Skip to main content

​ಮದುವೆಯಾಗಿ ಕಳೆದ ಎರಡು ಮಳೆಗಾಲ

'ಮನೆಯಿಂದ ದೊಡ್ಡೋರ್ ಯಾರೂ ಬರ್ಲಿಲ್ವಾ' ಅಂತ ಅನುಮಾನದಿಂದಲೇ ಆಹ್ವಾನ ನೀಡುತ್ತಾ ಹುಡುಗಿಯ ಚಿಕ್ಕಪ್ಪ!! ಪಂಜೆ ಮೇಲೆತ್ತಿ ಕಟ್ಟಿಕೊಂಡರು.

ಒಬ್ಬನೇ, ನನ್ನ ಕಜಿನ್ ಬ್ರದರ್ ಶ್ರೀಧರನ ಜೊತೆಗೆ ಮದುವೆಗೆಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿದ್ದೆ. ಮೊಟ್ಟ ಮೊದಲ ಅನುಭವ!! ದೊಡ್ಡವರು ಜೊತೆಯಲ್ಲಿ ಬರದಿದ್ದುದಕ್ಕೂ ಕಾರಣವಿತ್ತು. ಮನೆಮಂದಿಯೆಲ್ಲರೂ ಹುಡ್ಗಿ ನೋಡ ಹೋಗಿ, ಸಡಗರದ ರೀತಿ ಮಾಡಿ.. ಬೇಡ ಅನ್ನೋಕೆ ಆಗದಷ್ಟು ಇಕ್ಕಟ್ಟಿಗೆ ಸಿಗಿಸಿಬಿಟ್ಟರೆ ಅನ್ನೋ ಅಂಜಿಕೆ ಮತ್ತು ಸಂಕೋಚ.

ಬಲೆ ಬಲೆ ಅಂಬ್ರೆಲಾದಂತ ಹಳದಿ ಬಣ್ಣದ ಚೂಡಿ ಹಾಕಿದ್ದ ಭಲೆ ಭಲೆ ಹುಡುಗಿಯ ಆಗಮನ.
ಸಾಕಷ್ಟು ಬಿಸ್ಕತ್ತು ತುಂಬಿದ್ದ ತಟ್ಟೆಯನ್ನು ತಂದು, ಮುಂದೆ ಬಡಿದು ಹೋದಳು. ನಾನು ನನ್ನ ಕಜಿನ್ ಎರಡು ಬಿಸ್ಕತ್ತು ಎತ್ತಿಕೊಂಡೆವು. ಮನೆಯೊಳಗೆ ಸಾಕು ನಾಯಿಯೊಂದು ಬಂತು.

'ಸೋನು ಇಲ್ ಬಾ.. ' ಅಂತ ಹತ್ತಿರ ಕರೆದು, ತಟ್ಟೆಯಲ್ಲಿದ್ದ ನಮ್ಮ ಪಾಲಿನ ಬಿಸ್ಕತ್ತುಗಳಲ್ಲಿ ಎರಡನ್ನು ಆ ನಾಯಿಗೂ ಹಾಕಲಾಯಿತು. ಶ್ರೀಧರ-ನಾನೂ, ಮುಖ-ಮುಖ ನೋಡಿಕೊಂಡೆವು.

ಹುಡುಗಿಯ ಅಕ್ಕನ ಮದುವೆ ಆಲ್ಬಂ ಒಂದನ್ನು ತಂದು ಕೈಗಿಟ್ಟು!! ಪುಟ ತಿರುಗಿಸಿದಂತೆಯೂ ...
'ಹಾ.. ಇವಳೇ ಹುಡುಗಿ,ಇವಳೇ ಹುಡುಗಿ '
ಅಂತ ಯುಗಾದಿ ಚಂದ್ರನ ತರಹ ತೋರಿಸ್ತಿದ್ರು.

' ಮನೆಯಿಂದ ದೊಡ್ಡೋರು ಯಾರು ಬರ್ಲಿಲ್ವಾ .. ' ಅಂತ ಪದೆಪದೆ ಕೇಳುತ್ತಲೇ ಇದ್ದರು.

' ಲೋ!! ಇವ್ರು ಆಲ್ಬಂ ಕೊಟ್ಟಿರೋದೆ, ಫೋಟೊ ನೋಡ್ಕಂಡು ಎದ್ದೋಗ್ರಿ ಅಂತ. ಮತ್ತೆ ಹುಡುಗಿನೇನು ತೋರ್ಸಲ್ಲ!! ಅನ್ಸತ್ತೆ. ಸರಿಯಾಗಿ ನೋಡ್ಕಂಡ' ಅಂತ ಕೇಳಿದ ಶ್ರೀಧರ.

' ನೋಡಿದ್ದಾದ್ರು ಎಲ್ಲಿ !!.? ಬಿಸ್ಕತ್ ತಟ್ಟೆ ದಬಾರಾಂತ ಎತ್ತಾಕಿ ಹಂಗೆ ಹೋದ್ಲು.' ಅಂದೆ.

ನಮ್ಮ ಮೇಲೆ ಕರುಣೆ ಬಂತು ಅನ್ಸತ್ತೆ!! ಹುಡುಗಿಯನ್ನು ಅವರ ಚಿಕ್ಕಮ್ಮನ ಸೆಕ್ಯೂರಿಟಿ ನಲ್ಲಿ ನಮ್ಮ ಮುಂದೆ ಕೂರಿಸಿದರು.

ಒಂದೈದು ನಿಮಿಷ ನೋಡಿದ್ದಷ್ಟೇ!! ಅವರ ಚಿಕ್ಕಮ್ಮ .. ಹುಡ್ಗಿಯ ಒಂದಷ್ಟು ಗುಣಗಾನ ಮಾಡಿ ಒಳಗೆ ಕರ್ಕೊಂಡು ಹೋದ್ರು.
ಹುಡುಗಿ ಜೊತೆ ಪ್ರೈವೇಟ್ ಆಗಿ ಮಾತಾಡಿದ ಮೇಲಷ್ಟೇ.. ನಾನು ಮದ್ವೆಗೆ ಒಪ್ಪೋದು ಅಂತ ಮೊದಲೇ ಹೇಳಿದ್ದೆನಾದರೂ ... ಇಲ್ಲಿನ ಪರಸ್ಥಿತಿ ಪ್ರತಿಕೂಲವಾಗಿತ್ತು. ನಾನೆಲ್ಲಾದ್ರೂ -
'ಒಂದ್ ನಿಮಿಷ ನಿಮ್ ಹುಡ್ಗಿನ ಸೈಡಿಗೆ ಕಳುಸ್ತೀರಾ, ಮಾತಾಡ್ಬೇಕಿತ್ತು!!' ಅಂದಿದ್ರೆ ಖಂಡಿತ ಕಳುಸ್ತಾ ಇರ್ಲಿಲ್ಲ.

ನಾವು ಬಂದಿದ್ದಕ್ಕೆ ಇಷ್ಟೇ ಸುಂಕ ಅಂತ, ಎದ್ದು ಬಂದೆವು.

​*****  *****​
ಮದುವೆಯೇ ಬೇಡ ಅಂತಿದ್ದವನಿಗೆ -
' ಸುಮ್ನೆ ನೋಡಿಕಂಡ್ ಬಾ!! ನೋಡಿದ್ದವೆಲ್ಲಾ ಆಗಿಬಿಡುತ್ತಾ!! ನಾವೇನು ಒತ್ತಾಯ ಮಾಡಲ್ಲಪ್ಪಾ. ಬೇಡ ಅಂದ್ರೆ ಬೇಡ!! ಶಾಸ್ತ್ರ ಸರಿ ಬಂದಿಲ್ಲ ಅಂತ.. ಯಾರಿಗೂ ಮುಖಚಟ್ಟು ಆಗದಂಗೆ.. ಕ್ಯಾನ್ಸಲ್ ಮಾಡ್ತೀವಿ.' ಅಂತ ಹೇಳಿ ದಬ್ಬಿದ್ದಳು ಅಮ್ಮ.

