾರಾಗೋಯ್ತು. ಮನೆಗೆ ಬಂದ ಮೇಲೆ , ಸಂಜೆ ಒಳಗೆ ಬಾವು ಕಮ್ಮಿ ಆಯ್ತು.
ಛೇ!! ನ್ಯಾಚುರಲ್ ಆಗಿನೇ ಕಮ್ಮಿ ಆಯ್ತು ಅನ್ಸತ್ತೆ. ಅನ್ಯಾಯವಾಗಿ ಡಾಕ್ಟರ ಸೂಜಿಗೆ, ಬೈಗಳಕ್ಕೆ ಬಲಿಯಾಗಿಬಿಟ್ಟೆ.
2 . ಚೌಕಾಸಿ ಚಪ್ಪಲಿ
ಚಪ್ಪಲಿ ಅಂಗಡಿಯ ಬೀದಿಯೊಳಗೆ ನಡೆದಾಗ, ಸಾಲು-ಸಾಲು ಅಂಗಡಿಯವರು, ತಮ್ಮಲ್ಲಿಗೆ ಬರುವಂತೆ ಆಹ್ವಾನ ನೀಡುತ್ತಿದ್ದರು. ಯಾವುದೋ ಒಂದು ಅಂಗಡಿಯೊಳಗೆ
ನುಗ್ಗಿದೆ.
'ಹೇ ಯಾರಪ್ಪ ಅಲ್ಲಿ. ಸಾಬ್ ನಮ್ದು ಖಾಯಮ್ ಕಸ್ಟಮರು. ಸ್ವಲ್ಪ ನೋಡ್ರಿ ಇಲ್ಲಿ ' ಎಂದ.
ಇವರುಗಳ ಮುಖ ನೋಡುತ್ತಿದ್ದುದೇ ಮೊದಲ ಸಲ. ಮೊದಲ ವಿಸಿಟ್ ಗೆ ಖಾಯಂ ಕಸ್ಟಮರ್
ಆಗಿಬಿಟ್ಟೆ.
ಆಗಿಬಿಟ್ಟೆ.
'ಏನ್ ಸಾರ್. ? ಯಾವ ಟೈಪ್ ಚಪ್ಲಿ ಕೊಡ್ಲಿ. ' ಎಂದ.
' ಯಾವುದಾದ್ರು ಸರಿ, ಚಪ್ಲಿ ಹಾಕಿದ್ರೆ ನಾನು ಅದನ್ನ ಹಾಕಿಕೊಂಡಿರೋದು ಗೊತ್ತಾಗಲೇಬಾರದು, ಅಂತದ್ದು ತೋರ್ಸು' ಎಂದರೆ
' ಯಾವುದಾದ್ರು ಸರಿ, ಚಪ್ಲಿ ಹಾಕಿದ್ರೆ ನಾನು ಅದನ್ನ ಹಾಕಿಕೊಂಡಿರೋದು ಗೊತ್ತಾಗಲೇಬಾರದು, ಅಂತದ್ದು ತೋರ್ಸು' ಎಂದರೆ
'ನೀವು ಚಪ್ಲಿ ಹಾಕಿಕೊಳ್ಳದೇ ಓಡಾಡೋದು ವಳ್ಳೇದು ಸಾರ್. ' ಎಂದು ನಕ್ಕ.
ಕೌಂಟರ್ ಇಷ್ಟ ಆಯ್ತು. ಬಹುಷಃ ನಾನು ಕೇಳಿದ ರೀತಿಯಲ್ಲೇ ತಪ್ಪಿತ್ತು.
ಕೈಲೊಂದು ಜೊತೆ ಚಪ್ಪಲಿ ಹಿಡಿದು - 'ನೋಡಿ ಸಾರ್ ಇದು ಹಂಡ್ರೆಡ್ ಪರ್ಸೆಂಟ್ ಪ್ಯೂರ್ ಲೆದರ್ರು ಫುಲ್ಲು ಕಂಫರ್ಟು ' ಎಂದ.
ಕೈಲೊಂದು ಜೊತೆ ಚಪ್ಪಲಿ ಹಿಡಿದು - 'ನೋಡಿ ಸಾರ್ ಇದು ಹಂಡ್ರೆಡ್ ಪರ್ಸೆಂಟ್ ಪ್ಯೂರ್ ಲೆದರ್ರು ಫುಲ್ಲು ಕಂಫರ್ಟು ' ಎಂದ.
ಕಾಲ ಬಳಿ ಹಿಡಿದು, ಹಾಕಿಕೊಳ್ಳುವಂತೆ ಪ್ರಚೋದಿಸುತ್ತಿದ್ದವನ ಕೈಯಿಂದ ಚಪ್ಪಲಿಯನ್ನು ತೆಗೆದುಕೊಂಡು ನೋಡುತ್ತಾ ಹೇಳಿದೆ.
'ಪ್ಯೂರ್ ಲೆದರ್ ಆದ್ರೆ ಬೇಡ ಕಣ್ರಿ ಪ್ರಾಣಿಗಳ ಚರ್ಮ ಸುಲಿದು ಮಾಡಿರೊ ಚಪ್ಪಲಿ. ಬೇಗ ಸವೆಯೋದೆ ಇಲ್ಲಾ. ಹಾಕಿ ಹಾಕಿ ಬೇಜಾರಾಗಿಬಿಡತ್ತೆ.'
