1. ಟಾಟಾ ವಿಕಾಸ್
ಎಜುಕೇಶನ್ ಕಂಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕಂಪನಿಯ, ಮೊದಲ ಕೆಲವು ದಿನಗಳು ಅವಿಸ್ಮರಣೀಯ ವಾಗಿರುತ್ತವೆ. ಯಾಕಂದ್ರೆ ಲಾರ್ವ ದಿಂದ ಕಪ್ಪೆ ಆಗಿ ಬೆಳವಣಿಗೆ ಹೊಂದುವಂತೆ, ನಾವು ಪ್ರೊಡಕ್ಟಿವ್ ಆಗಿ ಬದಲಾಗುವ ಸುವರ್ಣ ತಿರುವು ಇದು. ನಮ್ಮ ಕಂಪನಿಯ ಮೊದಲ ತರಬೇತಿಯ ದಿನಗಳು ಸೂಪರ್ ಆಗಿದ್ದವು. ಹಲವಾರು ರಾಜ್ಯಗಳಿಂದ ಬಂದ, ವಿವಿಧ ಭಾಷೆಗಳಿಂದ ಕೂಡಿದ ವೈವಿಧ್ಯಮಯ ತಾಣ ತ್ರಿವೇಂಡ್ರಮ್ ನಲ್ಲಿದ್ದ ನಮ್ಮ learning temple. ಈ ತರಬೇತಿಯ ಹೆಸರು ILP. ಅಂದರೆ initial learning program. ನಲವತ್ತು ದಿನಗಳ ಈ ತರಬೇತಿ ಶಿಬಿರದಲ್ಲಿನ ಮೋಜು, ಮಸ್ತಿ, ನಾಲಕ್ಕು ವರ್ಷಗಳ ಇಂಜಿನಿಯರಿಂಗ್ ಜೀವನ ಮರುಕಳಿಸಿದಂತಿತ್ತು.
ಈ ತರಬೇತಿ ಶಿಬಿರದಲ್ಲಿ ನನ್ನನ್ನು ಅತಿಯಾಗಿ ಸೆಳೆದಿದ್ದು 'ವಿಕಾಸ್' ಎಂಬ ಟ್ರೈನರ್. ಸಂಪೂರ್ಣ ದೃಷ್ಟಿಯೇ ಇಲ್ಲದ ವಿಕಾಸ್, ಕಣ್ಣುಗಳಿರುವ ನಮಗೆಲ್ಲಾ ಇಂಗ್ಲೀಷ್ ಕಲಿಯುವಿಕೆಗೆ ದಾರಿದೀಪ. ವಿಕಾಸ್ ಇಷ್ಟವಾಗಿದ್ದು ಆತನ ಅಗಾಧ Talent ನಿಂದ ಅಲ್ಲ. ಬದಲಾಗಿ ವಿಕಾಸ್ ನಲ್ಲಿದ್ದ ಬತ್ತಿ ಹೋಗದ ಉತ್ಸಾಹ ಮತ್ತು ಜೀವನ ಪ್ರೀತಿ.
ಮೊದಲ ದಿನ ತನ್ನ ಪರಿಚಯ ಮಾಡಿಕೊಂಡು, ಟೀಚಿಂಗ್ ಸೆಷನ್ ಶುರು ಮಾಡುವುದಕ್ಕೆ ಅಣಿಯಾದ ವಿಕಾಸ್. ಬಹುಶಃ ಎಬಿಲಿಟಿ ಇಲ್ಲದೆ ಇದ್ದರೂ, ಅಂಧ ಎನ್ನುವ ಕಾರಣಕ್ಕೆ ಸಹಾನುಭೂತಿ ಪಡೆದು ಬಂದಿರಬಹುದು. ಪಾಪ!! ಕಂಪನಿಯವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸುವ ಸಲುವಾಗಿ, ಅಂಧನನ್ನು ಬಲಿಪಶು ಮಾಡಿರುವರು ಎಂದುಕೊಂಡೆನು. ಈತ ಏನ್ ತಾನೇ ಮಾಡೋದಕ್ಕೆ ಸಾಧ್ಯ ಅನ್ನೋ ತಾತ್ಸಾರ ಒಂದು ಕಡೆ ಆದರೆ, ಏನು ಮಾಡಬಹುದು ಅನ್ನೋ ಕಾತುರ ಇನ್ನೊಂದು ಕಡೆ.
ನೂರಕ್ಕೂ ಜಾಸ್ತಿ ಜನರಿದ್ದ ಆಡಿಟೋರಿಯಂ. ಅಕ್ಷರಶಃ. ಪಿನ್ ಡ್ರಾಪ್ ಸೈಲೆಂಟ್. ವಿಕಾಸ್ ಪ್ರೊಜೆಕ್ಟರ್ ಆನ್ ಮಾಡಿ, ಕಂಪ್ಯೂಟರ್ ಲಾಗಿನ್ ಆಗ್ತಾ ಇದ್ದ ಹಾಗೆ, ನಾವುಗಳು ಬೆನ್ನು ನೇರ ಮಾಡಿಕೊಂಡು, ನಮ್ಮ ಸೀಟಿನ ತುದಿಗೆ ಬಂದು ಕುಳಿತೆವು. ವಿಕಾಸ್, ಆ ದಿನದ ತರಬೇತಿಗೆ ಬೇಕಾಗಿದ್ದಂತಹ ಪ್ರಸೆಂಟೇಷನ್ ಅನ್ನು, ಕಂಪ್ಯೂಟರಿನ ಮಿದುಳಿನಿಂದ ಹೆಕ್ಕಿ ತೆಗೆದು ಪರದೆಯ ಮೇಲೆ ಬಿಂಬಿಸುವ ತನ್ನ ಕಾರ್ಯದಲ್ಲಿ ಮಗ್ನನಾಗಿದ್ದ. ಆತ ಕಂಪ್ಯೂಟರ್ ಬಳಸುತ್ತಿದ್ದ ರೀತಿಯೇ ಒಂಥರಾ ಮ್ಯಾಜಿಕ್ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಎತ್ತ ಎತ್ತಲಾಗೋ ನೋಡಿಕೊಂಡು, ವಿಕಾಸ್, ಕಂಪ್ಯೂಟರಿನಲ್ಲಿ. ಪ್ರೆಸಂಟೇಷನ್ ಇಟ್ಟಿದ್ದ ಲೋಕೇಶನ್ ಟೈಪ್ ಮಾಡುತ್ತಿದ್ದ. ಬೃಹತ್ ಪರದೆಯ ಮೇಲೆ ಆತನ ಕೈಚಳಕ ಕಾಣಿಸುತ್ತಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದೆವು.
C://datasource/ilp/ ಎಂದು ಟೈಪ್ ಮಾಡುವ ಬದಲು C://datadource/ilp/ ಎಂದು ಟೈಪ್ ಮಾಡುತ್ತಾ ಹೋದ. ಎಲ್ಲರು ವಿಕಾಸ್ ಮಾಡಿದ ಟೈಪೋ ಮಿಸ್ಟೇಕ್ ಹೇಳಬೇಕೆಂದು ಹೊರಟೆವು. ಅಷ್ಟರಲ್ಲಿ ವಿಕಾಸ್ ತನಗೆ ತಾನೇ ಟೈಪ್ ಮಾಡಿದಷ್ಟೇ ವೇಗದಲ್ಲಿ back arrow ಒತ್ತುತ್ತಾ ಬಂದು ಸರಿಯಾಗಿ datad ಬಳಿ ನಿಲ್ಲಿಸಿ d ತೆಗೆದು s ಹಾಕಿ ಅದೇ ವೇಗದಲ್ಲಿ ಪುನಃ ಪ್ರೋಸಿಡ್ ಆದನು. ಆ ಕ್ಷಣ ನಮ್ಮಲ್ಲಿ ಉಂಟಾದ ಭಾವೋದ್ವೇಗವನ್ನು ಪದಗಳಲ್ಲಿ ಕಟ್ಟಿ ಕೊಡಲು ಸಾಧ್ಯವಿಲ್ಲ. ಎಲ್ಲರೂ ಒಕ್ಕೂರಲಿನಿಂದ ಚಪ್ಪಾಳೆ ತಟ್ಟಿದೆವು. ಪಾಪ!! ವಿಕಾಸ್ ಗೆ ನಾವು ಚಪ್ಪಾಳೆ ತಟ್ಟಿದ್ದು ಯಾಕೆಂದೂ ಅರ್ಥವಾಗಿರಲಿಕ್ಕಿಲ್ಲ.
ಇದು ವಿಕಾಸ್, ನಮ್ಮ ನಂಬಿಕೆಗಳಿಗೆ ಕೊಟ್ಟ ಮೊದಲ ಏಟು.
ಇಂಜಿನಿಯರಿಂಗ್ ಕ್ಲಾಸುಗಳಿಂದಾಗಿ, ಈ ಮೆದುಳಿನ ಮೇಲೆ ಉಂಟಾಗಿರುವ ತೀವ್ರತರವಾದ ಹಾನಿ ಎಂದರೆ, ಬಹಳ ಬೇಗ ಅದು ನಿದ್ರೆಗೆ ಜಾರಿ ಬಿಡುತ್ತದೆ. ಕ್ಲಾಸ್ ತೆಗೆದುಕೊಳ್ಳುವುದು ಹಾಗಿರಲಿ, ಯಾರಾದರು ಬರಿ ಅರ್ಧ ಘಂಟೆಗಿಂತ ಜಾಸ್ತಿ ನಿರಂತರವಾಗಿ ಮಾತನಾಡಿದರು ಸಾಕು. ಅನಾಯಾಸವಾಗಿ ನಿದ್ರೆಗೆ ಜಾರಿ ಬಿಡುತ್ತಿದ್ದೆ. ಆದರೆ ವಿಕಾಸ್ ಕ್ಲಾಸ್ ಅಂದ್ರೆ ಆ ರೀತಿ ಬೋರ್ ಇರ್ತಾ ಇರಲಿಲ್ಲ. ಯಾಕಂದ್ರೆ ವಿಧ ವಿಧವಾದ ಆಕ್ಟಿವಿಟಿಸ್ ಇರ್ತಾ ಇತ್ತು. ಎಲ್ಲರನ್ನೂ involve ಮಾಡಿಕೊಂಡು ನಡೆಸುತ್ತಿದ್ದ ತರಬೇತಿ ಅದ್ಭುತ ವಾಗಿರುತ್ತಿತ್ತು. ತನ್ನ ಜವಾಬ್ದಾರಿಯನ್ನು ಅಷ್ಟೇ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರೂ- "ಬಹುಶಃ ನಾನು ನನ್ನ ವೃತ್ತಿಗೆ ನ್ಯಾಯ ಒದಗಿಸುತ್ತಿರುವೇನೋ, ಇಲ್ಲವೋ" ಎಂದು ತನ್ನನ್ನು ಪ್ರಶ್ನಿಸಿಕೊಳ್ಳುತ್ತಾ, 'ಸಾರಿ' ಕೇಳುತ್ತಿದ್ದುದು ಆತನ ನ್ಯೂನ್ಯತೆಯ ಮೀರಿದ ಸಾಮರ್ಥ್ಯಾದಾಚೆಗು ಇದ್ದ ವೃತ್ತಿಪರತೆಯ ಕಡೆಗಿನ ತುಡಿತಕ್ಕೆ ಸಾಕ್ಷಿಯಾಗಿತ್ತು. ಎಶ್ಟು ಜನ ಟೀಚರ್ ಗಳಿಗಿದೆ, ಇಶ್ಟು ಆತ್ಮಾವಲೋಕನ ಮಾಡಿಕೊಳ್ಳುವ ಬುದ್ಧಿ.