ಹುಡುಗಿ ಹೆಂಗಿದಾಳೆ ಅಂತ!! ಕೇಳಿದಾಗ..
' ಚೆನ್ನಾಗಿದಾಳೆ' ಅಂದೆ. ಮದುವೆಗೆ ಒಪ್ಪೋಕೆ ಮುಂಚೆ ಮಾತಾಡ್ಬೇಕು ​ಅಂತಲೂ ​ಅಂದೆ.

ಇದಾಗಿ ಕೆಲವು ವಾರಗಳ ನಂತರ, ​ಹುಡುಗಿಯ ಮತ್ತು ಅವರ ಮನೆಯವರ ಸಕಲ ಡಿಟೆಕ್ಟಿವ್ ಕೆಲಸಗಳು ಪೂರ್ಣಗೊಂಡು... ಅನುಮತಿ ಸಿಕ್ಕು...  ಮೊಬೈಲು ನಂಬರುಗಳು ಸಿಕ್ಕು!!
ಐಸು ಕ್ರೀಮ್ ಪಾರ್ಲರ್ ನಲ್ಲಿ ಅನೌಪಚಾರಿಕ ಭೇಟಿ ಫಿಕ್ಸ್ ಆಯಿತು.

ಈ ಭೇಟಿಯ ಸಫಲತೆಗಾಗಿ, ಕೆಲವು ಸ್ನೇಹಿತರು ತಮ್ಮ ಅನುಭವಾಮೃತವನ್ನು ಧಾರೆ ಎರೆದಿದ್ದರು.

ಮದುವೆ ಅಂದ್ರೆ ಓಕೆನಾ..? ಅನ್ನೋದರಿಂದ ಮೊದಲುಗೊಂಡು...  ಮನೆಯವರ ಒತ್ತಾಯ ಇದಿಯಾ..?? ನಾನು ಮನಸ್ಪುರ್ವಕವಾಗಿ ಒಪ್ಪಿಗೆಯಾಗಿದ್ದೀನಾ..?? ಆಸಕ್ತಿಗಳೇನು ..?? ಜೀವನದ ಬಗ್ಗೆ ನಿನ್ನ ದೃಷ್ಟಿಕೋನವೇನು..??
ಇಂಥ ಕೆಲವೊಂದು ನಿರ್ದಿಷ್ಟ ಪ್ರಶ್ನೆಗಳಿಗೆ, ಉತ್ತರಕ್ಕಿಂತ ಹೆಚ್ಚಾಗಿ... ಮಾತುಕಥೆಗಳ ಮೂಲಕ ಜಡ್ಜ್ ಮಾಡುವ ಪ್ರಯತ್ನವಾಗಿತ್ತು. 

ನಾನು ಹುಡ್ಗಿನ ಮಾತಾಡುಸ್ಬೇಕು ಅಂದಾಗೆಲ್ಲಾ, ನಮ್ಮಮಂಗೆ ಭಯ!!

'ಏನೇನೋ ಕೇಳ್ಬೇಡ'
ಅಂತ ಎಚ್ಚರಿಸುತ್ತಿದ್ದಳು.

' ನನಗಷ್ಟು ಗೊತ್ತಿಲ್ವಾ..!! ನನ್ನೇನು ಅನಾಗರಿಕ ಅನ್ಕೊಂಡಿದೀಯಾ.' ಅಂದ್ರೆ..

'ಆ ಥರಾ ಅಲ್ಲಪ್ಪಾ!! ಹುಡ್ಗಿ, ಇನ್ನು ಚಿಕ್ಕವಳು. ನಮ್ಮ ಹತ್ರ ಮಾತಾಡೋ ಹಂಗೆ!! ಅವಳಿಗೂ ಏನೇನೋ ಕೇಳಿ, ತಲೆ ತಿನ್ಬೇಡ. ಅವ್ರ ಮನೆಕಡೆ ಎಲ್ಲಾ ಒಪ್ಪಿದ್ದಾರೆ. ' ..  ಅಂತ ನನ್ನ ಈ ಐತಿಹಾಸಿಕ ಭೇಟಿಯನ್ನ ತುಚ್ಚವಾಗಿ ನೋಡಿದ್ದೂ ಅಲ್ಲದೆ, ಸಂಬಂಧ ಕ್ಯಾನ್ಸಲ್ ಮಾಡಿಕೊಳ್ಳದ ಹಾಗೆ ಪ್ರೆಶರ್ ಕ್ರಿಯೇಟ್ ಮಾಡಿದಳು.

ಮನೆಯಲ್ಲಿ ಮಾತೇ ಆಡದಂತಿದ್ದವಳು!! - ಮೂರು ಸ್ಕೂಟಿಗಳ ಚೂಟಿ ಹುಡುಗಿಯರ ದಂಡಿನ ಜೊತೆಗೆ ಐಸ್ ಕ್ರೀಮ್ ಪಾರ್ಲರ್ ಗೆ ಬಂದಳು.  ಇವಳನ್ನೇನ ​ಮನೆಯಲ್ಲಿ ನೋಡಿದ್ದು ಅನ್ನೋ ಅನುಮಾನವೂ ಬಂತು. ಹುಡುಗಿಯ ಸ್ನೇಹಿತೆಯರೆಲ್ಲಾ​ ​ರಸ್ತೆಯಲ್ಲೆ​!!​ ನಿಂತು ವಿಷ್ ಮಾಡಿ ಹೊರಟು ಹೋದರು.

ಅವಳು ಜ್ಯುಸ್ ಕುಡಿದಳು. ನಾನು ಗಡ್ ಬಡ್ ಐಸ್-ಕ್ರೀಮ್ ತಿಂದು ತಪ್ಪು ಮಾಡಿದೆ.
ನಾಲಗೆ ಸರಿಯಾಗಿ ಹೊರಳುತ್ತಿರಲಿಲ್ಲ.​ ಅದರಲ್ಲೂ, ನನ್ನ ಕನ್ನಡ ಅವಳಿಗೆ ಅರ್ಥವಾಗುತ್ತಿದ್ದುದೂ ಕಮ್ಮಿ!!

ಅಂತೂ-ಇಂತು ಅದೇನು ಮಾತು-ಕಥೆಯಾಯಿತೋ... 'ಬೇಡ' ಅನ್ನೋಕೆ ಸರಿಯಾದ ಕಾರಣ ಸಿಗಲಿಲ್ಲ. 
******​ ​****​**​

ನಮ್ಮ ಜೀವನದಲ್ಲಿ ಬಹಳಷ್ಟು ಜನಗಳನ್ನ ಭೇಟಿ ಆಗ್ತಾನೆ ಇರ್ತೇವೆ. ತುಂಬಾ ದಿನಗಳ ಅಥವಾ ವರ್ಷಗಳ ಮಾತು-ಕಥೆ, ಅನ್ಯೂನ್ಯತೆಗಳ ನಂತರವಷ್ಟೇ, ನಮಗ್ಯಾರೊ ಇಷ್ಟವಾಗ್ತಾರೆ. ಅವರುಗಳ ಜೊತೆ ಸ್ನೇಹ ಬೆಳುಸ್ತೀವಿ. ಪದೆಪದೆ ಸಿಕ್ಕು, ಹರಟಬೇಕು ಅನ್ಕೋತೀವಿ. ಇಲ್ಲವಾದಲ್ಲಿ!! ಎಷ್ಟು ಬೇಕೋ ಅಷ್ಟಕ್ಕೆ ಸೀಮಿತವಾಗಿಟ್ಟು!! ಯಾರ ಕೈಗೂ ಸಿಗದೆ ನುಲುಚಿಕೊಂಡು ಬದುಕುತ್ತೇವೆ.

ಅಂಥಾದ್ರಲ್ಲಿ, ಯಾರು ಅಂಥ ಗೊತ್ತಿಲ್ಲ. ಏನು ಅಂಥ ಗೊತ್ತಿಲ್ಲ ... ಮದ್ವೆನೇ ಆಗಿ ಹೋಗಿದೆ.
ಸಾಯೋತಂಕ ಒಬ್ಬರನ್ನೊಬ್ಬರು ನೋಡುತ್ತಲೇ ಜೀವಿಸುವ ಅನಿವಾರ್ಯತೆ.