'ಹೇ ಲೆದರ್ ಎಲ್ಲಿಂದ ಬಂತು ಸಾರ್ ಯಾವ್ ನನ್ಮಗ ಕೊಡ್ತಾನೆ ಇನ್ನೂರು-ಮುನ್ನೂರಕ್ಕೆಲ್ಲ ಪ್ಯೂರ್ ಲೆದರ್ರು. ಇದು ಕಂಪನಿದು ಮಾಲು. ಸಿಂಥೆಟಿಕ್ಕು ' ಎಂದ. ದೋಸೆಯನ್ನು ಮಗುಚಿ
ಹಾಕಿದಷ್ಟೆ ಸಲೀಸಾಗಿ, ಮಾತು ತಿರುಗಿಸಿದನು.
'ಸರಿ ಕೊಡಪ್ಪಾ ಅದೇನ್ ನೋಡೋಣ' ಅಂತ ಕಾಲಿಗೆ ಹಾಕ್ದೆ. ಇಷ್ಟ ಆಯ್ತು. ' ಇದನ್ನೇ ಪ್ಯಾಕ್ ಮಾಡು' ಅಂದೆ.
' ಕಲರ್ ಇದೆ ಇರ್ಲಾ ಅಥವಾ ಬ್ಯಾರೆ ಯಾವುದಾದ್ರು ಬೇಕಾ. ?' ಅಂದ ' ಅದನ್ನೇನು ತಲೆ ಮೇಲೆ ಇಟ್ಕೋಬೇಕ. ಹಾಕ್ಕೊಳೋದು ಕಾಲಿಗೆ, ಯಾವುದಾದ್ರೇನು.

ನನಗೆ ಕನಫ್ಯೂಸ್ ಆಗೋಕೆ ಮೊದ್ಲು ಪ್ಯಾಕ್ ಮಾಡಿ. ' ಅಂದೆ.
'ಸರಿ ಸಾರ್ ಹಂಗಾದ್ರೆ ಎಂಟು ನೂರಾ ತೊಂಬತ್ತೊಂಬತ್ತು ರೂಪಾಯಿ. ನಿಮಗೆ ಅಂತ ತೊಂಬತ್ತೊಂಬತ್ತು ಡಿಸ್ಕೌಂಟು ಎಂಟು ನೂರು ರುಪಾಯಿ ಕೊಡಿ. ' ಅಂದ.
'ಒಂದು ನಿಮಷಕ್ಕೆ ಮುಂಚೆ ಇದರ ಬೆಲೆ ಇನ್ನೂರೋ-ಮುನ್ನೂರೋ ಅಂದೆ. ಈಗ ನೋಡಿದ್ರೆ ಎಂಟು ನೂರಾ ತೊಂಬತ್ತೊಂಬತ್ತು ಅಂತಿಯ. ಇದು ಮೋಸ '
'ನಾವು ಮಾತ್ಗೆ ಹೇಳಿದ್ನೆಲ್ಲಾ ನೀವು ಹಿಂಗೆ ಹಿಡ್ಕಂಡ್ ಬುಟ್ರೆ ಹೆಂಗೆ ಸಾರ್. ಇದು ಕಂಪನಿದು ಮಾಲು ಅಂತ ಹೇಳುದ್ನಲ್ಲ. ನೀರಲ್ಲಿ ನೆನೆದರು ಹೊಲಿಗೆದು ಬಿಟ್ಕಳಾದಿಲ್ಲ'
ಎಂದ.
ಬರಿ ಮೇಲ್ನೋಟಕ್ಕೆ ವಸ್ತುಗಳ ಬೆಲೆ ನಿಗದಿ ಪಡಿಸೋದು ಬರೋದಿಲ್ಲ. ಆದರು ಈ ಅಂಗಡಿಯವನು ಜಾಸ್ತಿ ಬೆಲೆ ಹೇಳ್ತಾ ಇದಾನೆ ಅನ್ನಿಸ್ತು. ಇನ್ನು ಸ್ವಲ್ಪ ಕಡಿಮೆ ಕೇಳೋಣ. ಕೊಟ್ಟಿಲ್ಲ ಅಂದ್ರೆ ಪೂರ್ತಿ ದುಡ್ಡು ಕೊಟ್ಟರೆ ಆಯ್ತು
ಅಂದುಕೊಂಡೆ.
'ನಿಮ್ಮ ಅಂಗಡಿಯಲ್ಲಿ ಚೌಕಾಸಿ ಮಾಡೋ ಹಂಗಿಲ್ವಾ. ? ಎಲ್ಲಾ ಫಿಕ್ಸು ರೇಟಾ. ?' ಎಂದೆ. ಈ ಥರ ಕೇಳಬಾರದಿತ್ತೇನೋ..
' ನಮ್ದು ನ್ಯಾಯ ಬೆಲೆ ಅಂಗಡಿ ಇದ್ದಂಗೆ ಸಾರ್. ಬಕ್ರಾ ಕಸ್ಟಮರ್ ನ ನೋಡಿ ರೇಟು ಫಿಕ್ಸು ಮಾಡಕ್ಕೆ ನಾವು ಹೊಟ್ಟೆಗೆ ಸಗಣಿ ತಿನ್ನಲ್ಲ. ನೀವೆ ಅಲ್ಲ, ನಿಮ್ಮದು ಅಪ್ಪಂಗೆ ಅಮ್ಮಂಗೆ ಮಗೂಗೆ ಕಳ್ಸಿದ್ರು ನಾವು ಒಂದೇ ರೇಟು ಹೇಳೋದು. ' ಎಂದ. ಅವನು ಬಕ್ರಾ ಕಸ್ಟಮರ್ ಅಂತ
ಹೇಳಿದ್ದು ಯಾಕೋ. ? ನನಗೆ ಹೇಳಿದಂಗೆ ಅನ್ನಿಸ್ತು.