ಒಮ್ಮೆ ಕ್ಲಾಸಿನಲ್ಲಿ, ಇಂಗ್ಲೀಷ್ ನಾಟಕ ಮಾಡಿದ್ದೆವು. ಆ ನಾಟಕದಲ್ಲಿ ಜೂನಿಯರ್ ಹುಡುಗಿಗೆ ರಾಗಿಂಗ್ ಮಾಡುವ ಸೀನಿಯರ್ ಹುಡುಗನ ಪಾತ್ರ ನನ್ನದಾಗಿತ್ತು. ಆದರೆ ಆ ಹುಡುಗಿಯ ಮುಂದೆ ನಿಂತಾಗ ಡೈಲಾಗ್ ಮರೆತು ಹೋಗಿ ಬೇಬೆ ಎನ್ನುತ್ತಿದ್ದೆ. ಆಗ ವಿಕಾಸ್ "ಅರೆ!! ಸೀನಿಯರ್. ಹುಡುಗಿ ಮುಂದೆ ಮಾತು ಮರೆತು ಹೋಯ್ತಾ. ?" ಅಂತ ಕಿಚಾಯಿಸಿದ್ದರು. ತಾಜಾ ಉದಾಹರಣೆಗೊಂದಿಗೆ ಲೈವ್ಲಿ ಯಾಗಿ ಕ್ಲಾಸ್ ಕ್ಯಾರಿ ಮಾಡುತ್ತಿದ್ದ ಆತನ ಸೆನ್ಸ್ ಆಫ್ ಹ್ಯೂಮರ್ ಮತ್ತು ಎನರ್ಜಿ ಗೆ ಒಂದು ಸಲಾಂ.
ಪ್ರತಿಯೊಬ್ಬರೂ ಯಾವುದಾದರೊಂದು ವಿಷಯದ ಮೇಲೆ ಐದು ನಿಮಿಷಗಳ ಕಾಲ ಮಾತನಾಡುವುದು, ನಂತರ ವಿಕಾಸ್ ಅವರ ಇಂಗ್ಲೀಷ್ ನ ವ್ಯಾಕರಣ ತಪ್ಪುಗಳು, ಶೈಲಿ, ಪದ ಉಚ್ಚಾರಣೆಯಲ್ಲಿನ ದೋಷ, ವಿಷಯದ ಮೇಲಿನ ಹಿಡಿತ, ಮಾತಿನಲ್ಲಿನ confidence. ಇವುಗಳ ಬಗ್ಗೆ ಎಳೆ ಎಳೆಯಾಗಿ ಒಬ್ಬೊಬ್ಬರಿಗೂ ವಿವರವಾದ ಸಲಹೆ ಸೂಚನೆಗಳನ್ನು ನೀಡುವುದು. ಹೀಗೆ ಸಾಗಿತ್ತು ನಮ್ಮ ತರಬೇತಿ. ಒಟ್ಟಾರೆ ಎಲ್ಲರ ಮಾತುಗಳನ್ನೂ, ಎಲ್ಲರ ತಪ್ಪುಗಳನ್ನೂ ಗ್ರಹಿಸಿದ ಮೇಲೆ, ನಿಜವಾಗಲು ಇದೊಂದು ಅತ್ಯಂತ ಯಶಸ್ವಿ ಮಾದರಿಯ ಕಲಿಕೆಯ ಪದ್ಧತಿ ಎನ್ನಿಸಿತು.
ಆದರೆ ನನಗನ್ನಿಸಿದ್ದು.., ಇದು ವಿಕಾಸ್ ಮಾತ್ರ ಇಷ್ಟು ಯಶಸ್ವಿಯಾಗಿ ನಡೆಸಿಕೊಡಲು ಸಾಧ್ಯ. ಯಾಕಂದ್ರೆ ಕಣ್ಣುಗಳಿರುವವರ ಗಮನ, ಗೆಶ್ಚರ್ ಮೇಲೆಯು ಹರಿಯುವುದರಿಂದ ಇಷ್ಟು ವಿವರವಾಗಿ ಓರಲ್ ಕಮ್ಯುನಿಕೇಶನ್ ನಲ್ಲಿರುವ ಆಳ ಅಗಲಗಳನ್ನು ಗ್ರಹಿಸಲಾರರು. ಬಹುಶಃ ತಮ್ಮಲ್ಲಿನ ನ್ಯೂನ್ಯತೆಗಳನ್ನು ವರದಂತೆ ಬಳಸಿಕೊಳ್ಳುವುದು ಅಂದರೆ ಇದೆ ಇರಬೇಕು.
ವಿಕಾಸ್ ಕ್ಷಮೆ ಕೋರುತ್ತಾ!! ಈ ಬರವಣಿಗೆ.
*************** ************
೨. ಶ್ರೀ ಸತ್ಯನಾರಾಯಣ ಕಥೆ
ಚಕ್ಲಿಹೊಳೆ ನೋಡೋದಕ್ಕೆ ಅಂತ ಹೊರಟಿದ್ದೆ. ರಾಮು ' ತಾನು ದೇವಸ್ಥಾನಕ್ಕೆ ಹೋಗಬೇಕಾಗಿಯೂ,
ಅಲ್ಲಿವರೆಗೂ ಡ್ರಾಪ್ ಕೊಟ್ಟು ಹೋಗುವಂತೆಯೂ ' ಕೇಳಿದ. 'ಸರಿ ನಡೆಯಪ್ಪಾ ' ಅಂದೆ.
'ಬರೋದು ಬಂದಿದ್ದೀಯ. ಪೂಜೆ ಟೈಮು,ಒಳಕ್ ಬಂದು ಹೋಗು' ಅಂದ. ಉದ್ದದ ಸಾಲುಗಳಲ್ಲಿ ನಿಂತು
ಕಾಯುವುದಾದರೆ ಹೊರಗಿಂದಲೇ ಉದ್ದಂಡ ನಮಸ್ಕಾರ ಮಾಡಿ ಹೊರಟು ಬಿಡುತ್ತಿದ್ದೆ. ದೇವರು ಕೂಡ,
ಫ್ರೀ ಆಗಿ ಇದ್ದಿದ್ದರಿಂದ ನನ್ನದೇನು ಅಭ್ಯಂತರ ಇರಲಿಲ್ಲ.
ಅದು ಗಣಪತಿ ದೇವಸ್ಥಾನ. ಒಂದು ದಿನದ ಹಿಂದೆಯಷ್ಟೇ ಮದುವೆಯಾಗಿದ ರಾಮುವಿನ ಸ್ನೇಹಿತನಿಗೆ,
ಅಂದ್ರೆ ನವ ದಂಪತಿಗಳಿಗೆ 'ಶ್ರೀ ಸತ್ಯನಾರಾಯಣ' ಕಥೆ ಹೇಳುತ್ತಿದ್ದರು. ಸಾಕಷ್ಟು ಭಕ್ತ
ಸಮೂಹ ಭಕ್ತಿರಸದಲ್ಲಿ ಮುಳುಗಿದ್ದರು. ದೇವರಿಗೆ ನಮಸ್ಕಾರ ಮಾಡಿ, ತೀರ್ಥ ಕುಡಿದು ಮೂರು
ಸುತ್ತು ಹಾಕಿ ಹೊರಡಲು ಅನುವಾದೆ.
ರಾಮು - 'ಕಥೆಯ ಕೊನೆಯ ಭಾಗದಲ್ಲಿದೀವಿ, ಅನ್ಸತ್ತೆ. ಸ್ವಲ್ಪ ಹೊತ್ತು; ಕೂತು; ಕೇಳಿ
ಪ್ರಸಾದ ತಗೋಂಡು ಹೊಗಿವಂತೆ. ನಾನು ನಿನಗೆ ಸಂಜೆ-ಮೇಲೆ ಸಿಗ್ತೇನೆ' ಅಂದ. ಕಥೆ ಮುಗಿದ
ಮೇಲೆ ಪ್ರಸಾದ ರೂಪದಲ್ಲಿ ಕೊಡುವ ರವೆ ಉಂಡೆಯಂತದ್ದು ಅಲ್ಲೇ ಇತ್ತು. ಅದನ್ನು ನೋಡಿದ
ಮೇಲೆ ಹೋಗುವ ಮನಸ್ಸಾಗಲಿಲ್ಲ. ನಮ್ಮ ಮನೆಗಳಲ್ಲೂ ವೆರೈಟಿಯಾಗಿ ರವೆ ಉಂಡೆ ಮಾಡುವರು.
ಆದರೆ ದೇವಸ್ಥಾನಗಳಲ್ಲಿ ಕೊಡುವ ಪ್ರಸಾದದ ರುಚಿಯೇ ಬೇರೆ. ಮೈಸೂರಿನಲ್ಲಿದ್ದಾಗ ನಮ್ಮ
ರೂಮಿನ ಬಳಿ ಇದ್ದ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಮಿ ಬರೋದನ್ನೇ ಕಾಯುತ್ತಿದ್ದೆವು,
ಪುಳಿಹೊಗರೇ ತಿನ್ನೋದಕ್ಕೆ.
ಪುರೋಹಿತರು ಸಂಸ್ಕೃತ ಮತ್ತು ಕನ್ನಡ ಕಲೆಸಿಕೊಂಡು ಕಥೆ ಹೇಳುತ್ತಿದ್ದರು. ಅದು
ಅರ್ಥವಾಗಲೀ; ಬಿಡಲಿ; ಕಥೆಯ ಸಾಲುಗಳು ತಮ್ಮ ಕಿವಿಗಳ ಮೇಲೆ ಬಿದ್ದರೆ ಸಾಕೆಂಬ ಕೃತಾರ್ಥ
ಭಾವದಲ್ಲಿ ಭಕ್ತರು ಮುಳುಗಿದ್ದರು. ಏನಾದರೂ ಅರ್ಥವಾಗಬಹುದಾ ಅಂತ ಕೇಳಿಸಿಕೊಳ್ಳಲು
ಪ್ರಯತ್ನಿಸಿದೆ. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಏಕಾಗ್ರತೆ ಭಂಗವಾಗಿ ಹೋಯ್ತು.