ನೋಡಿ-ಮಾತಾಡಿ.. ಒಪ್ಪಿಯಾದ ಮೇಲಲ್ಲವೇ ಮದುವೆಯಾಗಿದ್ದು ಅಂಥ ಕೇಳಿದರೆ!!
'ಹಾ!! ಅದೂ.. ಸರಿ', 
ಆದರೆ, ಒಬ್ಬರನ್ನೊಬ್ಬರು ಮೆಚ್ಚಿಸುವ ಭರದಲ್ಲಿ ಅರ್ಥವಾಗುವುದಾದರೂ ಏನು..?

ಹಂಗೇ.. ಮದ್ವೆ ಅನ್ನೋದು... ಅಕ್ಕಿ ಸ್ಯಾಮ್ಪಲ್ ನೋಡಿದಂಗೂ ಅಲ್ಲ... ಮೊದ್ಲು ಒಂದ್ ಕೆಜಿ ತಂದು ಅನ್ನ ಮಾಡಿ, ಆಮೇಲಿಂದ... ಸರಿ ಅನ್ಸುದ್ರೆ ಒಂದು ಮೂಟೆ ಹೊತ್ತು ತರೋಕೆ...

'ಒಂದು ಚಾನ್ಸು ' ಅಂತ ಇಬ್ಬರೂ ತಗಳಲೆ ಬೇಕಿತ್ತು. 
ಆದರೆ.. ಅದೃಷ್ಟವಂತ ಅನ್ಸತ್ತೆ!! ಲಕ್!! ಇತ್ತು.
ಬಲಿಯಾಗಿದ್ದು, ಬಂಗಾರದಂತಹ ಹುಡುಗಿಗೆ(ಬಂಗಾರಕ್ಕಿಂತ ಕೆಳಗೆ ಅವರೆಲ್ಲಿ ಒಪ್ತಾರೆ, ಅಲ್ವೇ!! ).

ಇಬ್ಬರಲ್ಲಿ .. ಒಬ್ಬರೂ ಮತ್ತೊಬ್ಬರಿಗೆ ತಕ್ಕವರಲ್ಲ.

ಅವಳು, ತನ್ನ ದಶಕಕ್ಕಿಂತ ಹೊಸಬಳು, ಪ್ರಾಕ್ಟಿಕಲ್ ಹುಡುಗಿ!!
ಮನೆತುಂಬಾ ಜನಗಳು ಇರ್ಬೇಕು ಅಂತ ಆಸೆ ಪಡೋ ಸಂಘ ಜೀವಿ. 

ನಾನು, ನನ್ನ ವಯಸ್ಸಿಗಿಂತ ಜಾಸ್ತಿ ಹಳಬನೇ, ಸೊಲ್ಪ ಮೂಡಿ!!
ಆದಷ್ಟು ಒಂಟಿಯಾಗಿರಲು ಇಷ್ಟ ಪಡುವ ಭಾವಜೀವಿ.      

ಪರಸ್ಪರರು ಹಂಚಿಕೊಳ್ಳಬಹುದಾದ ಯಾವುದೇ ಸಮಾನ ಅಭಿರುಚಿಗಳಿಲ್ಲ.

ಹೀಗಿರುವಾಗ.., ಸಂಸಾರದ ನೌಕೆ ಮೀಯುತ್ತಿರುವುದಾದರೂ ಹೇಗೆ..?
  

***** *****
ನಾ.. ನು!! ಅಂದ್ರೆ ಜೀವ ಬಿಡ್ತಾಳೆ.   ಆ ಆಸೆಯ ಕಣ್ಣುಗಳು ಪದೆ ಪದೇ ಅಚ್ಚರಿಗೊಳ್ಳೋದನ್ನ  ಕಾಣುವುದಕ್ಕಾಗಿಯೇ... ನನ್ನ ಉಳಿದ ಆಯಸ್ಸನ್ನ  ರಿಸರ್ವ್ ಆಗಿ ಇಡಬೇಕು ಅನ್ನಿಸತ್ತೆ.

ಅವಳ ಹುಚ್ಚು ಪ್ರೀತಿಯು, ನನ್ನ ತಟಸ್ಥ ವಿಡಂಬನೆಯೂ - ಸರಸ!! ಸಮರಸದ ವಸಂತಗಳು ಮುಗಿದದ್ದು ತಿಳಿಯದಷ್ಟು ವೇಗ ಜೀವನಕ್ಕೆ. ಜಗಳ, ಮುನಿಸು, ಕೋಪ, ಕ್ರೋಧ, ಕಾಳಜಿ, ಪ್ರೀತಿ, ಮುದ್ದು - ಒಂದು ಜಾಯಮಾನಕ್ಕಾಗುವಷ್ಟು ಭಾವಗಳ ನಿಗಿನಿಗಿ ತಿಕ್ಕಾಟ.

ನನ್ನ ಬಗ್ಗೆ ತುಸು ಹೆಚ್ಚೆ ಅರ್ಥ ಮಾಡಿಕೊಂಡಿರುವಂತಿದೆ. ಏನಾದರೂ ಒಂದು ಇನ್ಸಿಡೆಂಟ್ ಹೇಳುದ್ರೆ ಸಾಕು... ಅರ್ಧದಲ್ಲಿಯೇ ತಡೆದು -​ ​
'ಹಿಂಗ್ ಹಿಂಗೇ... ಮಾಡಿರ್ತೀಯ' ಅಂತ ಉಳಿದದ್ದನ್ನು ವಿವರಿಸಿ, ತಲೆಗೆ ಮೊಟಕುತ್ತಾಳೆ.

ಒಂದು ಕ್ಷಣ, ಸಂಸಾರವೆಲ್ಲಾ ತಿಳಿದವಳಂತೆ, ಮನೆ ಯಜಮಾನಿಯಾಗುತ್ತಾಳೆ.
ಮತ್ತೊಂದು ಕ್ಷಣ ಮುದುಡಿ ಹೋಗಿ, ಮುದ್ದಾಗಿ ಎಳೆ ಮಗುವಿನಂತೆ ಕೈಯೊಳಗೆ ಕಳೆದು ಹೋಗುತ್ತಾಳೆ.

ಒಂದು ಕಡೆ ಪೈಸೆ ಪೈಸೆ ಉಳಿಸಿ, ಮುಂದಿನ ಜೀವನದ ಬಗ್ಗೆ ಅತಿಯಾಗಿ ಯೋಚಿಸುವಂತೆ ನಟಿಸುತ್ತಾಳೆ,
ಮತ್ತೊಂದು ಕಡೆ ಈ ಕಿತ್ತೊಗಿರೊ ಬೈಕ್ ಯಾವಾಗ ಬದಲಿಸ್ತಿರಾ ಅಂತಾಳೆ.