ಅದಕ್ಕೆ ಒಂದು ಕಮ್ಮಿ ರೇಟು ಕೇಳಿಯೇ ಬಿಡೋಣ. ಅಂತ ನಿರ್ಧರಿಸಿದೆ. ಕಮ್ಮಿ ಕೇಳೋದೇ ಆದ್ರೆ ಎಷ್ಟು ಅಂತ ಕೇಳೋದು. ? ತುಂಬಾ ಕಡಿಮೆ ಬೆಲೆಗೆ ಕೇಳಿದ್ರೆ ಬಯ್ದು ಗಿಯ್ದು ಬಿಟ್ರೆ ಕಷ್ಟ. ತುಂಬಾ ಜಾಸ್ತಿ ರೇಟಿಗೆ ಕೇಳಿ ಅವನು ತಕ್ಷಣ ನಾನು ಕೇಳಿದ ರೇಟಿಗೆ ಕೊಟ್ಟು ಬಿಟ್ರೆ. 'ಅಯ್ಯಯ್ಯೋ ನಾನು ಇನ್ನು ಸ್ವಲ್ಪ
ಕಡಿಮೆ ರೇಟಿಗೆ ಕೇಳಿದ್ರೆ ಬಗ್ತಾ ಇದ್ದ ಅನ್ಸತ್ತೆ. ಮೋಸ ಹೋಗಿಬಿಟ್ಟೆ' ಅಂತ ಚಪ್ಪಲಿ ನೋಡಿದಾಗಲೆಲ್ಲಾ ಅನ್ನಿಸಿ ಬಿಡತ್ತೆ. ಏನಪ್ಪಾ ಮಾಡೋದು ಅಂತ ಯೋಚಿಸಿದೆ.
ನಮ್ಮಮ್ಮ ತರಕಾರಿ ತಗೊಳುವಾಗ ಅಂಗಡಿಯವನು ಹತ್ತು ರುಪಾಯಿ ಕೇಜಿ ಅಂದ್ರೆ ಐದು ರೂಪಾಯಿ ಯಿಂದ ಚೌಕಾಸಿ ಶುರು ಮಾಡ್ತಾಳೆ. ಅಮ್ಮ ಹಂಗೆ ಕೇಳಿದ ತಕ್ಷಣ ನನಗೆ ಗಾಬರಿ ಆಗಿ ಬಿಡ್ತಿತ್ತು.

ಯಾಕಂದ್ರೆ ನೂರು ಪ್ರತಿಶತ ಲಾಭಕ್ಕೆ ಯಾವುದೇ ವಸ್ತುಗಳನ್ನು ಮಾರೋದಕ್ಕೆ ಸಾಧ್ಯನಾ ..?
ಅದು ಯಾವ ಕಾನ್ಫಿಡೆನ್ಸಿನ ಮೇಲೆ ಅಮ್ಮ ಅರ್ಧಕ್ಕಿಂತ ಕಮ್ಮಿ ಬೆಲೆಯಿಂದ ತನ್ನ ಚೌಕಾಸಿ ಪ್ರಾರಂಭಿಸುವಳೋ ತಿಳಿಯದು. ವಸ್ತುವಿನ ಬೆಲೆ, ಎಲ್ಲೋ ಇವರಿಬ್ಬರ ಮಧ್ಯದಲ್ಲಿರುತ್ತದೆ. ಇವರ ಚೌಕಾಸಿಯ ಹಗ್ಗ-ಜಗ್ಗಾಟದಲ್ಲಿ ಕೊನೆಗೆ ತಾನು ಮೋಸ ಹೋಗಲಿಲ್ಲವೆಂಬ ಕೃತಾರ್ತ ಭಾವನೆ ಗ್ರಾಹಕನಿಗೆ ಮೂಡಬೇಕು. ಅದಕ್ಕಿಂತ ಹೆಚ್ಚಾಗಿ ಇದೊಂದು ಜೀವನ ಶೈಲಿ. ಮಾಲ್-ಗಳಲ್ಲಿ ಶಾಪಿಂಗ್ ಮಾಡುವ ಹವ್ಯಾಸ ಕೆಲವರಿಗಿರುವಂತೆ ರಸ್ತೆ ಮೇಲೆ ಚೌಕಾಸಿ ಮಾಡುವ ಹವ್ಯಾಸ ಇನ್ನು ಕೆಲವರಿಗೆ. ಕೊನೆಗೆ ಕೊಂಡು ಕೊಂಡ ಆ ವಸ್ತುಗಳು ತಮ್ಮ ಅಷ್ಟು ವರುಷಗಳ ಚೌಕಾಸಿ ಕಲೆಯ ಅಭಿವ್ಯಕ್ತಿಯಂತೆ ಗ್ರಾಹಕನ ಮನೆಯ ಸ್ಟೋರ್ ರೂಮ್ ಸೇರಿ ಬಿಡುತ್ತವೆ.
ಅಮ್ಮನ ಫಾರ್ಮುಲದಂತೆ ಅರ್ಧ ರೇಟಿನಿಂದ ಚೌಕಾಸಿ ಶುರು ಮಾಡುವ ಧೈರ್ಯ ನನಗಿರಲಿಲ್ಲ.