ಅಲ್ಲಿ ನೇತು ಬಿಟ್ಟಿದ್ದ ಫ್ಯಾನುಗಳ ಮೇಲೆ; ಟ್ಯೂಬ್ ಲೈಟುಗಳ ಮೇಲೆ; ಕಾಣಿಕೆ ಹುಂಡಿಗಳ
ಮೇಲೆ; ಬರೆದಿದ್ದಂತಹ ದಾನವಂತರ ಹೆಸರುಗಳು ಮತ್ತು ವಿಳಾಸವನ್ನು ಓದುತ್ತಾ ಹೋದೆ. ಎಲ್ಲಾ
ಮುಗಿದು ಹೋಯ್ತು. ಆದರೂ ಕಥೆ ಮುಗಿಯುವ ಲಕ್ಷಣಗಳು ಕಾಣಿಸಲಿಲ್ಲ. ಹೇಳೋರಿಗೆ ಮರ್ತೊಗಲ್ಲ,
ಕೇಳೋರಿಗೆ ಅರ್ಥವಾಗಲ್ಲ ಎಂಬಂತಿತ್ತು. ರವೆ ಉಂಡೆ ಪಾತ್ರೆ ನನ್ನನ್ನು ಹಿಡಿದು
ಕೂರಿಸಿತ್ತಾದರೂ ಸ್ವಲ್ಪ ಹೊತ್ತಿನಲ್ಲಿ ನನ್ನ ತಾಳ್ಮೆಯ ಕಟ್ಟೆಯೂ ಒಡೆದು ಹೋಯ್ತು. ರವೆ
ಉಂಡೆಯ ಮೇಲೊಂದು ತೀಕ್ಷ್ಣ ದೃಷ್ಟಿ ಬೀರಿ ಹೊರಡಲು ಅನುವಾದೆ.
ರಾಮು 'ಯಾಕೋ. ?' ಅಂತ ಕೇಳ್ದ. 'ನೀನು ಕೇಳಪ್ಪ ನಾನು ಹೋಗ್ತೇನೆ. ಚಕ್ಲಿ ಹೊಳೆ ನೋಡಬೇಕು
ನಾನು' ಅಂದೆ.
' ಹಂಗೆಲ್ಲಾ ಹೋಗೋ ಹಂಗಿಲ್ಲ' ಅಂದ. ' ಯಾಕೋ. ? ' ಅಂದಿದ್ದಕ್ಕೆ ' ಕಥೆ ಮಧ್ಯದಲ್ಲಿ
ಕೇಳುವುದನ್ನು ಬಿಟ್ಟು ಹೋದರೆ, ಅವರಿಗೆ ಕೆಡುಕು ಉಂಟಾಗುತ್ತೆ. ಆ ಪಾಪ ಪರಿಹಾರ ಆಗಬೇಕು
ಅಂದ್ರೆ ನೀನು ಪುನಃ ಖುದ್ದಾಗಿ ಸತ್ಯನಾರಾಯಣ ಕಥೆ ಹೇಳಿಸಬೇಕು. ' ಅಂತ ಚೋಕ್ ಕೊಟ್ಟ.
ನನಗೂ ಸಿಕ್ಕಾಪಟ್ಟೆ ಕೋಪ ಬಂತು.
' ಮೋಸ; ವಂಚನೆ; ಅನ್ಯಾಯ; ಮಿತ್ರದ್ರೋಹ; ನಾನೇನ್ ಕಥೆ ಕೇಳ್ತೇನೆ ಅಂತ ಹೇಳಿದ್ನ. ನನ್ನ
ಪಾಡಿಗೆ ನಾನು ಹೋಗ್ತಾ ಇದ್ದೆ. ಹಿಡ್ಕೊಂಡು ಬಂದು ಎಮೋಷನಲ್ ಬ್ಲಾಕ್-ಮೇಲ್ ಮಾಡ್ತೀಯ.
ಹೋಗಲೋ ನಾನು ಹೋಗ್ತೇನೆ. ' ಅಂದೆ.
'ನೋಡು ಚೇತು, ನನ್ನ ಮಾತು ಕೇಳು. ಹಠ ಮಾಡಬೇಡ. ಒಬ್ಬೊಬ್ಬನೇ ಅಲೀತ ಇರ್ತೀಯ. ಏನಾದ್ರೂ
ಹೆಚ್ಚು ಕಮ್ಮಿ ಆದ್ರೆ ಏನ್ ಕಥೆ. ? ಇನ್ನೊಂದ್ ಸ್ವಲ್ಪ ಹೊತ್ತಿರು. ಕಥೆ ಮುಗಿದು
ಬಿಡತ್ತೆ' ಅಂದ. ಏನೋ ಫ್ರೆಂಡು ಅಷ್ಟು ಒತ್ತಾಯ ಮಾಡಿದ್ನಲ್ಲ ಅಂತ ಕೂತೆ. ನಿಜವಾಗಲು
ಸ್ವಲ್ಪ ಮಟ್ಟಿಗೆ ನನ್ನೊಳಗೆ ಅಳುಕು ಮೂಡಿತು. ಯಾವನಿಗೆ ಬೇಕು. ? ಈ ವಿಷಯ ಯೋಚನೆ
ಮಾಡ್ತಾ; ಹೋಗ್ತಾ ಹೋಗ್ತಾ ಏನಾದ್ರೂ ಅಪಘಾತ ಆಗಿ ಸತ್ತೋಗಿ ಬಿಟ್ರೆ, ಕೊನೆಗೆ ನನ್ನದು
ಒಂದು ಕಥೆ ಸೇರಿಸಿಬಿಡ್ತಾರೆ.
'ಅಲ್ಲೋ ಕಥೆ ಅರ್ಧಕ್ಕೆ ಬಿಟ್ಟು ಎದ್ದು ಹೋದರೆ, ಆಕ್ಸಿಡೆಂಟು ಆಗುತ್ತೆ ಅಂತ ಯಾರಪ್ಪಾ
ನಿನಗೆ ಉಪದೇಶ ಮಾಡಿದ್ದು. ' ಅಂತ ಕೇಳಿದ್ದಕ್ಕೆ ' ಅದು ಈ ಕಥೆಯಲ್ಲಿಯೇ ಬರುತ್ತೆ
ಕಣೋ..ಯಾವುದೋ ಒಂದು ಅಧ್ಯಾಯದಲ್ಲಿ ಅದರ ಬಗ್ಗೆ ಹೇಳ್ತಾರೆ. ಯಾರೋ ಒಬ್ಬ ಕಥೆ ಅರ್ಧಕ್ಕೆ
ಬಿಟ್ಟು ಹೋಗ್ತಾನೆ. ಅವನಿಗೆ ಜೀವನದಲ್ಲಿ ನಾನಾ ಬಗೆಯ ಕಷ್ಟಗಳು ಮುತ್ತಿಕೊಳ್ತವೆ. ಆಗ
ಅವನು ಈ ಕಥೆಯನ್ನ ಪುನಃ ಎಲ್ಲರಿಗೂ ಓದಿಸಿದ ಮೇಲೆ ಪಾಪ ಪರಿಹಾರ ಆಗುತ್ತೆ. ಆನಂತರವೇ,
ಅವನು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬಾಳ್ತಾನೆ. '
ರಾಮುವಿನ ಮಾತನ್ನೇ ನಂಬುವ ಹಾಗಿದ್ದರೆ, ಇದೆಂತಹ ದುರಂತ. ಎಂತಹಾ ಘೋರ ಅನ್ಯಾಯ;
ದೌರ್ಜನ್ಯ. ಪುರಾಣವನ್ನು, ತಿರುಚುತ್ತಾ ಬಂದಿರುವ ಶಾಸ್ತ್ರ ಪ್ರವೀಣ ಧರ್ಮಾಂದ ಪುರೋಹಿತರ
ಡಿಕ್ಷನರಿಯಲ್ಲಿ ಇನ್ನೂ ಎಂತೆತಹಾ ಕನ್ನಿಂಗ್ ಅಧ್ಯಾಯಗಳಿವೆ. ಎಲ್ಲಾ ಸೇರಿಕೊಂಡು,
ಸಹನಾಮೂರ್ತಿ ಭಗವಂತನನ್ನು, ದೌರ್ಬಲ್ಯಗಳಿರುವ ಹುಲು ಮಾನವನ ಮಟ್ಟಕ್ಕೆ ಇಳಿಸಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಕಥೆ ಮುಗಿಯಿತು. ಈ ಕಥೆಯನ್ನು ಕೇಳಿದವರು, ಲೈಫಲ್ಲಿ ಬೊಂಬಾಟಾಗಿ
ಇರ್ತಾರೆ ಅಂತ ಹೇಳಿದ್ದನ್ನ ಕೇಳಿ ಭಕ್ತರು ಪಾವನ ಆಗಿ ಹೋದರು. ನನಗಂತೂ ಕಬೀರನ
ಮುತ್ತಿನಂತಹ ದೋಹೆ ನೆನಪಾಯಿತು. 'ರಾಮ ರಾಮ ರಾಮ ಅಂದ ಮಾತ್ರಕ್ಕೆ ಮುಕ್ತಿ ಸಿಗುವ
ಹಾಗಿದ್ದರೆ, ಸಕ್ಕರೆ; ಸಕ್ಕರೆ; ಸಕ್ಕರೆ; ಅಂತ ಹೇಳಿ ಬಾಯಿ ಸಿಹಿ ಮಾಡ್ಕೋಳಿ '.
ರವೆಉಂಡೆಯಂತದ್ದನ್ನು ತಿಂದು ಬಾಯಿ ಸಿಹಿ ಮಾಡಿಕೊಂಡು ವಿಶ್ವರೂಪ ದರ್ಶನ ತೋರಿಸುತ್ತಿದ್ದ
ಭಗವಂತ ನಾರಾಯಣನಿಗೂ, ಗುಡಿಯೊಳಗೆ ಕೂತಿದ್ದ ಮುದ್ದಿನ ಗಣಪತಿಗೂ ಕೈ ಮುಗಿದು 'ದೇವರೇ
ವಿದ್ಯಾ ಬುದ್ದಿ ಕೊಡಪ್ಪಾ ' ಅಂತ ಕೇಳಿ ಹೊರ ಬಂದೆ. ನನ್ನ ಚಕ್ಲಿಹೊಳೆ ಪ್ರಯಾಣ ವಿಘ್ನ
ಇಲ್ಲದೇ ಮುಂದುವರೆಯಿತು.