ನಾ ಕಂಡುಕೊಂಡಂತೆ... ಅಮ್ಮನಿಗೂ-ಮಡದಿಗೂ ಇರುವ ಒಂದು ಸಾಮ್ಯತೆ ಅಂದ್ರೆ -
ಇಬ್ಬರೂ ಪ್ರಶ್ನೆ ಮಾಡುವವರೇ...
ವ್ಯತ್ಯಾಸ ಅಂದ್ರೆ -
ಒಬ್ಬರು!!(ಅಮ್ಮ) ಏನೇ..  ಉತ್ತರ ಹೇಳಿದ್ರೂ ನಂಬುತ್ತಿದ್ದರು.
ಇನ್ನೊಬ್ಬರು!!(ಮಡದಿ) ಏನೇ ಉತ್ತರ ಹೇಳಿದ್ರು.. ತಿರುಗ ಅದಕ್ಕೆ ಮತ್ತೊಂದು ಪ್ರಶ್ನೆ ಕೇಳ್ತಾರೆ.
ಟೈಮ್ ಮತ್ತು ಸ್ಪೇಸ್ ನಲ್ಲಿ ಟ್ಯಾಲಿ ಆಗದೆ ಇರೋ ಎರಡು ಉತ್ತರಗಳನ್ನ ನನ್ನಿಂದಲೇ ಕಕ್ಕಿಸಿ... ಸಿಕ್ಕಿಬಿಳುವಂತೆ ಮಾಡುವಲ್ಲಿ.. ಹೆಂಡತಿ ನಿಪುಣಳು.. ಶರಣಾಗದೆ, ಬೇರೆ ವಿಧಿ ಇರುವುದಿಲ್ಲ!! 😀

ಮದುವೆಗೆ ಮುಂಚೆ ಒಂಟಿಯಾಗಿದ್ದಾಗ.. ನಮಗೆ ನಮ್ಮದೇ ಆದ ಪ್ರೈವೇಟ್ ಸ್ಪೇಸ್ ಇರತ್ತೆ.
ಇಷ್ಟ ಬಂದಂಗಿರೋದು!! ಉಂಡಾಡಿಗುಂಡನ ಥರ!! ಮದುವೆ ಆದಮೇಲು ಕೂಡ ಅಂಥದ್ದೇನಾದ್ರು ಉಳಿದುಕೊಳ್ಳಬಹುದು, ಅಂತ ನಿರೀಕ್ಷಿಸಿದ್ರೆ.. ಅದೊಂದು ಮೂರ್ಖತನ.
ಈ ಸಂಸಾರದ ಮಾಯೆಯೊಳಗೆ ಕಳೆದೇ ಹೋಗಿರುವ ಭಯ, ಕೆಲವು ಸಾರಿ ಗಾಬರಿ ಹುಟ್ಟಿಸತ್ತೆ.
ಮತ್ತೆ ನನ್ನನ್ನ ಹುಡುಕಿಕೊಂಡು ಹೊರಟಾಗ.... 'ಬರ್ತಾ!! ಒಂದು ಲೀಟರ್ ಹಳದಿ ಪ್ಯಾಕೆಟ್ ಹಾಲು ತಗೊಂಡು ಬಾ' ಅನ್ನೋ ಹೆಂಡತಿಯ ಫೋನ್ ಕಾಲು, ಫ್ರೀ ಫಾಲ್ ತರ ಭ್ರಮೆಗಳನ್ನು ಕಳಚಿಸಿ ನೆಲಕ್ಕೆ ಹಾಕತ್ತೆ.

ಮದುವೆ ಮೂಲಕ​ ಶುರುವಾಗಿರುವ...  ​ ಹೊಸ ದಿಗಂತದ ಕಡೆಗಿನ ಪಯಣಕ್ಕೀಗ ಎರಡು ವರ್ಷಗಳ ಸಂಭ್ರಮ.

ಎರಡು ಮಳೆಗಾಲ ಮುಗಿಸಿರೋದು ಅಂದ್ರೆ ತಮಾಷೇನಾ!!

Comments

 1. This comment has been removed by the author.

  ReplyDelete
 2. ನನಗೆ ಸಿಕ್ಕಿರೋ ಯಜಮಾನಿನೂ ನಿಮ್ಮಾಕೆನೂ ಒಂದೇ ಜಾತಿಗೆ ಸೇರಿದವರು ಮಗ. Mostly ಹೆಂಡತಿ ಜಾತಿವೆಲ್ಲಾ ಹೀಗೆನಾ ಅಂತಾ. ಅರ್ಥ ಮಾಡಿಕೊಳ್ಳಕಂತೂ ಖಂಡಿತಾ try ಮಾಡಲ್ಲ.
  ಒಳ್ಳೆ ಬರಹ

  ReplyDelete
  Replies
  1. Thank you 😀 😀😀
   ಒಹೋ... ಎಲ್ಲರ ಮನೆ ಕಥೆನು ಇದೇನಾ.. ಇರ್ಬೇಕು ಇರ್ಬೇಕು, ಹೆಣ್ ಹೈಕಳ ವಿಚಾರ ಲಹರಿ ಒಂದೇ ಇರೋದ್ರಿಂದ, ಈ ಅನುಭವಗಳು ಬಹು ಬೇಗ ಕನೆಕ್ಟ್ ಆಗಿದಾವೆ

   Delete

Post a Comment

Popular posts from this blog

ಕರಾಂತಿ ಹುಡುಗಿ

ಕ್ರಿಸ್-ಮಸ್ ರಜೆಗೆ ಅಂತ ಊರಿಗೆ ಹೋಗಿದ್ದೆ. ಒಟ್ಟು ನಾಲ್ಕು ರಜಾ ದಿನಗಳು ಒಟ್ಟಿಗೆ ಸಿಕ್ಕಿದ್ದವು. ಅಪ್ಪನ ಹಳೇ ಸುಜುಕಿ ಬೈಕು ಹತ್ತಿ ಸಿಟಿ ಸುತ್ತಿಕೊಂಡು ಬರೋಣ ಅಂತ ಹೊರಟೆ. ಮಂತ್ರಿಮಂಡಲದ ದೊಡ್ಡ-ದೊಡ್ಡ ತಿಮಿಂಗಿಲಗಳಿಗೆ ಶಿವಮೊಗ್ಗ ತವರೂರು ಆಗಿದ್ದರಿಂದಲೋ ಏನೋ, ನಗರದ ಸಂಪೂರ್ಣ ಜೀರ್ಣೋದ್ಧಾರ ಕೆಲಸ ನಡೆಯುತ್ತಿತ್ತು. ಯಾವ ರಸ್ತೆಯಲ್ಲಿ ಬೈಕು ಓಡಿಸಿದರೂ, ರಸ್ತೆ ದಿಢೀರನೆ ಅಂತ್ಯಗೊಂಡು " ಕಾಮಗಾರಿ ನಡೆಯುತ್ತಿದೆ " ಎಂಬ ನಾಮಫಲಕ ಕಾಣಿಸುತ್ತಿತ್ತು. ಗಾಂಧಿ ಬಜಾರಿನ ಬಳಿ ಬೈಕು ನಿಲ್ಲಿಸುತ್ತಿರುವಾಗ, ಸ್ಕೂಟಿಯೊಂದು ಸರ್ರನೆ ಹೋದಂತಾಯಿತು. ಸ್ಕೂಟಿಯ ಮೇಲಿದ್ದ ಪರಿಚಿತ ಮುಖ, ನನ್ನ ಶಾಲಾ ದಿನಗಳ ಗೆಳತಿ ಶ್ರೀವಿದ್ಯಾ ಎಂದು ಗುರುತಿಸುವುದು ಕಷ್ಟವಾಗಲಿಲ್ಲ. ಬೈಕ್ ಸ್ಟಾರ್ಟ್ ಮಾಡಿದವನೇ ಅವಳು ಹೋದ ದಿಕ್ಕಿನ ಕಡೆಗೆ ಹೊರಟೆ. ಬಹಳಷ್ಟು ದೂರ ಸಾಗಿಬಿಟ್ಟಿದ್ದಳು. ತುಂಗಾ ನದಿ ಸೇತುವೆಯ ಮೇಲೆ ಸ್ಕೂಟಿಯನ್ನು ಸಮೀಪಿಸಿದಾಗ ಅದರ ಮಿರರ್ ನಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಡೌಟೇ ಇಲ್ಲ!! ಅವಳೇ ಶ್ರೀವಿದ್ಯಾ!! ಕೊನೆಯ ಬಾರಿ! ಅಂದರೆ ಐದು ವರುಷಗಳ ಹಿಂದೆ ಗುಡ್ಡೆಕಲ್ಲು ಜಾತ್ರೆಯಲ್ಲಿ ನೋಡಿದ್ದಲ್ಲವೇ. ರಾತ್ರಿ ಒಂಭತ್ತೋ, ಹತ್ತೋ ಆಗಿತ್ತು. ಸಿ-ಇ-ಟಿ ಕೋಚಿಂಗ್ ಕ್ಲಾಸು ಮುಗಿಸಿಕೊಂಡು, ಜಾತ್ರೆ ನೋಡಲು ಗುಡ್ಡೇ ಕಲ್ಲಿಗೆ ಹೋಗಿದ್ದೆ. ಜಾತ್ರೆಯಲ್ಲಿ, ಹಳೆ ಶಿಲಾಯುಗದ ಪಳಯುಳಿಕೆಗಳಂತಿದ್ದ ತೂಗುಯ್ಯಾಲೆಯನ್ನು ಇಬ್ಬರು ದಾಂಡಿ