' ಎಂಟು ನೂರು ರೂಪಾಯಿ ಜಾಸ್ತಿ ಆಯ್ತು ಆರು ನೂರು ರುಪಾಯಿಗೆ ಕೊಡಿ. ' ಎಂದಷ್ಟೇ ಹೇಳಿದೆ. ಅವರ ಮುಂದೆ ಮತ್ತೆ ಏನೆಲ್ಲಾ ಮಾತುಗಳನ್ನು ಆಡಬಹುದು ಎಂದು ತಿಳಿಯಲಿಲ್ಲ. ಅಮ್ಮ ಆಗಿದ್ದರೆ ತಾನು ವಂಶ ವೃಕ್ಷದ ಪ್ರತಿ ಜೀವಕ್ಕೂ ಇದೇ ಅಂಗಡಿಯಿಂದ ಚಪ್ಪಲಿ
ಖರೀದಿಸಿದ್ದಾಗಿಯು. ನೀವು ಖಾಯಂ ಕಸ್ಟಮರಿಗೆ ಮೋಸ ಮಾಡುತ್ತಿರುವುದಾಗಿಯೂ. ಏನೆಲ್ಲಾ ಹೇಳಿ ಬಿಡುತ್ತಿದ್ದಳು.
ನಾನು ಆರು ನೂರು ರೂಪಾಯಿ ಎನ್ನುತ್ತಲೇ, ಅಂಗಡಿಯವನು ಚಪ್ಪಲಿ ಬಾಕ್ಸು ಓಪನ್ ಮಾಡಿ ಕೈಯಲ್ಲಿ ಚಪ್ಪಲಿ ಹಿಡ್ಕೊಂಡು ಬರಬರನೆ ನನ್ನ ಬಳಿಗೆ ಬಂದ. ಹತ್ತಿರ ಬಂದವನೇ ಚಪ್ಪಲಿಯನ್ನು ಹಿಂದಕ್ಕೂ ಮುಂದಕ್ಕೂ ಬಗ್ಗಿಸುತ್ತಾ, ನೆಲದ ಮೇಲೆ ಬಾರಿಸುತ್ತಾ ಹೇಳಿದ -
' ನೋಡಿ ಸಾರ್ ಇಂತ ಮಾಲಿಗೆ ಹೋಗಿ ನೀವು ಚೌಕಾಸಿ ಮಾಡ್ತೀರಲ್ಲ. ನೀವು ನಮ್ಮ ಸ್ಪೆಷಲ್ ಕಸ್ಟಮರ್ ಅಂತ ನಿಮಗೆ ತುಂಬಾನೆ ಕಮ್ಮಿ ಹೇಳಿದೀವಿ ಸಾರ್. ಹೋಗ್ಲಿ ತಗಳಿ. ನಮಗೆ ಲಾಭಾನೆ ಬೇಡ. ಕಂಪನಿ ರೇಟು ಏಳುನೂರು ರೂಪಾಯಿ. ಕಸ್ಟಮರ್ ಕಳ್ಕೋಬಾರ್ದು ಅನ್ನೋ ಒಂದೇ ಒಂದು ಕಾರಣಕ್ಕೆ ಕೊಡ್ತಾ ಇದೀನಿ. ತಗೋಳಿ ಸಾರ್ ಏಳು ನೂರು ಕೊಡಿ' ಎಂದ.

ಕೊಟ್ಟಿದ್ದು ಏಳು ನೂರು ಆದರೂ.. ಮನೆಯಲ್ಲಿ!! ಐದು ನೂರು ಕೊಟ್ಟಿದ್ದಾಗಿ ಹೇಳಿದೆ.
ಸರಿಯಾಗಿ ಟೋಪಿ ಹಾಕಿಸ್ಕೊಂಡು ಬಂದಿದ್ದೀಯಾ ಅಂದ್ರು!!
******************
3. ಕೆಲಸ ಬಿಟ್ಟು, ಬಂದ ಮಾರನೆ ದಿನ!!
ಇರುವ ಭಾಗ್ಯವ ನೆನೆದು
ಬಾರೆನೆಂಬುದನು ಬಿಡು.
ಹರುಷಕ್ಕಿದೆ ದಾರಿ. - DVG
ಇದನ್ನು ಬೇಕು ಬೇಕಾದವರು ಬೇಕಾದಂತೆ ಓದಿಕೊಳ್ಳಬಹುದು. ನಾನೂ ಅಷ್ಟೇ!!, ನನಗೆ ಬೇಕಾದಂತೆ ಅರ್ಥ ಮಾಡಿಕೊಂಡಿದ್ದೇನೆ.
'ಸಧ್ಯಕ್ಕೆ
ಇರೋ ಕೆಲಸ ಮಸ್ತಾಗಿದೆ. ಸೈಕಲ್ ಗ್ಯಾಪಲ್ಲಿ ಮತ್ತೊಂದು ಹೊಸ ಅವಕಾಶ ಸಿಕ್ಕಿದೆ. ಈಗಿರೋ
ಕಂಫರ್ಟ್ ಜೋನ್ ಬಿಟ್ಟು ಹೋಗ್ಲಾ..? ಬೇಡ್ವಾ..? ' ಅಂದ್ರೆ,
"ಹೂಂ ಹೋಗು.. ಅಲ್ಲಿ ಮತ್ತೇನೋ ಇರಬಹುದು. ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು. ಹರುಷಕ್ಕಿದೆ ದಾರಿ!! ಅಲ್ಲವೇ.."
ನೆನ್ನೆಯವರೆಗೂ
... ಸ್ನೇಹಿತರುಗಳ ಜೊತೆಯಾಗಿ ಒಂದು ಸ್ಟಾರ್ಟ್ ಅಪ್ ಕಂಪನಿಯಲ್ಲಿ ಕೆಲಸ
ಮಾಡುತ್ತಿದ್ದೆ. ಬೆಳಗ್ಗೆ ಎದ್ದು, ತಟ್ಟೆ ಇಡ್ಲಿ ತಿಂದು, ಟೀ ಕುಡಿದು ಪಾರ್ಕೊಳಗೆ ಒಂದು
ಸುತ್ತು ಹಾಕಿ ಬಂದೆ. ಮತ್ತೆ, ಏನ್ ಮಾಡೋದು ತೋಚಲಿಲ್ಲ. 'ಸಾಕು ನಮ್ಮನ್ನ ಉದ್ಧಾರ
ಮಾಡಿದ್ದು' ಅಂತ ಕಂಪನಿಯವರು ಇನ್ನು ಸೆಂಡಾಫ್ ಕೊಟ್ಟಿದಾರೆ. ರಜಾ ದಿನಗಳ ಕಥೆಯೇ ಬೇರೆ.