************ ******
3. ದುಡ್ಡು ಕಳೆದುಕೊಂಡು, ವಾಪಾಸು ಊರು ಸೇರದವರು
ರಾತ್ರಿ ಹತ್ತು.
ಮೆಜೆಸ್ಟಿಕ್ ರೈಲು ನಿಲ್-ದಾಣದ ಮುಖ್ಯದ್ವಾರದ ಕಡೆಗೆ, ಅತ್ತಿತ್ತ ನೋಡುತ್ತಾ
ನಡೆಯುತ್ತಿದ್ದೆ .
ದೊಡ್ಡ ಫುಟ್-ಪಾತ್ ಗೆ ಅಂಟಿಕೊಂಡ ಸಣ್ಣ ರಸ್ತೆಯಲ್ಲಿ, ಮಧ್ಯವಯಸ್ಕ ಗಂಡಸೊಬ್ಬ
ಒಬ್ಬರಿಂದೊಬ್ಬರಿಗೆ ಸಂಚರಿಸುತ್ತಾ..
ಮೆಜೆಸ್ಟಿಕ್ ರೈಲು ನಿಲ್-ದಾಣದ ಮುಖ್ಯದ್ವಾರದ ಕಡೆಗೆ, ಅತ್ತಿತ್ತ ನೋಡುತ್ತಾ
ನಡೆಯುತ್ತಿದ್ದೆ .
ದೊಡ್ಡ ಫುಟ್-ಪಾತ್ ಗೆ ಅಂಟಿಕೊಂಡ ಸಣ್ಣ ರಸ್ತೆಯಲ್ಲಿ, ಮಧ್ಯವಯಸ್ಕ ಗಂಡಸೊಬ್ಬ
ಒಬ್ಬರಿಂದೊಬ್ಬರಿಗೆ ಸಂಚರಿಸುತ್ತಾ..
‘ಸಾರ್ ಆಪ್-ಕೋ ಹಿಂದಿ ಆತಾ ಹೈ’ ‘ ಸಾರ್ ಆಪ್-ಕೊ ಹಿಂದಿ ಆತಾ’ ಅಂದುಕೊಂಡು ತಿರುಗುತ್ತಿದ್ದ.
ಯಾರೂ ಸ್ಪಂಧಿಸುತ್ತಿರಲಿಲ್ಲ. ಜನಗಳು ರೈಲು ತಪ್ಪಿ ಬಿಡುತ್ತದೆ ಅನ್ನೋ ಧಾವಂತದಲ್ಲಿದ್ದರು. ಆದರೆ ನನ್ನ ರೈಲಿಗೆ ಇನ್ನೂ ೧ ಘಂಟೆಗಳ ಕಾಲಾವಕಾಶವಿದೆ.
ಭಾಷೆ ಪ್ರಾಬ್ಲಮ್ಮು ಪಾಪ ಏನ್ information ಬೇಕಿತ್ತೋ ಏನೋ ಎಂದು, ಅವನ ಬಳಿ ಹೋಗಿ ನಿಂತು -
‘ ಬೋಲಿಯೆ ಮುಜೆ ತೋಡ ತೋಡ ಹಿಂದಿ ಆತಾ ಹೈ ಕ್ಯಾ information ಚಾಹಿಯೇ ..? ‘ ಕೇಳಿದೆ.
‘ ಸರ್ ವೋ ಕ್ಯಾ ಹೈನಾ ….’ ಎನ್ನುತ್ತಾ ಶುರುಮಾಡಿದ.
ತಾನು ಕೂಲಿ ಕೆಲಸಕ್ಕಾಗಿ ಹೆಂಡತಿ ಮಕ್ಕಳ ಜೊತೆಯಾಗಿ ಮಹಾರಾಷ್ಟ್ರದ ನಾಂಡೆದ್ ನಿಂದ ಬೆಂಗಳೂರಿಗೆ ಬಂದಿದ್ದಾಗಿಯೂ, ಇಲ್ಲಿ ತನ್ನ ಎಲ್ಲಾ ಸಾಮಾನು ಸರಂಜಾಮುಗಳು ಕಳ್ಳತನವಾಗಿ…, ದುಡ್ಡೂ ಇಲ್ಲವಾಗಿ.., ವಾಪಾಸ್ ಮನೆ ಸೇರಿಕೊಳ್ಳಲೂ ಆಗದೆ ಎರಡು ದಿನಗಳಿಂದ ಪರದಾಡುತ್ತಿರುವುದಾಗಿಯೂ ಹೇಳಿದ.
ಭಾಷೆ ಪ್ರಾಬ್ಲಮ್ಮು ಪಾಪ ಏನ್ information ಬೇಕಿತ್ತೋ ಏನೋ ಎಂದು, ಅವನ ಬಳಿ ಹೋಗಿ ನಿಂತು -
‘ ಬೋಲಿಯೆ ಮುಜೆ ತೋಡ ತೋಡ ಹಿಂದಿ ಆತಾ ಹೈ ಕ್ಯಾ information ಚಾಹಿಯೇ ..? ‘ ಕೇಳಿದೆ.
‘ ಸರ್ ವೋ ಕ್ಯಾ ಹೈನಾ ….’ ಎನ್ನುತ್ತಾ ಶುರುಮಾಡಿದ.
ತಾನು ಕೂಲಿ ಕೆಲಸಕ್ಕಾಗಿ ಹೆಂಡತಿ ಮಕ್ಕಳ ಜೊತೆಯಾಗಿ ಮಹಾರಾಷ್ಟ್ರದ ನಾಂಡೆದ್ ನಿಂದ ಬೆಂಗಳೂರಿಗೆ ಬಂದಿದ್ದಾಗಿಯೂ, ಇಲ್ಲಿ ತನ್ನ ಎಲ್ಲಾ ಸಾಮಾನು ಸರಂಜಾಮುಗಳು ಕಳ್ಳತನವಾಗಿ…, ದುಡ್ಡೂ ಇಲ್ಲವಾಗಿ.., ವಾಪಾಸ್ ಮನೆ ಸೇರಿಕೊಳ್ಳಲೂ ಆಗದೆ ಎರಡು ದಿನಗಳಿಂದ ಪರದಾಡುತ್ತಿರುವುದಾಗಿಯೂ ಹೇಳಿದ.
ಇರಲಾರದವನು ಹುಡುಕ್ಕೊಂಡ್ ಬಂದು ಇರುವೆ ಬಿಟ್ಟುಕಂಡ್ ಹಂಗಾಯ್ತು ನನ್ನ ಕಥೆ. ಆದರೆ ಇವನ ಬಳಿಯೂ ಕಳ್ಳತನ ಮಾಡಬೇಕಾದಲ್ಲಿ , ಆ ಕಳ್ಳ ಇನ್ನೆಷ್ಟು ಬರಗೆಟ್ಟವನಿರಬೇಕು ಅನ್ನಿಸಿತು.
‘ಹೇ ಮೈ ಕೈಸೆ ಟ್ರಸ್ಟ್ ಕರೂ… ತುಮ್ ಝೂಟ್ ಬೋಲ್ ರಹೆ ಹೂ … ‘ ಅಂತಂದೆ.
ಅಕಸ್ಮಾತ್ ಅದು ಸತ್ಯ ಆಗಿದ್ರು , ನಾನೇನು ಅವನಿಗೆ ದುಡ್ದು ಕೊಡಬೇಕು ಅಂತ ನಿರ್ಧಾರ ಮಾಡಿರಲಿಲ್ಲ. ಸಮಸ್ಯೆಗಳು ಎಲ್ಲರಿಗೂ ಇರುತ್ವೆ, ‘ಇದೆಲ್ಲಾ ಅವರವರ ಪ್ರಾರಬ್ಧ ಕರ್ಮ’.
‘ಹೇ ಮೈ ಕೈಸೆ ಟ್ರಸ್ಟ್ ಕರೂ… ತುಮ್ ಝೂಟ್ ಬೋಲ್ ರಹೆ ಹೂ … ‘ ಅಂತಂದೆ.
ಅಕಸ್ಮಾತ್ ಅದು ಸತ್ಯ ಆಗಿದ್ರು , ನಾನೇನು ಅವನಿಗೆ ದುಡ್ದು ಕೊಡಬೇಕು ಅಂತ ನಿರ್ಧಾರ ಮಾಡಿರಲಿಲ್ಲ. ಸಮಸ್ಯೆಗಳು ಎಲ್ಲರಿಗೂ ಇರುತ್ವೆ, ‘ಇದೆಲ್ಲಾ ಅವರವರ ಪ್ರಾರಬ್ಧ ಕರ್ಮ’.
ಹತ್ತಿರದಲ್ಲೇ ಫುಟ್-ಪಾತ್ ಕಟ್ಟೆಯ ಮೇಲೆ ಕುಳಿತಿದ್ದ ಹೆಂಗಸೊಂದು, ತನ್ನ ತೊಡೆಯ ಮೇಲೆ ಮಲಗಿದ್ದ ಮಗುವನ್ನು , ಕಂಕುಳಿಗೆ ಸೇರಿಸಿಕೊಳ್ಳುತ್ತಾ ಬಂತು.
‘ಹೆಂಡತಿ-ಮಗು ಇಟ್ಟುಕೊಂಡು, ನಾನ್ ಯಾಕ್ ಸುಳ್ಳು ಹೇಳಲಿ.., ಒಂದೇ ಒಂದು ಸಾರಿ ನಮ್ಮ ಊರು ಸೇರಿಕೊಳ್ಳೋದಕ್ಕೆ ಸಹಾಯ ಮಾಡಿ.., ‘ ಅನ್ನೋ ಅರ್ಥ
ಬರುವಂತೆ ಹೇಳುತ್ತಾ, ಮಲಗಿದ್ದ ಮಗುವನ್ನು ತೋರಿಸಿದ.
ಅವನು ಹೇಳುತ್ತಿದ್ದುದು ಸಂಪೂರ್ಣ ಸುಳ್ಳೂ ಆಗಿರಬಹುದು ಅಥವಾ ಸ್ವಲ್ಪ ಸತ್ಯ ಇರಬಹುದು. ವ್ಯಾಲೆಟ್ಟಿನಿಂದ ನೂರು ರೂಪಾಯಿ ತೆಗೆದು ಕೊಡಬೇಕಾಯಿತು .