ಮದುವೆಗಳು ಮಧುಮಕ್ಕಳು

ಈ ಇಪ್ಪತ್ತೈದರ ಆಜುಬಾಜಿನ ವಯಸ್ಸೇ ಹಾಗೆ.., ಓರಗೆಯವರ, ಗೆಳೆಯರ ಮದುವೆಗಳ ಸುಗ್ಗಿ. ಗೆಳೆತನದ ಮರ್ಜಿಗೆ ಸಿಕ್ಕು ಮದುವೆಗಳಿಗೆ ಹೋಗಲೇಬೇಕು ಅನ್ನುವ ಕಟ್ಟುಪಾಡುಗಳು ಇಲ್ಲದೇ ಹೋದರು, ಮದುವೆ ಅನ್ನೋ ಹೆಸರಲ್ಲಿ ಒಟ್ಟಿಗೆ ಸೇರುವ ವಿವಿಧ ಗೆಳೆಯರ ಸಲುವಾಗಿ(ಮತ್ತು ಮತ್ತೊಂದು ಕಾರಣಕ್ಕಾಗಿ ) ಮದುವೆಗಳಿಗೆ ಹೋಗಲೇಬೇಕಾಗುತ್ತದೆ. ಸ್ವಲ್ಪ ಹೊತ್ತು, ಮದುವೆ ಸುತ್ತು, **ಪೋಷಾಕು** ಪಕ್ಕದ ಮನೆಯ ಗೆಳೆಯನ ಮದುವೆ. ರಾತ್ರಿಯಿಡಿ ಪ್ರಯಾಣ ಮಾಡಿ, ಬೆಳಗಾಗೆ ಊರಿಗೆ ಬಂದರೆ, ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ಅದಾಗಲೇ ಮದುವೆಗೆ ಹೋಗಿದ್ದರು. ನಾನೂ ಹೊರಟು ನಿಂತು, ಬಟ್ಟೆ ಗೆ ಇಸ್ತ್ರೀ ಹಾಕಲು ಹೋದೆ. ಕಾದಿದ್ದ ಐರನ್ ಬಾಕ್ಸು, ಇಕ್ಕುತ್ತಿದ್ದಂತೆ, ಬಟ್ಟೆ ಬುಸ್ಸೆಂದು ಬಾಕ್ಸಿಗೆ ಮೆತ್ತಿಕೊಂತು.ಬಟ್ಟೆ ಮಟಾಷ್. ಕೈಗೆ ಸಿಕ್ಕ ಟಿ ಷರ್ಟು, ಪ್ಯಾಂಟು ಹಾಕಿ ಕನ್ನಡಿ ಮುಂದೆ ನಿಂತೆ. ಸೂಪರ್, ಬೊಂಬಾಟ್ ಅಂತೇನೂ ಅನ್ನಿಸದಿದ್ದರೂ...,ಬೇಜಾನ್ ಆಗೋಯ್ತು ಇವು ಅಂತಲಾದರೂ ಅನ್ನಿಸುವಂತಿತ್ತು. ಮದುವೆ ಸಮಾರಂಭದಲ್ಲಿ ಸಂಬಂಧಿಗಳು, ಗೆಳೆಯರು ಹೀನಾಮಾನವಾಗಿ ರೇಗಿಸಿದರು. " ನಿನ್ನ ಯಾರಾದ್ರು ಇಂಜಿನಿಯರ್ ಅಂತಾರ...? ಮದುವೆಗೆ ಹಿಂಗಾ ಬರೋದು" .. ಇತ್ಯಾದಿ .. ಇನ್ನು ಮುಂತಾದವುಗಳು. ಅಯ್ಯೋ, ಕನ್ನಡಿ ಮುಂದೆ ನಿಂತಾಗ ಇವರಿಗೆ ಅನ್ನಿಸುವಂತೆ ನನಗೇಕೆ ಇವು 'ಸರಿ ಇಲ್ಲ', ಅಂತ ಅನ್ನಿಸಲೇ ಇಲ್ಲ. ಅರ್ಥ ಆಗಲಿಲ್ಲ. ನನ್ನನ್ನು ನೋಡುತ್ತಿದ್ದಂತೆ ಅಮ

ಇಬ್ಬರು ಪೋಕರಿ ಮಕ್ಕಳ ಜೊತೆಗೆ

ಮನೆಯ ಹಿಂದಿನ ಪಪ್ಪಾಯ ಗಿಡದ ಬುಡದಲ್ಲಿ ಹುಲ್ಲಿನ ನಡುವೆ ಇಬ್ಬರು ಪುಂಡ ಹುಡುಗರು ಆಟವಾಡುತ್ತಿದ್ದರು. ಒಬ್ಬನ ಹೆಸರು ಅಭಿ ಒಂದನೆ ಕ್ಲಾಸು. ಮತ್ತೊಬ್ಬನ ಹೆಸರು ಆಕಾಶ್ ಎಲ್ ಕೆ ಜಿ. ಮರಿ ಬ್ರದರ್ಸ್. ಅಕ್ಕನ ಮಕ್ಕಳು. ಶನಿವಾರದ ಶ್ವೇತ ಸಮಾನ-ವಸ್ತ್ರವನ್ನೂ ಬಿಚ್ಚದೆ ಮಣ್ಣಿನಲ್ಲಿ ಆಡುತ್ತಿದ್ದರು. ಪಾಪ ಸರ್ಫ್-ಎಕ್ಸೆಲ್-ನ 'ಕಳೆ ಕೂಡ ಒಳ್ಳೆಯದು' ಜಾಹಿರಾತನ್ನು ಅತಿಯಾಗಿ ನೋಡಿದ್ದಿರಬೇಕು. ಭಲೇ ತರ್ಲೆಗಳು. ತೋಟದ ಮುಟ್ರು-ಮುನಿ ಮುಳ್ಳುಗಳ ಮೆಲೆಯೇ ಬರಿಗಾಲಲ್ಲಿ ನಡೆದಾಡಬಲ್ಲರು. ಬೇಲಿ ಅಂಚಿನಲ್ಲಿ ಸರಿದಾಡುವ ಪಟ್ಟೆ ಪಂಜ್ರ ಮರಿಹಾವುಗಳನ್ನು ಹೊಡೆದು, ಕಡ್ಡಿಯಲ್ಲಿ ಹಿಂಸಿಸುತ್ತಾ ಬೆರಗುಗಣ್ಣಿನಿಂದ ನೋಡುವರು. ತಾತನ ಹೆಗಲೇರಿ ಕುಳಿತು, ನೆಲ ಉಳುವುದರಿಂದ ಹಿಡಿದು......  ಬಿಲ ತೋಡುವುದರ ವರೆಗೆ ಪ್ರಾಕ್ಟಿಕಲ್ ಜ್ನಾನವನ್ನು ಸಂಪಾದಿಸುತ್ತಿರುವರು. ಆದರೆ ಈ ಪುಟಾಣಿಗಳು ಮೇಸ್ಟ್ರು ಹೊಗಳುವ ರೇಂಜಿಗೆ, ಮಾರ್ಕ್ಸು ತೆಗೆಯುತ್ತಿಲ್ಲಾ ಎಂಬುದೇ ನವ ಜಾಗತಿಕ ಯುಗದ ಅಪ್ಪ-ಅಮ್ಮನ ಬಾಧೆ. ' ಏನ್ರೋ ಮಾಡ್ತಿದ್ದೀರ ಅಲ್ಲಿ. ?' ಕೂಗಿದೆ. ' ಹಾ ಏನೋ ಮಾಡ್ತಿದೀವಿ. ನಿಂಗೇನು?? ' ಎಕೋ ಮಾದರಿಯಲ್ಲಿ ಎರಡೆರಡು ಉತ್ತರಗಳು ಅಣ್ಣ ತಮ್ಮರಿಂದ ಬಂದವು. ಹತ್ತಿರ ಹೋಗಿ ನೋಡಿದೆ. ಕಿರಾತಕರು ತಾತನ ಶೇವಿಂಗ್ ಬ್ಲೇಡು ಕದ್ದು ತಂದು ಹುಲ್ಲು ಕಟಾವು ಮಾಡುತ್ತಿದ್ದರು. 'ಲೇ ಉಗ್ರಗಾಮಿಗಳ, ಕೊಡ್ರೋ ಬ್ಲೇಡು. ಡೇಂಜರ್ ಅದು. ಕೈ ಕುಯ್ದುಬ