ಆದರೆ ಈ ದಿನದ ಅನುಭವವೇ ವಿಭಿನ್ನ. ಬಿಲ್-ಕುಲ್ ಜಾಬ್-ಲೆಸ್ ದಿನ. ರಿಟೈರ್ಡ್!!
ರಿಲಾಕ್ಸುಡು!!
ಕೆಲಸ ಬಿಟ್ಟಿದ್ದರ ಬಗ್ಗೆ ಯೋಚ್ನೆ ಬರ್ತಿದೆ.
ಪರ್ಫೆಕ್ಟ್
ಡಿಸಿಷನ್ ಅಂದ್ರೆ ಏನು..? ತಾಳೆ ಹಾಕಿದಷ್ಟು, ತಾಳ ತಪ್ಪುತ್ತದೆ. ಅಮ್ಮಮ್ಮಾ ಅಂದ್ರೆ
ಏನಾಗಬಹುದು..? ಏನೂ ಇಲ್ಲ. ಆದರೆ ನನ್ನ ಎಡವಟ್ಟುಗಳಿಗೆ ಯಾರನ್ನೂ ದೂಷಿಸಬಾರದು.
ನನಗೆ ನಾನೊಬ್ಬನೇ ಹೊಣೆ.
ಮಿಸ್
ಮಾಡ್ಕೋತೀನಿ. ಆಫೀಸು ಅಂದ್ರೆ ಪುಟ್ಟದಾಗಿ ಒಂದು ಪ್ಯಾಮಿಲಿ ಥರಾನೇ ಆಗೋಗಿತ್ತು. ಕೆಲಸ
ಅನ್ನೋದು, ಸೈಡ್ ಬಿಜಿನೆಸ್ ಇದ್ದಂಗೆ!! ಅದು ಆಗಿದ್ದು, ಹೋಗಿದ್ದು ತಿಳಿತ್ಲೇ ಇರಲಿಲ್ಲ.
ಬೆಳಿಗ್ಗೆ ಎದ್ದಾಗಲೇ ಆಫೀಸು, ಮಾಡಿದಾಗಲೇ ಕೆಲಸ!! ಬರ್ಮೋಡ
ಚಡ್ಡಿ ಹಾಕಿ ಬಂದು ಕೆಲಸ ಮಾಡಿದ್ದಿದೆ. ಅಮ್ಮ ಅಂತು, ಒಂದು ದಿನಾ ಆದರೂ ಟಿಪ್-ಟಾಪಾಗಿ
ಕೆಲಸಕ್ಕೆ ಹೋಗು ಅಂತ ಗೋಳಿಡುತ್ತಿದ್ದಳು.
ಇರೋ ನಾಲಕ್ಕು
ಜನದಲ್ಲಿ, ಆ ಕ್ಷಣಕ್ಕೆ ಯಾರಿರಲ್ವೋ ಅವರ ಮೇಲೆ ಇಲ್ಲಸಲ್ಲದ ಗಾಸಿಪ್ ಮಾಡ್ತಿದ್ವಿ.
ಗಾಸಿಪ್ಪಿಂಗ್ ಅನ್ನೋದು ರೌಂಡ್ ರಾಬಿನ್ ಥರ, ಬಲಿ-ಕ-ಬಕ್ರ ಮಾತ್ರ ಶಿಫ್ಟ್
ಆಗಿರುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಕುಳಿತಾಗ, ಮ್ಯೂಸಿಕಲ್ ಚೇರ್ ರೀತಿ..
ಕುರ್ಚಿಗಳನ್ನ ಹುಡುಕುತ್ತಿದ್ದುದೂ ಮಜವಿರುತ್ತುತ್ತು.
ಪಾಡು
ಬಿದ್ದು, ಕೆಲಸಕ್ಕೆ ಹೋದ ದಿನ, ಎಲ್ರೂ 'ವರ್ಕ್ ಫ್ರಂ ಹೋಮ್' ಅಂತ ಮೆಸೇಜ್ ಮಾಡುವಾಗ
ಸಖತ್ ಉರ್ಕೋತಿದ್ದೆ. ಒಬ್ಬರು ಲೀವ್ ಹಾಕುದ್ರೆ, ಕಾಂಪಿಟೇಷನ್ ಮೇಲೆ ಉಳಿದೋರು ಹಾಕೋರು.
ಸ್ವಾತಿ ಹೋಟೆಲಲ್ಲಿ, ವೆಯ್ಟರ್ ನಮ್ಮನ್ನ ಹೊರಗಾಕೋದೊಂದು ಬಾಕಿ ಇತ್ತಷ್ಟೆ. ಟೀಮ್ ಲಂಚ್
ಅಂದ್ರೆ, ಅಷ್ಟು ಗಲಾಟೆ ನಮ್ಮದು. ಈ ಎಲ್ಲವನ್ನೂ ಸಿಕ್ಕಾಪಟ್ಟೆ ಮಿಸ್ ಮಾಡ್ಕೋತೀನಿ.