ಒಬ್ಬ ಮನುಷ್ಯ ಇಷ್ಟು ಧಾರಿದ್ರ್ಯ ದ ಹಂತಕ್ಕೆ ಇಳಿದು ಬೇಡಬೇಕಾದರೆ, ನಮ್ಮನಮ್ಮೊಳಗೇ ಏನೋ ಸಮಸ್ಯೆ ಇದೆ ಅಂತ ಅನ್ನಿಸ್ತು.
‘ಹೆಂಡತಿ-ಮಗು ಇಟ್ಟುಕೊಂಡು, ನಾನ್ ಯಾಕ್ ಸುಳ್ಳು ಹೇಳಲಿ.., ಒಂದೇ ಒಂದು ಸಾರಿ ನಮ್ಮ ಊರು ಸೇರಿಕೊಳ್ಳೋದಕ್ಕೆ ಸಹಾಯ ಮಾಡಿ.., ‘ ಅನ್ನೋ ಅರ್ಥ
ಬರುವಂತೆ ಹೇಳುತ್ತಾ, ಮಲಗಿದ್ದ ಮಗುವನ್ನು ತೋರಿಸಿದ.
ಅವನು ಹೇಳುತ್ತಿದ್ದುದು ಸಂಪೂರ್ಣ ಸುಳ್ಳೂ ಆಗಿರಬಹುದು ಅಥವಾ ಸ್ವಲ್ಪ ಸತ್ಯ ಇರಬಹುದು. ವ್ಯಾಲೆಟ್ಟಿನಿಂದ ನೂರು ರೂಪಾಯಿ ತೆಗೆದು ಕೊಡಬೇಕಾಯಿತು .
ಒಬ್ಬ ಮನುಷ್ಯ ಇಷ್ಟು ಧಾರಿದ್ರ್ಯ ದ ಹಂತಕ್ಕೆ ಇಳಿದು ಬೇಡಬೇಕಾದರೆ, ನಮ್ಮನಮ್ಮೊಳಗೇ ಏನೋ ಸಮಸ್ಯೆ ಇದೆ ಅಂತ ಅನ್ನಿಸ್ತು.
ಕರುಣೆ ಹುಟ್ಟಿಸುವಂತಿದ್ದ ಅವರ ಅವತಾರಗಳನ್ನು ಮತ್ತೊಮ್ಮೆ ನೋಡಿ, ಕರ್ಮ!!.. ಅಂದುಕೊಂಡು ಅಲ್ಲಿಂದ ಹೊರಡಲು ಶುರುಮಾಡಿದೆ.
ಆತ ಮತ್ತೆ ಅಡ್ಡ ಹಾಕಿದ.
ತನಗೆ ದುಡ್ಡು ಬೇಡವಾಗಿಯೂ…, ರಾತ್ರಿ ಹನ್ನೊಂದು ಮೂವತ್ತಕ್ಕೆ ಇದ್ದ ರೈಲಿಗೆ ಎರಡು ಟಿಕೇಟು ತೆಗೆಸಿಕೊಡಬೇಕಾಗಿಯೂ ಕೇಳಿಕೊಂಡ. ಅದರ ಒಟ್ಟು ಮೊತ್ತ ಐದುನೂರು ರೂಪಾಯಿಗಳು.
ನನಗೂ ತಲೆ ಕೆಟ್ಟು ಹೋಯ್ತು. ಫುಲ್ ಲಾಕ್ ಆಗಿಬಿಟ್ಟಿದ್ದೆ.
‘ಗುರು ನಾನು ಒಬ್ಬನೇ ನೂರು ರೂಪಾಯಿ ಕೊಟ್ಟಿದ್ದೇನೆ ತಾನೆ ಹಿಂಗೆ ಇನ್ನ ನಾಲ್ಕು ಜನ ಕೊಟ್ರೆ, ಐನೂರೂಪಾಯಿ ಆಗುತ್ತೆ ತಾನೆ ನೀವು ನಿಮ್ಮೂರಿಗೆ
ಹೋಗಬಹುದು ತಾನೆ ‘ ಅಂದೆ .
ಅದಾಗಲೇ ಆತ ಜೆನೂನ್ ಅನ್ನೋ ಭಾವನೆ ಒಳಸೇರಿಬಿಟ್ಟಿತ್ತು. ಯಾಕೆ ಅಂತ ಗೊತ್ತ್ತಾಗಲಿಲ್ಲ. ಗಂಡ-ಹೆಂಡಿರು ಕೋರಸ್ ನಲ್ಲಿ ಗೋಗರೆಯುತ್ತಿದ್ದರು.
ಒಂದು ಕ್ಷಣ ಇದು ಹ್ಯಾರಸ್-ಮೆಂಟ್ ಅಂಥನಿಸಿದರೂ ... ಬ್ಲೈಂಡಾಗಿ ‘ಆಯ್ತು ಕೊಡ್ತೇನೆ’ ಅಂತ
ಕಮಿಟ್ ಆಗಿಬಿಟ್ಟೆ.
‘ಬಡತನ ತುಂಬಾನೆ ಕೆಟ್ಟದ್ದು ‘ ಅಂತ ಹೇಳುತ್ತಿದ್ದ ಅಮ್ಮನ ಮಾತೂ ಬೇಡದ ಹೊತ್ತಲ್ಲಿ ನೆನಪಾಯ್ತು.
‘ಗುರು ನಾನು ಒಬ್ಬನೇ ನೂರು ರೂಪಾಯಿ ಕೊಟ್ಟಿದ್ದೇನೆ ತಾನೆ ಹಿಂಗೆ ಇನ್ನ ನಾಲ್ಕು ಜನ ಕೊಟ್ರೆ, ಐನೂರೂಪಾಯಿ ಆಗುತ್ತೆ ತಾನೆ ನೀವು ನಿಮ್ಮೂರಿಗೆ
ಹೋಗಬಹುದು ತಾನೆ ‘ ಅಂದೆ .
ಅದಾಗಲೇ ಆತ ಜೆನೂನ್ ಅನ್ನೋ ಭಾವನೆ ಒಳಸೇರಿಬಿಟ್ಟಿತ್ತು. ಯಾಕೆ ಅಂತ ಗೊತ್ತ್ತಾಗಲಿಲ್ಲ. ಗಂಡ-ಹೆಂಡಿರು ಕೋರಸ್ ನಲ್ಲಿ ಗೋಗರೆಯುತ್ತಿದ್ದರು.
ಒಂದು ಕ್ಷಣ ಇದು ಹ್ಯಾರಸ್-ಮೆಂಟ್ ಅಂಥನಿಸಿದರೂ ... ಬ್ಲೈಂಡಾಗಿ ‘ಆಯ್ತು ಕೊಡ್ತೇನೆ’ ಅಂತ
ಕಮಿಟ್ ಆಗಿಬಿಟ್ಟೆ.
‘ಬಡತನ ತುಂಬಾನೆ ಕೆಟ್ಟದ್ದು ‘ ಅಂತ ಹೇಳುತ್ತಿದ್ದ ಅಮ್ಮನ ಮಾತೂ ಬೇಡದ ಹೊತ್ತಲ್ಲಿ ನೆನಪಾಯ್ತು.
ನನ್ನ ಹತ್ತಿರವಿದ್ದದ್ದು , ಸಾವಿರ ರೂಪಾಯಿಯ ಒಂದೇ ನೋಟು ಮತ್ತು ನೂರು ರೂಪಾಯಿಯದ್ದು ಇನ್ನೊಂದು ನೋಟು.
ನೂರು ರೂಪಾಯಿಯದ್ದನ್ನು ಅದಾಗಲೇ ಅವನಿಗೆ ಕೊಟ್ಟು ಬಿಟ್ಟಿದ್ದೆ.
‘ ಸರಿ ನೀವು ಇಲ್ಲೇ ಇರಿ. ನಾನು ನಿಮಗೆ ದುಡ್ಡು ತಂದು ಕೊಡ್ತೇನೆ.’ ಅಂತ ಹೇಳಿ ಹೊರಟೆ…
ಇಬ್ಬರೂ ಹಿಂದೆಯೇ ಬಂದರೂ…
‘ ನೀವು ಇಲ್ಲೇ ಇರಿ ..’ ಅಂದರೆ ‘ಸಾ… ರ್ ಸಾ…. ರ್ ‘ ಅಂತೆ.
‘ ಎರಡು ನಿಮಿಷದ performance ಗೆ ನೂರು ರೂಪಾಯಿ ಕೊಟ್ಟಿದ್ದೇನೆ . ಉಳಿದದ್ದನ್ನೂ ತಂದು ಕೊಡ್ತೇನೆ ರಿ ಇಲ್ಲೇ ಇರಿ.ಎಲ್ಲೂ ಓಡಿ ಹೋಗೋದಿಲ್ಲ ‘ ಅಂದೆ.
ಪಾರ್ಟಿಗಳು ನಂಬುವಂತಿಲ್ಲ.
‘ ಸರಿ ಬನ್ನಿ ಇರೋ ಸಾವಿರ ರೂಪಾಯಿಗೆ ಚೇಂಜ್ ಮಾಡ್ಸಾನ ‘ ಅಂತ ಅಲ್ಲೇ ಇದ್ದ ಬಾಲಾಜಿ ರೆಸ್ಟೋರೆಂಟ್ ಗೆ ಹೋದೆ.
ಅದು ನಾನು ಊರಿಗೆ ಹೋಗುವಾಗೆಲ್ಲಾ… ಊಟ ಮಾಡಿ ರೈಲು ಹತ್ತುವ ಹೋಟ್ಲು ‘ ಒಂದ್ ಊಟ ಕೊಡಿ ‘ ಅಂತ ಸಾವಿರ ರೂಪಾಯಿ ನೋಟು ಟೇಬಲ್ ಮೇಲೆ ಇಟ್ಟರೆ, ಕ್ಯಾಷಿಯರ್ ಕಮ್ ಓನರ್ ಚೇಂಜ್ ಇಲ್ಲವೆಂಬಂತೆ ತಲೆ ಕೊಡವಿದ.
‘ ಯಾರಿಗೋ ಕೊಡಬೇಕು ಸಾರ್. ಎರಡು ಐನೂರು ರೂಪಾಯಿ ಕೊಡಿ. ಊಟಕ್ಕೆ ನಾನು ಸಪರೇಟಾಗಿ ದುಡ್ಡು ಕೊಡ್ತೇನೆ ‘ ಅಂದೆ.
ಅವನು ಕೊಡಬೇಕು ಅಂದುಕೊಂಡು ಗಲ್ಲಕ್ಕೆ ಕೈ ಹಾಕಿದ.