ಬಿಸಿಲುಕುದುರಿ-ಸವಾರಿ ; ಚೆನ್ನೈ ಬಸ್ ಪಯಣದ ಒಂದು ಅನುಭವ

ಬೂಟು ಪಾಲೀಶ್ ಮಾಡಿ, ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ‘ಇವತ್ತಾದರು MTC ಬಸ್ಸಿನಲ್ಲಿ ಸೀಟು ಸಿಗಬಹುದು’ ಎಂಬ ಆಸೆ ಇತ್ತು. ರಸ್ತೆಯಲ್ಲೆಲ್ಲಾ ನಿಂತ-ನೀರಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು, ಜಿಗಿಯುತ್ತಾ ಬೂಟ್ಸು ನೆನೆಯದಂತೆ ಕೃತಕ ಕೆರೆಯನ್ನು ದಾಟಿದೆ. ಬೆಳಗಿನ ತಿಂಡಿಗಾಗಿ ಹೋಟೆಲಿನ ಕಡೆ ಮುಖ ಮಾಡಿದೆ. ತೂಡೆ ಕಾಣಿಸುವಂತೆ ಲುಂಗಿಯನ್ನು ಮೇಲೆತ್ತಿಕೊಂಡು, ಸಪ್ಲೈಯರು ಬಕೇಟು-ಸೌಟು ಹಿಡಿದು ಅತ್ತಿತ್ತ ತಿರುಗಾಡುತ್ತಿದ್ದ. ಉಪಹಾರದ ಮನಸ್ಸಾಗದೆ ಮಂಗಳ ಹಾಡಿ ಅಲ್ಲಿಂದ ಹೊರಟೆ. ರಸ್ತೆಯ ಮಗ್ಗುಲಲ್ಲಿಯೇ ಕೋಳಿ-ಸಾಗಿಸುವ ಲಾರಿಯಿಂದ ಬರುತ್ತಿದ್ದ, ಸುವಾಸನೆಯ ನೆರಳಲ್ಲಿ, ‌ಯಾತ್ರಿ-ಸಮೂಹ ತಮ್ಮ ತಮ್ಮ ನಂಬರಿನ ಬಸ್ ನಿರೀಕ್ಷೆಯಲ್ಲಿ ನಿಂತಿದ್ದರು. ದೇವರು ಕೊಟ್ಟ ವಾಸನಾ-ಗ್ರಂಥಿಯನ್ನು ಶಪಿಸುತ್ತಾ, ಬಸ್ ಸ್ಟಾಪಿನಲ್ಲಿ ಅವರನ್ನು ಕೂಡಿಕೊಂಡೆ. ಬಸ್ ಸ್ಟಾಪಿನ ಎದುರಿಗೆ ಏಳೆಂಟು ಅಡಿ ಎತ್ತರದ ಕಟೌಟು ನಿಲ್ಲಿಸಿದ್ದರು. ಯಾರಪ್ಪಾ ಈ ಮಹಾನುಭಾವ ಎಂದು ಆ ಎತ್ತರದ ಕಟೌಟಿನ ಅಡಿಯಲ್ಲಿ ಬರೆದಿದ್ದ ಅಕ್ಷರವನ್ನು ಓದಲು ಪ್ರಯತ್ನಿಸಿದೆ. ಜಿಲೇಬಿಗಳನು ಜೋಡಿಸಿಟ್ಟಂತೆ ಕಾಣಿಸುತ್ತಿದ್ದ, ಲಿಪಿಯಿಂದ ಒಂದು ಪದವನ್ನೂ ಗ್ರಹಿಸಲಾಗಲಿಲ್ಲ. ತೆಲುಗಾಗಿದ್ರೆ ಸ್ವಲ್ಪ ಮಟ್ಟಿಗೆ ಓದಬಹುದಾಗಿತ್ತು. ಕಟೌಟಿನಲ್ಲಿದ್ದ ಹೂವು ಮತ್ತು ದೀಪದ ಚಿತ್ರವನ್ನು ನೋಡಿ, ಇವರು ಇತ್ತೀಚೆಗೆ ಹೊಗೆ ಹಾಕಿಸಿಕೊಂಡವರಿರಬಹುದು ಎಂದು

ತೀರದ ಹುಡುಕಾಟ

ಘಂಟೆ ರಾತ್ರಿ ಹತ್ತಾಗಿತ್ತು. ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ ಆರಂಭಿಸಿತು. ತಲೆಯಲ್ಲಿ ನೂರೆಂಟು ದ್ವಂದ್ವಗಳು. 'ಅರೆ ಒಂದು ಹಕ್ಕಿ ಕೂಡ ತನ್ನ ಮರಿಗೆ ರೆಕ್ಕೆ ಬಲಿಯುವವರೆಗೂ ಗೂಡಿನಲ್ಲಿ ಕೂಡಿಹಾಕಿಕೊಂಡು ಗುಟುಕು ಕೊಡುತ್ತದೆ, ನಂತರ ಹಾರಲು ಬಿಡುತ್ತದೆ.' ​ಹೀಗಿರುವಾಗ ರೆಕ್ಕೆ ಮೂಡಿ ವರುಷಗಳು ಕಳೆದರೂ ನನ್ನನ್ನು ಹಾರಲು ಬಿಡಲಿಲ್ಲವೇಕೆ.? ಅರೆ!! ಮನುಷ್ಯರು ಎನಿಸಿಕೊಂಡ ಅಪ್ಪ-ಅಮ್ಮಗಳು ತಮ್ಮ ಮಕ್ಕಳನ್ನು ನೋಡಿಕೊಂಡಿದ್ದರಲ್ಲಿ, ಆರೈಕೆ ಮಾಡಿದ್ದರಲ್ಲಿ ವಿಶೇಷತೆ ಏನಿದೆ. ? ಎಲ್ಲಾ ಅವರವರ ಕೆಲಸ ಮಾಡುತ್ತಿದ್ದಾರೆ. ಅದೇನೋ ನಮಗಾಗಿ ತಮ್ಮ ಜೀವನವನ್ನೇ ಸವೆಸುತ್ತಿರುವಂತೆ ನಡೆದುಕೊಳ್ಳುವರಲ್ಲಾ... ನಿನಗೊಂದು ಒಳ್ಳೆಯ ಭವಿಷ್ಯ ಕಟ್ಟಬೇಕು ಎಂಬ ಸುಳ್ಳು ಆಸೆಗಳು. ನಾನಿನ್ನು ಚಿಕ್ಕವನಾ..? ನನ್ನ ಆಲೋಚನೆಗಳು ಎಲ್ಲರಿಗಿಂತಲೂ.., ಎಲ್ಲದಕ್ಕಿಂತಲೂ ಭಿನ್ನ. ಏನನ್ನಾದರೂ ಸಾಧಿಸುವ ಹೊತ್ತಿನಲ್ಲಿ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಬೊಂಬೆಯನ್ನಾಗಿಸಿದರು. ಅಮ್ಮ ಹೇಳುವಳು ‘ ಅಪ್ಪ ನಿನ್ ಮೇಲೆ ಅತೀ ಪ್ರೀತಿ ಇಟ್ಟಿದಾನೆ ’. ಎಲ್ಲರೂ ಅವರವರ ಸ್ವಾರ್ಥದ ಘನತೆ ಕಾಪಾಡಿಕೊಳ್ಳುವುದಕ್ಕೆ ನನ್ನನ್ನು ಬಲಿಪಶು ಮಾಡುತ್ತಿರುವರು. ಛೇ ಭವಿಷ್ಯದ ವಿಶ್ವಮಾನವನಿಗೆ ಎಂಥಹ ದುರಂತ ಪೋಷಕರು. ಯಾರೋ ನನ್ನನ್ನು ಕೈ ಬೀಸಿ ಕರೆಯುತ್ತಲಿದ್ದಾರೆ. ತಮ್ಮ ಅಸಹಾಯಕ ತೋಳುಗಳನ್ನು ಚಾಚಿ ಆಸರೆಯ ಅಪ್ಪುಗೆಗಾಗಿ ಹಂಬಲ