ಕೆಲಸ
ಅರ್ಥ ಆದ್ರೆ, ಕೆಲಸ. ಇಲಾಂದ್ರೆ ಒಂದಷ್ಟು ಮಿಸ್ಟೀಕುಗಳನ್ನ ಮಾಡಿದ್ದನ್ನೇ ಪಿ-ಓ-ಸಿ
ಅಂದು ತೋರಿಸಿ ಬಿಡುತ್ತಿದ್ದೆವು. ಸ್ಟಾರ್ಟ್ ಅಪ್ ಗಳಲ್ಲಿ .. ಕ್ರಿಯೇಟೀವ್ ಲಿಬರ್ಟಿ
ಅನ್ನೋದು ಸಿಕ್ಕಾಪಟ್ಟೆ ಇರ್ತದೆ. ಪ್ರಾಬ್ಲಂ ಸ್ಟೇಟ್-ಮೆಂಟ್ ಮಾತ್ರ ಕೊಟ್ಟಿರ್ತಾರೆ.
ಅದನ್ನ ಹಂಗೇ ಮಾಡು.. ಹಿಂಗೇ ಮಾಡು.. ಅಂತ ಯಾರೂ ಹೇಳುವರಿರಲಿಲ್ಲ. ಕೆಲಸವನ್ನ
ಪ್ರೀತಿಸುತ್ತಿದ್ದರಿಂದಲೋ ಏನೋ.. ತಾಂತ್ರಿಕ ಸಮಸ್ಯೆಗೆ ಪರಿಹಾರ ಹುಡುಕೋದಕ್ಕೆ, ಜೀವನದ
ಧ್ಯೇಯ ಸಾಧಿಸುವಷ್ಟು ತನ್ಮಯತೆಯಿಂದ ತೊಡಗಿಸಿಕೊಳ್ತಿದ್ದೆವು. ಅಷ್ಟರ ಮಟ್ಟಿಗೆ, ಬದ್ಧತೆ
ಎಲ್ಲರಲ್ಲೂ ಇತ್ತು. ಯಾರಿಗೂ ಬೆಣ್ಣೆ ಹಚ್ಚುವಂತದ್ದಿಲ್ಲ, ಬಕೇಟು ಹಿಡಿಯುವಂತದ್ದಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ, ಇಂಚಿಂಚೂ ಕೆಲಸಗಳ ರಿಪೋರ್ಟುಗಳನ್ನ ಯಾರಿಗೂ ಕೊಡಬೇಕಂತಿಲ್ಲ.
ಕೆಲಸದ ದಣಿವಿಗಿಂತ, ಆ 'ಸ್ವಾತಂತ್ರ್ಯ' ವನ್ನ ಸೆಲೆಬ್ರೇಟ್ ಮಾಡೋದರಲ್ಲಿ ಒಂದು ಮಜವಿದೆ.
ಸೆಂಡಾಫ್ ಕೊಡೋವಾಗ ಒಬ್ಬೊಬ್ಬರ ಪ್ರೀತಿಯ ಮಾತುಗಳೂ,
ಎಂದಿನದ್ದಕ್ಕಿಂತ ಹೆಚ್ಚೇ ಆತ್ಮೀಯ ಅನಿಸಿದವು. ಇಷ್ಟೊಂದು ಪ್ರೀತಿ(ಅಷ್ಟೊಂದು
ಗಿಫ್ಟುಗಳು) ಸಿಗುತ್ತೆ ಅಂತಾದ್ರೆ, ಕೆಲಸ ಬಿಡೋ ಕೆಲಸಾನ ಸ್ವಲ್ಪ ಜಾಸ್ತಿ ಫ್ರೀಕ್ವೆಂಟ್
ಆಗೀನೆ ಮಾಡಬೇಕು.
ಐ ಟಿ ಅಂದ್ರೆ, ಹಾಗೆ-ಹೀಗೆ ಅಂತಾರೆ. ಎಲ್ಲಿಗ್
ಹೋದ್ರೂ!! ಆತ್ಮೀಯರು ಅನ್ನೋರು ಸಿಕ್ಕೇ ಇದ್ದಾರೆ. ಬೆರಳೆಣಿಕೆಯಷ್ಟು ಮಂದಿಯು ಗುಂಪಾಗಿ
ಗುಂಪುಗಾರಿಕೆ ನಡೆಸಿಯೇ ತೀರುತ್ತೇವೆ.
-------
"ಸರಿ!! ನಿನಗ್ಯಾವನಪ್ಪಾ.. ಕೆಲಸ ಬಿಡು ಅಂದವನು..? "
ಮತ್ತದೇ ಪ್ರಶ್ನೆ.
ಒಂದು
ಬದಲಾವಣೆ ಬೇಕು. ಯಾವುದರ ಬಗ್ಗೆಯೂ ಅತಿಯಾಗಿ ನಿರೀಕ್ಷೆಗಳನ್ನ ಇಟ್ಕೋಬಾರ್ದು. ಆದರೆ,
ಗೊಂದಲಗಳಿದ್ದಾಗ ನ್ಯೂಟ್ರಲ್(ಸಮಾಧಿಸ್ಥ) ಆಗಿರೋದೂನು ಅಷ್ಟು ಸುಲಭ ಅಲ್ಲ. ಬಾಲವಿಧವೆ
ತರಹ ರೋಧಿಸುವ ಬದಲು, ಬಿಟ್ಟು ನಡೆಯೋದು ಒಳ್ಳೆಯದು. ಕೆಲಸಕ್ಕಷ್ಟೇ ನಮ್ಮ ನಿಷ್ಠೆ.