ಅದೇ ಹೊತ್ತಿಗೆ ಒಂದು ಜೋರು ಗಲಾಟೆ ಶುರು ಆಯ್ತು. ಒಬ್ಬ ಹಳ್ಳಿಯವನಿಗೂ ಮತ್ತು ಸಪ್ಲೈಯರಿಗೂ ಹತ್ತಿಕೊಂತು.
ಊಟದ ಜೊತೆ ಹೆಚ್ಚಾಗಿ ಪಡೆದ ಒಂದು ಹಪ್ಪಳಕ್ಕೆ , ನಾಲ್ಕು ರೂಪಾಯಿ ಅಡಿಷನಲ್ ಚಾರ್ಜ್ ಮಾಡಿದ್ದನ್ನೇ ಮಹಾಪರಾಧವೆಂಬಂತೆ ಸಪ್ಲೈಯರಿಗೆ ಬಯ್ಯುತ್ತಿದ್ದ.
ನೂರು ರೂಪಾಯಿಯದ್ದನ್ನು ಅದಾಗಲೇ ಅವನಿಗೆ ಕೊಟ್ಟು ಬಿಟ್ಟಿದ್ದೆ.
‘ ಸರಿ ನೀವು ಇಲ್ಲೇ ಇರಿ. ನಾನು ನಿಮಗೆ ದುಡ್ಡು ತಂದು ಕೊಡ್ತೇನೆ.’ ಅಂತ ಹೇಳಿ ಹೊರಟೆ…
ಇಬ್ಬರೂ ಹಿಂದೆಯೇ ಬಂದರೂ…
‘ ನೀವು ಇಲ್ಲೇ ಇರಿ ..’ ಅಂದರೆ ‘ಸಾ… ರ್ ಸಾ…. ರ್ ‘ ಅಂತೆ.
‘ ಎರಡು ನಿಮಿಷದ performance ಗೆ ನೂರು ರೂಪಾಯಿ ಕೊಟ್ಟಿದ್ದೇನೆ . ಉಳಿದದ್ದನ್ನೂ ತಂದು ಕೊಡ್ತೇನೆ ರಿ ಇಲ್ಲೇ ಇರಿ.ಎಲ್ಲೂ ಓಡಿ ಹೋಗೋದಿಲ್ಲ ‘ ಅಂದೆ.
ಪಾರ್ಟಿಗಳು ನಂಬುವಂತಿಲ್ಲ.
‘ ಸರಿ ಬನ್ನಿ ಇರೋ ಸಾವಿರ ರೂಪಾಯಿಗೆ ಚೇಂಜ್ ಮಾಡ್ಸಾನ ‘ ಅಂತ ಅಲ್ಲೇ ಇದ್ದ ಬಾಲಾಜಿ ರೆಸ್ಟೋರೆಂಟ್ ಗೆ ಹೋದೆ.
ಅದು ನಾನು ಊರಿಗೆ ಹೋಗುವಾಗೆಲ್ಲಾ… ಊಟ ಮಾಡಿ ರೈಲು ಹತ್ತುವ ಹೋಟ್ಲು ‘ ಒಂದ್ ಊಟ ಕೊಡಿ ‘ ಅಂತ ಸಾವಿರ ರೂಪಾಯಿ ನೋಟು ಟೇಬಲ್ ಮೇಲೆ ಇಟ್ಟರೆ, ಕ್ಯಾಷಿಯರ್ ಕಮ್ ಓನರ್ ಚೇಂಜ್ ಇಲ್ಲವೆಂಬಂತೆ ತಲೆ ಕೊಡವಿದ.
‘ ಯಾರಿಗೋ ಕೊಡಬೇಕು ಸಾರ್. ಎರಡು ಐನೂರು ರೂಪಾಯಿ ಕೊಡಿ. ಊಟಕ್ಕೆ ನಾನು ಸಪರೇಟಾಗಿ ದುಡ್ಡು ಕೊಡ್ತೇನೆ ‘ ಅಂದೆ.
ಅವನು ಕೊಡಬೇಕು ಅಂದುಕೊಂಡು ಗಲ್ಲಕ್ಕೆ ಕೈ ಹಾಕಿದ.
ಅದೇ ಹೊತ್ತಿಗೆ ಒಂದು ಜೋರು ಗಲಾಟೆ ಶುರು ಆಯ್ತು. ಒಬ್ಬ ಹಳ್ಳಿಯವನಿಗೂ ಮತ್ತು ಸಪ್ಲೈಯರಿಗೂ ಹತ್ತಿಕೊಂತು.
ಊಟದ ಜೊತೆ ಹೆಚ್ಚಾಗಿ ಪಡೆದ ಒಂದು ಹಪ್ಪಳಕ್ಕೆ , ನಾಲ್ಕು ರೂಪಾಯಿ ಅಡಿಷನಲ್ ಚಾರ್ಜ್ ಮಾಡಿದ್ದನ್ನೇ ಮಹಾಪರಾಧವೆಂಬಂತೆ ಸಪ್ಲೈಯರಿಗೆ ಬಯ್ಯುತ್ತಿದ್ದ.
‘ಯಾವ್ ಬೋಳಿಮಗ ಕೊಡ್ತಾನೆ ನಾಲಕ್ಕು ರೂಪಾಯಿ. ಜಾಸ್ತಿ ದುಡ್ಡಾಗತ್ತೆ ಅಂತ
ಹೇಳಬೇಕಿತ್ತು ಕಣ್ರೀ . ನಮ್ಮೂರಲ್ಲೆಲ್ಲ ಹಪ್ಪಳ ಕೇಳುದ್ರೆ ಫ್ರೀಯಾಗೇ ಕೊಡ್ತಾರೆ ..,‘
ಒಂದು ಹಪ್ಪಳಕ್ಕಾಗಿ ಶುರುವಾದ ಗಲಾಟೆ ತಾರಕಕ್ಕೇರಿತು. ಗಲ್ಲದ ಬಳಿ ಕುಳಿತಿದ್ದ ಓನರೇ ಮಧ್ಯ ಪ್ರವೇಶಿಸಿ, ಸಂಧಿ ಮಾಡಿ, ದುಡ್ಡು ವಸೂಲಿ ಮಾಡಿದ.
ಆತ ಪುನಃ ಬಂದಾಗ ಚೇಂಜ್ ಕೇಳುವ ಧೈರ್ಯ ಬರಲಿಲ್ಲ. ನೆನಪು ಮಾಡಿಕೊಂಡು ಆತನೇ ಎರಡು ಐನೂರು ರೂಪಾಯಿ ಕೊಟ್ಟು ಸಾವಿರ ರೂಪಾಯಿಯ ನೋಟು ಪಡೆದ. ಹೊಟೆಲಿನ ಹೊರಗೆ ನಿಂತಿದ್ದವನ ಬಳಿಗೆ ಹೋಗಿ, ಮೊದಲು ನೂರು ರೂಪಾಯಿ ವಾಪಾಸು ಪಡೆದು, ಐನೂರು ರೂಪಾಯಿ ಕೊಟ್ಟು ಹೊಟಲಿನ ಒಳ ಹೋಗಲು ಅನುವಾದೆ.
ಪುನಃ ‘ಭಾಯೀ… ಸಾ…ರ್ ‘ ಅಂತ ಗೋಗರೆಯಲು ಶುರು ಮಾಡಿದ.
ಹೇಳಬೇಕಿತ್ತು ಕಣ್ರೀ . ನಮ್ಮೂರಲ್ಲೆಲ್ಲ ಹಪ್ಪಳ ಕೇಳುದ್ರೆ ಫ್ರೀಯಾಗೇ ಕೊಡ್ತಾರೆ ..,‘
ಒಂದು ಹಪ್ಪಳಕ್ಕಾಗಿ ಶುರುವಾದ ಗಲಾಟೆ ತಾರಕಕ್ಕೇರಿತು. ಗಲ್ಲದ ಬಳಿ ಕುಳಿತಿದ್ದ ಓನರೇ ಮಧ್ಯ ಪ್ರವೇಶಿಸಿ, ಸಂಧಿ ಮಾಡಿ, ದುಡ್ಡು ವಸೂಲಿ ಮಾಡಿದ.
ಆತ ಪುನಃ ಬಂದಾಗ ಚೇಂಜ್ ಕೇಳುವ ಧೈರ್ಯ ಬರಲಿಲ್ಲ. ನೆನಪು ಮಾಡಿಕೊಂಡು ಆತನೇ ಎರಡು ಐನೂರು ರೂಪಾಯಿ ಕೊಟ್ಟು ಸಾವಿರ ರೂಪಾಯಿಯ ನೋಟು ಪಡೆದ. ಹೊಟೆಲಿನ ಹೊರಗೆ ನಿಂತಿದ್ದವನ ಬಳಿಗೆ ಹೋಗಿ, ಮೊದಲು ನೂರು ರೂಪಾಯಿ ವಾಪಾಸು ಪಡೆದು, ಐನೂರು ರೂಪಾಯಿ ಕೊಟ್ಟು ಹೊಟಲಿನ ಒಳ ಹೋಗಲು ಅನುವಾದೆ.
ಪುನಃ ‘ಭಾಯೀ… ಸಾ…ರ್ ‘ ಅಂತ ಗೋಗರೆಯಲು ಶುರು ಮಾಡಿದ.
‘ಮತ್ತೆ ಏನಪ್ಪಾ ನಿನ್ನ ರೋಧನೆ …? ‘ ಅಂದದ್ದಕ್ಕೆ ..
ಸುಧೀರ್ಘ ರೈಲು ಪ್ರಯಾಣ ಇರುವುದಾಗಿಯು…, ಅದಾಗಲೇ ಊಟ ಮಾಡಿ ಒಂದು ದಿನ ಆಗಿರುವುದಾಗಿಯೂ , ಆ ನೂರು ರೂಪಾಯಿಯನ್ನೂ ಕೊಟ್ಟರೆ ಊಟದ ಖರ್ಚಿಗೆ ಆಗುತ್ತದೆ ಎಂದೂ ಹೇಳಿದ.
ನನಗೂ ಕೆಟ್ಟ ಕೋಪ ಬಂತು.
‘ ಗುರು ಅದನ್ನೂ ನಾನೇ ಕೊಡಬೇಕ ..? ‘ ಅಂದೆ.
‘ಬೆಳಗ್ಗೆಯಿಂದ ಕೇಳಿ ಕೇಳಿ ಗಂಟಲು ಒಣಗಿ ಹೋಗಿದೆ. ಯಾರೂ ಕೊಟ್ಟಿಲ್ಲ. ಅದನ್ನೂ ಕೊಟ್ಟರೆ ಸಹಾಯ ಆಗುತ್ತೆ. ‘ ಅಂದ.