ಅತ್ಯಾಚಾರ ಮತ್ತು ಸಾಮಾಜಿಕ ಕಳಂಕ

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಹಳ ದಿನಗಳ ನಂತರವೂ, ಸೊಹೈಲಾ ಅದರ ಬಗ್ಗೆ ನೆನೆಯುತ್ತಾ ಈ ರೀತಿ ಬರೆಯುತ್ತಾಳೆ. (ಸೊಹೈಲ ಮತ್ತು ಅವಳ ಗೆಳತಿಯನ್ನು ಬೆಟ್ಟದ ಮೇಲೆ ಹೊತ್ತು ಹೋಗಿ ಅತ್ಯಾಚಾರ ನಡೆಸಿರಲಾಗುತ್ತದೆ.)  ' ಅಭದ್ರತೆ; ಅಸಹಾಯಕತೆ; ದೌರ್ಬಲ್ಯ; ಭಯ ಮತ್ತು ಕೋಪ, ಇವುಗಳ ಜೊತೆ ನಾನು ಯಾವಾಗ್ಲೂ ಹೋರಾಡ್ತಾನೆ ಇರ್ತೇನೆ. ಕೆಲವು ಸಾರಿ ಒಬ್ಬಳೇ ನಡ್ಕೊಂಡ್ ಹೋಗುವಾಗ, ಹಿಂದೆ ಇಂದ ಬಂದ ಯಾವುದೋ ಹೆಜ್ಜೆ ಸಪ್ಪಳದ ಸದ್ದು ನನ್ನಲ್ಲಿ ಭಯ ಮೂಡಿಸತ್ತೆ. ಅದೆಲ್ಲಿ, ಕಿರುಚಿ ಬಿಡುತ್ತೇನೊ ಅಂತ ಹೆದರಿ ನನ್ನ ತುಟಿಗಳನ್ನ ಬಿಗಿದು ಬಿಡುತ್ತೇನೆ. ಕುತ್ತಿಗೆ ಸುತ್ತುವ ಸ್ಕಾರ್ವ್ಸ್ ಹಾಕೋದಕ್ಕೂ ಹಿಂಜರಿಯುತ್ತೇನೆ. ಯಾಕಂದ್ರೆ ಅದ್ಯಾರೋ ನನ್ನ ಕುತ್ತಿಗೆ ಹಿಸುಕುತ್ತಿರುವಂತೆ ಭಾಸವಾಗತ್ತೆ. ಸೌಹಾರ್ದ ಸ್ಪರ್ಷಗಳಲ್ಲೂ ಕಾಮದ ವಾಸನೆ ಬರತ್ತೆ. ' ಎರಡು ಕ್ಷಣದ ಕಾಮ ತೃಷೆ, ಒಬ್ಬರ ಜೀವನವನ್ನೇ ಹೇಗೆ ಪ್ರಭಾವಿಸಬಲ್ಲದು. ಅದರಲ್ಲೂ ಆಗತಾನೆ ಪ್ರಪಂಚಕ್ಕೆ ಪರಿಚಿತಗೊಳ್ಳುತ್ತಿರುವ ಯುವ ಮನಸ್ಸು, ಮತ್ತೆಂದೂ ಚೇತರಿಸಿಕ್ಕೊಳ್ಳಲಾಗದಂತೆ ವಿಕಾರಗೊಂಡುಬಿಡುತ್ತದೆ. ರೇಪ್ ಅಂದ್ರೆ ಕೇವಲ ಒಬ್ಬಳ ಒಪ್ಪಿಗೆ ಇಲ್ಲದೆ, ಆ ದೇಹದ ಮೇಲೆ ನಡೆಯುವ ಸೆಕ್ಸು ಮಾತ್ರ ಅಲ್ಲ. ಸಿಕ್ಕ ಅವಕಾಶದಲ್ಲಿ ಶೋಷಿಸಿಬಿಡಬೇಕು, ಅನ್ನುವ ವಿಕೃತ ಮನಸ್ಥಿತಿ. ಅದು ನಮ್ಮಂತುಹುದೇ ಒಂದು ಮನುಷ್ಯ ಜೀವಿಯನ್ನ ಮಾನಸಿಕವಾಗಿ ಹೊಸಕಿ ಹಾಕುವ ಪ್ರಕ್ರಿಯೆ.  ಬಹುಷಃ ಹಳೇ ಸಿನಿಮಾಗ

ತುಂಗಭದ್ರ ; ಬಿಟ್ಟರೂ ಬಿಡದ ಇಬ್ಬರು ಗೆಳತಿಯರು

ಸರಳ ಮತ್ತು ವಿಮಲಾ ಚಿಕ್ಕ೦ದಿನಿ೦ದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒ೦ದೇ ಬೆ೦ಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕ೦ಡು ಇಬ್ಬರ ಮನೆಯವರೂ , ಇವರನ್ನು ಒ೦ದೇ ಮನೆಯ ಅಣ್ಣ ತಮ್ಮರಿಗೆ ಕೊಟ್ಟು ಮದುವೆ ಮಾಡಿ, ಇಬ್ಬರಿಗೂ ತ೦ದಿಡಬೇಕು ಎ೦ದು ಕುಹುಕವಾಡುತ್ತಿದ್ದರು. ಪ್ರತಿ ಬಾರಿಯ೦ತೆ ಈ ಬಾರಿಯೂ ಇಬ್ಬರೂ ಕೂಡ್ಲಿ ಜಾತ್ರೆಗೆ ಹೋದರು. ಕೂಡ್ಲಿ!!! ತು೦ಗೆ ಮತ್ತು ಭದ್ರೆಯರು ಸೇರುವ ತಾಣ. ಪಶ್ಚಿಮ ಘಟ್ಟದಲ್ಲಿರುವ ವರಾಹ ಪರ್ವತದ ನೆತ್ತಿಯಲ್ಲಿ ಒಟ್ಟಿಗೆ ಜನಿಸುವ ಈ ಗೆಳತಿಯರು ಹುಟ್ಟುತ್ತ ಬೇರಾಗಿ, ಹರಿಯುತ್ತ ದೊಡ್ಡವರಾಗಿ... ಕೂಡ್ಲಿಯಲ್ಲಿ ಬ೦ದು ಒ೦ದಾಗುವರು. ಇಲ್ಲಿ೦ದ ಮು೦ದಕ್ಕೆ ಎರಡು ದೇಹ, ಒ೦ದು ಸೆಳೆತದ೦ತೆ ತು೦ಗಭದ್ರೆಯಾಗಿ ಮು೦ದುವರೆಯುವರು. ಸರಳ ಮತ್ತು ವಿಮಲಾ ಚಿಕ್ಕಂದಿನಿಂದಲೂ ಆಪ್ತ ಗೆಳತಿಯರು. ಓರಗೆಯವರು ಮತ್ತು ಅಕ್ಕಪಕ್ಕದ ಮನೆಯವರು. ಒಬ್ಬರನ್ನು ಬಿಟ್ಟು ಒಬ್ಬರು ಇರದಿರುವಷ್ಟು ಆತ್ಮೀಯತೆ. ಕಾಲೇಜಿನ ಮೆಟ್ಟಿಲು ಹತ್ತಿದ್ದೂ ಒಟ್ಟಿಗೆ ಮತ್ತು ಕುಳಿತುಕೊಳ್ಳುತ್ತಿದ್ದುದು ಒಂದೇ ಬೆಂಚಿನಲ್ಲಿ. ವಿಮಲಾ ಕಟ್ಟಿದ ಹೂವನ್ನೇ ಸರಳ ಮುಡಿಯುತ್ತಿದ್ದುದು. ಇವರ ಸ್ನೇಹವನ್ನು ಕಂಡು ಇಬ್ಬರ ಮನೆಯವರೂ, ಇವರನ್ನು ಒಂದೇ ಮನೆಯ ಅಣ್ಣ ತ