ಭಾವನಾತ್ಮಕವಾಗಿ ಕಂಪನಿಗೆ ಅಂಟಿಕೊಂಡರೆ, ಮತ್ತದೇ 'ನಿರೀಕ್ಷೆಗಳ ಸುಳಿಯಲ್ಲಿ' ಸಿಕ್ಕಿ
ಬೀಳೋ ಭಯ.
ರಾತ್ರೋ-ರಾತ್ರಿ ಆಂಟ್ರಪ್ರೂನರ್ ಆಗಿಬಿಟ್ಟೆ
ಅಂದುಕೊಂಡಿದ್ದೆ. ಇಷ್ಟು ವರುಷಗಳ ಭ್ರಮೆಯಿಂದ, ಇವತ್ತಿಗೆ ಮುಕ್ತಿ ಸಿಕ್ತು. ಆರ್ಡಿನರಿ
ಆಗಿ ಫೀಲ್ ಮಾಡ್ಕೋಳದ್ರಲ್ಲೂ ಒಂದು ರೀತಿ ಸುಖ ಇದೆ.
"ಸಕ್ಸಸ್ ಗೋಸ್ಕರ ನನ್ನ ಖುಷಿಗಳ ಜೊತೆ ಕಾಂಪ್ರಮೈಸ್ ಮಾಡಿಕೊಂಡಿದ್ದಾಗ, ನನಗೆ ಆ ಎರಡೂ ಸಿಗಲಿಲ್ಲ."
ಗೀತ್ ಸೇಟಿ ಅನ್ನೋ ಸಾಧಕನ ಮಾತಿದು. ನನಗಿದು ನಿತ್ಯಸತ್ಯ. ಖುಷಿಯಾಗಿರದು ಮುಖ್ಯ!! ಸಕ್ಸಸ್ ಅನ್ನೋದು, ಅದರ ಬೈ ಪ್ರಾಡಕ್ಟ್ ಆಗಿರಬೇಕು.
ನನ್ನ
ಮುಂದಿನ ದಿನಗಳನ್ನ ಎದುರು ನೋಡುತ್ತಿದ್ದೇನೆ. ಅವುಗಳನ್ನ, ಇವತ್ತಿನಂತೆಯೇ
ಸುಂದರವಾಗಿಸಬೇಕು. ಕಷ್ಟ ಪಡದೆ, ಯಾರೂ ಸಾಯಲ್ಲ. ಆದ್ರೆ, ಆ ಕಷ್ಟಗಳನ್ನೂ
ಮನಃಸ್ಪೂರಕವಾಗಿ ಪಡೋಣ.
(ಕಾಲ - ಮೇ ೨೦೧೬)
*********************
4. ಕಂಪ್ಯೂಟರ್ ಯುಗ
ವಠಾರದ ಮನೆಯವರೊಬ್ಬರು ತಮ್ಮ ಕಂಪ್ಯೂಟರ್ ಅಸೆಂಬಲ್ ಮಾಡಿ, ಆನ್ ಮಾಡಿ ಕೊಡುವಂತೆ ಕೇಳಿದರು.
ಸಾಫ್ಟ್- ವೇರ್ ಟೆಕ್ಕಿ ಅಂದ ಮೇಲೆ ಮಿನಿಮಮ್ ಇಷ್ಟು ತಲೆ ಇರಬೇಕು ಎಂದು ಪ್ರಪಂಚ ಬಯಸುವುದರಲ್ಲಿ ತಪ್ಪಿಲ್ಲ.
ಆದರೆ ನಾಲ್ಕು ಜನ ಆಸಕ್ತಿಯಿಂದ ಸುತ್ತುವರಿದು ನೋಡುತ್ತಾ ನಿಂತಾಗ,
ಮಾಡಬಹುದಾದ ಕುಶಲ ಕೆಲಸ ಇದಲ್ಲ ಎಂಬುದು ನನ್ನ ಅಭಿಪ್ರಾಯ.
ಸರಿ!! ನಾನೂ ಆ ಕಂಪ್ಯೂಟರಿನ ಬಿಡಿಭಾಗಗಳನ್ನು ಸುರಿದುಕೊಂಡು,
ಪವರ್ ಕಾರ್ಡು!! ಡಾಟಾ ಕೇಬಲ್ ಗಳನ್ನು ವಿಂಗಡಿಸುತ್ತಿದ್ದೆ.
ಪುಟ್ಟ ಮಗುವೊಂದು ತೆವಳುತ್ತಾ ಬಂದು ,
ನಾನು ಹಿಡಿದಿದ್ದ ಸಿ-ಪಿ-ಯು ಬಾಕ್ಸಿನ ಸಪೋರ್ಟ್ ಪಡೆದು ನಿಂತು, ಗುರಾಯಿಸಿತು.
ಅರ್ಧ ಹೊರ ಬಂದಿದ್ದ ಕಾಪರ್ ವಯರ್ ನಿಂದ ಮೆಲ್ಲಗೆ ಚುಚ್ಚಿ ,
ಮಗುವನ್ನು ಅಲ್ಲಿಂದ ಓಡಿಸಿದೆ.
'ಇದು ತಮ್ಮ ನಾದಿನಿ ಬಳಸುತ್ತಿದ್ದ ಕಂಪ್ಯೂಟರ್ ಆಗಿಯೂ,
ನಾಲ್ಕು ವರುಷಗಳಿಂದ ಬಳಸದೇ ಪಾಳು ಬಿದ್ದಿದ್ದಾಗಿಯೂ,
ಇದನ್ನು ತೆಗೆದು ಕೊಂಡು ಹೋಗಲೇಬೇಕು ಎಂದು ಒತ್ತಾಯ ಮಾಡಿದ್ದಾಗಿಯೂ...