ಆ ನೂರು ರೂಪಾಯಿಯನ್ನೂ ಅವನ ಕೈಗೆ ಇಟ್ಟೆ. ಅಕೌಂಟ್ ನಂಬರ್ ಕೊಟ್ರೆ ಊರಿಗೆ ಹೋದ ತಕ್ಷಣ ದುಡ್ಡು ವಾಪಾಸ್ ಕಳಿಸುವುದಾಗಿ
ಹೇಳಿಕೊಂಡನಾದರೂ , ನಾನು ಕೊಟ್ಟ ಫೋನ್ ನಂಬರಿಗೆ ಆ ತರದ ಸರ್-ಪ್ರೈಜ್ ಕಾಲ್ ಬರಬಹುದು ಎಂಬ ಆಶಾಭಾವನೆ ಖಂಡಿತ
ಇರಲಿಲ್ಲ.
ಆ ನೂರು ರೂಪಾಯಿಯನ್ನೂ ಅವನ ಕೈಗೆ ಇಟ್ಟೆ. ಅಕೌಂಟ್ ನಂಬರ್ ಕೊಟ್ರೆ ಊರಿಗೆ ಹೋದ ತಕ್ಷಣ ದುಡ್ಡು ವಾಪಾಸ್ ಕಳಿಸುವುದಾಗಿ
ಹೇಳಿಕೊಂಡನಾದರೂ , ನಾನು ಕೊಟ್ಟ ಫೋನ್ ನಂಬರಿಗೆ ಆ ತರದ ಸರ್-ಪ್ರೈಜ್ ಕಾಲ್ ಬರಬಹುದು ಎಂಬ ಆಶಾಭಾವನೆ ಖಂಡಿತ
ಇರಲಿಲ್ಲ.
ಅವನ ಮಾತಿನ ಸತ್ಯಾಸತ್ಯತೆಗಳನ್ನು ಪುನಃ ವಿಮರ್ಶಿಸಲು ಹೋಗಲಿಲ್ಲ. ಯಾಕಂದ್ರೆ, ನನಗೆ ಸಿಕ್ಕ ಆ ಎರಡು ಪಾತ್ರಗಳು ಜೆನ್ಯೂನ್ ಎಂಬಂತೆಯೇ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ನನಗಿದೆ.
ಕಹಿ ವಾಸ್ತವ ಏನಪ್ಪಾ ಅಂದ್ರೆ!! ಈ ರೀತಿಯಾಗಿ ದುಡ್ಡು ಮಾಡುವ ನಟೋರಿಯಸ್!! ಖದೀಮರ ಗ್ಯಾಂಗು ಚಾಲ್ತಿಯಲ್ಲಿದೆ.
**********************
೪. ಇರುಪ್ಪು ಜಲಪಾತದಲ್ಲಿ ಸಿಕ್ಕ ಗಾರ್ಡ್
ಮಡಿಕೇರಿ ತಲುಪಿದಾಗ ಸುಡು ಬಿಸಿಲು. ಅಲ್ಲಿಂದ ಇರುಪ್ಪು ಜಲಪಾತ ಬೋರ್ಡ್ ತೋರಿದ್ದ ಕಡೆಗೆ ಕಾರನ್ನು ತಿರುಗಿಸಿದೆವು.
ಹಿಂದಿನ ದಿನ, ಗೆಳೆಯ ಕೀರ್ತನನ ಮದುವೆ ನಿಶ್ಚಯದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋಗಿದ್ದವರು, ಬೆಳಗ್ಗೆ ವಾಪಾಸಾಗುವಾಗ ಪಯಣವನ್ನು ಕೊಂಚ ವಿಸ್ತರಿಸಿದ್ದೆವು.
ಕಾರು ಬಿಡುತ್ತಿದ್ದವನು ಅಭಿ. ಅವನ ಪಕ್ಕದಲ್ಲಿ ರವಿ ಮತ್ತು ಹಿಂಬದಿಯ ಸೀಟಿನಲ್ಲಿದ್ದವನು ನಾನು. ದಾರಿಯುದ್ದಕ್ಕೂ ನಮ್ಮ ಪ್ರೊಫೆಷನ್ ಗಳ ಸಾಮ್ಯತೆಗಳು, ಅಚ್ಚರಿಗಳು, ಖರಾಬ್ ಅನುಭವಗಳನ್ನೆಲ್ಲಾ ಮೆಲುಕು ಹಾಕುತ್ತಾ ಸಾಗಿದ್ದೆವು.
ಇರುಪ್ಪು ತಲುಪಿದಾಗ ದೋಪಹರ್ ಮೂರು ಘಂಟೆ. ಕಾರು ಪಾರ್ಕ್ ಮಾಡಿ, ಟಿಕೇಟ್ ಪಡೆದು ಜಲಪಾತದ ಕಡೆಗೆ ನಡೆಯಲು ಪ್ರಾರಂಭಿಸಿದೆವು.
ಕಾಡು ದಟ್ಟವಾಗಿತ್ತು. ಕಾಡಿನ ಘನತೆಗೆ ತಕ್ಕಂತಹ ಯಮಗಾತ್ರದ ಮರಗಳಿದ್ದವು. ಕತ್ತೆತ್ತಿ ಅವುಗಳ ತುದಿ ಎಲ್ಲಿದೆ..? ಎಂದು ನೋಡುವುದೇ ಕಷ್ಟವೆನಿಸುತ್ತಿತ್ತು. ಕಾಳಿಂಗ ಸರ್ಪ, ಹುಲಿ-ಸಿಮ್ಮ, ಕರಡಿ ಮುಂತಾದವುಗಳ ಬೋರ್ಡುಗಳು ಎತೇಚ್ಚವಾಗಿದ್ದವು. ಬಿಸಿಲಿನ ಜಳ ಹೆಚ್ಚಿದ್ದರೂ ಸಹ, ಕಾಡುದಾರಿಯ ನಡಿಗೆಯು ಸುಖಕರವಾಗಿತ್ತು.
ತೂಗುಸೇತುವೆಯೊಂದನ್ನು ದಾಟುವಾಗ, ಖಾಕಿ ವಸ್ತ್ರ ಧರಿಸಿದ್ದ ಕಾಡಿನ ಕೆಲ್ಸಗಾರರೊಬ್ಬರು ಎದುರಾದರು. ಖಾಕಿ ಬಟ್ಟೆ ಹಾಕಿದ್ದರಿಂದಾಗಿ ಅವರು ಡಿಪಾರ್ಟ್ಪೆಂಟಿನವರು ಎಂಬುದಾಗಿ ಹೇಳಬಹುದಾಗಿತ್ತು ಅಷ್ಟೇ. ಅನಾಟಮಿ ಲೆಕ್ಕದಲ್ಲಿ ದೇಹದ ಅಸ್ಥಿಯ ಗುರುತುಗಳೂ ಇಲ್ಲದೆ, ಅಂಗಾಂಗಳೆಲ್ಲವೂ ಊನವಾಗಿದ್ದವು. ಮೂರ್ನಾಕು ಭಂಗಿಯಲ್ಲಿ ಬಾಗಿದ್ದ ದೇಹವನ್ನು ಮತ್ತಷ್ಟು ಭಾಗಿಸಿ, ಕೈಯಿಂದ ಕಾಲನ್ನೆತ್ತಿ ಮುಂದಕ್ಕಿಕ್ಕುತ್ತಿದ್ದರು. ಇನ್ನೊಂದು ಕೈಯಲ್ಲಿ ಗೂಟವಾಗಿ ಕೋಲಿತ್ತು. ತಮ್ಮ ಹೆಜ್ಜೆ ತಾವಿಡುವುದೇ ದುಸ್ತರವಾಗಿದ್ದ ದೇಹ ಸ್ಥಿತಿ. ' ಯಾವಾನಪ್ಪಾ ಇವನಿಗೆ ಕೆಲಸ ಕೊಟ್ಟವನು..? ಈ ಕಾಡಲ್ಲಿ ಈ ಮನ್ಷ ಮಾಡೋದಾದರೂ ಏನಿದೆ ..? ' ಅಂದುಕೊಂಡು ಮುಂದಕ್ಕೆ ಹೋದೆವು.
ಜಲಪಾತ ನೋಡಿ ಸ್ವಲ್ಪ ಬೇಸರವಾಯ್ತು. ನೀರಿದ್ದರಷ್ಟೇ ಅದು ಜಲಪಾತ. ಮಾರ್ಚಿ ತಿಂಗಳಲ್ಲೂ ಮೈದುಂಬುವ ಜಲಪಾತವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಬಂಡೆಕಲ್ಲಿನ ನುಣ್ಣನೆಯ ಭಾಗಗಳು, ಆರ್ಕಿಯಾಲಜಿಯ ಪದರಗಳಂತೆ ಪಟ್ಟೆ ಕೊರೆದುಕೊಂಡಿದ್ದ ಭೂಭಾಗವು... ಸೀಸನ್ನಲ್ಲಿ ಜಲಪಾತವು ಸೃಷ್ಟಿಸಬಹುದಾದ ಘೋರ ಬೆರಗಿನ ಅಂದಾಜು ನೀಡುತ್ತಿತ್ತು.
ಬಟ್ಟೆಗಳನ್ನೆಲ್ಲಾ ಒಂದು ಗುಡ್ಡೆ ಮಾಡಿಟ್ಟು, ಚಡ್ಡಿಧಾರಿಗಳಾಗಿ, ತೆಳುವಾಗಿ ಬೀಳುತ್ತಿದ್ದ ಜುಳು ಜುಳು ನೀರಿಗೆ ತಲೆ ಕೊಡಲು ಸನ್ನದ್ಧರಾದೆವು. ಒಬ್ಬರಾದ ಮೇಲೊಬ್ಬರು!! ಉಸಿರುಗಟ್ಟುವವರೆಗೂ ತಲೆ ತೋಯಿಸಿಕೊಂಡು ಹೊರ ಬರುತ್ತಿದ್ದೆವು. ಈಜಲು, ನಿಂತ-ನೀರೂ ಕೂಡ ಸುಖಪ್ರಾಯವಾಗಿರಲಿಲ್ಲ. ಸಮಾಧಾನವಾಗುವವರೆಗೂ ದೇಹವನ್ನು ನೆನೆಸಿ, ಒಣಗಿಸಿದೆವು. ಬಟ್ಟೆ ಬದಲಿಸಿ!! ಒಂದಷ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡು, ತಿರುಗಿ ನಡೆದೆವು.