ಎಮ್ಮೆ ಕಾನೂನು ; ಜಸ್ಟಿಸ್ ಡೀಲೈಡ್ ಈಸ್ ಜಸ್ಟಿಸ್ ಡಿನೈಡ್

'ಜನನ ಪ್ರಮಾಣ ಪತ್ರ' ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿಂಗಳುಗಳೇ ಕಳೆದಿದ್ದವು. ನೋಟರಿ ಸರೋಜಮ್ಮ ರನ್ನು ಕಂಡು 'ನಾನು ಹುಟ್ಟಿರುವುದು ಸತ್ಯ ಎಂದು ಇರುವಾಗ,  ಎಲ್ಲೋss ಒಂದು ಕಡೆ ಜನನ ಆಗಿರಲೇಬೇಕಾಗಿಯೂ,  ಸೊ ಅದನ್ನು  ಪರಿಗಣಿಸಿ ದಾಖಲೆ ಒದಗಿಸಬೇಕಾಗಿಯೂ ' ಕೇಳೋಣವೆಂದು ಹೊರಟೆ. 1995ಮಾಡೆಲ್ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದಂತೆ - ' ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ.  ಮಕ್ಳು-ಮರಿ ಓಡಾಡ್ತಿರ್ತವೆ ' ಕೀರಲು ಧ್ವನಿಯೊಂದು ಒಳಗಿನಿಂದ ಕೇಳಿಸಿತು. ಬ್ರೇಕ್ ನ ಮೇಲೆ ಹತ್ತಿ-ನಿಂತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ.  ಅಷ್ಟೋಂದು ಕಂಡೀಶನ್ ನಲ್ಲಿರುವ ಬೈಕನ್ನು,  ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ. ? ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ,  ಗಾಡಿ ಓಡಿಸಬೇಕು.  ಅವರು ಅಡ್ಡ-ಬರುವುದನ್ನು ಮೊದಲೇ. , ಊಹಿಸಿ ಸ್ವಲ್ಪ ದೂರದಿಂದಲೇ ಬ್ರೇಕು-ಕಾಲು ಉಪಯೋಗಿಸಿ,  ಬೈಕು ನಿಲ್ಲಿಸಬೇಕು.  ಹಾರನ್ನು ಇಲ್ಲದಿರುವುದರಿಂದ ಕ್ಲಚ್-ಹಿಡಿದು ಅಕ್ಸಿಲರೇಟರ್ ರೈಸ್  ಮಾಡಿ ಬರ್-ರ್-ರ್sssss ಎಂದು ಶಬ್ದ ಮಾಡುತ್ತಾ ದಾರಿ ಬಿಡಿಸಿಕೊಳ್ಳಬೇಕು. ಬೈಕ್-ಸ್ಟಾರ್ಟ್ ಮಾಡಿ ಮನೆಯಿಂದ ನೂರು-ಗಜ ಕೂಡ ಮುಂದೆ ಬಂದಿರಲಿಲ್ಲ,  ಅಂಗಡಿ-ಲಕ್ಕಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆಂದು, ಹಲ್ಲು-ಬಿಡುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು. &

ಚೆನೈ ಟೆಂಟ್ ನಲ್ಲೊಂದು ಸಿನಿಮಾ ನೋಡಿದ ಅನುಭವ

ಭಾನುವಾರ ಸಂಜೆ ಆಗುವ ಹೊತ್ತಿಗೆ, ವಿಲವಿಲನೆ ಮನಸ್ಸು ಹೊಯ್ದಾಡುತ್ತಿರುತ್ತದೆ. ಒಂಥರಾ ಅಪೂರ್ಣತೆಯ ಅನುಭವ. ‘ಅಯ್ಯಯ್ಯೋ ನಾಳೆ ಮತ್ತೆ ಕೆಲಸಕ್ಕೆ ಹೋಗಬೇಕು’. ಎರಡು ದಿನ ರಜೆ ಸರಿಯಾಗಿ ಬಳಸಿಕೊಳ್ಳೋಕಾದೇ.. ದಿನವಿಡಿ ಮನೆಯೊಳಗೆ ಮಲಗಿದ್ದೇ ಆಗಿತ್ತು. ಈ ಬಿಸಿಲೂರಿನಲ್ಲಿ ಹಗಲೊತ್ತಿನಲ್ಲಿ ಮನೆಯಿಂದ ಹೊರಬೀಳಲು ಮೋಟಿವೇಷನ್ ಆದರೂ ಎಲ್ಲಿಂದ ಬರಬೇಕು..? ರೂಮ್ ಮೇಟ್ ಗಳಾದ ಜಾಕ್ಸನ್ ಮತ್ತು ಮೂರ್ತಿ ಇಬ್ಬರೂ ನನ್ನಂತೆ ವೀಕೆಂಡ್ ಅತೃಪ್ತಿ ಖಾಯಿಲೆಯಿಂದ ನರಳುತ್ತಿದ್ದರು. ‘ಎಂತ ಸಾವುದು ಮಾರಾಯ. ಭಾನುವರಾನೂ ಹಂಗೇ ಖಾಲಿ ಖಾಲಿ ಹೋಗ್ತಾ ಉಂಟು. ಎಂತದಾದ್ರು ಮಾಡ್ಬೇಕು’ ಜಾಕಿ ಗೊಣಗಿದ. ‘ ನನ್ನ ಹತ್ರ ಒಂದು ಮೆಗಾ-ಪ್ಲಾನ್ ಇದೆ. ಇಲ್ಲಿಂದ 15-20 ಕಿಲೋಮೀಟರು ದೂರದಲ್ಲಿ ವನಲೂರು ಅನ್ನೋ ಊರಿದೆ. ಅಲ್ಲಿ ಟೆಂಟ್ ಸಿನಿಮಾ ಮಂದಿರ ಇರೋದನ್ನ ಬಸ್ಸಲ್ಲಿ ಹೋಗುವಾಗ ನೋಡಿದ್ದೆ. ಟೆಂಟ್-ನಲ್ಲಿ ಸೆಕೆಂಡ್ ಶೋ ಸಿನಿಮಾ ನೋಡುವುದು ‘Just for a change’ ಅನುಭವ. ನಾನು ಮೈಸೂರಿನಲ್ಲಿದ್ದಾಗ ಮಾರುತಿ ಟೆಂಟ್ ಗೆ ಹಲವಾರು ಬಾರಿ ಹೋಗಿದ್ದೇನೆ. ಮಸ್ತ್ ಥಿಯೇಟ್ರಿಕಲ್ ಫೀಲ್ ಇರತ್ತೆ. ‘ ಎಂದೆ. “ ಲೋ!! ಮನೆಹಾಳು ಐಡಿಯಾ ಕೊಡ್ತಿಯಲ್ಲೊ. ಇಷ್ಟೋತ್ತಲ್ಲಿ ಅಲ್ಲಿಗೆ ಹೋಗೋದೆ, ಕಷ್ಟ ಇದೆ. ಅಂತದ್ರಲ್ಲಿ ಸೆಕೆಂಡ್ ಶೋ ಸಿನಿಮಾ ನೋಡಿ, ಅಲ್ಲಿಂದ ಬರೋದು; ಮನೆ ಸೇರೋದು; ಹುಡುಗಾಟವಾ.. ‘ ಮೂರ್ತಿ ಕ್ಯಾತೆ ತೆಗೆದ. ಆದರೆ ಜಾಕ್ಸನ್ ನನ್ನ ಐಡಿಯಾದಿಂದ ಥ್ರಿಲ