ಇದನ್ನು ತಂದದ್ದು '
ಎಂದು ಮನೆಯ ಯಜಮಾನರು ಹೆಮ್ಮೆಯಿಂದ ಹೇಳಿಕೊಂಡರು.
ಪಾಳು ಬಿದ್ದದ್ದನ್ನು, ಒತ್ತಾಯ ಮಾಡಿ ಹೊರಿಸಿ ಕಳಿಸಿದ್ದನ್ನೇ ಅದ್ಭುತವಾಗಿ ಹೇಳಿದರು.
ಆ ಡಬ್ಬ ಕಂಪ್ಯೂಟರಿನ ಇತಿಹಾಸದಿಂದ ಮೊದಲುಗೊಂಡು,
ತಮ್ಮ ನಾದಿನಿ ಸಾಫ್ಟ್-ವೇರ್ ಟೆಕ್ಕಿ ಆದಾಗಿನ ವಿಷಯಗಳನ್ನು ಅವರು ಬಹಳ ಆಸಕ್ತಿಯಿಂದ ವಿವರಿಸುತ್ತಿದ್ದರು.
ಒಂದು ಸಾಫ್ಟ್-ವೇರ್ ಕಂಪನಿಯ ಹೆಸರು ಹೇಳಿ!!
'ನಿಮಗೆ ಅದು ಗೊತ್ತಿರಲೇಬೇಕಲ್ಲ...?' ಅಂದರು.
'ಹೌದು!! ಹೌದು!! ತುಂಬಾ ದೊಡ್ಡ ಕಂಪನಿ ' ಅಂದೆ.
ಕಂಪ್ಯೂಟರ್ ಆನ್ ಮಾಡಿದಾಗ ಸದ್ದು ಮಾಡುತ್ತಾ 'ವಿಂಡೋಸ್' ತೆರೆದುಕೊಂಡಿತು.
' ನಾನಿನ್ನು ಬರುತ್ತೇನೆ ' ಎಂದು ಹೊರಡುತ್ತಿದ್ದಂತೆ...,
' ಅಯ್ಯೋ!! ಹಂಗೇ ಹೋಗ್ತೀರ..?
ಕಾಫಿ ಟೀ ಏನಾದ್ರು ತಗೋಂಡೆ ಹೋಗ್ಬೇಕು .. ' ಅಂದರು.
' ಬೇಡ ಪರವಾಗಿಲ್ಲ..' ಅಂದೆ. ಅವರು ಬಿಡಲಿಲ್ಲ.
ಕಾಫಿ ಬೇಡ ಅಂದರೆ, ಕಾಫಿ ಬೇಡ ಅಂತಲೇ ಅರ್ಥ ಬರುವುದಿಲ್ಲ.
ಅದನ್ನು ಮಾಡುವ ವರೆಗೂ ಮತ್ತು ಅದನ್ನು ಕುಡಿಯುವ ವರೆಗೂ ಸೃಷ್ಟಿಯಾಗುವ,
ಧೀನ-ಧೈನ್ಯ ನಿಶ್ಯಬ್ಧಕ್ಕೆ ದಾರುಣವಾಗಿ ಬಲಿಯಾಗಬೇಕಲ್ಲ ಎಂಬ ಭಯ.
ಗಟ್ಟಿ ಹಾಲಿನ ನೊರೆ ಕಾಫಿ ಹೀರುತ್ತಿರುವಾಗ,
ಕಂಪ್ಯೂಟರ್ ಬಗ್ಗೆ ನನಗೆ ಗೊತ್ತಿದ್ದ ಅಲ್ಪ ಟಿಪ್ಸು ಕೊಡೋಣವೆಂದು ಹೋದೆ.
'ಛೇ! ಛೇ!! ನನಗೆ ಇದೆಲ್ಲ ಅರ್ಥ ಆಗಲ್ಲ '.. ಮನೆಯ ಯಜಮಾನರು ತಲೆ ಕೊಡವಿದರು.
ಅವರ ಹೆಂಡತಿಗೆ ಹೇಳಿದ್ದಕ್ಕೆ , ಅವರೂ ತಮಗೆ ಏನೂ ತಿಳಿಯೋದಿಲ್ಲವೆಂದೂ, ಬೇಡವೆಂದೂ ಹೇಳಿದರು.
ತಲೆ ಕೆಡ್ತು ... "ಮತ್ತೆ!! ಕಂಪ್ಯೂಟರು ಯಾರಿಗೆ ...?" ಅಂದೆ.
" ಇನ್ಯಾರಿಗೆ!! ನಮ್ಮ ಮಗನಿಗೆ " ಎನ್ನುತ್ತಾ ಅಂಬೆಗಾಲಿಡುತ್ತಿದ್ದ ಮಗುವನ್ನು ಎತ್ತಿ ತೋರಿಸಿದರು.
ಬಾಯೊಳಗಿದ್ದ ಕಾಫಿ!! ನಂಜೇರಿತು.
ಅಂಬೆಗಾಲಿಡುತ್ತಿದ್ದ .. ಮಗುವಿಗೆ ... ಪ್ರಿ ನರ್ಸರಿಗಾಗಿ ಅದಾಗಲೇ ಐವತ್ತು ಸಾವಿರ ಕಟ್ಟಿ !! ಪಬ್ಲಿಕ್ ಸ್ಕೂಲಲ್ಲಿ ಸೀಟ್ ಅಡ್ವಾನ್ಸು ಬುಕ್ಕಿಂಗ್ ಮಾಡಿರುವುದನ್ನು ಹೇಳಲು ಅವರು ಮರೆಯಲಿಲ್ಲ.
Comments
Post a Comment