ಒಂದಷ್ಟು ಸವತಿಕಾಯಿ, ಕಲ್ಲಂಗಡಿ ತಿಂದು!! ಕಾರು ಹತ್ತಿ ಹೊರಟೆವು. ಇಲ್ಲಿಂದ ನಮ್ಮ ಪ್ರಯಾಣವು ಮೈಸೂರಿನ ಕಡೆಗಿತ್ತು.ಮುಂದಿನ ಸೀಟಿನಲ್ಲಿ ಕೂತಿದ್ದರಿಂದ, ದಾರಿ ಕೇಳುವ ಸಲುವಾಗಿ ತಲೆ ಹೊರ ಹಾಕಿ ನೋಡುತ್ತಿದ್ದೆ. ಹೋಗುವಾಗ ಎದುರಿಗೆ ಸಿಕ್ಕಿದ್ದ, ಬಾಗಿದ್ದ ಅದೇ ಮನುಷ್ಯ ಜೀವವು ಕಾಣಿಸಿತು.
***
ನಾವು ಫಾಲ್ಸ್ ನಲ್ಲಿ ಮಜಾ ಮಾಡಿ, ಹರಟು, ಬಟ್ಟೆ ಒಣಗಿಸಿಕೊಂಡು ಬಂದರೂ, ಈ ಕಾಡಿನ ಕೆಲಸದವ ಹೋಗುತ್ತಲೇ ಇದ್ದರು. ಅವರನ್ನೇ ದಾರಿ ಕೇಳಿದೆವು.
ರಸ್ತೆ ಮುಗಿಯುವವರೆಗೂ ಹೋಗಿ, ನಂತರ ಬಲಕ್ಕೆ ತಿರುಗಿದರೆ ಮೈಸೂರು ರಸ್ತೆಗೆ ಕೂಡಿಕೊಳ್ಳುವಿರೆಂದು ಗೈಡ್ ಮಾಡಿದರು.
ಬಹಳಷ್ಟು ದೂರದ ವರೆಗೂ ಮುಂದೆ ಯಾವುದೇ ಮನೆಗಳಿರಲಿಲ್ಲ. ಹಂಗಾದ್ರೆ, ಈ ಮನುಷ್ಯ ಇನ್ನು ತುಂಬಾ ದೂರ ನಡೀಬೇಕು. 'ಅವರು ಹೋಗುವಲ್ಲಿಗೆ ಲಿಫ್ಟ್ ಕೊಡೋಣ್ವಾ..? ' ಅನ್ನೋ ಒಂದು ಸಣ್ಣ ಚರ್ಚೆಯಾಯಿತು. ಅನುಕಂಪ ತೋರಿಸಿದರೆ ಕೆಲವರು ಅವಮಾನ ಅಂದ್ಕೋತಾರೆ!! ಆದರೂ ಕರೆಯೋದರಿಂದ, ನಾವು ಕಳ್ಕೋಳೊ ಅಂಥಾದ್ದು ಎನೂ ಇಲ್ವಲ್ಲಾ ಎಂಬುದಾಗಿ ನಿರ್ಧರಿಸಿ .. ಅವರನ್ನು ಆಹ್ವಾನಿಸಿದೆವು.
'ಬೇಡ!! ಬೇಡ!! ಸ್ವಲ್ಪ ದೂರ ಅಷ್ಟೇ' ಎಂಬುದಾಗಿ ನಿರಾಕರಿಸಿದರಾದರೂ ಕೊನೆಗೆ ಒಪ್ಪಿದರು.
ಕಾರಿನ ಬಾಗಿಲು ತೆಗೆದರೆ, ಮನ್ಷ ಒಳಗ್ ಬರಕ್ಕೆ ಆಗ್ತಿಲ್ಲ. ಈ ಪೋಕ್ಸ್-ವ್ಯಾಗನ್ ಕಾರೋ.. ನೆಲ ಕಚ್ಚಿ ಕೊಂಡಿದೆ. ಮೊದಲು ಒಂದು ಕಾಲು ಎತ್ತಿ ಒಳಗಿಟ್ಟರು. ನಂತರ ತಲೆ ತೂರಿಸಿ ಒಳ ಬಂದರು. ಕೋಲನ್ನು ಪಡೆದ ರವಿ, ಅವರನ್ನು ಕೊಂಚ ಸಪೋರ್ಟ್ ಕೊಟ್ಟು ಒಳಗೆ ಎಳೆದುಕೊಂಡ. ಇವಿಷ್ಟೂ ಸರ್ಕಸ್ ನೋಡಿ, ಅವರು ಮುಜುಗರದ ಮುದ್ದೆಯಾಗಿ ಹೋದರು. ' ನಾನ್ ಮೊದಲೇ ಹೇಳ್ದೆ ಬೇಡ ಅಂತ ' ಅನ್ನೋ ರೀತಿ ನೋಡ್ತಿದ್ದರು.
ಇರುಪ್ಪು ಜಲಪಾತದಲ್ಲಿ ಕೆಲಸ ಮಾಡುವ ಗಾರ್ಡ್ ಎಂಬುದಾಗಿ ಪರಿಚಯಿಸಿಕೊಂಡರು. ಒಂದಷ್ಟು ಲೋಕಾಭಿರಾಮದ ಮಾತುಗಳೂ ನಡೆದವು. ಆದರೆ, ಗಾರ್ಡ್!! ಎಂಬುವುದನ್ನು ಮಾತ್ರ ಅರಗಿಸಿಕೊಳ್ಳಲಾಗುತ್ತಿಲ್ಲ. ಇವರೆಂಥದು ಗಾರ್ಡ್ ಮಾಡದು..? ಅನ್ನೋದು ಪ್ರಶ್ನೆ.
ನಮ್ಮ ಆಲೋಚನೆಗಳನ್ನು ಅರಿತವರಂತೆ, ಸವಿಸ್ತಾರವಾಗಿ ಹೇಳಿದರು. ಇವರಿಗಿದ್ದ ಅಂಗವೈಕಲ್ಯವು ಹುಟ್ಟಿನಿಂದ ಇರುವಂಥದ್ದಲ್ಲ. ಎಲ್ಲರಂತೆ, ಗಟ್ಟಿಗರಾಗಿದ್ದವರು.
ಆಯಕಟ್ಟಿನ ಜಾಗಗಳಲ್ಲಿ ಪ್ರವಾಸಿಗರು ಅತಿಕ್ರಮಿಸದಂತೆ ತಡೆಯುವುದು, ಜಲಪಾತದ ಹತ್ತಿರ ಪ್ರವಾಸಿಗರನ್ನು ಕಾಯುವುದು ಇವರ ಕೆಲಸ.
" ಒಂದ್ ಸಾರಿ ಮಳೆಗಾಲ. ಜಲಪಾತದ ತುಂಬಾ ನೀರಿತ್ತು. ಜನಾ ಅಂದ್ರೆ ಜನ. ಅವರನ್ನ ಕಂಟ್ರೋಲ್ ಮಾಡೋವಾಗ, ಬಂಡೆ ಮೇಲಿಂದ ಜಾರಿ, ಎತ್ತರದಿಂದ ಕೆಳಗೆ ಬಿದ್ದೆ. ತಲೆಗೆ ಪೆಟ್ಟು ಬಿತ್ತು. ಪಾರ್ಶ್ವವಾಯು(ಸ್ಟ್ರೋಕ್) ಹೊಡಿತು. ಕೈ-ಕಾಲುಗಳು ಸ್ವಾಧೀನ ಕಳಕೊಂಡ್ವು. ಮಾತು ಅರ್ಧಕ್ಕರ್ಧ ನಿಂತೋಯ್ತು. ಒಂದಷ್ಟು ವರ್ಷ ಟ್ರೀಟ್ಮೆಂಟು ತಗೋಂಡೆ. ಆಮೇಲೆ ಮತ್ತದೇ ಕೆಲಸ." ಅಂದರು.
ಕಾರೊಳಗೆ ನಿಶ್ಯಬ್ಧ. ಅವರಿದ್ದ ಮನೆ ಬಂತು. ಜಲಪಾತದಿಂದ ಸಾಕಷ್ಟು ದೂರವೇ ಇತ್ತು. ಅವರ ವೆಲಾಸಿಟಿ ನೋಡಿದ್ರೆ, ಇಲ್ಲಿಗೆ ಬರೋ ಅಷ್ಟರಲ್ಲಿ ಕತ್ತಲೇನೆ ಆಗಿರ್ತಿತ್ತು. ಹತ್ತಿದಷ್ಟೇ ಕಷ್ಟದಲ್ಲಿ ಕೆಳಗೆ ಇಳಿದರು.
ಹೇಗಾದರೂ ಕೃತಜ್ಞತೆಯನ್ನು ತಿಳಿಸಬೇಕೆಂದು ಪ್ರಯತ್ನಿಸುತ್ತಿದ್ದರು. ಮನೆಯೊಳಗೆ ಬಂದು, ಕಾಫಿಯಾದರೂ ಕುಡಿಯಿರೆಂದು ಕೇಳಿಕೊಂಡರು. ಅದೊಂದು ಗುಡಿಸಲಿನಂತಹ ಹೆಂಚಿನ ಮನೆ. ಮುಂದಿನ ವರಾಂಡದಲ್ಲಿ ತಂಪು ಪಾನೀಯ ಮಾರುವ ಚಿಕ್ಕದೊಂದು ಅಂಗಡಿ. ಅವರ ಆಹ್ವಾನವನ್ನು ಅಷ್ಟೇ ಸೌಜನ್ಯದಿಂದ ಬೇಡವೆಂದು ತಿಳಿಸಿ ಹೊರಟೆವು.
ಆತ್ಮವಿಮರ್ಶೆಯ ಸಮಯ!! ಬದುಕು ಕ್ರೂರವೆನಿಸಿತು. ಹಾಗಾದ್ರೆ, ಬದುಕು ಮುರಾಬಟ್ಟೆಯಾಗಲು ಸಣ್ಣದೊಂದು 'ಸ್ಲಿಪ್' ಸಾಕೇ..? ನಮ್ಮ ನಾಳೆ!! ನಮ್ಮ ಊಹೆಗೂ ನಿಲುಕದಷ್ಟರ ಮಟ್ಟಿಗೆ ಗಬ್ಬೆದ್ದು ಹೋಗಬಹುದು, ಕಂಡವರ್ಯಾರು..?
ಮನುಷ್ಯ ಪ್ರಯತ್ನಗಳನ್ನು ಮೀರಿದ ಗ್ಲೋಬಲ್-ಅನ್-ಸರ್ಟನಿಟಿ ಗಳ ಮಧ್ಯೆ ಜೀವಿಸ್ತಾ ಇದ್ದೇವೆ. ನಾಳೆಯ ಬಗ್ಗೆ ಇರಬೇಕಾದದ್ದು ಭಯವಲ್ಲ. ಒಂಚೂರು ಕನಸು, ಇನ್ನೊಂಚೂರು ಭರವಸೆ.
Comments
Post a Comment